ಶೀಘ್ರದಲ್ಲೇ ವಾಟ್ಸ್​ಆ್ಯಪ್-ಇನ್​ಸ್ಟಾಗ್ರಾಂ ಹೆಸರು ಬದಲಾವಣೆ: ಇನ್ಮುಂದೆ ಹೀಗೆ ಕಾಣಿಸಲಿದೆ ನಿಮ್ಮ ಆ್ಯಪ್

Facebook: ಕೆಲ ವರ್ಷಗಳ ಹಿಂದೆಯಷ್ಟೇ ಫೇಸ್​ಬುಕ್ ಇಂಕ್ ಕಂಪೆನಿಯು ವಾಟ್ಸ್​ಆ್ಯಪ್ ಹಾಗೂ ಇನ್​ಸ್ಟಾಗ್ರಾಂ ಕಂಪೆನಿಗಳನ್ನು ಖರೀದಿಸಿತ್ತು. ಆದರೆ ಈ ಬಗ್ಗೆ ಎರಡು ಆ್ಯಪ್​ಗಳಲ್ಲಿ ಫೇಸ್​ಬುಕ್ ತನ್ನ ಕಂಪೆನಿಯ ಉಲ್ಲೇಖವನ್ನು ಮಾಡಿರಲಿಲ್ಲ.

zahir | news18-kannada
Updated:August 3, 2019, 5:12 PM IST
ಶೀಘ್ರದಲ್ಲೇ ವಾಟ್ಸ್​ಆ್ಯಪ್-ಇನ್​ಸ್ಟಾಗ್ರಾಂ ಹೆಸರು ಬದಲಾವಣೆ: ಇನ್ಮುಂದೆ ಹೀಗೆ ಕಾಣಿಸಲಿದೆ ನಿಮ್ಮ ಆ್ಯಪ್
Facebook inc
  • Share this:
ಸಾಮಾಜಿಕ ಜಾಲತಾಣಗಳ ದೈತ್ಯ ಕಂಪೆನಿ ಫೇಸ್​ಬುಕ್ ಇಂಕ್ ಶೀಘ್ರಲ್ಲೇ ಇನ್​ಸ್ಟಾಗ್ರಾಂ ಮತ್ತು ವಾಟ್ಸ್​ಆ್ಯಪ್​ಗಳಿಗೆ ತನ್ನ ಬ್ರ್ಯಾಂಡಿಂಗ್ ನೇಮ್ ನೀಡಲಿದೆ. ಈ ಹಿನ್ನಲೆಯಲ್ಲಿ ಇನ್​ಸ್ಟಾಗ್ರಾಂ ಹಾಗೂ ವಾಟ್ಸ್​ಆ್ಯಪ್​ ಹೆಸರಿನಲ್ಲಿ ಫೇಸ್​ಬುಕ್ ಎಂಬ ಟ್ಯಾಗ್​ಲೈನ್ ಸೇರಿಕೊಳ್ಳಲಿದೆ.

ಕೆಲ ವರ್ಷಗಳ ಹಿಂದೆಯಷ್ಟೇ ಫೇಸ್​ಬುಕ್ ಇಂಕ್ ಕಂಪೆನಿಯು ವಾಟ್ಸ್​ಆ್ಯಪ್ ಹಾಗೂ ಇನ್​ಸ್ಟಾಗ್ರಾಂ ಕಂಪೆನಿಗಳನ್ನು ಖರೀದಿಸಿತ್ತು. ಆದರೆ ಈ ಬಗ್ಗೆ ಎರಡು ಆ್ಯಪ್​ಗಳಲ್ಲಿ ಫೇಸ್​ಬುಕ್ ತನ್ನ ಕಂಪೆನಿಯ ಉಲ್ಲೇಖವನ್ನು ಮಾಡಿರಲಿಲ್ಲ. ಇದೀಗ ಎರಡು ಕಂಪೆನಿಗಳು ಫೇಸ್​ಬುಕ್​ನ ಭಾಗವಾಗಿದೆ ಎಂದು ಬಳಕೆದಾರರಿಗೆ ತಿಳಿಸಲು ಕಂಪೆನಿಯ ಹೆಸರನ್ನು ಸೇರಿಸಿಕೊಳ್ಳಲಾಗುತ್ತಿದೆ.

ಈ ಬಗ್ಗೆ ಕಂಪೆನಿಯ ಅಪ್ಲಿಕೇಶನ್​ಗಳನ್ನು ಮರುಬ್ರಾಂಡ್​ ಮಾಡಲು ಫೇಸ್​ಬುಕ್ ಸಂಸ್ಥೆಯು ಇನ್‌ಸ್ಟಾಗ್ರಾಂ ಮತ್ತು ವಾಟ್ಸ್​ಆ್ಯಪ್​ ಉದ್ಯೋಗಿಗಳಿಗೆ ಮಾಹಿತಿ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ವಾಟ್ಸ್​ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಆ್ಯಪ್​ಗಳಿಗೆ ಮರುನಾಮಕರಣವಾಗಲಿದೆ ಎಂದು ಹೇಳಲಾಗಿದೆ.

ಅದರಂತೆ ಶೀಘ್ರದಲ್ಲೇ ಇನ್‌ಸ್ಟಾಗ್ರಾಂ 'ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಂ' (‘Instagram from Facebook’) ಮತ್ತು ವಾಟ್ಸ್​ಆ್ಯಪ್​ 'ಫೇಸ್‌ಬುಕ್‌ನಿಂದ ವಾಟ್ಸ್​ಆ್ಯಪ್​' (‘Instagram from Facebook’) ಹೆಸರಿಗೆ ಮಾರ್ಪಾಡಾಗಲಿದೆ.

ದಿ ವರ್ಜ್‌ ವೆಬ್​ಸೈಟ್ ವರದಿ ಪ್ರಕಾರ, ಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅಪ್ಲಿಕೇಶನ್‌ನ ಹೆಸರು ಈ ಹಿಂದಿನಂತೆ ಕಾಣಿಸಲಿದ್ದು, ಆದಾಗ್ಯೂ, ಆ್ಯಪಲ್ ಸ್ಟೋರ್ ಮತ್ತು ಗೂಗಲ್ ಸ್ಟೋರ್‌ನಲ್ಲಿ ಈ ಆ್ಯಪ್​ಗಳು ಹೊಸ ಹೆಸರಿನೊಂದಿಗೆ ಕಾಣಿಸಲಿದೆ.

ಈಗಾಗಲೇ ಫೇಸ್​ಬುಕ್ ಇಂಕ್ ಫೇಸ್​ಬುಕ್ ಆ್ಯಪ್​ ಖಾತೆಯಲ್ಲಿ ತನ್ನ ಬ್ರಾಂಡ್​ನೇಮ್ ಫೇಸ್​ಬುಕ್​ನ್ನು ಪ್ರದರ್ಶಸಿದ್ದು, ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಇನ್​ಸ್ಟಾಗ್ರಾಂ ಮತ್ತು ವಾಟ್ಸ್​ಆ್ಯಪ್​ನಲ್ಲಿ ಫೇಸ್​ಬುಕ್​ ಟ್ಯಾಗ್​ಲೈನ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸದ್ಯ ಆ್ಯಪ್​ ಸ್ಟೋರ್​ಗಳಲ್ಲಿ ಮಾತ್ರ ಹೆಸರು ಬದಲಿಸಲು ಫೇಸ್​ಬುಕ್ ಇಂಕ್ ನಿರ್ಧರಿಸಿದೆ ಎಂದು ಕಂಪೆನಿ ಮೂಲಗಳು ಹೇಳಿಕೊಂಡಿವೆ.

ಇದನ್ನೂ ಕ್ಲಿಕ್ ಮಾಡಿ: ಕೊಹ್ಲಿ-ಬಾಬರ್ ದಾಖಲೆಯನ್ನು ಅಳಿಸಿ ಹಾಕುವ ಹೊಸ್ತಿಲಲ್ಲಿ ಕನ್ನಡಿಗ ರಾಹುಲ್
First published:August 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...