Instagram Account Hack: ಇನ್​​​ಸ್ಟಾಗ್ರಾಂ ಅಕೌಂಟ್​ ಹ್ಯಾಕ್​ ಆಗಿದ್ಯಾ? ಸರಿಮಾಡೋಕೆ ತಕ್ಷಣ ಈ ಟ್ರಿಕ್ಸ್ ಬಳಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೆಟಾ ಮಾಲೀಕತ್ವದಲ್ಲಿರುವ ಇನ್‌ಸ್ಟಾಗ್ರಾಮ್‌ ಅಕೌಂಟ್​ಗಳು ಹೆಚ್ಚಾಗಿ ಹ್ಯಾಕಿಂಗ್‌ಗೆ ಒಳಗಾಗುತ್ತದೆ. ಈ ಮೂಲಕ ಕಿಡಿಗೇಡಿಗಳು ಬಳಕೆದಾರರ ಬಳಿ ಅಥವಾ ಅವರ ಸ್ನೇಹಿತರ ಬಳಿ ಹಣ ದೊಚುವಂತಹ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲಾ ಗಮನಿಸಿರುವಂತಹ ಮೆಟಾ ಸಂಸ್ಥೆ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜೊತೆಗೆ ಬಳಕೆದಾರರಿಗೆ ವಿಶೇಷ ಸೌಲಭ್ಯವೊಂದನ್ನು ಕಲ್ಪಿಸಿಕೊಟ್ಟಿದೆ. ಈ ಮೂಲಕ ನೀವು ನಿಮ್ಮ ಖಾತೆ ಹ್ಯಾಕ್‌ ಆಗಿದ್ದರೂ ಸಹ ಲಾಗಿನ್‌ ಆಗಬಹುದು ಮತ್ತು ಮರಳಿಪಡೆಯಬಹುದು.

ಮುಂದೆ ಓದಿ ...
  • Share this:

    ಸೋಶಿಯಲ್​ ಮೀಡಿಯಾಗಳನ್ನು (Social Media) ಬಳಸದೇ ಇರುವವರು ಯಾರಿದ್ದಾರೆ ಹೇಳಿ. ಇತ್ತೀಚಿನ ದಿನಗಳಲ್ಲಿ ಯಾರೆಲ್ಲಾ ಸ್ಮಾರ್ಟ್​ಫೋನ್ (Smartphone) ಹೊಂದಿದ್ದಾರೋ ಅವರೆಲ್ಲರು ಒಂದಾದರೂ ಸೋಶಿಯಲ್​ ಮೀಡಿಯಾವನ್ನು ಓಪನ್​ ಮಾಡಿರುತ್ತಾರೆ. ಹೀಗಿರುವಾಗ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹ್ಯಾಕರ್ಸ್ (Hackers)​ ಕೆಲವರ ಸೋಶಿಯಲ್​ ಮೀಡಿಯಾಗಳನ್ನು ಹ್ಯಾಕ್​ ಮಾಡುತ್ತಿದ್ದಾರೆ. ಆದ್ದರಿಂದ ಈಗಿನ ದಿನಗಳಲ್ಲಿ ಸೈಬರ್​ ಅಪರಾಧಗಳು ಕೂಡ ಹೆಚ್ಚಾಗುತ್ತಿದೆ. ನೀವು ವಾಟ್ಸಪ್​ ಸ್ಟೇಟಸ್ (Whatsapp Status)​, ಇನ್ಸ್​​ಸ್ಟಾಗ್ರಾಂ​ ಸ್ಟೋರಿಗಳಲ್ಲಿ (Instagram Story) ನೋಡಿರಬಹುದು ’ನನ್ನ ಅಕೌಂಟ್​ ಹ್ಯಾಕ್​ ಆಗಿದೆ, ಏನಾದರು ಮೆಸೇಜ್​ ಬಂದರೆ ರಿಪ್ಲೈ ಮಾಡ್ಬೇಡಿ’ ಎಂದು. ಇದು ಒಂದು ಅಕೌಂಟ್​ ಹ್ಯಾಕ್ (Account Hack)​ ಆದ ಸಂದರ್ಭದಲ್ಲಿ ನೋಡಬಹುದು. ಆದರೆ ಈ ಎಲ್ಲಾ ವಿಷಯಗಳನ್ನು ಗಮನಿಸಿ ಮೆಟಾ ಹೊಸ ನಿಯಮವನ್ನು ಕೈಗೊಂಡಿದೆ. ತನ್ನ ಬಳಕೆದಾರರಿಗೆ ಮೆಟಾ ಸಂಸ್ಥೆ ವಿಶೇಷ ಫೀಚರ್ಸ್​ ಒಂದನ್ನು ಬಿಡುಗಡೆ ಮಾಡಿದೆ.


    ಮೆಟಾ ಮಾಲೀಕತ್ವದಲ್ಲಿರುವ ಇನ್ಸ್​​ಸ್ಟಾಗ್ರಾಂ ಅಕೌಂಟ್​ಗಳು ಹೆಚ್ಚಾಗಿ ಹ್ಯಾಕಿಂಗ್‌ಗೆ ಒಳಗಾಗುತ್ತದೆ. ಈ ಮೂಲಕ ಕಿಡಿಗೇಡಿಗಳು ಬಳಕೆದಾರರ ಬಳಿ ಅಥವಾ ಅವರ ಸ್ನೇಹಿತರ ಬಳಿ ಹಣ ದೊಚುವಂತಹ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲಾ ಗಮನಿಸಿರುವಂತಹ ಮೆಟಾ ಸಂಸ್ಥೆ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜೊತೆಗೆ ಬಳಕೆದಾರರಿಗೆ ವಿಶೇಷ ಸೌಲಭ್ಯವೊಂದನ್ನು ಕಲ್ಪಿಸಿಕೊಟ್ಟಿದೆ. ಈ ಮೂಲಕ ನೀವು ನಿಮ್ಮ ಖಾತೆ ಹ್ಯಾಕ್‌ ಆಗಿದ್ದರೂ ಸಹ ಲಾಗಿನ್‌ ಆಗಬಹುದು ಮತ್ತು ಮರಳಿಪಡೆಯಬಹುದು.


    ಏನಿದು ಹೊಸ ಫೀಚರ್?


    ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯುವ ಕಾರಣಕ್ಕಾಗಿ ಮೆಟಾ ಸಂಸ್ಥೆ ಹೊಸ ಪ್ಲಾನ್ ಅನ್ನು ಹುಡುಕಿದೆ. ಈ ಮೂಲಕ ಹ್ಯಾಕ್ ಆಗಿರುವ ಇನ್ಸ್​​ಸ್ಟಾಗ್ರಾಂ ಖಾತೆಗಳನ್ನು ಓಪನ್ ಮಾಡಬಹುದು ಮತ್ತು ಮರಳಿ ಪಡೆಯಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ನಕಲಿ ಕ್ರಿಪ್ಟೋಕರೆನ್ಸಿ ರಿಟರ್ನ್‌ಗಳೊಂದಿಗೆ ಬಳಕೆದಾರರನ್ನು ಸೈಬರ್‌ ಅಪರಾಧಿಗಳು ಆಕರ್ಷಿಸಿ ಮೋಸ ಮಾಡುವ ಪ್ರಕರಣ ಸದ್ಯಕ್ಕೆ ಜಾಸ್ತಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮವನ್ನು ಜಾರಿಗೆ ತಂದಿದೆ.


    ಇದನ್ನೂ ಓದಿ: ಫ್ಲಿಪ್​ಕಾರ್ಟ್​​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಐಫೋನ್ಸ್​ ಮೇಲೆ ಭರ್ಜರಿ ರಿಯಾಯಿತಿ!


    ಇದರ ಬಗ್ಗೆ ಇನ್ಸ್​​ಸ್ಟಾಗ್ರಾಂ​ನ ಅಭಿಪ್ರಾಯ


    ಒಂದು ವೇಳೆ ನಿಮ್ಮ ಇನ್ಸ್​​ಸ್ಟಾಗ್ರಾಂ ಅಕೌಂಟ್​ ಹ್ಯಾಕ್‌ ಆದರೆ Instagram.com/hacked ಎಂಬ ಆಯ್ಕೆ ನೀಡಲಾಗಿದೆ ಇದಕ್ಕೆ ಲಾಗಿನ್​ ಆಗುವ ಮೂಲಕ ನಿಮ್ಮ ಅಕೌಂಟ್​ ಅನ್ನು ಮರುಪಡೆಯಬಹುದಾಗಿದೆ. ಲಾಗಿನ್‌ ಸಮಸ್ಯೆಗಳನ್ನು ಎದುರಿಸುತ್ತಿರುವ ಅಥವಾ ಹ್ಯಾಕ್ ಆಗಿರುವ ಅಕೌಂಟ್​ಗಳನ್ನು ಸುಧಾರಿಸುವ ದೃಷ್ಟಿಯಿಂದ ನಾವು Instagram.com/hacked ಎಂಬ ವೆಬ್​​ಸೈಟ್​ಅನ್ನು ರಚಿಸಿದ್ದೇವೆ. ಈ ಮೂಲಕ ಹ್ಯಾಕಿಂಗ್‌ನ ಬಗ್ಗೆ ವರದಿ ಮಾಡಲು ಮತ್ತು ಅಕೌಂಟ್​ ಲಾಗಿನ್​ ಆಗಲು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಲಿಂಕ್​ ಅನ್ನು ಓಪನ್​ ಮಾಡಿ ಸರಿಪಡಿಸಿಕೊಳ್ಬಹುದು ಎಂದು ಇನ್​​ಸ್ಟಾಗ್ರಾಂ ಹೇಳಿದೆ.


    ನಿಮ್ಮ ಅಕೌಂಟ್​ ಹ್ಯಾಕ್​ ಆದ್ರೆ ಈ ರೀತಿ ಮಾಡಿ


    ಹಂತ 1


    ಮೊದಲು ನಿಮ್ಮ ಇನ್ಸ್​​ಸ್ಟಾಗ್ರಾಂ​ ಅಕೌಂಟ್​ಗೆ ಲಾಗಿನ್​ ಅಗುತ್ತದೋ ಎಂದು ನೋಡಿಕೊಳ್ಳಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ, ನಂತರ ಗೂಗಲ್‌ ಕ್ರೋಮ್‌ನಲ್ಲಿ Instagram.com/hacked ಎಂದು ಟೈಪ್​ ಮಾಡಿ.


    ಹಂತ 2


    ಗೂಗಲ್​ ಕ್ರೋಮ್​ ಮೂಲಕ ಈ ಲಿಂಕ್​ ಓಪನ್​ ಮಾಡಿದರೆ ಅದ್ರಲ್ಲಿ ನನ್ನ ಖಾತೆಯನ್ನು ಹ್ಯಾಕ್ ಮಾಡಲಾಗಿದೆ, ನಾನು ನನ್ನ ಪಾಸ್‌ವರ್ಡ್ ಅನ್ನು ಮರೆತಿದ್ದೇನೆ, ಲಾಗಿನ್ ಕೋಡ್ ಅನ್ನು ಮೊಬೈಲ್ ಸಂಖ್ಯೆಗೆ ಅಥವಾ ಮೇಲ್‌ ಗೆ ಕಳುಹಿಸಲಾಗಿದೆ. ಆದರೆ, ಲಾಗಿನ್‌ ಆಗಲು ಸಾಧ್ಯವಾಗುತ್ತಿಲ್ಲ, ಯಾರೋ ನನ್ನ ಫೋಟೋ, ಹೆಸರನ್ನು ಬಳಕೆ ಮಾಡಿಕೊಂಡು ಹೊಸ ಖಾತೆ ರಚಿಸಿದ್ದಾರೆ, ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಈ ರೀತಿಯ ಹಲವಾರು ಆಯ್ಕೆಗಳು ನಿಮಗೆ ಕಾಣಿಸುತ್ತದೆ. ಈ ಮೂಲಕ ನಿಮ್ಮ ಅಕೌಂಟ್​ಗೆ ಸಂಬಂಧಪಟ್ಟ ಆಯ್ಕೆಯನ್ನು ಇದರಲ್ಲಿ ಸೆಲೆಕ್ಟ್​ ಮಾಡ್ಬಹುದು.


    ಹಂತ 3


    ಈ ಮೇಲೆ ತಿಳಿಸಿರುವ ಆಯ್ಕೆಗಳಲ್ಲಿ ಯಾವುದನ್ನಾದರು ಸೆಲೆಕ್ಟ್​ ಮಾಡಿದಾಗ ನೀವು ನಂತರ ಏನು ಮಾಡಬೇಕು, ಲಾಗಿನ್​ ಮಾಡುವುದು ಹೇಗೆ ಮತ್ತು  ಅಕೌಂಟ್​ ಮರು ಪಡೆಯುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಈ ವೆಬ್​ಸೈಟ್​ ಹೇಳಿದಂತೆ ಪಾಲಿಸಿದರೆ ನಿಮಗೆ ಆದಂತಹ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು