Infinix Smartphone: ಇನ್ಫಿನಿಕ್ಸ್​ ಝೀರೋ 5ಜಿ ಸ್ಮಾರ್ಟ್​​ಫೋನ್​ ಫಸ್ಟ್​ ಸೇಲ್ ಆರಂಭ! ಬೆಲೆ ಎಷ್ಟು?

ಇನ್ಫಿನಿಕ್ಸ್​ ಝೀರೋ 5ಜಿ ಸ್ಮಾರ್ಟ್​​ಫೋನ್​

ಇನ್ಫಿನಿಕ್ಸ್​ ಝೀರೋ 5ಜಿ ಸ್ಮಾರ್ಟ್​​ಫೋನ್​

ಜನಪ್ರಿಯ ಸ್ಮಾರ್ಟ್​​ಫೋನ್​ ತಯಾರಿಕ ಕಂಪೆನಿಯಾಗಿರುವ ಇನ್ಫಿನಿಕ್ಸ್​ ಕಂಪೆನಿ ಸದ್ಯ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್​ ಝೀರೋ 5ಜಿ ಸ್ಮಾರ್ಟ್​​ಫೋನ್​ನ ಫಸ್ಟ್​ ಸೇಲ್​ ಆರಂಭಿಸಿದೆ. ಈ ಸೇಲ್​ನಲ್ಲಿ ಹೊಸ ಸ್ಮಾರ್ಟ್​​ಫೋನ್ ಭರ್ಜರಿ ಆಫರ್​ಗಳೊಂದಿಗೆ ಖರೀದಿ ಲಭ್ಯವಿದೆ.

  • Share this:

    ಸ್ಮಾರ್ಟ್​​ಫೋನ್​ ಮಾರುಕಟ್ಟೆಯಲ್ಲಿ (Smartphone Market) ಹೊಸ ಹೊಸ ಮೊಬೈಲ್​ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಾ ಇರುತ್ತದೆ. ಇತ್ತೀಚೆಗೆ ಭಾರತದಲ್ಲಿ ಕೆಲ ದಿನಗಳ ಹಿಂದೆ ಲಾಂಚ್ ಮಾಡಲಾಗಿದ್ದ ಇನ್ಫಿನಿಕ್ಸ್‌ ಝೀರೋ 5ಜಿ 2023 (Infinix Zero 5G 2023) ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಫೆಬ್ರವರಿ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಮೂಲಕ ತನ್ನ ಫಸ್ಟ್‌ ಸೇಲ್‌ ಆರಂಭಿಸಿದೆ. ಇನ್ನು ಫಸ್ಟ್‌ ಸೇಲ್‌ (First Sale) ಸಮಯದಲ್ಲಿ ವಿಶೇಷ ಲಾಂಚ್‌ ಆಫರ್‌ಗಳನ್ನು ಕೂಡ ನೀಡುತ್ತಿದ್ದು, ಹೊಸ ಸ್ಮಾರ್ಟ್​ಫೋನ್ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇನ್ನು ಇನ್ಫಿನಿಕ್ಸ್​ ಕಂಪೆನಿಯಿಂದ ಬಿಡುಗಡೆಯಾದಂತಹ ಈ ಸ್ಮಾರ್ಟ್​​ಫೋನ್​ಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ.


    ಜನಪ್ರಿಯ ಸ್ಮಾರ್ಟ್​​ಫೋನ್​ ತಯಾರಿಕ ಕಂಪೆನಿಯಾಗಿರುವ ಇನ್ಫಿನಿಕ್ಸ್​ ಕಂಪೆನಿ ಸದ್ಯ ಮಾರುಕಟ್ಟೆಯಲ್ಲಿ ಇನ್ಫಿನಿಕ್ಸ್​ ಝೀರೋ 5ಜಿ ಸ್ಮಾರ್ಟ್​​ಫೋನ್​ನ ಫಸ್ಟ್​ ಸೇಲ್​ ಆರಂಭಿಸಿದೆ. ಈ ಸೇಲ್​ನಲ್ಲಿ ಹೊಸ ಸ್ಮಾರ್ಟ್​​ಫೋನ್​ ಭರ್ಜರಿ ಆಫರ್​ಗಳೊಂದಿಗೆ ಖರೀದಿ ಮಾಡಬಹುದಾಗಿದೆ.


    ಫಸ್ಟ್​ ಸೇಲ್ ಆಫರ್ಸ್​ ಏನೆಲ್ಲಾ ಇದೆ?


    ಇನ್ಫಿನಿಕ್ಸ್‌ ಝೀರೋ 5ಜಿ 2023 ಸ್ಮಾರ್ಟ್‌ಫೋನ್‌ 8ಜಿಬಿ ರ್‍ಯಾಮ್ ಮತ್ತು 128ಜಿಬ ಸ್ಟೋರೇಜ್ ಆಯ್ಕೆಗೆ 17,999 ರೂ. ಬೆಲೆ ನಿಗದಿ ಮಾಡಲಾಗಿದೆ. ಇದನ್ನು ಫಸ್ಟ್‌ ಸೇಲ್‌ ಪ್ರಯುಕ್ತ ಖರೀದಿಸುವ ಗ್ರಾಹಕರು ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಖರೀದಿಸಿದರೆ 1,500 ರೂ.ವರೆಗೆ ರಿಯಾಯಿತಿ ದೊರೆಯಲಿದೆ. ಆದರೆ ಈ ಆಫರ್ ನೀವು ಎಕ್ಸ್​ಚೇಂಜ್ ಮಾಡಲು ಬಯಸುವ ಸ್ಮಾರ್ಟ್​​​ಫೋನ್​ನ ಗುಣಮಟ್ಟದ ಆಧಾರದ ಮೇಲೆ ನಿರ್ಧಾರವಾಗುತ್ತದೆ.


    ಇದನ್ನೂ ಓದಿ: ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ಟೆಲಿಕಾಂ ಗ್ರಾಹಕರಿಗೆ ಭರ್ಜರಿ ಆಫರ್​! 5000 ಮೌಲ್ಯ ಗಿಫ್ಟ್ ವೋಚರ್ ಲಭ್ಯ


    ಬ್ಯಾಂಕ್ ಆಫರ್ಸ್​


    ಜೊತೆಗೆ, ಅಮೆರಿಕನ್ ಎಕ್ಸ್‌ಪ್ರೆಸ್, ಬ್ಯಾಂಕ್ ಆಫ್ ಬರೋಡಾ ಮತ್ತು ಐಡಿಎಫ್​​ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಇಎಮ್​ಐ ವಹಿವಾಟು ನಡೆಸುವ ಗ್ರಾಹಕರು 10% ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ತಿಂಗಳಿಗೆ 3,334ರೂ. ಮೌಲ್ಯದ ನೋ ಕಾಸ್ಟ್‌ ಇಎಮ್​ಐ ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಕೋರಲ್ ಆರೆಂಜ್, ಪರ್ಲಿ ವೈಟ್ ಮತ್ತು ಸಬ್‌ಮರಿನರ್ ಬ್ಲ್ಯಾಕ್ ಬಣ್ಣದ ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.


    ಇನ್ಫಿನಿಕ್ಸ್​ ಝೀರೋ 5ಜಿ ಸ್ಮಾರ್ಟ್​​ಫೋನ್​


    ಇನ್ಫಿನಿಕ್ಸ್‌ ಝೀರೋ 5ಜಿ 2023 ಸ್ಮಾರ್ಟ್‌ಫೋನ್‌ ಫೀಚರ್ಸ್​


    ಇನ್ಫಿನಿಕ್ಸ್‌ ಝೀರೋ 5ಜಿ 2023 ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ಸ್ಕ್ರೀನ್ ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 920 ಎಸ್​​ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​​ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ.


    ಕ್ಯಾಮೆರಾ ಸೆಟಪ್​ ಹೇಗಿದೆ?


    ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್​ ಸೆನ್ಸಾರ್‌, ಎರಡು ಮತ್ತು ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.




    ಬ್ಯಾಟರಿ ಫೀಚರ್ಸ್​


    ಇನ್ಫಿನಿಕ್ಸ್​ನ ಈ ಹೊಸ ಸ್ಮಾರ್ಟ್​​ಫೋನ್​ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್‌ ಸಾಮರ್ಥ್ಯವನ್ನು ಒಳಗೊಂಡಿದೆ.


    ಇತರೆ ಫೀಚರ್ಸ್


    ಇನ್ನು ಈ ಸ್ಮಾರ್ಟ್​​ಫೋನ್​​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, 5G, ಬ್ಲೂಟೂತ್, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್​ಬಿ ಟೈಪ್ ಸಿ ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಪಾಕ್ಸಿಮಿಟಿ ಸೆನ್ಸಾರ್‌, ಆಕ್ಸಿಲೆರೋಮೀಟರ್‌ ಅನ್ನು ಕೂಡ ಹೊಂದಿದೆ.

    Published by:Prajwal B
    First published: