• Home
 • »
 • News
 • »
 • tech
 • »
 • Infinix Mobile: ಮಾರುಕಟ್ಟೆಗೆ ಬರಲಿದೆ ಇನ್ಫಿನಿಕ್ಸ್‌ನ ಹೊಸ ಸ್ಮಾರ್ಟ್‌ಫೋನ್!‌ ಏನಿದರ ಸ್ಪೆಷಲ್‌ ಫೀಚರ್ಸ್‌? ಇಲ್ಲಿದೆ ಮಾಹಿತಿ

Infinix Mobile: ಮಾರುಕಟ್ಟೆಗೆ ಬರಲಿದೆ ಇನ್ಫಿನಿಕ್ಸ್‌ನ ಹೊಸ ಸ್ಮಾರ್ಟ್‌ಫೋನ್!‌ ಏನಿದರ ಸ್ಪೆಷಲ್‌ ಫೀಚರ್ಸ್‌? ಇಲ್ಲಿದೆ ಮಾಹಿತಿ

Infinix Note 12

Infinix Note 12

Smartphone: ಸ್ಮಾರ್ಟ್‌ಫೋನ್‌ ತಯಾರಿಕೆಯ ಜನಪ್ರಿಯ ಮೊಬೈಲ್‌ ಬ್ರಾಂಡ್‌ಗಳಲ್ಲಿ ಇನ್ಫಿನಿಕ್ಸ್‌ ಕಂಪೆನಿ ಕೂಡ ಒಂದು. ಇದೀಗ ಈ ಇನ್ಫಿನಿಕ್ಸ್‌ ಗ್ರಾಹಕರಿಗೆ ಇನ್ಫಿನಿಕ್ಸ್‌ ನೋಟ್‌ 12 ಮೊಬೈಲ್‌ ಅನ್ನು ಪರಿಚಯಿಸುತ್ತಿದೆ.

 • Share this:

  ವರ್ಷದಿಂದ ವರ್ಷಕ್ಕೆ ಸ್ಮಾರ್ಟ್‌ಫೋನ್‌ ಕಂಪೆನಿಗಳು (Smartphone Company) ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೇ ಇರುವವರು ಯಾರೂ ಇಲ್ಲ. ಹಾಗಿರುವಾಗ ಗ್ರಾಹಕರು (Customer) ಕೂಡ ಪ್ರತೀದಿನ ಹೊಸ ತಂತ್ರಜ್ಞಾನಗಳನ್ನು ಒಳಗೊಂಡ ಮೊಬೈಲ್‌ಗಳಿಗೆ (Mobile) ಕಾಯುತ್ತಿರುತ್ತಾರೆ. ಈ ಮಧ್ಯೆ ಇನ್ಫಿನಿಕ್ಸ್‌ ಸಂಸ್ಥೆ (Infinix Company) ಈ ಬಾರಿ ಗ್ರಾಹಕರಿಗೆ ಶುಭಸುದ್ದಿಯನ್ನುನೀಡಿದೆ. ಏನೆಂದರೆ ಇನ್ಫಿನಿಕ್ಸ್‌ ಕಂಪೆನಿ ಇನ್ಫಿನಿಕ್ಸ್‌ ನೋಟ್‌ 12 (Infinix Note 12) ಎಂಬ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುತ್ತಿದೆ. ಇದು ಈ ವರ್ಷದ ಹೊಸ ಸ್ಮಾರ್ಟ್‌ಫೋನ್‌ ಆಗಿದ್ದು ಗ್ರಾಹಕರನ್ನು ಬೇಗನೆ ಸೆಳೆಯಬಹುದು. ಇದು ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.


  ಸ್ಮಾರ್ಟ್‌ಫೋನ್‌ ತಯಾರಿಕೆಯ ಜನಪ್ರಿಯ ಮೊಬೈಲ್‌ ಬ್ರಾಂಡ್‌ಗಳಲ್ಲಿ ಇನ್ಫಿನಿಕ್ಸ್‌ ಕಂಪೆನಿ ಕೂಡ ಒಂದು. ಇದೀಗ ಈ ಇನ್ಫಿನಿಕ್ಸ್‌ ಗ್ರಾಹಕರಿಗೆ ಇನ್ಫಿನಿಕ್ಸ್‌ ನೋಟ್‌ 12 ಮೊಬೈಲ್‌ ಅನ್ನು ಪರಿಚಯಿಸುತ್ತಿದೆ. 2023 ರ ಮೊಬೈಲ್‌ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಇದು ಹೊಸ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದ್ದು. ಹಲವಾರು ಪೀಚರ್ಸ್‌ ಅನ್ನು ಒಳಗೊಂಡ ಇನ್ಫಿನಿಕ್ಸ್‌ ನೋಟ್‌ 12 ಹೇಗಿದೆ ಮತ್ತು ಇದರ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.


  ಇನ್ಫೀನಿಕ್ಸ್‌ ನೋಟ್‌ 12 ಮೊಬೈಲ್‌ನ ಫೀಚರ್ಸ್:‌


  • ನೂತನ ಇನ್ಫಿನಿಕ್ಸ್‌ ನೋಟ್‌ 12 ಸ್ಮಾರ್ಟ್‌ಫೋನಿನಲ್ಲಿ ಫುಲ್‌ HD+ (1080x2000 ಪಿಕ್ಸೆಲ್‌ಗಳು) ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದ್ದು 6.7 ಇಂಚಿನ ಅಮೋಲ್ಡ್‌ ಡಿಸ್ಪ್ಲೇಯನ್ನು ಹೊಂದಿದೆ.

  • ಮೀಡಿಯಾ ಟೆಕ್‌ ಹಿಲಿಯೋ ಜಿ99 ಎಸ್‌ಒಸಿ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.


  Infinix s new smartphone is coming to the market What are the special features Here is the information
  Infinix Smartphone


  • ಇನ್ನು ಈ ಮೊಬೈಲ್‌ 8 GB Ram ಮತ್ತು 256 ಜಿಬಿ ಇಂಟರ್ನಲ್‌ ಸ್ಟೀೋರೇಜ್‌ ಅನ್ನು ಒಳಗೊಂಡಿದೆ.


  ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗಬೇಕೇ? ಹಾಗಿದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡಿ!

  • ಅಲ್ಲದೇ ಇದು ಆಂಡ್ರಾಯ್ಡ್‌ 12 ಆಧಾರಿತ XOS 10.6 ನಲ್ಲಿ ಕಾರ್ಯನಿರ್ವಹಿಸುತ್ತದೆ.

  • ಇನ್ಫಿನಿಕ್ಸ್‌ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಹಿಂಬದಿಯ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

  • ಈ ಮೊಬೈಲ್‌ F/1.6 ಅಪಾರ್ಚರ್‌ ಜೊತೆಗೆ 50 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ಒಳಗೊಂಡಿದೆ.

  • ಅಲ್ಲದೇ ಇದರಲ್ಲಿ ನೈಟ್‌ ಮೋಡ್‌ ಇಟ್ಟು ಕೂಡ ಪೋಟೋ,ವಿಡಿಯೋ ಮಾಡಬಹುದಾಗಿದೆ.

  • ಇನ್ನು ಇದರ ಸೆಲ್ಫಿ ಕ್ಯಾಮೆರಾ 16 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ಹೊಂದಿದೆ

  • ಇನ್ನು ಈ ಇನ್ಫಿನಿಕ್ಸ್‌ ನೋಟ್‌ 12 ಮೊಬೈಲ್‌ ಡ್ಯುಯೆಲ್‌ ಸಿಮ್‌ ಸೆಟಪ್‌ ಅನ್ನು ಹೊಂದಿದ್ದು 4G ಸ್ಮಾರ್ಟ್‌ಫೋನ್‌ ಆಗಿದೆ. ಇದರಲ್ಲಿ ಬ್ಲೂಟೂತ್‌ ಹಾಗೂ ವೈ ಫೈ ಸೌಲಭ್ಯಗಳನ್ನು ಅಳವಡಿಕೆ ಮಾಡಲಾಗಿದೆ.

  • ಈ ಮೊಬೈಲ್‌ 33 ವ್ಯಾಟ್ಸ್‌ ವೇಗದ ಚಾರ್ಜಿಂಗ್‌ ಆಯ್ಕೆಯನ್ನು ಹೊಂದಿದ್ದು 5000mah ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.


  ಇನ್ಫಿನಿಕ್ಸ್‌ ನೋಟ್‌ 12 ಸ್ಮಾರ್ಟ್‌ಫೋನಿನ ಬೆಲೆ


  ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಇನ್ಫಿನಿಕ್ಸ್‌ ನೋಟ್‌ 12 ಸ್ಮಾರ್ಟ್‌ಫೋನಿನ 8GB Ram ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ ಅನ್ನು ಹೊಂಧಿರುವುದಕ್ಕೆ 16,500 ರೂಪಾಯಿಯನ್ನು ಬೆಲೆ ನಿಗದಿ ಮಾಡಿದ್ದಾರೆ.


  ಈ ಸ್ಮಾರ್ಟ್‌ಫೋನ್‌ ಆಲ್ಪೈನ್‌ ವೈಟ್‌, ಬ್ಲೂ, ವೋಲ್ಟಾನಿಕ್‌ ಗ್ರೇ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ.


  ಇನ್ನು ಇದು ಮುಂದಿನ ದಿನಗಳಲ್ಲಿ 4ಜಿ ಮಾತ್ರವಲ್ಲದೆ 5ಜಿ ಯಲ್ಲೂ ಲಭ್ಯವಾಗಲಿದೆ ಎಂದು ತಂತ್ರಜ್ಞರು ವರದಿ ಮಾಡಿದ್ದಾರೆ.


  ಇದನ್ನೂ ಓದಿ: ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರು ಏನೇನೋ ಇದೆಯಾ? ಹಾಗಿದ್ರೆ ಈ ಟ್ರಿಕ್ಸ್‌ ಬಳಸಿ ನೇಮ್ ಎಡಿಟ್ ಮಾಡಿ!


  ಇದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಸ್ಮಾರ್ಟ್‌ಫೋನಿನ ಲಕ್ಷಣಗಳಾಗಿವೆ. ಈ ರೀತಿಯ ಸ್ಮಾರ್ಟ್‌ಫೋನ್‌ಗಳು ತಂತ್ರಜ್ಞಾನ ಯುಗ ಇನ್ನಷ್ಟು ಅಭಿವೃದ್ಧಿಯಾಗುವಂತೆ ಮಾಡುತ್ತದೆ. ಇದರಿಂದ ಗ್ರಾಹಕರು ಕೂಡ ಅಪ್ಡೇಟ್‌ಗಳನ್ನು ಬಯಸುತ್ತಿರುತ್ತಾರೆ.

  Published by:Harshith AS
  First published: