ಸ್ಮಾರ್ಟ್ಫೋನ್ಗಳ (Smartphone) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಇಲ್ಲದೆ ಯಾವುದೇ ಕೆಲಸಗಳು ಆಗುವುದೇ ಇಲ್ಲ. ಇಂಟರ್ನೆಟ್ (Internet) ಎಂಬುದು ಈಗಿನ ಕಾಲಮಾನದಲ್ಲಿ ಮುಖ್ಯವಾಗಿದೆಯೋ ಅದೇ ರೀತಿ ಸ್ಮಾರ್ಟ್ಫೋನ್ಗಳು ಕೂಡ ಅಷ್ಟೇ ಮುಖ್ಯವಾಗಿದೆ. ಆದರೆ ಈ ಸ್ಮಾರ್ಟ್ಫೊನ್ಗಳು ಈಗ ಬಹಳಷ್ಟು ಫೀಚರ್ಸ್ ಅನ್ನು ಒಳಗೊಂಡಿದ್ದು ಬಳಕೆದಾರರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ಚೀನಾದ ಪ್ರಸಿದ್ಧ ಮೊಬೈಲ್ (Mobile) ತಯಾರಿಕಾ ಕಂಪನಿ ಇನ್ಫಿನಿಕ್ಸ್ (Infinix) ಇದೀಗ ಮತ್ತೊಂದು ಹೊಸ ಫೋನ್ ಬಿಡುಗಡೆ ಮಾಡಿದೆ. ಉತ್ತಮವಾಗಿ ಗ್ರಾಹಕರ ಕೈಗೆಟಕುವ ದರದಲ್ಲಿ ಬಿಡುಗಡೆಯಾದ ಇತ್ತೀಚಿನ ಸ್ಮಾರ್ಟ್ಫೋನ್ಗಳ ಸಾಲಿಗೆ ಈ ಸ್ಮಾರ್ಟ್ಫೋನ್ಗಳು ಖೂಡ ಸೇರಿವೆ.
ಇನ್ಫಿನಿಕ್ಸ್ ತನ್ನ ಕಂಪನಿಯ ಅಡಿಯಲ್ಲಿ ಇನ್ಫಿನಿಕ್ಸ್ ಹಾಟ್ 20 ಎಸ್ (Infinix Hot 20S) ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಸ್ಪೆಷಲ್ ಫೀಚರ್ಸ್ ಮತ್ತು ಬೆಲೆಯ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇನ್ಫಿನಿಕ್ಸ್ 20 ಎಸ್ ನ ಸ್ಪೆಷಲ್ ಫೀಚರ್ಸ್:
ಈ ಸ್ಮಾರ್ಟ್ಫೊನ್ ಅನ್ನು ಸಿಂಗಲ್ ವೆರಿಯಂಟ್ ನಲ್ಲಿ ಲಾಂಚ್ ಮಾಡಲಾಗಿದೆ. ಕಂಪನಿಯು ಫಿಲಿಪೈನ್ ಕರೆನ್ಸಿಯಲ್ಲಿ 8GB+128GB ರೂಪಾಂತರದ ಬೆಲೆಯನ್ನು PHP 8,499 ಅಂದರೆ ಭಾರತದಲ್ಲಿ ಸುಮಾರು 12,300 ರೂಪಾಯಿಗೆ ಲಭ್ಯವಾಗುತ್ತದೆ ಎಂದು ನಿಗದಿಪಡಿಸಿದೆ. ಇನ್ಫಿನಿಕ್ಸ್ 20 ಎಸ್ ಸ್ಮಾರ್ಟ್ಫೋನ್ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಬಿಳಿ, ನೇರಳೆ, ನೀಲಿ, ಕಪ್ಪು ಬಣ್ಣಗಳಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಗ್ರಾಹಕರು ಪ್ರಸ್ತುತವಾಗಿ ಈ ಸ್ಮಾರ್ಟ್ಫೋನ್ ಅನ್ನು Shopee ಅಪ್ಲಿಕೇಶನ್ನಲ್ಲಿ ಖರೀದಿಸಬಹುದು.
ಭಾರತೀಯ ಮಾರುಕಟ್ಟೆಯಲ್ಲಿ ಹೊಸ 5G ಫೋನ್ ಸದ್ಯದಲ್ಲೆ ಬರಲಿವೆ:
ಇನ್ಫಿನಿಕ್ಸ್ ಕಂಪನಿಯು ಹೊಸ 5ಜಿ ಸ್ಮಾರ್ಟ್ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ. ಇನ್ಫಿನಿಕ್ಸ್ ಹಾಟ್ 20 5ಜಿ ಎಂಬ ಸ್ಮಾರ್ಟ್ಫೋನ್ ಅನ್ನು ಡಿಸೆಂಬರ್ 1 ರಂದು ಬಿಡುಗಡೆ ಮಾಡಲಿದೆ. ಈ ಬಗ್ಗೆ ಕಂಪನಿ ಟ್ವೀಟ್ ಮಾಡಿದೆ. ಇದನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿರುವುದರಿಂದ ಇನ್ಫಿನಿಕ್ಸ್ ಹಾಟ್ 20 5ಜಿಯ ವಿಶೇಷಣಗಳು ಎಲ್ಲರಿಗೂ ತಿಳಿದಿವೆ.
ಇದನ್ನೂ ಓದಿ: ಈ ಸ್ಮಾರ್ಟ್ವಾಚ್ಗಳ ಮೇಲೆ ದೇಶದಲ್ಲಿ ಭಾರೀ ಬೇಡಿಕೆ, ಭಾರತ ಈ ಮಾರುಕಟ್ಟೆಯಲ್ಲಿ ಅಗ್ರಸ್ಥಾನ
ಇದು 6.6-ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರದೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು MediaTek Dimension 810 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು XOS 10.6 ಆಧಾರಿತ Android 12 ಅನ್ನು ರನ್ ಮಾಡುತ್ತದೆ. 50MP+ 2MP ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. ಮೊಬೈಲ್ 5,000 mAh ಬ್ಯಾಟರಿಯನ್ನು ಹೊಂದಿದ್ದು ಅದು 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್ ಫೋನ್ ಬೆಲೆ ಸುಮಾರು ರೂ.15 ಸಾವಿರ ಇರಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ