HOME » NEWS » Tech » INFINIX HOT 10 PLAY SMARTPHONE INDIA LAUNCH DATE SET FOR APRIL 19 HG

6 ಸಾವಿರ mAh ಬ್ಯಾಟರಿ, ಆಕರ್ಷಕ ಫೀಚರ್ಸ್​; ಸದ್ಯದಲ್ಲೇ ದೇಶಿಯ ಮಾರುಕಟ್ಟೆಯತ್ತ Infinix Hot 10 Play ಸ್ಮಾರ್ಟ್​ಫೋನ್​

ಇನ್ಫಿನಿಕ್ಸ್​ ಹಾಟ್​ 10 ಪ್ಲೇ ಡುಯೆಲ್​​ ಕ್ಯಾಮೆರಾ ಸೆಟಪ್​ ಜೊತೆಗೆ ಫಿಂಗರ್​ ಪ್ರಿಂಟ್​​ ಸ್ಕ್ಯಾನರ್​, ಮುಂಭಾಗದಲ್ಲಿ ಡ್ಯು ಡ್ರಾಪ್​ ನಾಚ್​ ಡಿಸ್​ಪ್ಲೇ ನೀಡಲಾಗಿದೆ.

news18-kannada
Updated:April 3, 2021, 11:10 AM IST
6 ಸಾವಿರ mAh ಬ್ಯಾಟರಿ, ಆಕರ್ಷಕ ಫೀಚರ್ಸ್​; ಸದ್ಯದಲ್ಲೇ ದೇಶಿಯ ಮಾರುಕಟ್ಟೆಯತ್ತ Infinix Hot 10 Play ಸ್ಮಾರ್ಟ್​ಫೋನ್​
nfinix Hot 10 Play,
  • Share this:
ಹಾಂಗ್​ ಕಾಂಗ್​ ಮೂಲದ ಸ್ಮಾರ್ಟ್​ಫೋನ್​ ಸಂಸ್ಥೆಯಾದ ಇನ್ಫಿನಿಕ್ಸ್​ ನೂತನ ಹಾಟ್​​ 10 ಪ್ಲೇ ಹೆಸರಿನ ಸ್ಮಾಟ್​ಫೋನನ್ನು ಉತ್ಪಾದಿಸಿದೆ. ಇದೇ ಏಪ್ರಿಲ್​ 19ರಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಗ್ರಾಹಕರಿಗಾಗಿ ಕೈಗೆಟಕುವ ಬೆಲೆಯಲ್ಲಿ ಇನ್ಫಿನಿಕ್ಸ್​ ಸಂಸ್ಥೆ ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸುತ್ತಾ ಬಂದಿದೆ. ಇದೀಗ ನೂತನ ಸ್ಮಾರ್ಟ್​ಫೊನ್ ಕೂಡ ಅದೇ ಮಾದರಿಯಲ್ಲಿದೆ.

ಇನ್ಫಿನಿಕ್ಸ್​ ಹಾಟ್​ 10 ಪ್ಲೇ ಮೂರು ಬಣ್ಣದಲ್ಲಿ ಪರಿಚಯಿಸಿದೆ. ಮೊರಾನ್ದಿ ಗ್ರೀನ್, 7 ಡಿಗ್ರಿ ಪರ್ಪಲ್​, ಏಜಿಯನ್​​ ಬ್ಲೂ ಮತ್ತು ಅಬ್ಸಿಡಿಯನ್​ ಬ್ಲಾಕ್​​ ಬಣ್ಣದಲ್ಲಿ ಉತ್ಪಾದದಿಸಿದೆ.

ಇನ್ಫಿನಿಕ್ಸ್​ ಹಾಟ್​ 10 ಪ್ಲೇ ಸ್ಮಾರ್ಟ್​ಫೋನ್​ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ, ಫಿಲಿಫೈನ್ಸ್​ನಲ್ಲೂ ಖರೀದಿಗೆ ಸಿಗುತ್ತಿದೆ.  ಹಲವು ಫೀಚರ್ಸ್​ಗಳನ್ನ ಈ ಸ್ಮಾರ್ಟ್​ಫೋನ್​ ಹೊಂದಿದೆ.

ಇನ್ಫಿನಿಕ್ಸ್​ ಹಾಟ್​ 10 ಪ್ಲೇ ಡುಯೆಲ್​​ ಕ್ಯಾಮೆರಾ ಸೆಟಪ್​ ಜೊತೆಗೆ ಫಿಂಗರ್​ ಪ್ರಿಂಟ್​​ ಸ್ಕ್ಯಾನರ್​, ಮುಂಭಾಗದಲ್ಲಿ ಡ್ಯು ಡ್ರಾಪ್​ ನಾಚ್​ ಡಿಸ್​ಪ್ಲೇ ನೀಡಲಾಗಿದೆ.

ಅಂದಹಾಗೆಯೇ, ನೂತನ ಸ್ಮಾರ್ಟ್​ಫೋನ್ 6.82 ಇಂಚಿನ ಹೆಚ್​ಡಿ+ ಐಪಿಎಸ್​ ಎಲ್​​ಸಿಡಿ ಪ್ಯಾನೆಲ್​ ಹೊಂದಿದೆ. ಮೀಡಿಯಾಟೆಕ್​ ಹೆಲಿಯೋ  ಜಿ35 ಎಸ್​ಒಸಿ ಪ್ರೊಸೆಸರ್​​ ಮತ್ತು ಒಕ್ಟಾ ಕೋರ್​ ಚಿಪ್​ಸೆಟ್​ ಅಳವಡಿಸಿಕೊಂಡಿದೆ. 2GB/4GB RAM​ ಮತ್ತು 32GB/64GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ.

ಡುಯೆಲ್​ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್​ 13 ಮೆಗಾಫಿಕ್ಸೆಲ್​ ಪ್ರೈಮರಿ ಸೆನ್ಸಾರ್​ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಅಳವಡಿಸಲಾಗಿದೆ.
ಇನ್ನು 4ಜಿ, ವೈ-ಫೈ, ಜಿಪಿಎಸ್​, 3.5 ಎಮ್​ಎಮ್​ ಜಾಕ್​, ಮೈಕ್ರೊಯುಎಸ್​ಬಿ ನೀಡಲಾಗಿದೆ. 6 ಸಾವಿರ mAh ​ ಬ್ಯಾಟರಿ ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್​ ಮಾಡಿದರೆ 54 ಗಂಟೆಗಳ ಕಾಲ ಮಾತನಾಡಬಹುದಾಗಿದೆ.
Published by: Harshith AS
First published: April 3, 2021, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories