ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology Market0 ಇತ್ತೀಚೆಗೆ ಕಂಪೆನಿಗಳು ನವೀನ ಮಾದರಿಯ ಹೊಸ ಸಾಧನಗಳನ್ನು ಪರಿಚಯಿಸುತ್ತಲೇ ಇದೆ. ಅದರಲ್ಲೂ ನಾವು ಲ್ಯಾಪ್ಟಾಪ್ಗಳ ಬಗ್ಗೆ ಹೇಳುವಾಗೆಯೇ ಇಲ್ಲ. ಯಾಕೆಂದರೆ ಕೆಲವು ಲ್ಯಾಪ್ಟಾಪ್ಗಳು (Laptops) ಗೇಮರ್ಗಳಿಗಾಗಿಯೇ ಮೀಸಲಿಟ್ಟಂತೆ ಇದೆ. ಇನ್ಫಿನಿಕ್ಸ್ ಕಂಪೆನಿಯು (Infinix Company) ತನ್ನ ಬ್ರಾಂಡ್ನ ಅಡಿಯಲ್ಲಿ ಸ್ಮಾರ್ಟ್ಫೋನ್ ಅನ್ನು ತಯಾರಿ ಮಾಡುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ಆದರೆ ಡಿಸೆಂಬರ್ 2021 ರಲ್ಲಿ ಭಾರತದಲ್ಲಿ ಲ್ಯಾಪ್‌ಟಾಪ್ ಮಾರುಕಟ್ಟೆಯನ್ನು ಪ್ರಾರಂಭಿಸಿತು. ಈ ಹಿಂದೆ ಇನ್ಫಿನಿಕ್ಸ್ ಕಂಪೆನಿ ಹಲವಾರು ಸ್ಮಾರ್ಟ್ಫೋನ್ಗಳನ್ನು, ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲಿ ಮತ್ತೊಂದು ಲ್ಯಾಪ್‌ಟಾಪ್ ಅನ್ನು ಪರಿಚಯಿಸುತ್ತಿದೆ.
ಇನ್ಫಿನಿಕ್ಸ್ ಕಂಪೆನಿ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್ಫೋನ್ಗಳನ್ನು, ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಕಣ್ಮನ ಸೆಳೆದಿತ್ತು. ಸದ್ಯ ಇದೆ ಕಂಪೆನಿಯಿಂದ ಮತ್ತೊಂದು ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ್ದು, ಇದನ್ನು ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ ಎಂದು ಗುರುತಿಸಲಾಗಿದೆ.
ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ ಫೀಚರ್ಸ್
ಇನ್ಫಿನಿಕ್ಸ್ ಕಂಪೆನಿಯ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 16:9 ರ ಆಕಾರ ಅನುಪಾತದೊಂದಿಗೆ 1080 x 1920 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಡಿಸ್ಪ್ಲೇಯು 400 ನಿಟ್ಸ್ ಬ್ರೈಟ್‌ನೆಸ್ ಮೂಲಕ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ, 178 ಡಿಗ್ರಿಗಳವರೆಗೆ ವೀಕ್ಷಣಾ ಫೀಚರ್ಸ್ ಅನ್ನು ಪಡೆದುಕೊಂಡಿರುವುದು ಮತ್ತಷ್ಟು ಅನುಕೂಲಕರವಾದ ವಿಷಯವಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಇನ್ಫಿನಿಕ್ಸ್ ಕಂಪೆನಿಯ ಈ ಹೊಸ ಲ್ಯಾಪ್‌ಟಾಪ್ 12 ನೇ ಜನ್ ಇಂಟೆಲ್ ಕೋರ್ ಹೆಚ್ ಸೀರಿಸ್ನ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಕೋರ್ i7 ಮತ್ತು ಕೋರ್ i5 ವೇರಿಯಂಟ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಇದರಲ್ಲಿರುವ ಎಲ್ಲಾ ವೇರಿಯಂಟ್‌ಗಳೂ ಸಹ 96EU ಐರಿಸ್ ಗ್ರಾಫಿಕ್ಸ್‌ನೊಂದಿಗೆ ಪ್ಯಾಕ್ ಆಗಿವೆ.
ಸ್ಟೋರೇಜ್ ಫೀಚರ್
ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ 32ಜಿಬಿ ರ್‍ಯಾಮ್ ಹಾಗೂ 1ಟಿಬಿವರೆಗಿನ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿಕೊಂಡಿದೆ. ಇದರೊಂದಿಗೆ ಹೆಚ್ಚಿನ ಸ್ಟೋರೇಜ್‌ಗಾಗಿ ಹೆಚ್ಚುವರಿ ಎಸ್ಎಸ್ಡಿ ಸ್ಲಾಟ್ ಅನ್ನು ಸಹ ಪಡೆದುಕೊಂಡಿರುವ ಈ ಲ್ಯಾಪ್‌ಟಾಪ್‌ನಲ್ಲಿ ವಿಶಿಷ್ಟವಾದ ಹಾರ್ಡ್‌ವೇರ್ ಕೀಯನ್ನು ಸಹ ಆ್ಯಡ್ ಮಾಡಲಾಗಿದೆ. ಈ ಫೀಚರ್ ಅನ್ನು ಇನ್ಫಿನಿಕ್ಸ್ ಓವರ್‌ಬೂಸ್ಟ್ ಸ್ವಿಚ್ ಎಂದು ಕೂಡಾ ಕರೆಯಲಾಗುತ್ತದೆ.
ಈ ಸ್ವಿಚ್‌ಅನ್ನು ಲ್ಯಾಪ್‌ಟಾಪ್‌ನ ಬದಿಯಲ್ಲಿ ನೀಡಲಾಗಿದ್ದು, ಕೇವಲ ಒಂದು ಟಾಗಲ್‌ನೊಂದಿಗೆ ಗರಿಷ್ಠ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಇದು ಮೂರು ವಿಧಾನಗಳನ್ನು ಹೊಂದಿದ್ದು, ಇಕೋ ಮೋಡ್, ಬಾಲ್ ಮೋಡ್ ಮತ್ತು ಓವರ್‌ಬೂಸ್ಟ್ ಮೋಡ್ ಎಂಬ ಆಯ್ಕೆಗಳಿವೆ.
ಬ್ಯಾಟರಿ ಫೀಚರ್ಸ್ ಹೇಗಿದೆ?
ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್‌ನ ಬ್ಯಾಟರಿ ಫೀಚರ್ ಬಗ್ಗೆ ಹೇಳುವುದಾದರೆ, ಇದು 70Whr ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಈ ಬ್ಯಾಟರಿಯನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 10 ದಿನಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಹಾಗೆಯೇ ಇದರೊಂದಿಗೆ 96W ಪೋರ್ಟಬಲ್ ಹೈಪರ್ ಚಾರ್ಜರ್ ಲಭ್ಯವಾಗಲಿದ್ದು, ಈ ಮೂಲಕ ಕೇವಲ ಎರಡು ಗಂಟೆಯಲ್ಲಿ ಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಈ ರೀಚಾರ್ಜ್ ಪ್ಲ್ಯಾನ್ 1095 ಜಿಬಿ ಡೇಟಾ ಉಚಿತ! ಬೇರೆ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ?
ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ ಬೆಲೆ ಮತ್ತು ಲಭ್ಯತೆ
ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್‌ಟಾಪ್ ನಾಲ್ಕು ಕಾನ್ಪಿಗರೇಶನ್ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಕೋರ್ i5 ಕಾನ್ಫಿಗರೇಶನ್ ಆಯ್ಕೆ ಇರುವ ಹಾಗೂ 16ಜಿಬಿ ರ್‍ಯಾಮ್ ಮತ್ತು 512 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಇರುವ ಲ್ಯಾಪ್‌ಟಾಪ್ ಬೆಲೆ 49,990 ರೂಪಾಯಿಗಳು ಎಂದು ನಿಗದಿ ಮಾಡಲಾಗಿದೆ. ಹಾಗೆಯೇ ಕೋರ್ i7 ಕಾನ್ಫಿಗರೇಶನ್ ಆಯ್ಕೆ ಇರುವ 16ಜಿಬಿ ರ್‍ಯಾಮ್ ಮತ್ತು 512ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಲ್ಯಾಪ್‌ಟಾಪ್ ಅನ್ನು 64,990 ರೂಪಾಯಿಗಳಲ್ಲಿ ಖರೀದಿ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ