Metaverse‌ನಲ್ಲಿ ನಡೆಯಿತು ಭಾರತದ ಮೊದಲ ಮದುವೆ ಆರತಕ್ಷತೆ! ವಿಡಿಯೋ ತುಣುಕು ನೋಡಿದ್ರಾ?

ವಾಸ್ತವದಲ್ಲಿ ಈ ಜೋಡಿಯು ತಮಿಳುನಾಡಿನ ಶಿವಲಿಂಗಪುರಂ ಗ್ರಾಮದಲ್ಲಿ ಮದುವೆಯಾಗಲಿದ್ದಾರೆ. ಪ್ರಸ್ತುತ ವರನಾಗಿರುವ ದಿನೇಶ್ ಅವರು ಐಐಟಿ-ಮದ್ರಾಸ್‌ನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ ವಧು ಸಾಫ್ಟ್‌ವೇರ್‌ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

@Twitter

@Twitter

 • Share this:
  ಇಂದಿನ ತಂತ್ರಜ್ಞಾನ (Technology) ಸಾಕಷ್ಟು ಪ್ರಗತಿ ಹೊಂದಿದೆ. ಹಿಂದೆಂದೂ ಕೇಳಿರದಂತಹ ಕುತೂಹಲಕಾರಿ ಘಟನೆಗಳು ಇಂದು ಆಧುನಿಕ ತಂತ್ರಜ್ಞಾನದ ಮೂಲಕ ನಡೆಸಲು ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗಲಾರದು. ಸಮುದ್ರದಾಳದಲ್ಲಿ ಗಂಡು-ಹೆಣ್ಣು (Men-Women) ಮದುವೆಯಾಗುವುದು (Marriage), ಆಗಸದಲ್ಲಿ ನಿಶ್ಚಿತಾರ್ಥ (Engagement) ಹೀಗೆ ಹಲವು ರೋಚಕ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈಗ ಅಂತಹ ಮತ್ತೊಂದು ವಿನೂತನ ಪ್ರಯೋಗವು ಭಾರತದಲ್ಲಿ ಮೊದಲ ಬಾರಿ ಮಾಡಲಾಗಿದೆ. ಮೆಟಾವರ್ಸ್‌ನಲ್ಲಿ (Metaverse) ಭಾರತದ 'ಮೊದಲ ಮದುವೆ ಆರತಕ್ಷತೆ'ಯ ಸಮಾರಂಭ ನಡೆದಿರುವ ಸುದ್ದಿಯೊಂದು ಈಗ ವರದಿಯಾಗಿದೆ. ತಮಿಳುನಾಡು (Tamilnadu) ಮೂಲದ ಜೋಡಿಯೊಂದು ಪ್ರಪ್ರಥಮ ಬಾರಿಗೆ ಇಮ್ಮರ್ಸಿವ್ 3ಡಿ (immersive 3D) ತಂತ್ರಜ್ಞಾನ ಬಳಸಿಕೊಂಡು ಮದುವೆಯ ಆರತಕ್ಷತೆಯ ಸಮಾರಂಭ ಮಾಡಿಕೊಂಡಿದೆ.

  ಇಮ್ಮರ್ಸಿವ್ 3ಡಿ ತಂತ್ರಜ್ಞಾನವು ಅಂತರ್ಜಾಲ ಆಧಾರಿತ ತಂತ್ರಜ್ಞಾನವಾಗಿದ್ದು ಇದರ ಮೂಲಕ ನಿಮ್ಮ ವರ್ಕ್ ಪ್ಲೇಸ್ ಅಥವಾ ಸ್ಥಳಕ್ಕೆ ವರ್ಚುವಲ್‌ ಆಗಿ ಬೇರೆಯದ್ದೇ ಆದ ಹಿನ್ನೆಲೆ ಒದಗಿಸಬಹುದು. ಹಾಗೂ ಮನುಷ್ಯರು ವರ್ಚುವಲ್‌ ಅವತಾರಗಳನ್ನು ಸೃಷ್ಟಿಸಬಹುದು. ತಮಿಳುನಾಡು ಮೂಲದ ದಿನೇಶ್ ಎಸ್.ಪಿ ಹಾಗೂ ಜನಗನಂದಿನಿ ರಾಮಸ್ವಾಮಿಯವರ ಮದುವೆ ಸಮರಂಭವು ಈ ತಂತ್ರಜ್ಞಾನದ ಮೂಲಕ ಹ್ಯಾರಿ ಪಾಟರ್ ಚಿತ್ರ ಸರಣಿಯ ಪ್ರಸಿದ್ಧ ಹೌಗರ್ಟ್ ಅರಮನೆಯಲ್ಲಿ ನಡೆದಂತಾಗಿದೆ.

  ಈ ಜೋಡಿಯ ವರ್ಚುವಲ್‌ ಅವತಾರಗಳು ಹಾಗೂ ಅತಿಥಿಗಳು ಮೆಟಾವರ್ಸ್ ಸ್ಥಳದಲ್ಲಿ ಭೇಟಿಯಾಗಿ ಈ ಜೋಡಿಗೆ ಮದುವೆಯ ಶುಭ ಕೋರಿದ್ದಾರೆ. ಒಟ್ಟಾರೆ ಸಮಾರಂಭದ ನೇತೃತ್ವವನ್ನು ವಧುವಿನ ದಿವಂಗತ ತಂದೆಯವರ ವರ್ಚುವಲ್‌ ಅವತಾರ ವಹಿಸಿದ್ದು ವಿಶೇಷವಾಗಿತ್ತು. ಇದೊಂದು ವಾಸ್ತವ ನೆಲೆಗಟ್ಟಿಲ್ಲದ ವರ್ಚುವಲ್‌ ಆಗಿ ನಡೆದಿರುವ ಸಮಾರಂಭ.

  ವಾಸ್ತವದಲ್ಲಿ ಈ ಜೋಡಿಯು ತಮಿಳುನಾಡಿನ ಶಿವಲಿಂಗಪುರಂ ಗ್ರಾಮದಲ್ಲಿ ಮದುವೆಯಾಗಲಿದ್ದಾರೆ. ಪ್ರಸ್ತುತ ವರನಾಗಿರುವ ದಿನೇಶ್ ಅವರು ಐಐಟಿ-ಮದ್ರಾಸ್‌ನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ ವಧು ಸಾಫ್ಟ್‌ವೇರ್‌ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

  ಈ ಕುರಿತು ಎ‍ಎನ್‍ಐ ಮಾಧ್ಯಮಕ್ಕೆ ಪ್ರತಿಕ್ರಯಿಸಿರುವ ದಿನೇಶ್ "ನಾನು ಕಳೆದ ಕೆಲವು ವರ್ಷಗಳಿಂದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬ್ಲಾಕ್ ಚೈನ್, ಎನ್‍ಎಫ್‍ಟಿ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಮೊದಲಿನಿಂದಲೂ ಅನನ್ಯವಾಗಿರಲು ಇಷ್ಟಪಡುತ್ತಿದ್ದೆ ಹಾಗೂ ನನ್ನ ಜೀವನದ ಮಹತ್ವದ ಘಳಿಗೆ ಚಿರಸ್ಮರಣಿಯವಾಗಿರಬೇಕೆಂಬ ಇಚ್ಛೆ ನನ್ನದಾಗಿತ್ತು. ನಾವು ಟೆಕ್ಕಿಗಳು ಸದಾ ಸಮಸ್ಯೆಗಳಿಗೆ ಸಮರ್ಪಕವಾಗಿರುವ ಪರಿಹಾರಗಳನ್ನು ಪ್ರೋಗ್ರಾಮಿಂಗ್ ಲಾಂಗ್ವೇಜ್ ಮೂಲಕ ಹುಡುಕುವಲ್ಲಿ ನಿರತರಾಗಿರುತ್ತೇವೆ" ಎಂದು ಹೇಳುತ್ತಾರೆ.

  ಇದನ್ನು ಓದಿ: Google Chrome ಬಳಕೆದಾರರೇ ಹುಷಾರ್; ಸರ್ಕಾರದಿಂದ ಬಂದಿದೆ ಹೊಸ ಎಚ್ಚರಿಕೆ ಸಂದೇಶ

  ಹಾಗೂ, "ಈ ರೀತಿಯ ತಂತ್ರಜ್ಞಾನದ ಬಗ್ಗೆ ನಾವು ನಮ್ಮ ಪೋಷಕರಿಗೆ ಅರ್ಥ ಮಾಡಿಸುವುದು ತುಂಬ ಕಷ್ಟಕರವಾಗಿತ್ತು. ಅವರಿಗೆ ಇಂಟರ್ನೆಟ್ ಆಗಲಿ ಮೆಟಾವರ್ಸ್ ಆಗಲಿ ಏನೆಂಬುದು ಗೊತ್ತಿಲ್ಲ. ಸಾಕಷ್ಟು ಸಮಯದ ವಿವರಣೆ ಹಾಗೂ ಉದಾಹರಣೆಯಾಗಿ ವರ್ಚುವಲ್‌ ಗೇಮ್‌ಗಳನ್ನು ತೋರಿಸುತ್ತ ಸವಿಸ್ತಾರವಾಗಿ ವಿವರಿಸಿದ ತರುವಾಯ ಅವರಿಗೆ ಈ ಕುರಿತು ಅರ್ಥವಾಯಿತು" ಎಂದು ಹೇಳುತ್ತಾರೆ.

  ಮೆಟಾವರ್ಸ್ ಎಂಬುದು ಭವಿಷ್ಯದ ಆಧುನಿಕ ತಂತ್ರಜ್ಞಾನವಾಗಿದೆ. ಇದೊಂದು 3ಡಿ ಜಗತ್ತಾಗಿದ್ದು ಇದರಲ್ಲಿ ಅಡಕವಾಗಿರುವ ಸೆನ್ಸರ್‌ಗಳ ಮೂಲಕ ಜನರು ಸಂವಹನೆ ನಡೆಸಲು ಶಕ್ತವಾಗುತ್ತದೆ. ಈಗಾಗಲೇ ಅಮೆರಿಕ ಮೂಲದ ದಂಪತಿಗಳಿಬ್ಬರು ಜಗತ್ತಿನಲ್ಲಿ ಪ್ರಥಮ ಬಾರಿಗೆ ಮೆಟಾವರ್ಸ್ ಮೂಲಕ ಮದುವೆಯಾಗಿದ್ದರೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

  ಇದನ್ನು ಓದಿ: Safer Internet Day 2022: ಇಂಟರ್​ನೆಟ್​​ನ್ನು ಜೋಪಾನವಾಗಿ ಬಳಸುವುದು ಹೇಗೆ ತಿಳಿಯಿರಿ

  ಕಳೆದ ವರ್ಷ, ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಅಮೆರಿಕದ ಜೋಡಿಯು ಭೌತಿಕವಾಗಿ ಹಾಗೂ ಮೆಟಾವರ್ಸ್ ಮೂಲಕ ತಮ್ಮ ಮದುವೆ ಮಾಡಿಕೊಂಡಿದ್ದರು. ಇದೊಂದು ವಿನೂತನ ತಂತ್ರಜ್ಞಾನವಾಗಿದ್ದು ದಿನಗಳೆದಂತೆ ಜನಪ್ರೀಯತೆ ಪಡೆಯುತ್ತಿದೆ. ಕೇವಲ ಮದುವೆಗಳಲ್ಲದೆ ಇತರೆ ಸಭೆ ಸಮಾರಂಭಗಳನ್ನೂ ಸಹ ಮೆಟಾವರ್ಸ್ ಮೂಲಕ ಸಂಪನ್ನಗೊಳಿಸಬಹುದಾಗಿದೆ.

  ಈಗಾಗಲೇ ಕೆಲವು ಸಂಗೀತದ ಕಾನ್ಸರ್ಟ್‌ಗಳೂ ಸಹ ಮೆಟಾವರ್ಸ್ ಮೂಲಕ ನಡೆದಿವೆ. ಜಸ್ಟಿನ್ ಬೈಬರ್, ಮಾರ್ಶ್ ಮ್ಯಾಲೋ, ಅರಿಯಾನಾ ಗ್ರಾಂಡೆ ಹಾಗೂ ಟ್ರಾವಿಸ್ ಸ್ಕಾಟ್‌ಗಳಂತಹ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಮೆಟಾವರ್ಸ್ ಮೂಲಕ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
  Published by:Harshith AS
  First published: