News18 India World Cup 2019

ಡ್ರೋನ್​ ಬಳಕೆಗೂ ಬಿತ್ತು ಲಗಾಮು, ಉಲ್ಲಂಘಿಸಿದರೆ ಶಿಕ್ಷೆ ಖಾಯಂ


Updated:August 28, 2018, 2:59 PM IST
ಡ್ರೋನ್​ ಬಳಕೆಗೂ ಬಿತ್ತು ಲಗಾಮು, ಉಲ್ಲಂಘಿಸಿದರೆ ಶಿಕ್ಷೆ ಖಾಯಂ

Updated: August 28, 2018, 2:59 PM IST
ನವದೆಹಲಿ: ಕೇವಲ ಛಾಯಾ ಚಿತ್ರಗಾರರಿಗೆ ಸೀಮಿತವಾಗಿದ್ದ ಡ್ರೋನ್​ ಹಾರಾಟ ಇದೀಗ ಎಲ್ಲಾ ಕ್ಷೇತ್ರದಲ್ಲೂ ವ್ಯಾಪಿಸತೊಡಗಿದೆ, ಡ್ರೋನ್​ ಹಾರಾಟಕ್ಕೆ ಸ್ಥಳೀಯ ಪೊಲೀಸರ ಅನುಮತಿ ಪಡೆಯಬೇಕಿತ್ತು. ಆದರೆ ಇದೀಗ ಕೇಂದ್ರ ಸರಕಾರ ಡ್ರೋನ್​ ಹಾರಾಟಕ್ಕೆ ಲಗಾಮು ಹಾಕಿದ್ದು, ಇನ್ನು ಮೇಲೆ ಯಾರು ಬೇಕಾದರೂ ಡ್ರೋನ್‌ಗಳನ್ನು ಹಾರಿಬಿಡುವಂತಿಲ್ಲ ಎಂದು ತಾಕೀತು ಮಾಡಿದೆ.

ಡ್ರೋನ್​ ಹಾರಾಟಕ್ಕಾಗಿ ನೂತನ ನೀತಿಯನ್ನು ಜಾರಿಗೆ ತರುವ ಚಿಂತನೆ ನಡೆದಿದ್ದು, ಮುಂದಿನ ಡಿಸೆಂಬರ್‌ 1ರಿಂದ ಡ್ರೋನ್‌ಗಳು ವಾಣಿಜ್ಯ ಸರಕಾಗಿ ಬಳಕೆಯಾಗಲಿದೆ. ಇದರ ಹಾರಾಟಕ್ಕೆ ಪರವಾನಗಿ ಅಗತ್ಯವಾಗಲಿದೆ.

ಇನ್ನು ಈ ಡ್ರೋನ್​ಗಳ ಹಾರಾಟಕ್ಕೂ ಸಾಕಷ್ಟು ನೀತಿಯನ್ನು ರೂಪಿಸಲಾಗಿದ್ದು, ಇವುಗಳ ತೂಕ ಮತ್ತು ಗಾತ್ರದ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ರಿಮೋಟ್ ಪೈಲಟ್ ಏರ್ಕ್ರಾಫ್ಟ್ ಸಿಸ್ಟಮ್​ ನಿಗಮದ ರಿಮೋಟ್ ಪೈಲಟ್ ಏರ್ಕ್ರಾಫ್ಟ್ ವಿಭಾಗದಲ್ಲಿ ಈ ಡ್ರೋನ್​ಗಳನ್ನು ತರಲಾಗಿದೆ. ನ್ಯಾನೋ, ಮೈಕ್ರೋ, ಸಣ್ಣ, ಮಧ್ಯಮ, ಮತ್ತಿ ದೊಡ್ಡ ಪ್ರಮಾಣದ ಡ್ರೋನ್​ಗಳನ್ನು ವಿಭಜಿಸಲಾಗಿದೆ.

250 ಗ್ರಾಂನಿಂದ 2 ಕೆ.ಜಿ. ತೂಕದವರೆಗಿನ ಡ್ರೋನ್‌ಗಳಿಗೆ ಯಾವುದೇ ಪರವಾನಗಿ ಪಡೆಯುವ ಅವಶ್ಯಕತೆಯಿಲ್ಲ, ಇದರಲ್ಲಿ ವಿನಾಯಿತಿ ನೀಡಲಾಗಿದೆ. ಒಂದು ವೇಳೆ ನೀವು ಬಳಕೆ ಮಾಡುವ ಡ್ರೋನ್​ 2 ಕೆ.ಜಿ.ಗಿಂತಲೂ ಹೆಚ್ಚಿನ ತೂಕ ಹೊಂದಿದ್ದರೆ ಇದರ ಹಾರಾಟ ಮತ್ತು ನಿಯಂತ್ರಣಕ್ಕೆ ಲೈಸನ್ಸ್‌ ಕಡ್ಡಾಯಗೊಳಿಸಲಾಗಿದೆ. ಈ ಡ್ರೋನ್​ಗಳನ್ನ 18 ವರ್ಷ ಮೇಲ್ಪಟ್ಟವರಷ್ಟೇ ಹಾರಾಟ ಮಾಡಬಹುದು.

ಎಲ್ಲಾ ಡ್ರೋನ್​ಗಳಿಗೂ ವಿಶೇಷ ಗುರುತಿನ ಸಂಖ್ಯೆ (ಯುಐಎನ್‌) ಪಡೆಯುವುದು ಕಡ್ಡಾಯವಾಗಿದೆ. ನ್ಯಾನೋ ಡ್ರೋನ್​ಗಳನ್ನು ನಿಷೇಧಿತವಲ್ಲದ ವಲಯದಲ್ಲಿ 50 ಅಡಿಗಿಂತ ಕಡಿಮೆ ಮಟ್ಟದಲ್ಲಿ ಹಾರಾಟ ಮಾಡಬಹುದು. ವಿಮಾನ ನಿಲ್ದಾಣ, ನಿಷೇಧಿತ ವಲಯಗಳ ಸುತ್ತ ಹಾರಾಡುವ ಪುಟ್ಟ ಡ್ರೋನ್‌ಗಳಿಗೆ ಯುಐಎನ್‌ ಮತ್ತು ಯುಎಒಪಿ ಅನುಮತಿ ಕಡ್ಡಾಯ. ನ್ಯಾನೋ ಡ್ರೋನ್ ಹೊರತುಪಡಿಸಿ ಉಳಿದೆಲ್ಲಾ ಡ್ರೋನ್​ ಬಳಸುವ ಮುನ್ನ ಕನಿಷ್ಠ 24 ಗಂಟೆಗೂ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಈ ನಿಯಮ 2 ಕೆಜಿಗಿಂತ ಅಧಿಕ ತೂಕದ ಡ್ರೋನ್​ಗಳಿಗೆ ಅನ್ವಯವಾಗುತ್ತದೆ.

    Loading...

  • ಇನ್ನು ಸರಕಾರ ವಿಧಿಸಿರುವ ಕೆಲ ನಿಯಮಗಳಿ ಇಂತಿವೆ

  • ಡ್ರೋನ್​ ಹಾರಾಟ ಹಗಲು ಹೊತ್ತಿನಲ್ಲಿ ಮಾತ್ರಾ ಅವಕಾಶ, ಅದೂ ಕೂಡಾ ಡ್ರೋನ್​ ಹಾರಾಡಿಸುವವರ ದೃಷ್ಟಿ ವ್ಯಾಪ್ತಿಯಲ್ಲಿ ಮಾತ್ರ ಹಾರಾಟ ನಡೆಸಬೇಕು

  • ಎಲ್​ಒಸಿ ಸೇರಿದಂತೆ ದೇಶದ ಅಂತರರಾಷ್ಟ್ರೀಯ ಗಡಿ ಭಾಗಗಳಿಂದ ಕನಿಷ್ಠ 25 ಕಿ.ಮೀ ಒಳ ಪ್ರದೇಶಗಳಲ್ಲಿ ಮಾತ್ರ ಹಾರಾಟ

  • ರಾಷ್ಟ್ರೀಯ ಪಾರ್ಕ್​, ವನ್ಯಜೀವಿ ಘಟಕ, ಪರಿಸರ ಸಚಿವಾಲಯ ಸುತ್ತ ಹಾರಾಟ ನಡೆಸುವ ಮುನ್ನ ಪರವಾನಗಿ ಅತ್ಯಗತ್ಯ

  • ವಾಹನ ಚಾಲನೆ ಸಂದರ್ಭದಲ್ಲಿ ಇವುಗಳ ಬಳಕೆ ಮಾಡುವ ಹಾಗಿಲ್ಲ


 
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...