2022ರೊಳಗೆ ಭಾರತದಲ್ಲಿ 5ಜಿ ಸೇವೆ ಆರಂಭ


Updated:June 13, 2018, 6:07 PM IST
2022ರೊಳಗೆ ಭಾರತದಲ್ಲಿ 5ಜಿ ಸೇವೆ ಆರಂಭ

Updated: June 13, 2018, 6:07 PM IST
ನವದೆಹಲಿ: ಈಗಾಗಲೇ 4ಜಿ ಇಂಟೆರ್​ನೆಟ್​ ಸ್ಪೀಡ್​ಗೆ ಒಗ್ಗಿಕೊಂಡಿರುವ ನೆಟ್ಟಿಗರಿಗೆ ಇಲ್ಲೊಂದು ಸಂತಸ ಸುದ್ದಿ, 2022ರೊಳಗೆ ಭಾರತೀಯರಿಗೆ 5ಜಿ ಇಂಟರ್​ನೆಟ್​ ಸ್ಪೀಡ್​ನ್ನು ಅನುಭವಿಸ ಬಹುದು ಎಂದು ಎರಿಕ್ಸನ್​ ಮೊಬಿಲಿಟಿ ವರದಿ ಮಾಡಿದೆ.

ಈಗಿರುವ ವರದಿಗಳ ಪ್ರಕಾರ 5ಜಿ ಸ್ಪೀಡ್​ ಸೇವೆ ಇದೇ ವರ್ಷಾಂತ್ಯಕ್ಕೆ ಆರಂಭವಾಗಲಿದ್ದು, ಚೀನಾ, ಉತ್ತರ ಅಮೆರಿಕ, ಜಪಾನ್​ ಮತ್ತು ದಕ್ಷಿಣ ಕೋರಿಯಾದಲ್ಲಿ ಈ ಸೇವೆ ಮೊದಲು ದೊರಕಲಿದೆ. 2022 ವೇಳೆ ಭಾರತದ ನಾಲ್ಕೂ ಮೂಲೆಯಲ್ಲಿ 4ಜಿ ಸೇವೆ ದೊರಕಲಿದ್ದು, 2023ರ ವೇಳೆ 5.5 ಬಿಲಿಯನ್​ 4ಜಿ ಬಳಕೆದಾರರಿರುತ್ತಾರೆ ಎಂದು ಇಎಂಆರ್ ವರದಿಯಾಗಿದೆ.

2022ರೊಳಗೆ ಭಾರತದಲ್ಲಿ 5ಜಿ ಸ್ಪಾರ್ಟ್​ಫೋನ್​ಗಳು ಲಭ್ಯವಿರುತ್ತದೆ, 2023ರೊಳಗೆ 10 ಮಿಲಿಯನ್​ಗಿಂತಲೂ ಅಧಿಕ ಮೊಬೈಲ್​ಗಳು 5ಜಿ ಸೇವೆಯನ್ನು ನೀಡುತ್ತವೆ. 2016 ಅಂತ್ಯ ಮತ್ತು 2017ರ ಒಟ್ಟಾರೆ 4ಜಿ ಬೆಳವಣಿಗೆಯನ್ನು ಗಮನಿಸಿದರೆ 2023ರೊಳಗೆ ಶೇ.78ರಷ್ಟು ಮೊಬೈಲ್​ ಬಳಕೇದಾರರು 4ಜಿ ಎಲ್​ಟಿಇ ಸೇವೆಯನ್ನು ಬಳಸುತ್ತಾರೆ ಎಂದು ಇಎಂಆರ್ ವರದಿ ಮಾಡಿದೆ.

ಎರಿಕ್ಸನ್ ಮೊಬಿಲಿಟಿ ರಿಪೋರ್ಟ್ (ಇಎಮ್ಆರ್) ಸಂಪಾದಕ ಪ್ಯಾಟ್ರಿಕ್ ಸಿರ್ವಾಲ್ ಪ್ರಕಾರ 2019 ಆದಿಯಲ್ಲೇ 5ಜಿ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆ ಪ್ರವೇಶಿಸಲಿದ್ದು, 2020 ಹೆಚ್ಚಿನ ಪ್ರಮಾಣದಲ್ಲಿ ನಾವು 5ಜಿ ಫೋನ್​ಗಳನ್ನು ಕಾಣಬಹುದು ಎಂದಿದ್ದಾರೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...