ಇಂದಿನ ದಿನದಲ್ಲಿ ಸ್ಮಾರ್ಟ್ಫೋನ್ಗಳು (Smartphones) ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಯಾರ ಕೈ ನೋಡಿದ್ರೂ ಸ್ಮಾರ್ಟ್ಫೋನ್ಗಳೇ ಕಾಣುತ್ತೆ. ಈ ಮಧ್ಯೆ ಕಂಪೆನಿಗಳು ಸಹ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗಂತೂ ವಾರಕ್ಕೆ ಮೂರರಿಂದ ನಾಲ್ಕು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಮೊಬೈಲ್ಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜನರಂತು ಕಾತುರದಿಂದ ಹೊಸ ಸ್ಮಾರ್ಟ್ಫೋನ್ನ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಅದ್ರಲ್ಲೂ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ಗಳಾದ ಸ್ಯಾಮ್ಸಂಗ್, ಒಪ್ಪೋ (Oppo), ರೆಡ್ಮಿ (Redmi), ಐಫೋನ್, ಒನ್ಪ್ಲಸ್ ಇತ್ತೀಚೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ (Demand Smartphones) ಕಂಪೆನಿಗಳಾಗಿದೆ.
ಇದೀಗ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಬಗ್ಗೆ ಅಚ್ಚರಿಯ ವರದಿಯೊಂದು ಹೊರಬಿದ್ದಿದ್ದು ಈ ಮೂಲಕ ಭಾರತೀಯರು ಸ್ಮಾರ್ಟ್ಫೋನ್ಗಳನ್ನು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸುತ್ತಾರೆ ಎಂಬ ಸಂಶೋಧನೆ ಮಾಡಿದ್ದಾರೆ. ಈ ವರದಿ ಬಳಕೆದಾರರನ್ನೇ ಬೆಚ್ಚಿಬೀಳಿಸುತ್ತೆ.
ವರದಿ ಪ್ರಕಾರ
ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆ ಬೆಳವಣಿಗೆಯಾಗುತ್ತಿದ್ದಂತೆ ಇದೀಗ ಝೀ5 ಸಂಸ್ಥೆ ಭಅರತೀಯರು ಸ್ಮಾರ್ಟ್ಫೋನ್ಗಳನ್ನು ಹೇಗೆ ಬಳಸುತ್ತಾರೆ ಮತ್ತು ಎಷ್ಟು ಸಮಯಕ್ಕೊಮ್ಮೆ ಹೊಸ ಸ್ಮಾರ್ಟ್‌ಫೋನ್ ಅನ್ನು ಖರೀದಿಸುತ್ತಾರೆ ಎಂದು ರಿಸರ್ಚ್ ಮಾಡಿತ್ತು. ಈ ವರದಿಯ ಪ್ರಕಾರ, ಭಾರತದ ಮೆಟ್ರೋ ನಗರಗಳಲ್ಲಿ ವಾಸಿಸುವ 50 ಶೇಕಡಾದಷ್ಟು ಜನರು ಆರು ತಿಂಗಳಿಗೊಮ್ಮೆ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಾರೆ ಎಂದು ಹೇಳಿದ್ದಾರೆ. ಹಳೆ ಮೊಬೈಲ್ನಲ್ಲಿ ಏನಾದರು ಸಮಸ್ಯೆ ಬಂದ ತಕ್ಷಣ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಾರೆ.
ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಲಭ್ಯವಿರುವ 20 ಸಾವಿರದೊಳಗಿನ ಬೆಸ್ಟ್ 5ಜಿ ಸ್ಮಾರ್ಟ್ಫೋನ್ಗಳಿವು!
ಪುರುಷರೇ ಹೆಚ್ಚು ಸ್ಮಾರ್ಟ್‌ಫೋನ್ ಬದಲಾಯಿಸುತ್ತಾರೆ
ಇತ್ತೀಚೆಗಂತೂ ಟೆಕ್ನಾಲಜಿ ಬದಲಾದಂತೆ ಜನರು ಸಹ ಅದಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. ಜನರು ಇಂದಿನ ದಿನದಲ್ಲಿ ಮೊಬೈಲ್ ಅನ್ನು ಖರೀದಿಸುವಾಗ ಸಾಕಷ್ಟು ಜಾಗರೂಕರಾಗಿದ್ದಾರೆ. ಇನ್ನು ಈ ವರದಿಯ ಪ್ರಕಾರ, ಜನರು ಉತ್ತಮ ಬ್ರಾಂಡ್, ಪ್ರೊಸೆಸರ್, ಕ್ಯಾಮೆರಾ, ಸ್ಟೋರೇಜ್ ಎಲ್ಲವನ್ನೂ ಗಮನಿಸಿ ಮೊಬೈಲ್ ಅನ್ನು ಖರೀದಿಸುತ್ತಾರಂತೆ. ಇನ್ನು ಮಹಿಳೆಯರಿಗಿಂತ ಪುರುಷರೇ ಹೆಚ್ಚು ಉತ್ತಮ ಬ್ರಾಂಡ್ ನೇಮ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಖರೀದಿಸುತ್ತಾರೆ ಎಂದು ಅಧ್ಯಯನ ಹೇಳಿದೆ.
30 ಸಾವಿರದ ಸ್ಮಾರ್ಟ್ಫೋನ್ಗೆ ಹೆಚ್ಚು ಬೇಡಿಕೆ
ಇನ್ನು ದೇಶದಲ್ಲಿರುವ ಐದರಲ್ಲಿ ಎರಡು ಜನರು 30,000 ರೂಪಾಯಿ ಅಥವಾ ಅದಕ್ಕಿಂತ ಅಧಿಕ ದರ ಇರುವ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುತ್ತಾರಂತೆ. ಅದರಲ್ಲೂ 34 ರಿಂದ 44 ವಯಸ್ಸಿನವರು 30 ಸಾವಿರ ರೂಪಾಯಿ ಫೋನ್ನ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲು ಮೆಟ್ರೋ ಹತ್ತಿರದ ಜನರು ಆನ್ಲೈನ್ ಮೂಲಕ ಹೆಚ್ಚು ಸ್ಮಾರ್ಟ್ಫೋನ್ಗಳನ್ನು ಖರೀದಿ ಮಾಡುತ್ತಾರಂತೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ 20 ಸಾವಿರದೊಳಗಿನ ಬೆಸ್ಟ್ 5ಜಿ ಸ್ಮಾರ್ಟ್ಫೋನ್ಗಳಿವು
ರಿಯಲ್ಮಿ 10 ಪ್ರೋ :
ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ.18,999 ಕ್ಕೆ ಲಭ್ಯವಿದೆ. ರಿಯಲ್ಮಿ 10 ಪ್ರೋ ಫೋನ್ 6.72-ಇಂಚಿನ IPS LCD ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 695 SoC ಚಿಪ್‌ಸೆಟ್, 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ, ಸ್ಟೀರಿಯೋ ಸ್ಪೀಕರ್‌ಗಳು, 108 MP+2 MP ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್, 16 MP ಸೆಲ್ಫಿ ಕ್ಯಾಮೆರಾ, ಯುಎಸ್ಬಿ ಟೈಪ್-C 2.0, ಫಿಂಗರ್ ಪ್ರಿಂಟ್ ಸೆನ್ಸಾರ್ ಮುಂತಾದ ವಿಶೇಷತೆಗಳನ್ನು ಹೊಂದಿದೆ.
ರೆಡ್ಮಿ ನೋಟ್ 12:
ರೆಡ್ಮಿ ನೋಟ್ 12 5ಜಿ ಸ್ಮಾರ್ಟ್‌ಫೋನ್ ಅಮೆಜಾನ್ನಲ್ಲಿ Rs.17,999 ಬೆಲೆಯಲ್ಲಿ ಲಭ್ಯವಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ ಸೂಪರ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಹ್ಯಾಂಡ್ಸೆಟ್ Snapdragon 4 Gen 1 ಪ್ರೊಸೆಸರ್ನಿಂದ ಚಾಲಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ, 48 MP + 8 MP + 2 MP ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಡ್ಯುಯಲ್ ಕಲರ್ LED ಫ್ಲ್ಯಾಷ್, 13 MP ಮುಂಭಾಗದ ಕ್ಯಾಮೆರಾ, USB ಟೈಪ್-ಸಿ ಪೋರ್ಟ್, ಫಿಂಗರ್‌ಪ್ರಿಂಟ್ ಸೆನ್ಸರ್, ಗೊರಿಲ್ಲಾ ಗ್ಲಾಸ್ 3 ರಕ್ಷಣೆಯ ಫೀಚರ್ಸ್ಗಳನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ