YouTubers: ಯೂಟ್ಯೂಬ್ ಮೂಲಕ ನೀವೇನಾದರೂ ಕಲಿಯಬೇಕಾ? ಹಾಗಿದ್ರೆ ಇಲ್ಲಿವೆ ಭಾರತದ ಜನಪ್ರಿಯ ಯೂಟ್ಯೂಬ್ ಚಾನಲ್ ಗಳು

ಕೆಲವರು ಹಣ ಗಳಿಸುವ ಉದ್ದೇಶದಿಂದ ಮಾತ್ರ ತಮ್ಮ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಇನ್ನೂ ಕೆಲವರು ಜ್ಞಾನ ಹಂಚಿಕೆಗೆ ಚಾನೆಲ್ ರೂಪಿಸಿಕೊಂಡಿದ್ದಾರೆ. ಹಾಗಾದರೆ ನಾವಿಲ್ಲಿ ಉತ್ತಮ ಕಲಿಕೆ ಕಂಟೆಂಟ್ ಗಳನ್ನು ಮತ್ತು ಜನಪ್ರಿಯ ವೃತ್ತಿಪರ ಶಿಕ್ಷಕರನ್ನು ಒಳಗೊಂಡಿರುವ ಚಾನಲ್ ಗಳ ಬಗ್ಗೆ ತಿಳಿದುಕೊಳ್ಳೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಯೂಟ್ಯೂಬ್ (YouTube) ಸದ್ಯದ ಜನಪ್ರಿಯ ಸಾಮಾಜಿಕ ಜಾಲತಾಣ (Social Media). ಇದರಲ್ಲಿ ಈವರೆಗೆ ಲಕ್ಷಗಟ್ಟಲೆ ಚಾನೆಲ್ ಗಳು (Channel) ಹಾಗೂ ಕೋಟಿಗಟ್ಟಲೆ ವಿಡಿಯೋಗಳಿವೆ. ಇಲ್ಲಿ ಒಬ್ಬರು ತಮ್ಮ ಬದುಕು ಕಟ್ಟಿಕೊಳ್ಳಬಹುದು ಮತ್ತು ಇಲ್ಲಿನ ಉಪಯುಕ್ತ ಮಾಹಿತಿ ವಿಡಿಯೋದಿಂದ ಬದುಕನ್ನು ರೂಪಿಸಿಕೊಳ್ಳಲೂಬಹುದು. ಯೂಟ್ಯೂಬ್ ಗಳಲ್ಲಿ ವಿಡಿಯೋಗಳನ್ನೇ (Video) ಮಾಡಿಕೊಂಡು ಕಟೆಂಟ್ ಕ್ರಿಯೇಟರ್ (Content Creator) ಆಗಿ ಬದುಕು ಕಟ್ಟಿಕೊಂಡಿರುವವರು ಅದೆಷ್ಟೋ ಮಂದಿ ಇದ್ದಾರೆ. ಯೂಟ್ಯೂಬ್ ನಲ್ಲಿ ಎಲ್ಲಾ ರೀತಿಯ ವಿಡಿಯೋ, ಚಾನೆಲ್ ಗಳಿವೆ. ಅವುಗಳಲ್ಲಿ ಉಪಯುಕ್ತವಾದ ಕೆಲವು ನೃತ್ಯ, ಸಂಗೀತ, ಗಣಿತ, ಕೋಡಿಂಗ್ ಹೀಗೆ ಹಲವಾರು ಅಧ್ಯಯನ ಸಾಮಾಗ್ರಿ ಚಾನೆಲ್ ಗಳು ಹೆಚ್ಚು ಜನಪ್ರಿಯವಾಗಿವೆ. ಇವು ಕಲಿಕೆಯ ಉತ್ಸಾಹದಲ್ಲಿರುವವರಿಗೆ ಅದ್ಭುತ ಪ್ರಯೋಜನ ನೀಡುತ್ತವೆ.

ಭಾರತದಲ್ಲಿ ಸಾವಿರಾರು ಮಂದಿ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರು ಹಣ ಗಳಿಸುವ ಉದ್ದೇಶದಿಂದ ಮಾತ್ರ ತಮ್ಮ ಚಾನೆಲ್ ಅನ್ನು ನಡೆಸುತ್ತಿದ್ದಾರೆ ಇನ್ನೂ ಕೆಲವರು ಜ್ಞಾನ ಹಂಚಿಕೆಗೆ ಚಾನೆಲ್ ರೂಪಿಸಿಕೊಂಡಿದ್ದಾರೆ. ಹಾಗಾದರೆ ನಾವಿಲ್ಲಿ ಉತ್ತಮ ಕಲಿಕೆ ಕಂಟೆಂಟ್ ಗಳನ್ನು ಮತ್ತು ಜನಪ್ರಿಯ ವೃತ್ತಿಪರ ಶಿಕ್ಷಕರನ್ನು ಒಳಗೊಂಡಿರುವ ಚಾನಲ್ ಗಳ ಬಗ್ಗೆ ತಿಳಿದುಕೊಳ್ಳೋಣ.

1) ನರೇಶ್ ಐ ಟೆಕ್ನಾಲಜೀಸ್, ಕಿಶೋರ್
ಈ ಚಾನೆಲ್ ನಲ್ಲಿ 200+ ಕೋರ್ಸ್‌ಗಳ ಲೈಬ್ರರಿಯೊಂದಿಗೆ, 600,000+ ವೃತ್ತಿಪರರು ತರಬೇತಿ ನೀಡುತ್ತಾರೆ. ಈ ಚಾನೆಲ್ ನಲ್ಲಿ ಕಿಶೋರ್ ಎಂಬುವವರು ಹೆಚ್ಚು ಜನಪ್ರಿಯವಾಗಿದ್ದು, ಇವರ ವಿಡಿಯೋಗಳು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ ಮತ್ತು ಕಿಶೋರ್ ಯೂಟ್ಯೂಬ್ ನಲ್ಲಿ ಕೋಡಿಂಗ್, ಜವಾ ಮುಂತಾದ ವಿಷಯಗಳನ್ನು ಕಲಿಸಿಕೊಡುತ್ತಿದ್ದಾರೆ.

2) ಲರ್ನ್ ಫ್ರೆಂಚ್ ಇನ್ 15 ಡೇಸ್- ಸುಚಿತಾ ಗುಪ್ತಾ
ಸುಚಿತಾ ಗುಪ್ತಾ ಅವರ ಈ ಚಾನೆಲ್ ನಲ್ಲಿ ಇವರು 15 ದಿನಗಳಲ್ಲಿ ಸುಲಭವಾಗಿ ಫ್ರೆಂಚ್ ಮಾತನಾಡುವುದನ್ನು ಕಲಿಸಿಕೊಡುವ ಉದ್ದೇಶದಿಂದ ಲರ್ನ್ ಫ್ರೆಂಚ್ ಇನ್ 15 ಡೇಸ್ ಅನ್ನು ಆರಂಭಿಸಿದ್ದಾರೆ. ಭಾಷೆ ಜ್ಞಾನ ಎಲ್ಲರಿಗೂ ಮಹತ್ವವಾದದ್ದು ಹೀಗಾಗಿ ಇವರು ಈ ರೀತಿಯ ಭಿನ್ನವಾದ ಭಾಷಾ ಕಲಿಕೆಯ ಚಾನೆಲ್ ರೂಪಿಸಿದ್ದಾರೆ. ಸುಚಿತಾ ಗುಪ್ತಾ ಅವರ ಚಾನೆಲ್ ಗೆ 208k ಚಂದಾದಾರರು ಇದ್ದಾರೆ ಮತ್ತು ವಿಡಿಯೋಗಳು 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿವೆ.

3) ಡ್ಯಾನ್ಸರ್‌ಸೈಸ್ ಸ್ಟುಡಿಯೋ, ಅದಿತಿ ಮತ್ತು ನೈನಾ ಚಂದ್ರ
ಅದಿತಿ ಮತ್ತು ನೈನಾ ಚಂದ್ರ ಇಬ್ಬರ ಸಹಭಾಗಿತ್ವದ ನೃತ್ಯದ ಚಾನೆಲ್ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿದ್ದು, 1.01M ಚಂದಾದಾರರನ್ನು ಹೊಂದಿದೆ. ಆರಂಭಿಕ ನೃತ್ಯಗಾರರಿಗೆ ಇದು ಅನುಕೂಲಕರವಾಗಿದ್ದು, ಸುಲಭ, ಸರಳ ರೀತಿಯಲ್ಲಿ ಡ್ಯಾನ್ಸ್ ಕಲಿಸುತ್ತಿದ್ದಾರೆ. ಮತ್ತು ಅಪ್ಲೋಡ್ ಮಾಡಲಾದ ಅನೇಕ ನೃತ್ಯದ ವಿಡಿಯೋಗಳು ಸಹ ಕಲಿಕೆಗೆ ಪ್ರಯೋಜನವಾಗಬಹುದು.

ಇದನ್ನೂ ಓದಿ:Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

4) ಟ್ಯುಟೋರಿಯಲ್ಸ್ ಪಾಯಿಂಟ್ (ಇಂಡಿಯಾ) ಲಿಮಿಟೆಡ್, ಪವನ್ ಲಾಲ್ವಾನಿ
ಈ ಚಾನೆಲ್ ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್, ಎಂಬಿಎ, ಎಂಸಿಎ, ಮ್ಯಾನೇಜ್‌ಮೆಂಟ್, ವಿವಿಧ ಪರೀಕ್ಷೆಗಳ ತಯಾರಿ ಮತ್ತು ಶೈಕ್ಷಣಿಕ ವಿಷಯಗಳು ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ. 2.84 ಮಿಲಿಯನ್ ಚಂದಾದಾರರು ಈ ಚಾನೆಲ್ ನಿಂದ ಲಾಭ ಪಡೆಯುತ್ತಿದ್ದಾರೆ. ಪವನ್ ಲಾಲ್ವಾನಿ ಎಂಬುವವರು ಇಲ್ಲಿ MS Excel ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ.

5) ಎಸ್ ಕೆ ವಂಡರ್ ಕಿಡ್ಸ್, ಮೊಹ್ಸಿನ್ ರಜಾ ಖಾನ್
ಪುಟ್ಟ ಬಾಲಕ ಹೋಸ್ಟ್ ಮಾಡುತ್ತಿರುವ ಈ ಚಾನೆಲ್ ನಲ್ಲಿ ಮಕ್ಕಳಿಗಾಗಿ ಹಲವಾರು ಉಪಯುಕ್ತ ಮಾಹಿತಿಗಳನ್ನು ಈತ ಹಂಚಿಕೊಳ್ಳುತ್ತಾನೆ. 239K ಚಂದಾದಾರರು ಇರುವ ಈ ಚಾನೆಲ್ ಅನ್ನು ಮೊಹ್ಸಿನ್ ರಾಜಾ ಖಾನ್ ಎಂಬ ಪುಟ್ಟ ಹುಡುಗ ಮುನ್ನಡೆಸುತ್ತಿದ್ದಾನೆ. ಕಳೆದ ವರ್ಷ ಭೌತಶಾಸ್ತ್ರದ ಬಗ್ಗೆ ತಿಳಿಸಿ ಕೊಡುವ ಒಂದು ವಿಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಹೊಂದಿದೆ.

6) ಇಂಟೆಲ್ಲಿಪಾಟ್
ಇಂಟೆಲ್ಲಿಪಾಟ್ ಜಾಗತಿಕ ಆನ್‌ಲೈನ್ ವೃತ್ತಿಪರ ತರಬೇತಿ ಪೂರೈಕೆ ಮಾಡುವ ಚಾನೆಲ್ ಆಗಿದೆ. ಬಿಗ್ ಡೇಟಾ, ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು 150 ಇತರ ಉನ್ನತ ಟ್ರೆಂಡಿಂಗ್ ತಂತ್ರಜ್ಞಾನಗಳಲ್ಲಿನ ಕೋರ್ಸ್‌ಗಳನ್ನು ಒಳಗೊಂಡಿದೆ. ಆಸಕ್ತರು ಈ ವಿಷಯಗಳನ್ನು ಉತ್ತಮ ವೃತ್ತಿಪರರ ಮೂಲಕ ಇಲ್ಲಿ ಕಲಿಯಬಹುದಾಗಿದೆ. ಇಲ್ಲಿ ಪೈಥಾನ್ ಕೋರ್ಸ್ ಮುಖ್ಯವಾಗಿದ್ದು, 10 ಗಂಟೆಗಳ ಕಲಿಕೆಯ ವಿಡಿಯೋ ಚಾನೆಲ್ ನಲ್ಲಿ ಇದೆ. ಯೂಟ್ಯೂಬ್ ಕಲಿಕೆ ಚಾನೆಲ್ ಗಳು ಹಲವಾರು ಟೀಕೆಗಳಿಗೂ ಸಹ ಒಳಗಾಗಿವೆ. ಹಲವಾರು ಟ್ರೋಲ್ ಗಳು ಯೂಟ್ಯೂಬ್ ವೃತ್ತಿಪರರನ್ನು ಕಾಲೆಳೆದಿವೆ ಕೂಡ.

ಇದನ್ನೂ ಓದಿ:  Explained: ಮಕ್ಕಳು ಓದುವ ಪುಸ್ತಕದಲ್ಲೂ ಯಾಕೆ ವಿವಾದ? ಪರಿಷ್ಕರಣೆಗೆ ವಿರೋಧ ವ್ಯಕ್ತವಾಗಿದ್ದೇಕೆ?

2020ರಲ್ಲಿ ಪ್ರಪಂಚದಾದ್ಯಂತ ವಕ್ಕರಿಸಿದ ಮಾಹಾಮಾರಿ ಕೊರೋನವು ಎಲ್ಲೆಡೆ ಶಿಕ್ಷಣದ ಚಿತ್ರಣವನ್ನು ಬದಲಾಯಿಸಿತು. ಭಾರತವು ಗಮನಾರ್ಹ ವೇಗ ಮತ್ತು ಬದ್ಧತೆಯೊಂದಿಗೆ ದೂರಸ್ಥ ಕಲಿಕೆಯ ಹೊಸ ಯುಗವನ್ನು ಸ್ವೀಕರಿಸಿತು. ಆನ್ ಲೈನ್ ತರಗತಿ, ಯೂಟ್ಯೂಬ್ ನಲ್ಲಿ ಕಲಿಯಬಹುದಾದ ಅವಕಾಶಗಳನ್ನು ಮಕ್ಕಳಿಂದ ಹಿಡಿದು ಎಲ್ಲರೂ ಮೈಗೂಡಿಸಿಕೊಂಡರು.
Published by:Ashwini Prabhu
First published: