ಭಾರತದಲ್ಲಿ (India) ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳನ್ನು (Mobiles) ಬಳಕೆ ಮಾಡುವವರ ಸಂಖ್ಯೆ ವ್ಯಾಪಕವಾಗಿ ಹಬ್ಬಿದೆ. ಆದರೆ ಯಾವುದೇ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡಬೇಕಿದ್ದರೂ ಅದನ್ನು ಸರಿಯಾಗಿ ಚೆಕ್ ಮಾಡಿ ಖರೀದಿಸ್ತಾರೆ. ಟೆಕ್ನಾಲಜಿ ಎಷ್ಟೇ ಬೆಳವಣಿಗೆಯಾದರೂ ಭಾರತೀಯರು (Indians) ಈ ಕೆಲಸ ಮಾಡುವುದು ಮಾತ್ರ ಬಿಡುವುದಿಲ್ಲ. ಇದರ ಬಗ್ಗೆ ಸಂಶೋಧನಾ ಸಂಸ್ಥೆಯೊಂದು ರೆಸರ್ಚ್ ಮಾಡಿದ್ದು. ಭಾರತೀಯರು ಮೊಬೈಲ್ ಖರೀದಿಸುವಾಗ ಮೊದಲು ಮಾಡುವ ಕೆಲಸ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. ಹೆಚ್ಚಾಗಿ ಭಾರತೀಯರು ಇಕಾಮರ್ಸ್ ವೆಬ್ಸೈಟ್ಗಿಂತ (E-Commerce Website) ಹೆಚ್ಚಾಗಿ ಆಫ್ಲೈನ್ (Offline) ಮೂಲಕ ಹೆಚ್ಚು ಖರೀದಿ ಮಾಡುತ್ತಾರೆ. ಇದಕ್ಕೂ ಒಂದು ಕಾರಣ ಇವೆಯಂತೆ.
ಹೌದು, ಭಾರತೀಯರು ಸ್ಮಾರ್ಟ್ಫೋನ್ಗಳನ್ನು ಆಫ್ಲೈನ್ ಮೂಲಕ ಹೆಚ್ಚು ಖರೀದಿ ಮಾಡ್ತಾರೆ. ಆದರೆ ಪ್ರತಿಯೊಬ್ಬರು ಮೊಬೈಲ್ಗಳನ್ನು ಖರೀದಿಸುವಾಗ ಈ ಕೆಲಸ ಮೊದಲು ಮಾಡ್ತಾರಂತೆ. ಹಾಗಿದ್ರೆ ಅಂತಹ ಕೆಲಸ ಏನು? ಯಾಕೆ ಮಾಡ್ತಾರೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಸ್ಮಾರ್ಟ್ಫೋನ್ ಖರೀದಿ ಮಾಡುವಾಗ ಏನ್ ಮಾಡ್ತಾರೆ ಭಾರತೀಯರು?
ಮುಖ್ಯವಾಗಿ ಸಂಶೋಧನೆಯ ಪ್ರಕಾರ ಹೊಸದಾಗಿ ಸ್ಮಾರ್ಟ್ಫೋನ್ ಅನ್ನು ಖರೀದಿಸುವ ಮೊದಲು ಸ್ಮಾರ್ಟ್ಫೋನ್ಗಳನ್ನು ಮುಟ್ಟಲು ಮತ್ತು ಅದು ಹೇಗಿದೆ ಎಂಬುದನ್ನು ತಿಳಿಯಲು ಕಾತುರದಿಂದ ಕಾಯುತ್ತಿರುತ್ತಾರೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಆನ್ಲೈನ್ ಶಾಪಿಂಗ್ ಮಾಡುವುದನ್ನು ಬಿಟ್ಟು ಸ್ಮಾರ್ಟ್ಫೋನ್ ಖರೀದಿಸಲು ರೀಟೇಲರ್ ಶಾಪ್ಗಳಿಗೆ ಹೋಗುತ್ತಾರೆ. ಎಂದು ಸೈಬರ್ ಮೀಡಿಯಾ ರಿಸರ್ಚ್ (CMR) ಸಂಸ್ಥೆ ಇದರ ಬಗ್ಗೆ ವರದಿ ಮಾಡಿದೆ.
ಇದನ್ನೂ ಓದಿ: 10 ಸಾವಿರಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್ಫೋನ್ಸ್ ಇಲ್ಲಿದೆ, ಅಮೆಜಾನ್ನಲ್ಲಿ ಭಾರೀ ಬೇಡಿಕೆ
ಸಿಎಮ್ಆರ್ನ ಅಭಿಪ್ರಾಯ
ಇನ್ನೇನು ಮುಂದಿನ ದಿನಗಳಲ್ಲಿ ಹಾಗು ಈಗಲೂ ಆನ್ಲೈನ್ ಮತ್ತು ಆಫ್ಲೈನ್ ರೀಟೇಲರ್ ಸ್ಟೋರ್ಗಳು ಗ್ರಾಹಕರಿಗೆ ಸ್ಮಾರ್ಟ್ ಸಾಧನಗಳ ಬಗ್ಗೆ ಇನ್ನಷ್ಟು ಅನುಭವ ನೀಡಲು ಟಚ್ ಪಾಯಿಂಟ್ ಟೆಕ್ನಾಲಜಿಯನ್ನು ಅಳವಡಿಸಲು ಸಿದ್ಧತೆ ನಡೆಸುತ್ತಿದೆ. ಆದ್ದರಿಂದ ಹೆಚ್ಚಿನ ಜನರು ಆನ್ಲೈನ್ನಲ್ಲಿ ರಿಸರ್ಚ್ ಮಾಡಿ ನಂತರ ಆಫ್ಲೈನ್ ರಿಟೇಲರ್ ಸ್ಟೋರ್ನಲ್ಲಿ ಖರೀದಿ ಮಾಡುತ್ತಾರೆ ಎಂದು ಸಿಎಮ್ಆರ್ನ ಉದ್ಯಮದ ಗುಪ್ತಚರ ತಂಡದ ಮುಖ್ಯಸ್ಥ ಪ್ರಭು ರಾಮ್ ಹೇಳಿಕೆ ನೀಡಿದ್ದಾರೆ.
2023ರ ನಂತರವೂ ಆಫ್ಲೈನ್ ಸೇಲ್ಗೆ ಹೆಚ್ಚು ಬೇಡಿಕೆ
2023 ರ ನಂತರವೂ ಭಾರತದಲ್ಲಿ ಮೊಬೈಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಫ್ಲೈನ್ ಮಾರ್ಕೆಟ್ ಮುಂದುವರಿಯುತ್ತದೆ. ಸೆಲ್ ಔಟ್ ಸ್ಕೀಮ್ಗಳು, ಸಮಯೋಚಿತ ಪಾವತಿ ಮತ್ತು ವ್ಯವಹಾರದಲ್ಲಿನ ಬೆಳವಣಿಗೆಯನ್ನು ಸ್ಮಾರ್ಟ್ಫೋನ್ ಬ್ರಾಂಡ್ನೊಂದಿಗೆ ಸಂಯೋಜಿಸಲು ರಿಟೇಲರ್ ಪಾಲುದಾರರು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಆಫ್ಲೈನ್ ಮಾರುಕಟ್ಟೆಯಲ್ಲಿ ಲಾವಾ ಕಂಪನಿಗೆ ಹೆಚ್ಚು ಬೇಡಿಕೆ
ವಿಶೇಷವಾಗಿ ಹೇಳುವ ವಿಷಯವೆಂದರೆ ಆಫ್ಲೈನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವುದು ಲಾವಾ, ಯಾಕೆಂದರೆ ಇದೊಂದು ಭಾರತೀಯ ಪ್ರಮುಖ ಕಂಫನಿಗಳಲ್ಲಿ ಒಂದಾಗಿದೆ. ಇದು ಭಾರತೀಯರಿ ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಉತ್ತಮ ಅನುಭವವನ್ನು ನೀಡುವ ಫೀಚರ್ಸ್ ಅನ್ನು ಒಳಗೊಂಡಿದೆ.
ಮೊಬೈಲ್ಗಳನ್ನು ರಫ್ತು ಮಾಡುವುದರಲ್ಲೂ ಮುನ್ನಡೆ
ಭಾರತದಿಂದ ಇತರ ದೇಶಗಳಿಗೆ ಹಲವು ಮೊಬೈಲ್ಗಳನ್ನು ರಫ್ತು ಮಾಡಲಾಗುತ್ತದೆ. ಅದ್ರಲ್ಲೂ ಈ ವರ್ಷ ಕೆಲ ಕಂಪನಿಗಳು ತನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಭರವಸೆ ನೀಡಿದೆ.
ಈ ವರ್ಷದಿಂದ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅದರಲ್ಲೂ ಆ್ಯಪಲ್ ಮತ್ತು ಸ್ಯಾಮ್ಸಂಗ್ ಭಾರತದಲ್ಲಿ ತನ್ನದೇ ಆದ ಪ್ರಾಬಲ್ಯ ಹೊಂದಿದ್ದು, ಭಾರತದಿಂದ 45,000 ಕೋಟಿ ರೂ. ಮೌಲ್ಯದ ರಫ್ತು ಜರುಗಿದೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ