ಸ್ಮಾರ್ಟ್​ಫೋನ್​ನಲ್ಲಿ ಮಹಿಳೆಯರು ಹೆಚ್ಚು ಆಡುವ ಆಟ ಯಾವುದು ಗೊತ್ತಾ?


Updated:June 26, 2018, 12:41 PM IST
ಸ್ಮಾರ್ಟ್​ಫೋನ್​ನಲ್ಲಿ ಮಹಿಳೆಯರು ಹೆಚ್ಚು ಆಡುವ ಆಟ ಯಾವುದು ಗೊತ್ತಾ?

Updated: June 26, 2018, 12:41 PM IST
ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ಆ್ಯಕ್ಷನ್​ ಗೇಮ್​ಗಳೇ ಹೆಚ್ಚು ಪಾರುಪತ್ಯ ಸಾಧಿಸಿದ್ದರೂ ಭಾರತೀಯ ಮಹಿಳೆಯರು ಹೆಚ್ಚಾಗಿ ಒಗಟಿನಂತಹ ಆಟಗಳನ್ನೇ ಆಡುತ್ತಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ಡಿಜಿಟಲ್​ ಪಾವತಿ ವೇದಿಕೆ ಪೇಪಾಲ್​ ನಡೆಸಿದ ಸಮೀಕ್ಷೆ 2018 ಗ್ಲೋಬಲ್​ ಗೇಮಿಂಗ್​ ರಿಸರ್ಚರ್​ ಪ್ರಕಾರ ಕಳೆದ ಮೂರು ತಿಂಗಳಿನಿಂದ ಶೇ.65ರಷ್ಟು ಸ್ಮಾರ್ಟ್​ಫೋನ್​ ಬಳಕೆದಾರರು ಶೂಟಿಂಗ್, ಹೊಡೆದಾಟದಂತಹ ಆ್ಯಕ್ಷನ್​ ಆಟಗಳನ್ನು ಹೆಚ್ಚಾಗಿ ಡೌನ್​ಲೋಡ್​ ಮಾಡಿಕೊಂಡಿದ್ದಾರೆ. ಆದರೆ ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರು ಮಾತ್ರಾ ಒಗಟುಗಳಂತ ಆಟಗಳನ್ನೇ ಇಷ್ಟ ಪಡುತ್ತಿದ್ದಾರೆ.

ಸುಮಾರು 25 ಸಾವಿರ ಮಹಿಳೆರ ಬಳಿ ಈ ಸಮೀಕ್ಷೆ ನಡೆಸಲಾಗಿದ್ದು, ಹೆಚ್ಚಿನವರಿಗೆ ಆ್ಯಕ್ಷನ್​ ಆಟಕ್ಕಿಂತ ಪಜಲ್​ನಂತಹ ಆಟಗಳನ್ನೇ ಇಷ್ಟ ಪಡುತ್ತಿದ್ದಾರೆ. ಇನ್ನು ಶೇ.73ರಷ್ಟು ಮಂದಿ ಗೂಗಲ್​ ಪ್ಲೇ ಸ್ಟೋರ್​ನಿಂದ ಸಂಪೂರ್ಣ ಆಟವನ್ನು ಖರೀದಿ ಮಾಡುತ್ತಾರೆ. ಶೇ,22 ರಷ್ಟು ಆ್ಯಪಲ್​ ಬಳಕೇದಾರರು ಹಣ ಪಾವತಿಸಿ ಗೇಮ್ಸ್​ಗಳನ್ನು ಖರೀದಿ ಮಾಡುತ್ತಾರೆ.

ಈ ಗೇಮರ್​ಗಳಿಗೆಲ್ಲಾ ಭಾರತದಲ್ಲಿರುವ ಇಂಟರ್​ನೆಟ್​ ವೇಗವೇ ಒಂದು ದೊಡ್ಡ ತಲೆ ನೋವಂತೆ, ಅತ್ಯಂತ ಕಳಪೆ ಸ್ಪೀಡ್​ನ ಇಂಟರ್​ನೆಟ್​ ಶೇ.44ರಷ್ಟು ಆಟಗಾರರಿಗೆ ಬೇಸರವನ್ನು ಉಂಟು ಮಾಡಿದೆ. ಪೇಪಾಲ್​ಗಾಗಿ ಸೂಪರ್​ಡಾಟಾ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ