Iphone 13: ನಿಮಗಿರೋ ಸಂಭಾವನೆಗೆ ಐಫೋನ್​ 13 ಖರೀದಿಸಲು ಕೇವಲ 30 ದಿನ ಕೆಲಸ ಮಾಡಿದ್ರೆ ಸಾಕಂತೆ!

Apple iPhone 13: ಭಾರತ ಮತ್ತು ಉಳಿದೆಲ್ಲಾ ದೇಶಗಳ ಜನರ ಸಂಭಾವನೆಯನ್ನು ಅರಿತುಕೊಂಡು ಮತ್ತು  ನೂತನ ಐಫೋನ್​ ಕುರಿತಾಗಿ ಈ ಸಂಶೋಧನೆಯನ್ನು ಮಾಡಲಾಗಿದೆ. ತಿಂಗಳ ಸಂಭಾವನೆ ಆದರದ ಮೇಲೆ ಬ್ರಿಟಿಷ್​ ಮನಿಸೂಪರ್​ಮಾರ್ಕೆಟ್ ಸಂಶೋಧನೆಯನ್ನ ಬಹಿರಂಗ ಪಡಿಸಿದೆ.

iPhone 13

iPhone 13

  • Share this:
    ಇತ್ತೀಚೆಗೆ ಜನಪ್ರಿಯ ಐಫೊನ್​ 13 ಸಿರೀಸ್​ ಬಿಡುಗಡೆ ಮಾರಾಟ ಪ್ರಾರಂಭಿಸಿದೆ. ಹಾಗಾಗಿ ಸದ್ಯ ಮಾರುಕಟ್ಟೆಯಲ್ಲಿ ನೂತನ ಐಫೋನ್​ನದ್ದೇ ಹವಾ. ಹೀಗಿರುವಾಗ  ಬ್ರಿಟಿಷ್​ ಮನಿಸೂಪರ್​ಮಾರ್ಕೆಟ್​​ ಸಂಶೋಧಕರು ಐಫೋನ್​ 13 ಕುರಿತಾಗಿ ಸಂಶೋಧನೆಯೊಂದನ್ನ ಬಹುರಂಗಪಡಿಸಿದ್ದು, ಭಾರತೀಯರು ಐಫೋನ್​ 13 (128ಜಿಬಿ) ಖರೀದಿಸಲು 724.2 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ತಿಳಿಸಿದೆ. 128ಜಿಬಿ ಸ್ಟೊರೇಟ್​ ಆಯ್ಕೆಯ  ಐಫೋನ್​ 13 ಬೆಲೆ 79,900 ರೂ ಆಗಿದ್ದು, ಫಿಲಿಲಿಫೈನ್ಸ್​ ಜನರು 775. 3 ಗಂಟೆಗಳ ಕಾಲ ಕೆಲ ಮಾಡಬೇಕಿದೆ ಎಂದಿದೆ.

    ಭಾರತ ಮತ್ತು ಉಳಿದೆಲ್ಲಾ ದೇಶಗಳ ಜನರ ಸಂಭಾವನೆಯನ್ನು ಅರಿತುಕೊಂಡು ಮತ್ತು  ನೂತನ ಐಫೋನ್​ ಕುರಿತಾಗಿ ಈ ಸಂಶೋಧನೆಯನ್ನು ಮಾಡಲಾಗಿದೆ. ತಿಂಗಳ ಸಂಭಾವನೆ ಆದರದ ಮೇಲೆ ಬ್ರಿಟಿಷ್​ ಮನಿಸೂಪರ್​ಮಾರ್ಕೆಟ್ ಸಂಶೋಧನೆಯನ್ನ ಬಹಿರಂಗ ಪಡಿಸಿದೆ.

    ಒಟ್ಟಿನಲ್ಲಿ ಭಾರತೀಯರು 1 ತಿಂಗಳು ಅಥವಾ 30 ದಿನಗಳ ಕಾಲ ದುಡಿದ ಸಂಬಳದಲ್ಲಿ ಐಫೋನ್​ 13 ಖರೀದಿಸಬಹುದು ಎಂಬುದನ್ನು ಹೇಳಿದೆ

    ಇನ್ನು ಸ್ವಿಜರ್​ಲ್ಯಾಂಡ್​ ಜನರು ಕನಿಷ್ಟ ಪ್ರಮಾಣದಲ್ಲಿ ಕೆಲಸ ಮಾಡುವ ಮತ್ತು ಸಂಭಾವನೆ ಪಡೆಯುವ ಮೂಲಕ ನೂತನ ಐಫೋನ್​ ಖರೀದಿಸಬಹುದಾಗಿದೆ. ಅಂದರೆ 34. 3 ಅವಧಿ ಸಾಕೆಂದಿದೆ. ಅಚ್ಚರಿಯಾದ ವಿಚಾರವೆಂದರೆ ಅಮೆರಿಕದಲ್ಲಿ ಆ್ಯಪಲ್ ಐಫೋನ್​​ ಅಭಿವೃದ್ಧಿ ಪಡಿಸಿದ ದೇಶ.ಹಾಗಾಗಿ ಅಮೆರಿಕನ್ನರು 49.5 ಗಂಟೆಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

    Iphone 13 Pro: ಈ ಐಫೋನ್​ 13 ಪ್ರೊ ಬೆಲೆ 18 ಲಕ್ಷ! ಯಾಕಿಷ್ಟು ದುಬಾರಿ!

    ಕ್ಯಾವಿಯಾರ್​ ಹೆಸರಾಂತ ಕಂಪನಿಗಳಲ್ಲಿ ಒಂದು, ಈ ಸಂಸ್ಥೆ ದುಬಾರಿ ಐಫೋನ್​ಗಳನ್ನ ಸಿದ್ಧಮಾಡುತ್ತದೆ. ಜೊತೆಗೆ  ಐಫೋನ್​ ಕೇಸ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತದೆ. ಅಂದಹಾಗೆಯೇ ಕ್ಯಾವಿಯರ್​ ಐಫೋನ್​ ಅನ್ನ ವಿಭಿನ್ನ ರೂಪಗೊಳಿಸಿ ಮತ್ತು ದುಬಾರಿಯನ್ನಾಗಿಸಿ ಮಾರುತ್ತದೆ. ಅದರಂತೆ ಇತ್ತೀಚೆಗೆ ಬಿಡುಗಡೆಗೊಂಡ Iphone 13 Pro, Iphone 13 Pro Max​ ಸರಣಿಯನ್ನು ರೋಲೆಕ್ಸ್​ ವಾಚ್​ ಮಾದರಿಗಳಂತೆ ಭಿನ್ನವಾಗಿ ಸಿದ್ಧಪಡಿಸಿದೆ.

    ಕ್ಯಾಮಿಯರ್​ ಒಟ್ಟು ಐದು ಮಾದರಿಗಳಲ್ಲಿ ಐಫೋನ್​ 13 ಸೀರೀಸ್​ ಅನ್ನ ಸಿದ್ಧಪಡಿಸಿದೆ. ಅದರಲ್ಲಿ ಐಫೋನ್​ 13 ಪ್ರೊ ಮತ್ತು ಐಫೋನ್​ 12 ಪ್ರೊ ಮ್ಯಾಕ್ಸ್​ ಸೇರಿವೆ. ಸ್ಟೊರೇಜ್​ ಆಯ್ಕೆ ಮೇಲೆ ಐಫೋನ್​ 13 ಪ್ರೊ ಮತ್ತು ಪ್ರೊ ಮ್ಯಾಕ್ಸ್​ ಅನ್ನು ಮಾರಾಟ ಮಾಡುತ್ತಿದೆ. ಗ್ರಾಹಕರಿಗಾಗಿ 4,79, 631 ರೂ ಮತ್ತು 18,50,640 ರೂ ದುಬಾರಿ ಬೆಲೆಗೆ ಸೇಲ್​ ಮಾಡುತ್ತಿದೆ.

    ರೋಲೆಕ್ಸ್‌ನ ರೋಲೆಕ್ಸ್ ಸೆಲ್ಲಿನಿ ಸಂಗ್ರಹದಿಂದ ಐಫೋನ್​ ಸಿದ್ಧಪಡಿಸಲಾಗಿದೆ. ಮಾತ್ರವಲ್ಲದೆ ಇದಕ್ಕೆ ಇಟಾಲಿಯನ್ ಆಭರಣವನ್ನು ಜೋಡಿಸಲಾಗಿದ್ದು ‘‘ಬೆನ್ವೆನುಟೊ’’ ಸೆಲ್ಲಿನಿ ಎಂದು ಇದಕ್ಕೆ ಹೆಸರಿಸಲಾಗಿದೆ. ಐಫೋನ್ 13 ಪ್ರೊ ಮೇಲೆ 18-ಕ್ಯಾರೆಟ್ ಬಿಳಿ ಚಿನ್ನದ ಮತ್ತು ಕೆಳಗಿನ ಭಾಗದಲ್ಲಿ ಕಂದು ಮೊಸಳೆಯ ಚರ್ಮದ ಬಣ್ಣವನ್ನು ಅಂಟಿಸಲಾಗಿದೆ. ಸುತ್ತುವರಿದ ಚೌಕಟ್ಟನ್ನು 18-ಕ್ಯಾರೆಟ್ ಗುಲಾಬಿ ಚಿನ್ನಕ್ಕೆ ಕಸ್ಟಮೈಸ್ ಮಾಡಲಾಗಿದೆ. ಹಾಗಾಗಿ ಇದರ ಬೆಲೆ ಅಂದಾಜು 18 ಲಕ್ಷ.

    ವೃತ್ತಿಪರ ರೇಸಿಂಗ್ ಪ್ರಿಯರಿಗಾಗಿ ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ ವಾಚ್ ಸಿರೀಸ್​ನಿಂದ ಸ್ಫೂರ್ತಿ ಪಡೆದ ಈ ಐಫೋನ್​ 13 ಪ್ರೊ ಅನ್ನು ತಯಾರಿಸಲಾಗಿದೆ.  ಐಫೋನ್​ 13 ಪ್ರೊ ಮೇಲಿನ ಭಾಗದಲ್ಲಿ ವಿಭಿನ್ನ ಶೈಲಿಯನ್ನು ಹೊಂದಿದೆ, ಆದರೆ ಕೆಳಭಾಗವು ಕರ್ಣೀಯ ಕೌಂಟರ್ ನೇಯ್ಗೆಯೊಂದಿಗೆ ಕಾರ್ಬನ್ ಫೈಬರ್ ಅನ್ನು ಅಳವಡಿಸಿಕೊಂಡಿದೆ. ಹಾಗಾಗಿ ಇದರ ಬೆಲೆ. 5,20,400 ರೂ ಆಗಿದೆ.

    Read Also: Internet Speed: ಮೊಬೈಲ್​ ಇಂಟರ್​ನೆಟ್​ ಸ್ಪೀಡ್​ ಪರಿಶೀಲಿಸಬೇಕೆ? ಹಾಗಿದ್ದರೆ ಈ ಆ್ಯಪ್​ಗಳ ಸಹಾಯ ಪಡೆಯಿರಿ

    ಐಫೋನ್ 13 ಪ್ರೊ ಮೇಲೆ ಆಲಿವ್ ಕಿರಣಗಳ ಮಾದರಿಯಂತಹ ರೋಲೆಕ್ಸ್-ಡೇಟ್‌ಜಸ್ಟ್ ವಾಚ್ ಸಂಗ್ರಹ ವಿನ್ಯಾಸವನ್ನು ಕಾಣಬಹುದು. ಮೇಲಿನ ಭಾಗವು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ ಮತ್ತು ಆಲಿವ್-ಹಸಿರು ಬಣ್ಣವನ್ನು ಕೂಡಿದೆ, ಇದಕ್ಕೆ ಟೈಟಾನಿಯಂ ಮತ್ತು ಚಿನ್ನದ ಲೇಪಿತ ಲೋಹವನ್ನು ಬಳಸಲಾಗಿದೆ. ಇದರ ಬೆಲೆ 5,03,400 ರೂ.

    ಕೊನೆಯದಾಗಿ, 4,82,100 ರೂ ಬೆಲೆಯ "ಮೆರಿನ್​" ರೋಲೆಕ್ಸ್ ಕಲೆಕ್ಷನ್​ ಆಗಿದೆ. ಇದರಲ್ಲಿ ಟೈಟಾನಿಯಂ ಮತ್ತು ತಾಮ್ರದ ಒಳಸೇರಿಸಲಾಗಿದ್ದು, ಆಕರ್ಷಕವಾಗಿ ಕಾಣುತ್ತಿದೆ.

    Published by:Harshith AS
    First published: