HOME » NEWS » Tech » INDIAN RESEARCHER TAKES AWAY 4 LAK BOUNTY FOR DISCOVERING UBER HACKING BUG HG

Uber: ಉಬರ್​ ಆ್ಯಪ್​ನಲ್ಲಿ ದೋಷ: ಸಮಸ್ಯೆ ಪತ್ತೆಹಚ್ಚಿದ ಟೆಕ್ಕಿಗೆ 4.6 ಲಕ್ಷ ರೂ. ಬಹುಮಾನ

ಆನಂದ್​ ಪ್ರಕಾಶ್​​ ಎಂಬವರು ಉಬರ್​ ಆ್ಯಪ್​ನಲ್ಲಿರುವ ಖಾತೆಗಳಿಗೆ ಹ್ಯಾಕರ್​ಗಳು ಪ್ರವೇಶಿಸಲು ಸಾಧ್ಯವಾಗುತ್ತದೆ ಎನ್ನುವ ಅಂಶವನ್ನು ಪತ್ತೆಹಚ್ಚಿದ್ದರು

news18-kannada
Updated:September 16, 2019, 9:00 PM IST
Uber: ಉಬರ್​ ಆ್ಯಪ್​ನಲ್ಲಿ ದೋಷ: ಸಮಸ್ಯೆ ಪತ್ತೆಹಚ್ಚಿದ ಟೆಕ್ಕಿಗೆ 4.6 ಲಕ್ಷ ರೂ. ಬಹುಮಾನ
ಉಬರ್​​
  • Share this:
ಇತ್ತೀಚೆಗೆ ಫೇಸ್​ಬುಕ್​ ಒಡೆತನದ ಇನ್​​ಸ್ಟಾಗ್ರಾಂನಲ್ಲಿ ಭದ್ರತಾ ದೋಷವೊಂದು ಕಂಡುಬಂದಿತ್ತು. ಈ ದೋಷವನ್ನು ಚೆನ್ನೈ ಮೂಲದ ಟೆಕ್ಕಿಯೊಬ್ಬರು ಪತ್ತೆಹಚ್ಚಿದ್ದರು. ಅನೇಕ ಬಳಕೆದಾರರನ್ನು ಹೊಂದಿದ್ದ ಇನ್​ಸ್ಟಾಗ್ರಾಂ ಲಾಗಿನ್​ ಸಮಸ್ಯೆಯನ್ನು ಕಂಡು ಹಿಡಿದ ಟೆಕ್ಕಿಗೆ ಫೇಸ್​ಬುಕ್​ ಸಂಸ್ಥೆ ವಿಶೇಷ ಬಹುಮಾನವನ್ನು ನೀಡಿ ಗೌರವಿಸಿತ್ತು. ಇದೀಗ ಉಬರ್​ ಕ್ಯಾಬ್​ ಆ್ಯಪ್​ನಲ್ಲಿ ಕಂಡು ಬಂದಿದ್ದ ಹ್ಯಾಕಿಂಗ್​ ದೋಷ ಪತ್ತೆ ಹಚ್ಚಿದ ಭದ್ರತಾ ಸಂಶೋಧಕರಿಗೆ ಉಬರ್​ ಸಮಸ್ಥೆ 6,500 ಡಾಲರ್​ ಬಹುಮಾನ ನೀಡಿ ಗೌರವಿಸಿದೆ.

ಆನಂದ್​ ಪ್ರಕಾಶ್​​ ಎಂಬವರು ಉಬರ್​ ಆ್ಯಪ್​ನಲ್ಲಿರುವ ಖಾತೆಗಳಿಗೆ ಹ್ಯಾಕರ್​ಗಳು ಪ್ರವೇಶಿಸಲು ಸಾಧ್ಯವಾಗುತ್ತದೆ ಎನ್ನುವ ಅಂಶವನ್ನು ಪತ್ತೆಹಚ್ಚಿದ್ದರು. ಉಬರ್ ಈಟ್ಸ್​ನಲ್ಲೂ ಈ ಸಮಸ್ಯೆಯಿರುವುದನ್ನು ತಿಳಿಸಿದ್ದರು. ಇದರಿಂದಾಗಿ ಹ್ಯಾಕರ್​ಗಳು ಖಾತೆಯನ್ನು ವಶ ಪಡಿಸಬಹುದು ಮತ್ತು ಅವರ ನಿಯಂತ್ರದಲ್ಲಿರಿಸ ಬಹುದು ಎಂದು ​ಹೇಳಿದ್ದರು. ಈ ಸಮಸ್ಯೆ ಪತ್ತೆ ಹಚ್ಚಿದ ಪ್ರಕಾಶ್​ ಅವರಿಗೆ ಉಬರ್​ 4.6 ಲಕ್ಷ ರೂ. ಬಹುಮಾನ ನೀಡಿದೆ.

ಪ್ರಕಾಶ್​ ಪತ್ತೆಹಚ್ಚಿದ್ದ ಸಮಸ್ಯೆಯನ್ನು ಉಬರ್​ ಸಂಸ್ಥೆ ಬಳಿ ಸರಿ ಪಡಿಸಿಕೊಂಡಿದೆ, ಅಲ್ಲದೆ ಪ್ರಕಾಶ್​ ಅವರನ್ನು ಅಭಿನಂದಿಸಿದ್ದಾರೆ. ಈ ಮೋದಲು ಕೂಡ ಪ್ರಕಾಶ್​ ಉಬರ್​ ಸಮಸ್ಯೆಯನ್ನು ಪತ್ತೆಹಚ್ಚಿ ತಿಳಿಸಿದ್ದರು.

First published: September 16, 2019, 8:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories