ಮೇಕ್​ ಇನ್​ ಇಂಡಿಯಾ: ಸಂಚಾರಕ್ಕೂ ಮುನ್ನವೇ ಭಾರತದ ಟ್ರೈನ್​-18 ಗೆ ವಿದೇಶಗಳಿಂದ ಡಿಮ್ಯಾಂಡ್

ಟ್ರೈನ್​-18 ಶೀಘ್ರದಲ್ಲೇ ದೆಹಲಿ ಮತ್ತು ವಾರಣಾಸಿ ನಡುವೆ ಸಂಚಾರ ಆರಂಭಿಸಲಿದೆ ಎನ್ನಲಾಗಿದೆ. ಇದರ ಪ್ರಾಯೋಗಿಕ ಚಾಲನೆ ವೇಳೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಮೂಲಕ ಹೊಸ ದಾಖಲೆ ಬರೆದಿತ್ತು.

zahir | news18
Updated:January 22, 2019, 9:37 PM IST
ಮೇಕ್​ ಇನ್​ ಇಂಡಿಯಾ: ಸಂಚಾರಕ್ಕೂ ಮುನ್ನವೇ ಭಾರತದ ಟ್ರೈನ್​-18 ಗೆ ವಿದೇಶಗಳಿಂದ ಡಿಮ್ಯಾಂಡ್
ಟ್ರೈನ್-18
  • News18
  • Last Updated: January 22, 2019, 9:37 PM IST
  • Share this:
ಮೇಕ್​ ಇನ್​ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಿತವಾಗಿರುವ ಟ್ರೈನ್​ 18 ಅಧಿಕೃತ ಸೇವೆ ಆರಂಭಿಸುವ ಮುನ್ನವೇ ಹೊಸ ಸಂಚಲನ ಸೃಷ್ಟಿಸಿದೆ. ದೇಶದ ಅತಿ ವೇಗದ ರೈಲು ಎಂದು ಬಿಂಬಿತವಾಗಿರುವ ಟ್ರೈನ್​ 18 ಅನ್ನು ಖರೀದಿಸಲು ವಿದೇಶಗಳೂ ಕೂಡ ಆಸಕ್ತಿ ತೋರಿಸುತ್ತಿದೆ.

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಟ್ರೈನ್​ ಅನ್ನು ಖರೀದಿಸಲು ಪೆರು, ಇಂಡೋನೇಷ್ಯಾ, ಸಿಂಗಾಪುರ್, ಮಲೇಷ್ಯಾ ಮತ್ತು ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳು ಆಸಕ್ತಿವಹಿಸಿದೆ ಎಂದು ರೈಲ್ವೇ ಮಂಡಳಿ ಹೇಳಿದೆ. 100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಅಗ್ಗದ ರೈಲು ಎಂದು ಗಮನ ಸೆಳೆದಿರುವ ಟ್ರೈನ್​ 18 ಕುರಿತಾದ ಮಾಹಿತಿಗಳನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು ಪಡೆದುಕೊಂಡಿದೆ.
ಭಾರತದಲ್ಲೇ ಸಂಪೂರ್ಣ ನಿರ್ಮಿಸಲಾಗಿರುವ ಮೊದಲ ರೈಲು ಇದಾಗಿದೆ. ಹಲವು ರಾಷ್ಟ್ರಗಳು ಟ್ರೈನ್​ 18 ಕುರಿತು ಆಸಕ್ತಿ ಹೊಂದಿದೆ. ಈ ಟ್ರೈನ್​ಗೆ ಇತರೆ ದೇಶಗಳಿಂದ ಬೇಡಿಕೆ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ರೈಲ್ವೆ ಬೋರ್ಡ್​ ಸದಸ್ಯರಾಗಿರುವ ರಾಜೇಶ್​ ಅಗರ್ವಾಲ್​ ತಿಳಿಸಿದ್ದಾರೆ.


ಟ್ರೈನ್​-18 ವಿಶೇಷತೆ
ಈ  ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ ಮನರಂಜನೆಗೆ ಬೇಕಾದ ವ್ಯವಸ್ಥೆ, ಹೊಸ ತಂತ್ರಜ್ಞಾನದ ಮೊಬೈಲ್​ ಚಾರ್ಜಿಂಗ್ ಆಯ್ಕೆಗಳು ಇದರಲ್ಲಿದೆ.

ಇದನ್ನೂ ಓದಿ: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಮಾನ್ಯ ರೈಲಿನ ಒಂದು ಬೋಗಿಗಳಲ್ಲಿ 78 ಆಸನಗಳ ವ್ಯಸಸ್ಥೆಗಳಿದ್ದರೆ, ಟ್ರೈನ್​-18 ನಲ್ಲಿ 52 ಸುಖಾಸನ ಸೀಟುಗಳನ್ನು ನೀಡಲಾಗಿದೆ. ಅದೇ ರೀತಿ ಟ್ರೈನ್​ನ ನಡುವೆ ಎರಡು ಎಕ್ಸಿಕ್ಯೂಟಿವ್​ ಕಂಪಾರ್ಟ್ಮೆಂಟ್​ ಇರಲಿದೆ.ಟೈನ್​-18 ಎಂದರೇನು?
ಈ ಹೊಸ ರೈಲನ್ನು ವಿನ್ಯಾಸಗೊಳಿಸಲು 18 ತಿಂಗಳನ್ನು ತೆಗೆದುಕೊಳ್ಳಲಾಗಿತ್ತು. 2018 ರಲ್ಲೇ ಈ ಹೊಸ ಮಾದರಿಯ ರೈಲು ಲೋಕಾರ್ಪಣೆ ಮಾಡಲಾಗಿದ್ದು, ಹೀಗಾಗಿ ಇದಕ್ಕೆ ಟ್ರೈನ್​-18 ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ಜೋಕೆ..! ಈ ಐದು ಲಕ್ಷಣಗಳು ಕಾಣಿಸಿದ್ರೆ ನಿಮ್ಮ ಲಿವರ್​ಗೆ ಹಾನಿಯಾಗಿದೆ ಎಂದರ್ಥ..!

ಶೀಘ್ರದಲ್ಲೇ ಸಂಚಾರ ಆರಂಭ
ಟ್ರೈನ್​-18 ಶೀಘ್ರದಲ್ಲೇ ದೆಹಲಿ ಮತ್ತು ವಾರಣಾಸಿ ನಡುವೆ ಸಂಚಾರ ಆರಂಭಿಸಲಿದೆ ಎನ್ನಲಾಗಿದೆ. ಇದರ ಪ್ರಾಯೋಗಿಕ ಚಾಲನೆ ವೇಳೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಮೂಲಕ ಹೊಸ ದಾಖಲೆ ಬರೆದಿತ್ತು. ಇದೀಗ ಮತ್ತೊಮ್ಮೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸುವ ಮೂಲಕ ಇತಿಹಾಸ ಬರೆಯಲು ಹೊರಟಿದೆ.

ಇದನ್ನೂ ಓದಿ: ಸುಭಾಷ್​ ಚಂದ್ರ ಬೋಸ್ ಭಾರತದ ಮೊದಲ ಪ್ರಧಾನಿ?: ನೋಟಿನಲ್ಲಿತ್ತು ನೇತಾಜಿಯ ಫೋಟೊ..!

First published:January 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ