ಹೊಸ ವರ್ಷದಿಂದ ಈ ನೌಕರರಿಗೆ ಸಿಗಲಿದೆ ಜಿಯೋ ಉಚಿತ ಸಿಮ್​, ತಿಂಗಳಿಗೆ 60GB ಡೇಟಾ..!

ಈ ಯೋಜನೆಯಲ್ಲಿ ರಿಲಯನ್ಸ್​ ನಾಲ್ಕು ಪ್ಯಾಕೇಜುಗಳನ್ನು ಪ್ರಸ್ತುತಪಡಿಸಿದೆ. ಇಲ್ಲಿ ಹಿರಿಯ ಅಧಿಕಾರಿಗಳಿಗೆ(ಶೇ.2 ರಷ್ಟು) 125 ರೂ. ಮಾಸಿಕ ಶುಲ್ಕದಲ್ಲಿ 60GB ಇಂಟರ್ನೆಟ್​ ಪ್ಲಾನ್​ ನೀಡಲಾಗುತ್ತದೆ.

zahir | news18
Updated:January 1, 2019, 8:05 PM IST
ಹೊಸ ವರ್ಷದಿಂದ ಈ ನೌಕರರಿಗೆ ಸಿಗಲಿದೆ ಜಿಯೋ ಉಚಿತ ಸಿಮ್​, ತಿಂಗಳಿಗೆ 60GB ಡೇಟಾ..!
ಸಾಂದರ್ಭಿಕ ಚಿತ್ರ
zahir | news18
Updated: January 1, 2019, 8:05 PM IST
ರಿಲಯನ್ಸ್ ಜಿಯೋ ಇನ್ಫೋಕಾಮ್ ಜನವರಿ 1 ರಿಂದ ಭಾರತೀಯ ರೈಲ್ವೆಯೊಂದಿಗೆ ಕೈ ಜೋಡಿಸಿದೆ. ಈ ಮೂಲಕ ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸಿರುವ ಜಿಯೋ, ರೈಲ್ವೆ ನೌಕರರಿಗೆ ಭರ್ಜರಿ ಆಫರ್​ ಒದಗಿಸಿದೆ. ಇದರ ಅನ್ವಯ ರೈಲ್ವೆಯ ಫೋನ್​ ಬಿಲ್​ಗಳು ಶೇ.35 ರಷ್ಟು ಕಡಿಮೆ ಆಗಲಿದೆ.

ಈ ಸೇವಾ ಯೋಜನೆಯಲ್ಲಿ 1.95 ಲಕ್ಷ ಮೊಬೈಲ್​ ಫೋನ್​ಗಳಲ್ಲಿ ಜಿಯೋ ಸಂಪರ್ಕ ಒದಗಿಸಲಿದ್ದು, ಕ್ಲೋಸ್ಡ್​ ಯೂಸರ್ಸ್​ ಗ್ರೂಪ್​(CUG) ಅಡಿಯಲ್ಲಿ ಈ ನೆಟ್​ವರ್ಕ್​ ಸೇವೆಯನ್ನು ಬಳಸಿಕೊಳ್ಳಬಹುದು. ಕಳೆದ ಆರು ವರ್ಷಗಳಿಂದ ಭಾರ್ತಿ ಏರ್​ಟೆಲ್​ ರೈಲ್ವೆ ನೌಕರರಿಗೆ ಇಂತಹದೊಂದು ಸೇವೆ ಒದಗಿಸುತ್ತಿತ್ತು. ಅಲ್ಲದೆ ಇದರ ಒಟ್ಟು ವಾರ್ಷಿಕ ಬಿಲ್ 100 ಕೋಟಿ ಆಗಿರುತ್ತಿದ್ದವು. ಆದರೆ ಈ ಬಾರಿಯ ಟೆಂಡರ್​ನ್ನು ರಿಲಯನ್ಸ್ ಸಂಸ್ಥೆ ಪಡೆದುಕೊಂಡಿದ್ದು ಈ ಹಿಂದಿನ ವಾರ್ಷಿಕ ಬಿಲ್​ಗಿಂತ ಶೇ.35 ರಷ್ಟು ಕಡಿಮೆ ದರದಲ್ಲಿ ಈ ಸೇವೆಯನ್ನು ಒದಗಿಸಲಿದೆ.

ನವೆಂಬರ್ 20 ರಂದು ರೈಲ್ವೆ ಮಂಡಳಿ ಈ ಸೇವಾ ಯೋಜನೆಯನ್ನು ಮುಂದುವರಿಸಲು ರಿಲಯನ್ಸ್​ ಜಿಯೋ ಇನ್ಫೋಕಾಮ್​ನೊಂದಿಗೆ ಸಹಿ ಹಾಕಿಕೊಂಡಿದೆ.  ಡಿಸೆಂಬರ್ 31 ರಂದು ಏರ್​ಟೆಲ್​ ಸೇವೆ ಕೊನೆಗೊಂಡಿದ್ದು, ಹೊಸ ವರ್ಷದಿಂದ ರೈಲ್ವೆ ನೌಕರಿಗೆ ಜಿಯೋ ಆಫರ್ ಸೇವೆ ಸಿಗಲಿದೆ.

ಇದನ್ನೂ ಓದಿ: ರಿವರ್ಸ್​ ಗೇರ್​ ಇರುವ ಈ ಸ್ಕೂಟರ್​ ಪೆಟ್ರೋಲ್​ ಇಲ್ದೆ 75 ಕಿ.ಮೀ ಮೈಲೇಜ್ ನೀಡುತ್ತೆ..!

ಏನಿದು ಯೋಜನೆ?
ಈ ಸೇವಾ ವ್ಯವಸ್ಥೆ ಯೋಜನೆಯಡಿಯಲ್ಲಿ ರೈಲ್ವೆ ಇಲಾಖೆಯ ನೌಕರಿಗೆ ಸಿಮ್ ಸೌಲಭ್ಯವನ್ನು ರಿಲಯನ್ಸ್​ ಒದಗಿಸಲಿದೆ. ಇಲ್ಲಿ ನೌಕರರ ಸಂಪರ್ಕಕ್ಕಾಗಿ ಸಿಯುಜಿ (CUG) ಗ್ರೂಪ್​ಗಳ ನಂಬರ್​ಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಈ ನಂಬರುಗಳ ನಡುವಿನ ಕರೆಗಳು ಉಚಿತವಾಗಿರಲಿದ್ದು, ಅದರೊಂದಿಗೆ ಎಸ್​ಎಂಎಸ್​ ಕೂಡ ಫ್ರಿಯಾಗಿರಲಿದೆ. ಈ ಯೋಜನೆಯನ್ನು ಜಿಯೋ 4G ಮತ್ತು 3G ಸಂಪರ್ಕಗಳಲ್ಲಿ ಒದಗಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಕೇಂದ್ರದಿಂದ ಭರ್ಜರಿ ಗಿಫ್ಟ್​: ಗ್ಯಾಸ್​ ದರ 120 ರೂ. ಇಳಿಕೆ
Loading...

ನಾಲ್ಕು ಪ್ಯಾಕೇಜುಗಳು
ಈ ಯೋಜನೆಯಲ್ಲಿ ರಿಲಯನ್ಸ್​ ನಾಲ್ಕು ಪ್ಯಾಕೇಜುಗಳನ್ನು ಪ್ರಸ್ತುತಪಡಿಸಿದೆ. ಇಲ್ಲಿ ಹಿರಿಯ ಅಧಿಕಾರಿಗಳಿಗೆ(ಶೇ.2 ರಷ್ಟು) 125 ರೂ. ಮಾಸಿಕ ಶುಲ್ಕದಲ್ಲಿ 60GB ಇಂಟರ್ನೆಟ್​ ಪ್ಲಾನ್​ ನೀಡಲಾಗುತ್ತದೆ. ಜಂಟಿ ಕಾರ್ಯದರ್ಶಿ ಮಟ್ಟದ ಕಾರ್ಯ ನಿರ್ವಾಹಕರಿಕರಿಗೆ( ಶೇ.26 ರಷ್ಟು) 99 ರೂ.ನಲ್ಲಿ 45GB ಡೇಟಾ ಒದಗಿಸಲಿದೆ. ಇನ್ನು ನೌಕರರ ಗುಂಪುಗಳಿಗೆ ( ಶೇ. 72 ರಷ್ಟು) 67 ರೂ.ನಲ್ಲಿ 30GB ಡೇಟಾ ಪ್ಲಾನ್​ ಮತ್ತು ಹಾಗೂ 49 ರೂ.ಗಳ ಎಸ್​ಎಂಎಸ್​​ ಪ್ಲಾನ್​ಗಳನ್ನು ರಿಲಯನ್ಸ್​ ಸಂಸ್ಥೆ ನೀಡಲಿದೆ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಕೇವಲ 500 ರೂ. ಉಳಿತಾಯ ಮಾಡಿ ಕೋಟ್ಯಾಧಿಪತಿಗಳಾಗಿ..!

First published:January 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ