HOME » NEWS » Tech » INDIAN MICROBLOGGING PLATFORM KOO IS AVAILABLE IN NIGERIA STG AE

Koo App: ನೈಜೀರಿಯಾಗೂ ಕಾಲಿಟ್ಟ ಮೇಡ್ ಇನ್ ಇಂಡಿಯಾ ಕೂ ಆ್ಯಪ್​

ಸ್ವದೇಶಿ ಕೂ ಆ್ಯಪ್​ ಆಫ್ರಿಕಾದ ನೈಜೀರಿಯಾದಲ್ಲೂ ಈಗ ಲಭ್ಯವಿದೆ. ಜತೆಗೆ ಆ ದೇಶದ ಬಳಕೆದಾರರಿಗಾಗಿ ನೈಜೀರಿಯಾದ ಸ್ಥಳೀಯ ಭಾಷೆಗಳನ್ನು ಸೇರಿಸಲು ಉತ್ಸುಕವಾಗಿದೆ ಎಂದು ಕೂ ಆ್ಯಪ್​ನ ಮುಖ್ಯಸ್ಥರು ಶನಿವಾರ ತಿಳಿಸಿದ್ದಾರೆ.

Trending Desk
Updated:June 7, 2021, 10:58 AM IST
Koo App: ನೈಜೀರಿಯಾಗೂ ಕಾಲಿಟ್ಟ ಮೇಡ್ ಇನ್ ಇಂಡಿಯಾ ಕೂ ಆ್ಯಪ್​
ಮೈಕ್ರೋ ಬ್ಲಾಗಿಂಗ್ ಜಾಲತಾಣ ಕೂ
  • Share this:
ಭಾರತೀಯ ಮೈಕ್ರೋ ಬ್ಲಾಗಿಂಗ್ ಜಾಲತಾಣ 'ಕೂ' ಈಗ ದೇಶದಲ್ಲಿ ಜನಪ್ರುಯವಾಗತೊಡಗಿದ್ದು, ಈ ನಡುವೆ ಆಫ್ರಿಕಾದ ನೈಜೀರಿಯಾದಲ್ಲೂ ಲಭ್ಯವಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜತೆಗೆ ಆ ದೇಶದ ಬಳಕೆದಾರರಿಗಾಗಿ ನೈಜೀರಿಯಾದ ಸ್ಥಳೀಯ ಭಾಷೆಗಳನ್ನು ಸೇರಿಸಲು ಉತ್ಸುಕವಾಗಿದೆ ಎಂದು ಕೂ ಶನಿವಾರ ಹೇಳಿದೆ. ಇನ್ನು, ನೈಜೀರಿಯಾ ಸರ್ಕಾರವು ಟ್ವಿಟ್ಟರ್‌ ಅನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸುವುದಾಗಿ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಕೂ ನಲ್ಲಿ ಈ ಸಂಬಂಧ ಫೋಸ್ಟ್‌ ಮಾಡಿದ ಮೇಡ್‌ ಇನ್‌ ಇಂಡಿಯಾ ಕಂಪನಿ 'ಕೂ' ಆ್ಯಪ್​ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ "ನೈಜೀರಿಯಾದಲ್ಲಿ ಲಭ್ಯವಿದೆ" ಎಂದು ಹೇಳಿಕೊಂಡಿದ್ದಾರೆ.

ಜತೆಗೆ, “ಅಲ್ಲಿನ ಸ್ಥಳೀಯ ಭಾಷೆಗಳನ್ನೂ ಸಕ್ರಿಯಗೊಳಿಸಲು ನಾವು ಯೋಚಿಸುತ್ತಿದ್ದೇವೆ. ಏನು ಹೇಳುತ್ತೀರಿ..?'' ಎಂದು ಅಪ್ರಮೇಯ ರಾಧಾಕೃಷ್ಣ ಹೇಳಿದರು. ಈ ಸಂಬಂಧ ಪಿಟಿಐ ಜತೆಗೆ ಮಾತನಾಡಿದ ರಾಧಾಕೃಷ್ಣ, ಈಗ ನೈಜೀರಿಯಾದಲ್ಲಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ಗೆ ಅವಕಾಶವಿದೆ. ಕೂ ಆ್ಯಪ್‌ನಲ್ಲಿ ಸ್ಥಳೀಯ ನೈಜೀರಿಯನ್ ಭಾಷೆಗಳನ್ನು ಪರಿಚಯಿಸಲು ನೋಡುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ನೈಜೀರಿಯಾದ ಮಾರುಕಟ್ಟೆಯಲ್ಲಿ ಅತಿಕ್ರಮಣ ಮಾಡಲು ನಮ್ಮ ಜಾಲತಾಣ ಉತ್ಸುಕವಾಗಿದೆ. ಅಲ್ಲದೆ, ಕೂ ಆ್ಯಪ್‌ ತಾನು ಕಾರ್ಯನಿರ್ವಹಿಸುವ ಪ್ರತಿಯೊಂದು ದೇಶದ ಸ್ಥಳೀಯ ಕಾನೂನುಗಳಿಗೆ ಬದ್ಧರಾಗಿರುತ್ತದೆ ಎಂದು ರಾಧಾಕೃಷ್ಣ ಹೇಳಿದ್ದಾರೆ.

Koo App
ಕೂ ಆ್ಯಪ್​


ರಾಧಾಕೃಷ್ಣ ಮತ್ತು ಮಯಾಂಕ್‌ ಬಿಡಾವತ್ಕಾ ಕೂ ಕಂಪನಿಯನ್ನು ಸ್ಠಾಪನೆ ಮಾಡಿದ್ದು, ಬಳಕೆದಾರರಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ಮತ್ತು ಭಾರತೀಯ ಭಾಷೆಗಳಲ್ಲಿ ವೇದಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲು ಕಳೆದ ವರ್ಷ ಪ್ರಾರಂಭಿಸಲಾಯಿತು. ಇದು ಹಿಂದಿ, ಕನ್ನಡ, ತೆಲುಗು ಮತ್ತು ಬಂಗಾಳಿ ಸೇರಿದಂತೆ ಅನೇಕ ಭಾಷೆಗಳನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿರುವ ಸಹೋದರಿ ಅನ್ಶುಲಾ ಕಪೂರ್​ ನೋಡಲು ಬಂದ ಜಾಹ್ನವಿ ಕಪೂರ್​..!

ನೈಜೀರಿಯಾ ಅಧ್ಯಕ್ಷ ಮುಹಮ್ಮದು ಬುಹಾರಿ ಪ್ರತ್ಯೇಕತಾವಾದಿ ಚಳವಳಿಯ ಬಗ್ಗೆ ಮಾಡಿದ ವಿವಾದಾತ್ಮಕ ಟ್ವೀಟ್ ಅನ್ನು ಕಂಪನಿಯು ತೆಗೆದುಹಾಕಿದ ಒಂದು ದಿನದ ನಂತರ, ನೈಜೀರಿಯಾ ಸರ್ಕಾರವು ಟ್ವಿಟ್ಟರ್ ಅನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸುತ್ತಿದೆ ಎಂದು ಹೇಳಿದೆ. 'ಕೂ' ಸದ್ಯ 60 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಇತ್ತೀಚೆಗೆ ಟೈಗರ್ ಗ್ಲೋಬಲ್ ನೇತೃತ್ವದ ಫಂಡಿಂಗ್ ರೌಂಡ್‌ನಲ್ಲಿ 30 ಮಿಲಿಯನ್ ಯುಎಸ್‌ ಡಾಲರ್‌ (ಸುಮಾರು 218 ಕೋಟಿ ರೂ.) ಸಂಗ್ರಹಿಸಿದ್ದರು.

ಸ್ವದೇಶಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಸ್ಪಷ್ಟ ಗಟ್ಟಿ ಧ್ವನಿ ಕರೆಗಳ ನಡುವೆ ಭಾರತದಲ್ಲಿ ಕೂ ಜನಪ್ರಿಯತೆಯು ಉತ್ತುಂಗಕ್ಕೇರಿತು. ಕಳೆದ ಕೆಲವು ತಿಂಗಳುಗಳಿಂದ, ಅದರಲ್ಲೂ ಟ್ವಿಟ್ಟರ್‌ನೊಂದಿಗೆ ವಾದ ವಿವಾದ ನಡೆಯುತ್ತಿರುವ ಬೆನ್ನಲ್ಲೇ, ಕೇಂದ್ರ ಸಚಿವರು ಮತ್ತು ಸರ್ಕಾರಿ ಇಲಾಖೆಗಳು ಸ್ವದೇಶಿ ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ಅನುಮೋದನೆ ನೀಡಿದ ನಂತರ ಈ ವೇದಿಕೆಯು ತನ್ನ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಬೆಳವಣಿಗೆಯನ್ನು ಕಂಡಿದೆ. ವಿಶೇಷವೆಂದರೆ, ಹೊಸ ಐಟಿ ನಿಯಮಗಳನ್ನು ತಕ್ಷಣ ಅನುಸರಿಸಲು ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ ಕೊನೆಯ ಎಚ್ಚರಿಕೆಯ ನೋಟಿಸ್‌ ನೀಡಿದ ಸಮಯದಲ್ಲೇ ಅಪ್ರಮೇಯ ರಾಧಾಕೃಷ್ಣ ಅವರು ತಮ್ಮ 'ಕೂ' ಆ್ಯಪ್‌ ಸಂಬಂಧ ಈ ಪೋಸ್ಟ್‌ ಮಾಡಿದ್ದಾರೆ.ಇದನ್ನೂ ಓದಿ: Pooja Hegde: ಕೋವಿಡ್​ನಿಂದ ಗುಣಮುಖರಾದ ನಂತರ ಮೇಕಪ್​ ಇಲ್ಲದ ಫೋಟೋ ಶೇರ್​ ಮಾಡಿದ ಪೂಜಾ ಹೆಗ್ಡೆ

ಟ್ವಿಟ್ಟರ್‌ ದೇಶದ ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ ವೇದಿಕೆ ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಎಂದೂ ಮೈಕ್ರೋ ಬ್ಲಾಗಿಂಗ್ ಜಾಲತಾಣಕ್ಕೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ನಾವು ಈಗಾಗಲೇ ಐಟಿ ನಿಯಮಗಳನ್ನು ಪಾಲಿಸಿದ್ದೇವೆ ಮತ್ತು ಈ ವಿಷಯದ ಬಗ್ಗೆ ಸರ್ಕಾರ ಕೋರಿರುವಂತೆ ಅಗತ್ಯ ವಿವರಗಳನ್ನು ಹಂಚಿಕೊಂಡಿದೆ ಎಂದು 'ಕೂ' ಹೇಳಿಕೊಂಡಿದೆ.
Published by: Anitha E
First published: June 7, 2021, 10:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories