Mitron App: ಟಿಕ್​ಟಾಕ್​​ಗೆ​​ ಪ್ರತಿ ಸ್ಪರ್ಧಿಯಾಗುತ್ತಿದೆ ಭಾರತದ ‘ಮಿತ್ರೋ‘; ಕೇವಲ ಒಂದೇ ತಿಂಗಳಿನಲ್ಲಿ 50 ಲಕ್ಷ ಡೌನ್ಲೋಡ್​​

Mitron App: ‘ಮಿತ್ರೋ‘​ ಭಾರತದ ಮೂಲದ ವಿಡಿಯೋ ಶೇರಿಂಗ್​ ಆ್ಯಪ್​ ಆಗಿದ್ದು, ಬಿಡುಗಡೆಯಾದ ಒಂದು ತಿಂಗಳಲ್ಲೇ 5 ಮಿಲಿಯನ್​ಗೂ ಹೆಚ್ಚು ಡೌನ್​ ಕಂಡಿದೆ. ಈಗಾಗಲೇ ಸಾಕಷ್ಟು ಜನರು ಬಳಸುತ್ತಿದ್ದಾರೆ. ಟಿಕ್​ಟಾಕ್​ ಆ್ಯಪ್​ ಬೇಡಿಕೆ ಕಳೆದುಕೊಂಡ ಬೆನ್ನಲೇ ಜನರು ‘ಮಿತ್ರೋ‘​ ಆ್ಯಪ್​ ಮೊರೆ ಹೋಗಿದ್ದಾರೆ.

news18
Updated:May 27, 2020, 4:05 PM IST
Mitron App: ಟಿಕ್​ಟಾಕ್​​ಗೆ​​ ಪ್ರತಿ ಸ್ಪರ್ಧಿಯಾಗುತ್ತಿದೆ ಭಾರತದ ‘ಮಿತ್ರೋ‘; ಕೇವಲ ಒಂದೇ ತಿಂಗಳಿನಲ್ಲಿ 50 ಲಕ್ಷ ಡೌನ್ಲೋಡ್​​
ಮಿತ್ರೋ​ ವಿಡಿಯೋ ಶೇರಿಂಗ್​ ಆ್ಯಪ್
  • News18
  • Last Updated: May 27, 2020, 4:05 PM IST
  • Share this:
ಭಾರತದಲ್ಲಿ ಕೆಳ ದಿನಗಳಿಂದ ಟಿಕ್​ಟಾಕ್​ ಆ್ಯಪ್​ ಬಳಕೆದಾರರ ಸಂಖ್ಯೆ ತೀರಾ ಇಳಿಮುಖವಾಗಿದೆ. ಸ್ವದೇಶಿ ವಸ್ತುಗಳ ಬಳಕೆ ಮತ್ತು ಚೀನಾ ವಸ್ತುಗಳ ನಿಷೇಧ ಮಾಡುವ ಕಾರಣದಿಂದ ಅನೇಕರು ಟಿಕ್​ಟಾಕ್​ ಆ್ಯಪ್​ ಬಳಸುವುದನ್ನು ನಿಲ್ಲಿಸಿದ್ದಾರೆ. ಮತ್ತೊಂಡೆದೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾನ್​ ಟಿಕ್​ ಟಾಕ್​ ಆ್ಯಪ್​​ ಎಂಬ ಅಭಿಯಾನ ನಡೆಯುತ್ತಿದೆ. ಈ ನಡುವೆ ಟಿಕ್​ಟಾಕ್​ ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ನಡುವೆ ಭಾರತೀಯ ಮೂಲದ ಹೊಸದೊಂದು ಆ್ಯಪ್​​ ಜನಪ್ರಿಯಗೊಳ್ಳುತ್ತಿದೆ. ಅದುವೇ ‘ಮಿತ್ರೋ‘.

‘ಮಿತ್ರೋ‘​ ಭಾರತದ ಮೂಲದ ವಿಡಿಯೋ ಶೇರಿಂಗ್​ ಆ್ಯಪ್​ ಆಗಿದ್ದು, ಬಿಡುಗಡೆಯಾದ ಒಂದು ತಿಂಗಳಲ್ಲೇ 5 ಮಿಲಿಯನ್​ಗೂ ಹೆಚ್ಚು ಡೌನ್​ ಕಂಡಿದೆ. ಈಗಾಗಲೇ ಸಾಕಷ್ಟು ಜನರು ಬಳಸುತ್ತಿದ್ದಾರೆ. ಟಿಕ್​ಟಾಕ್​ ಆ್ಯಪ್​ ಬೇಡಿಕೆ ಕಳೆದುಕೊಂಡ ಬೆನ್ನಲೇ ಜನರು ‘ಮಿತ್ರೋ‘​ ಆ್ಯಪ್​ ಮೊರೆ ಹೋಗಿದ್ದಾರೆ. ಸದ್ಯ ಈ ಸ್ವದೇಶಿ ಆ್ಯಪ್​​ ಒಂದೇ ತಿಂಗಳಿನಲ್ಲಿ 50 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಕಂಡು ಬಳಕೆದಾರರನ್ನ ಸೆಳೆದುಕೊಂಡಿದೆ.

ಐಐಟಿ ರೂರ್ಕಿಯ ವಿದ್ಯಾರ್ಥಿ ಶಿವಾಂಕ್​​ ಅಗರ್ವಾಲ್​​ ‘ಮಿತ್ರೋ‘ ಆ್ಯಪ್​​ ಸಿದ್ಧಪಡಿಸಿದ್ದಾರೆ. ಇನ್ನು ಹಿಂದಿಯಲ್ಲಿ ‘ಮಿತ್ರೋ‘ ಎಂದರೆ ಸ್ನೇಹಿತ ಎಂದು ಅರ್ಥವಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಬಳಸುವ ‘ಮಿತ್ರೋ‘ ಎಂಬ ಪದಕ್ಕೆ ಅನುಗುಣವಾಗಿ ‘ಮಿತ್ರೋ ಆ್ಯಪ್‘​ ಹೆಚ್ಚು ಜನಪ್ರಿಯತೆ ಕಂಡಿದೆ.

ಚೀನಾ ಮೂಲದ ಟಿಕ್​ಟಾಕ್​ ಬ್ಯಾನ್​ ಆಗಬೇಕೆಂದು ಕಳೆದ ಹಲವು ದಿನಗಳಿಂದ ಅಭಿಯಾನ ನಡೆಯುತ್ತಿದೆ. #Bantiktok ಹ್ಯಾಶ್​ ಟ್ಯಾಗ್​ನಡಿ ಅಭಿಯಾನ ಮಾಡುತ್ತಿದ್ದಾರೆ, ಮತ್ತೊಂದೆಡೆ ಜನರು ಯ್ಯೂಟೂಬ್​ನತ್ತ ಮೊರೆ ಹೋಗುತ್ತಿದ್ದಾರೆ. ಇದರ ನಡುವೆ ಶಿವಾಂಕ್​ ಅಗರ್ವಾಲ್​ ಟಿಕ್​ಟಾಕ್​ ವಿಶೇಷತೆಯನ್ನು ಹೋಲುವಂತ ಮಿತ್ರೋ ಆ್ಯಪ್​ ಅಭಿವೃದ್ಧಿ ಪಡಿಸಿದ್ದಾರೆ. ಸದ್ಯ ಈ ಆ್ಯಪ್​ ಜನಪ್ರಿಯತೆ ಕಾಣುತ್ತಿದ್ದು, ಟಿಕ್​ಟಾಕ್​ಗೆ ಪ್ರತಿ ಸ್ಪರ್ಧೆಯನ್ನು ಒಡ್ಡುತ್ತಿದೆ.

ಅಮೆಜಾನ್​ನಲ್ಲಿ ಮಾರಾಟ ಪ್ರಾರಂಭಿಸಿದ ರೆಡ್​ಮಿ ನೋಟ್​ 9 ಪ್ರೊ ಮ್ಯಾಕ್ಸ್​​ ಸ್ಮಾರ್ಟ್​ಫೋನ್; ಎಷ್ಟು ಬೆಲೆ? ಇಲ್ಲಿದೆ ಮಾಹಿತಿ
First published: May 27, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading