Type-C charging port: ಒಂದೇ ಚಾರ್ಜರ್ ನೀತಿಯನ್ನು ತರಲಿದೆಯಾ ಭಾರತ? ಇದರಿಂದ ಇ-ತ್ಯಾಜ್ಯ ಕಡಿಮೆಯಾಗುತ್ತಾ?

ಭಾರತದಲ್ಲಿ ಎಲ್ಲಾ ಸ್ಮಾರ್ಟ್​ಫೋನ್​ ಪ್ರಿಯರು ಒಂದೇ ಚಾರ್ಜರ್​ ನೀತಿಯನ್ನು ಅಳವಿಡಸಲು ಸರ್ಕಾರ ಆಲೋಚಿಸಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯ ರೂಪಕ್ಕೆ ಬರಲಿದೆ. ವಿವಿಧ ರೀತಿಯ ಚಾರ್ಜರ್​ ಪೋರ್ಟ್​ಗಳು ಮೂಲೆ ಸೇರಲಿವೆ ಮತ್ತು ಏಕ ನೀತಿಯ ಚಾರ್ಜರ್​ ಪೋರ್ಟ್​ ಬಳಕೆಗೆ ಬರಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ವಿವಿಧ ಕಂಪನಿ ಸ್ಮಾರ್ಟ್​ಫೋನ್​ಗಳು ಅದರ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುತ್ತವೆ. ಅದರೊಂದಿಗೆ ವಿನ್ಯಾಸ ಚಾರ್ಜರ್​ ​ಗಳನ್ನು ನೀಡುತ್ತದೆ. ಈಗಂತೂ ಚಾರ್ಜರ್​ ಪೋರ್ಟ್​ ಕೂಡ ಬದಲಾಗಿರುವುದನ್ನು ಗಮನಿಸಬಹುದಾಗಿದೆ. ಈ ಹಿಂದೆ ಬರುತ್ತಿದ್ದ ಸ್ಮಾರ್ಟ್​ಫೋನ್​ ಚಾರ್ಜರ್​ ಪೋರ್ಟ್​ಗೂ (Smart Phone Charger Port) ಮತ್ತು ಈಗಿನ ಚಾರ್ಜರ್​ ಪೋರ್ಟ್​ಗೂ ತುಂಬಾ ವ್ಯತ್ಯಾಸವಿದೆ. ಅದನ್ನು ಸ್ಮಾರ್ಟ್​ಫೋನ್​ ನೋಡಿದಾಗಲೇ ತಿಳಿಯುತ್ತದೆ. ಆದರೀಗ ಭಾರತ ಸರ್ಕಾರ ಇದೇ ವಿಚಾರವಾಗಿ ಹೊಸ ನಿರ್ಧಾರವನ್ನು ಜಾರಿಗೆಗೊಳಿಸಲು ಮುಂದಾಗಿದೆ. ಅದೇನೆಂದರೆ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು (Tablet) ಸೇರಿದಂತೆ ಎಲ್ಲಾ ಸಾಧನಗಳಿಗೆ ಒಂದು ಚಾರ್ಜರ್ (Charger) ಅನ್ನು ಅಳವಡಿಸಿಕೊಳ್ಳುವ ಆಯ್ಕೆಯನ್ನು ಭಾರತ ಸರ್ಕಾರ (Indian Government) ಅನ್ವೇಷಿಸುತ್ತಿದೆ. ಯುರೋಪ್ ಕೂಡ ಇದೇ ನೀತಿಯನ್ನು ಅಳವಡಿಸಿಕೊಂಡಿದೆ ಮತ್ತು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಸೇರಿದಂತೆ ಎಲ್ಲಾ ಸಾಧನಗಳಿಗೆ ಒಂದೇ ಚಾರ್ಜರ್ ನೀತಿಯನ್ನು ಅಳವಡಿಸಿಕೊಳ್ಳುವಂತೆ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರಿಗೆ ನಿರ್ದೇಶಿಸಿದೆ.

    ಭಾರತದಲ್ಲಿ ಎಲ್ಲಾ ಸ್ಮಾರ್ಟ್​ಫೋನ್​ ಪ್ರಿಯರು ಒಂದೇ ಚಾರ್ಜರ್​ ನೀತಿಯನ್ನು ಅಳವಿಡಸಲು ಸರ್ಕಾರ ಆಲೋಚಿಸಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯ ರೂಪಕ್ಕೆ ಬರಲಿದೆ. ವಿವಿಧ ರೀತಿಯ ಚಾರ್ಜರ್​ ಪೋರ್ಟ್​ಗಳು ಮೂಲೆ ಸೇರಲಿವೆ ಮತ್ತು ಏಕ ನೀತಿಯ ಚಾರ್ಜರ್​ ಪೋರ್ಟ್​ ಬಳಕೆಗೆ ಬರಲಿದೆ. ಅಂದಹಾಗೆಯೇ ಇದು ಯಾವಾಗದಿಂದ ಬರಲಿದೆ ಎಂದು ತಿಳಿದುಬರಬೇಕಿದೆ. ಆದರೆ ಯುರೋಪ್‌ನಲ್ಲಿ 2024 ರಿಂದ ಈ ನೀತಿ ಜಾರಿಗೆ ಬರಲಿದೆ. ಸಾಧ್ಯತೆಗಳನ್ನು ಚರ್ಚಿಸಲು ಭಾರತ ಸರ್ಕಾರವು ಆಗಸ್ಟ್ 17 ರಂದು ಸಭೆಯನ್ನು ಕರೆದಿದೆ.

    ಭಾರತವು ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ನಿರ್ಣಯಿಸಲು ಮತ್ತು ಬಹು ಚಾರ್ಜರ್​ ಬಳಕೆಯಿಂದ ಇ- ತ್ಯಾಜ್ಯವನ್ನು ತಡೆಗಟ್ಟುವ ಸಲುವಾಗಿ​ ಸರ್ಕಾರವು ಸ್ಮಾರ್ಟ್‌ಫೋನ್ ತಯಾರಕರು ಮತ್ತು ವಲಯ-ನಿರ್ದಿಷ್ಟ ಸಂಸ್ಥೆಗಳೊಂದಿಗೆ ಸಭೆ ನಡೆಸಲಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಆ ಮೂಲಕ ಭಾರತದಲ್ಲಿ ಬಹು ಚಾರ್ಜರ್‌ಗಳ ಬಳಕೆಯನ್ನು ಕೊನೆಗೊಳಿಸಲಿದೆ ಎಂದು ಹೇಳಲಾಗುತ್ತಿದೆ.

    ಈ ಬಗ್ಗೆ ಮಾತನಾಡಿದ ಅವರು "ಕಂಪನಿಗಳು ಯುರೋಪ್ ಮತ್ತು ಯುಎಸ್‌ನಲ್ಲಿ ಸೇವೆ ಸಲ್ಲಿಸಬಹುದಾದರೆ, ಅವರು ಭಾರತದಲ್ಲಿ ಅದನ್ನು ಏಕೆ ಮಾಡಬಾರದು? ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಸಾಮಾನ್ಯ ಚಾರ್ಜರ್ ಅನ್ನು ಹೊಂದಿರಬೇಕು" ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

    ಇದನ್ನೂ ಓದಿ: Women Are Banned: ಭಾರತ ಮಾತ್ರವಲ್ಲ, ಈ ದೇಶಗಳಲ್ಲೂ ಕೆಲವು ಪ್ರವಾಸಿ ತಾಣಗಳಿಗೆ ಮಹಿಳೆಯರ ಪ್ರವೇಶ ನಿಷೇಧ!

    ಗಮನಿಸಬಹುದಾದ ಸಂಗತಿ ಎಂದರೆ ಸ್ಮಾರ್ಟ್​ಫೋನ್​ ಹಲವು ಟೈಪ್ಸ್​ಗಳ ಚಾರ್ಜರ್​ ಅನ್ನು ಹೊಂದಿದೆ. ಮಾತ್ರವಲ್ಲದೆ ಸ್ಮಾರ್ಟ್​ವಾಚ್​ಗಳ ಚಾರ್ಜರ್​ ಕೂಡ ಬೇರೆಯಾಗಿದೆ. ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಪ್ರತ್ಯೇಕ ಚಾರ್ಜರ್‌ಗಳಿವೆ. ಆಂಡ್ರಾಯ್ಡ್ ಮತ್ತು ಐಒಎಸ್ ಪ್ರತ್ಯೇಕ ಚಾರ್ಜರ್‌ಗಳನ್ನು ಹೊಂದಿವೆ. ಹಾಗಾಗಿ ಪ್ರತಿಯೊಂದಕ್ಕೂ ಹಣ ಖರ್ಚು ಮಾಡುವ ಮೂಲಕ ಬೇರೆ ಚಾರ್ಜರ್​ ಖರೀದಿಸಬೇಕಿದೆ. ಆದರೆ ಈ ಒಂದೇ ಚಾರ್ಜರ್​ ನೀತಿ ಜಾರಿಗೆ ಬಂದರೆ, ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳು ಒಂದೇ ಚಾರ್ಜರ್ ಹೊಂದಿದ್ದರೆ, ಜನರು ಪ್ರತ್ಯೇಕವಾಗಿ ಚಾರ್ಜರ್‌ಗಳನ್ನು ಖರೀದಿಸಬೇಕಾಗಿಲ್ಲ.

    ಇದನ್ನೂ ಓದಿ: Earbuds: ನೀವಂದುಕೊಂಡಂತೆ ಇದು ಕ್ರಿಕೆಟ್​ ಬಾಲ್​​ ಅಲ್ಲ! UBON BT-210 ಇಯರ್‌ಬಡ್ಸ್​, 20 ಗಂಟೆಗಳ ಬ್ಯಾಟರಿ ಬ್ಯಾಕಪ್​ ನೀಡುತ್ತದೆ

    ಯೂರೋಪಿಯನ್​ ಕೌನ್ಸಿಲ್​ ಈ ಬಗ್ಗೆ ಆಲೋಚಿಸಿ ಒಂದೇ ರೀತಿಯ ಚಾರ್ಜರ್​ ನೀತಿಯನ್ನು ಜಾರಿಗೆ ತರುವಲ್ಲಿ ಮುಂದಾಗಿದೆ. ಜೂನ್ 2022 ರಲ್ಲಿ, ಆಯೋಗ ಮತ್ತು ಸಂಸತ್ತು ಮೊಬೈಲ್ ಮತ್ತು ಇತರ ಸಾಧನಗಳಿಗೆ ಒಂದೇ ಮೊಬೈಲ್ ಚಾರ್ಜಿಂಗ್ ಪೋರ್ಟ್ ಅನ್ನು ಕಾರ್ಯಗತಗೊಳಿಸಲು ಒಪ್ಪಿಕೊಂಡಿದೆ. "ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇ-ರೀಡರ್‌ಗಳು, ಇಯರ್‌ಬಡ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಹೆಡ್‌ಫೋನ್‌ಗಳು ಮತ್ತು ಹೆಡ್‌ಸೆಟ್‌ಗಳು, ಹ್ಯಾಂಡ್‌ಹೆಲ್ಡ್ ವೀಡಿಯೋಗೇಮ್ ಕನ್ಸೋಲ್‌ಗಳು ಮತ್ತು ವೈರ್ಡ್ ಕೇಬಲ್ ಮೂಲಕ ಪುನರ್ಭರ್ತಿ ಮಾಡಬಹುದಾದ ಪೋರ್ಟಬಲ್ ಸ್ಪೀಕರ್‌ಗಳು ಅವುಗಳ ತಯಾರಕರನ್ನು ಲೆಕ್ಕಿಸದೆ USB ಟೈಪ್-ಸಿ ಪೋರ್ಟ್‌ನೊಂದಿಗೆ ಸಜ್ಜುಗೊಳಿಸಬೇಕು. ಲ್ಯಾಪ್‌ಟಾಪ್‌ಗಳು ಜಾರಿಗೆ ಬಂದ ನಂತರ 40 ತಿಂಗಳೊಳಗೆ ಅವಶ್ಯಕತೆಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ, ”ಎಂದು ಸಂಸತ್ತಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
    Published by:Harshith AS
    First published: