HOME » NEWS » Tech » INDIAN ARMY LAUNCHES INDIGENOUS MESSAGING APP SAI SIMILAR TO WHATSAPP RMD

ಸೈನಿಕರಿಗಾಗಿ ಆ್ಯಪ್ ಸಿದ್ಧಪಡಿಸಿದ ಭಾರತೀಯ ಸೇನೆ; ಇದರ ವಿಶೇಷತೆಗಳೇನು ಗೊತ್ತಾ?

ಎಸ್​ಎಐ ಈ ಆ್ಯಪ್​ನ ಹೆಸರು. ಸೆಕ್ಯೂರ್​ ಅಪ್ಲಿಕೇಷನ್​ ಫಾರ್​ ದಿ ಇಂಟರ್​ನೆಟ್​ (ಎಸ್​ಎಐ) ಇದರ ವಿಸ್ತ್ರತ ರೂಪ. ಸಂದೇಶ​, ಧ್ವನಿ ಸಂದೇಶ​ ​, ಧ್ವನಿ ಕರೆ ಹಾಗೂ ವಿಡಿಯೋ ಕರೆಗಳ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳಲು ಈ ಆ್ಯಪ್​ ಸಹಕಾರಿಯಾಗಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ. 

news18-kannada
Updated:October 30, 2020, 3:13 PM IST
ಸೈನಿಕರಿಗಾಗಿ ಆ್ಯಪ್ ಸಿದ್ಧಪಡಿಸಿದ ಭಾರತೀಯ ಸೇನೆ; ಇದರ ವಿಶೇಷತೆಗಳೇನು ಗೊತ್ತಾ?
SAI
  • Share this:
ಭದ್ರತಾ ದೃಷ್ಟಿಯಿಂದ ಫೇಸ್​ಬುಕ್ ಸೇರಿ ಸಾಕಷ್ಟು ಆ್ಯಪ್​ಗಳ ಬಳಕೆಯನ್ನು ಭಾರತೀಯ ಸೇನೆ ನಿಷೇಧ ಮಾಡಿತ್ತು. ಈಗ ಸೈನಿಕರಿಗಾಗಿ ಹೊಸ ಮೆಸೇಜಿಂಗ್​ ಆ್ಯಪ್​ಅನ್ನು ಭಾರತೀಯ ಸೇನೆ ಪರಿಚಯಿಸಿದೆ. ಈ ಆ್ಯಪ್​ ವಾಟ್ಸ್ಆ್ಯಪ್​ ಮಾದರಿಯಲ್ಲೇ ಇದ್ದು, ಮೆಸೇಜ್​ ಮಾಡಲು ಇದು ಸಹಕಾರಿಯಾಗಲಿದೆ.

ಎಸ್​ಎಐ ಈ ಆ್ಯಪ್​ನ ಹೆಸರು. ಸೆಕ್ಯೂರ್​ ಅಪ್ಲಿಕೇಷನ್​ ಫಾರ್​ ದಿ ಇಂಟರ್​ನೆಟ್​ (ಎಸ್​ಎಐ) ಇದರ ವಿಸ್ತ್ರತ ರೂಪ. ಸಂದೇಶ​, ಧ್ವನಿ ಸಂದೇಶ​ ​, ಧ್ವನಿ ಕರೆ ಹಾಗೂ ವಿಡಿಯೋ ಕರೆಗಳ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳಲು ಈ ಆ್ಯಪ್​ ಸಹಕಾರಿಯಾಗಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಈ ಬಗ್ಗೆ ಭಾರತೀಯ ಸೇನೆ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಪ್ರಕಟಣೆಯಲ್ಲಿ ಮೆಸೇಜಿಂಗ್​ ಅಪ್ಲಿಕೇಷನ್​ ಬಗ್ಗೆ ಮಾಹಿತಿ ನೀಡಿದೆ. ಎಸ್​ಎಐ ವಾಟ್ಸ್​ಆ್ಯಪ್ ಮಾದರಿಯಲ್ಲೇ ಇದ್ದು, ಹೆಚ್ಚು ಸುರಕ್ಷಿತವಾಗಿದೆ.
Youtube Video

ಇತ್ತೀಚಿನ ದಿನಗಳಲ್ಲಿ ಭಾರತೀಯ ಸೈನಿಕರ ಸಾಮಾಜಿಕ ಖಾತೆಯ ಮಾಹಿತಿಯನ್ನು ಮೊಬೈಲ್​ನಿಂದ ಕದಿಯುವ ಕೆಲಸ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಭದ್ರತಾ ದೃಷ್ಟಿಯಿಂದ ಭಾರತ ಸರ್ಕಾರ ಅನೇಕ ಅಪ್ಲಿಕೇಷನ್​ಗಳ ಬಳಕೆಯನ್ನು ರದ್ದು ಮಾಡಿತ್ತು.
Published by: Rajesh Duggumane
First published: October 30, 2020, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories