ವೈರಲ್​: ಭವಿಷ್ಯದ ಇ-ಪಾಸ್​​ಪೋರ್ಟ್​ ಹೇಗಿದೆ ಗೊತ್ತಾ..?

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಇ- ಪಾಸ್​ಪೋರ್ಟ್ ಫೋಟೋ ಗೂಗಲ್​ನಲ್ಲಿ ಅಪ್ಲೋಡ್​ ಮಾಡಲಾಗಿದೆ. ‘ದಿ ಪಾಸ್​ಪೋರ್ಟ್​ ಕಾನ್ಸೆಪ್ಟ್​​‘ ಎಂಬ ಹೆಸರಿನಡಿಯಲ್ಲಿ ಸ್ಮಾರ್ಟ್​ ಇ-ಪಾಸ್​​ಪೋರ್ಟ್​ ಬಗೆಗೆ ಫೋಟೋ ಕುರಿತ ಮಾಹಿತಿ ಹಾಕಲಾಗಿದೆ.

Harshith AS | news18
Updated:March 19, 2019, 11:33 AM IST
ವೈರಲ್​: ಭವಿಷ್ಯದ ಇ-ಪಾಸ್​​ಪೋರ್ಟ್​ ಹೇಗಿದೆ ಗೊತ್ತಾ..?
ಇ-ಪಾಸ್​​ಪೋರ್ಟ್
  • News18
  • Last Updated: March 19, 2019, 11:33 AM IST
  • Share this:
ನವದೆಹಲಿ(ಮಾ.19): ಎಟಿಎಂ ಕಾರ್ಡಿನ ವಿನ್ಯಾಸವನ್ನು ಹೊಂದಿರುವ ಇ-ಪಾರ್ಸ್​ಪೋರ್ಟ್​ ಅನ್ನು ಭಾರತ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂಬ ಸಂದೇಶವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಬಳಕೆಗೆ ಬರಬಹುದಾದ ನೂತನ ಸ್ಮಾರ್ಟ್​ ಪಾಸ್​ಪೋರ್ಟ್​ ಅನ್ನು ವಿನ್ಯಾಸಗೊಳಿಸಲಾಗಿದೆ.

ಏಟಿಎಂ ಕಾರ್ಡಿನ ಹೋಲಿಕೆಯಂತೆ ಕಂಡುಬರುವ ಈ ಇ-ಸ್ಮಾರ್ಟ್​ ಪಾಸ್​ಪೋರ್ಟ್​ ಅನ್ನು ವಿಮಾನ ನಿಲ್ದಾಣಗಳಲ್ಲಿ ಬಳಕೆ​ ಮಾಡಬಹುದು ಎಂದು ಸ್ಮಾರ್ಟ್​ ಕಾರ್ಡ್​ವೊಂದರ ಫೋಟೋ ಸಹಿತವಾದ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್​ ಮಾಡಲಾಗಿದೆ.ಇದನ್ನೂ ಓದಿ: ದಾರಿಯಲ್ಲಿ ಬಿದ್ದಿದ್ದ ಬ್ಯಾಗ್ ಮರಳಿಸಿದವನಿಗೆ ಸಿಕ್ಕಿತು ಭಾರೀ ಮೊತ್ತದ ಬಹುಮಾನ

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಇ- ಪಾಸ್​ಪೋರ್ಟ್ ಫೋಟೋ ಗೂಗಲ್​ನಲ್ಲಿ ಅಪ್ಲೋಡ್​ ಮಾಡಲಾಗಿದೆ. ‘ದಿ ಪಾಸ್​ಪೋರ್ಟ್​ ಕಾನ್ಸೆಪ್ಟ್​​‘ ಎಂಬ ಹೆಸರಿನಡಿಯಲ್ಲಿ ಸ್ಮಾರ್ಟ್​ ಇ-ಪಾಸ್​​ಪೋರ್ಟ್​ ಬಗೆಗೆ ಫೋಟೋ ಕುರಿತ ಮಾಹಿತಿ ಹಾಕಲಾಗಿದೆ.ವೃತ್ತಿಯಲ್ಲಿ ಇಂಜಿನಿಯರ್​ ಹುದ್ದೆಯನ್ನು ಮಾಡುತ್ತಿರುವ ಸಿದ್ಧಾಂತ್​ ಗುಪ್ತಾ ಎಂಬವರು ತಮ್ಮ ಹೆಸರನ್ನು ಬಳಸಿಕೊಂಡು ಪಾಕೆಟ್​ ಸೈಜ್​ ಇರುವ ಇ-ಪಾಸ್​ಪೋರ್ಟ್​ ವಿನ್ಯಾಸ ಮಾಡಿದ್ದಾರೆ. ಇದೀಗ ಸಿದ್ಧಾಂತ್​ ಗೂಗಲ್​ನಲ್ಲಿ ಬಿಡುಗಡೆ ಮಾಡಿದ ಇ-ಪಾಸ್​ಪೋರ್ಟ್​ ವಿನ್ಯಾಸವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಭಾರತದಲ್ಲಿ ಶೀಘ್ರವೇ ಈ ರೀತಿಯ ಪಾಸ್​ಪೋರ್ಟ್​ ಬಿಡುಗಡೆಯಾಗುತ್ತದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.
First published: March 19, 2019, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading