Flying Car Launch in India: ಶೀಘ್ರವೇ ಭಾರತದಲ್ಲಿ ಹಾರುವ ಕಾರು ಲಾಂಚ್; ಡ್ರೈವರೇ ಇಲ್ಲದ ಕಾರು ಮನೆ ಮೇಲೆಯೇ ಲ್ಯಾಂಡ್!

India to launch asias first hybrid flying car: ಹಾರುವ ಕಾರಿನಲ್ಲಿ ಪ್ರಯಾಣಿಸಲು ನೀವು ಹೋಗಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿದರೆ ಸಾಕು. ಕಾರು ಚಾಲಕರಿಲ್ಲದೆ ಆಕಾಶದಲ್ಲಿ ಹಾರಾಡುತ್ತದೆ. ಇದಕ್ಕಾಗಿ ವಿಮಾನ ನಿಲ್ದಾಣದ ಅಗತ್ಯವೂ ಇಲ್ಲ. ಮನೆಯ ಟೆರೇಸ್‌ನಲ್ಲಿರುವ ಜಾಗ ಸಾಕು.

ಹಾರುವ ಕಾರು

ಹಾರುವ ಕಾರು

  • Share this:
flying car developed by south south indian team: ಕಾರ್ಟೂನ್​ ಪ್ರೊಗ್ರಾಂಗಳಲ್ಲಿ, ಹಾಲಿವುಡ್​ನ ಫ್ಯೂಚರ್​ ಸಿನಿಮಾಗಳಲ್ಲಿ, ಅನಿಮೇಷನ್​ಗಳಲ್ಲಿ ಹಾರುವ ಕಾರನ್ನು ನೋಡಿದ್ದೇವೆ. ಆದರೆ ಇಂದು ನಿಜವಾಗಿಯೂ ಕಾರಲ್ಲಿ ಹಾರುವ ಸಮಯಕ್ಕೆ ನಾವು ತಲುಪಿದ್ದೇವೆ. ನಿಜ ಹಾರುವ ಕಾರು ಭಾರತದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲಿದೆ. ಈ ಬೃಹತ್ ಆವಿಷ್ಕಾರವನ್ನು ಏಷ್ಯಾದಲ್ಲಿ ಮೊಟ್ಟಮೊದಲ ಬಾರಿಗೆ ತಮಿಳುನಾಡಿನ ಯೋಗೀಶ್ ರಾಮನಾಥನ್(Yogesh Ramanathan) ಅವರ ನೇತೃತ್ವದಲ್ಲಿ ವಿನಾದ ಏರೋಮೊಬಿಲಿಟಿಯ(Vinada Aeromobility) ಯುವಕರ ಗುಂಪು ಮಾಡಿದೆ.

ಹಾರುವ ಕಾರಿನ ಕನಸು ನನಸು

ವಿನೋದ ಏರೋಮೊಬಿಲಿಟಿಯ ಅಧ್ಯಕ್ಷ ಯೋಗೀಶ್ ಇದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನಾವು ಈ ಹಾರುವ ಕಾರನ್ನು ಪ್ರತಿಯೊಬ್ಬ ಮನುಷ್ಯನ ಕನಸಿನಂತೆ ನೋಡುತ್ತೇವೆ. ಈ ಆಧಾರದ ಮೇಲೆ ನಾವು ಇಂತಹ ಹೊಸ ಆವಿಷ್ಕಾರವನ್ನು ಕಂಡು ಹಿಡಿದಿದ್ದೇವೆ. 2018 ರಲ್ಲಿ ಪ್ರಯತ್ನವನ್ನು ಮಾಡಿದಾಗ, ಪ್ರಪಂಚದಾದ್ಯಂತ ಈ ಆವಿಷ್ಕಾರದಲ್ಲಿ ತೊಡಗಿರುವ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಆದಾಗ್ಯೂ ಇಂದು, ವಿಶ್ವಾದ್ಯಂತ 200 ಕ್ಕೂ ಹೆಚ್ಚು ಕಂಪನಿಗಳು ಈ ಪ್ರಯತ್ನದಲ್ಲಿ ತೊಡಗಿಕೊಂಡಿವೆ. ಆದರೆ, ನಮ್ಮಲ್ಲಿ ಸಂಪೂರ್ಣ ಯೋಜನೆ ಇರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ.

ಯೋಗೀಶ್ ರಾಮನಾಥನ್


ಹಾರುವ ಕಾರಿಗೆ ಚಾಲಕನ ಅಗತ್ಯವಿಲ್ಲ

ಭವಿಷ್ಯದಲ್ಲಿ ಭಾರತವು ಡ್ರೋನ್ ಕೇಂದ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ. ಆದ್ದರಿಂದ, ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರವು ಆ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿದೆ. ಆವಿಷ್ಕಾರವು 2023 ರ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗುತ್ತದೆ. ಇನ್ನು ಈ ಹಾರುವ ಕಾರಿಗೆ ಯಾವುದೇ ಪೈಲಟ್-ಚಾಲಕ ಇಲ್ಲ. ಪ್ರಯಾಣಿಕರು ಸಂಪೂರ್ಣ ಇಂಜಿನಿಯರಿಂಗ್ ಆಧಾರದ ಮೇಲೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಇದನ್ನೂ ಓದಿ: Smartphone Display: ಡಿಸ್​ಪ್ಲೇ ಒಡೆದರೆ ಅದೇ ಜೋಡಿಸಿಕೊಳ್ಳುತ್ತೆ! ಏನು ಗುರು ಟೆಕ್ನಾಲಜಿ!

ಮನೆಯ ಟೆರೆಸ್​ ಮೇಲೆ ಕಾರನ್ನು ಇಳಿಸಬಹುದು

ಹಾರುವ ಕಾರಿನಲ್ಲಿ ಪ್ರಯಾಣಿಸಲು ನೀವು ಹೋಗಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿದರೆ ಸಾಕು. ಕಾರು ಚಾಲಕರಿಲ್ಲದೆ ಆಕಾಶದಲ್ಲಿ ಹಾರಾಡುತ್ತದೆ ಮತ್ತು ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪಿದ ತಕ್ಷಣ ನೆಲದ ಮೇಲೆ ಇಳಿಯುತ್ತದೆ. ನಾವು ಸುಮಾರು 10,000 ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯವಿರುವ ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇದರ ಪ್ರಮುಖ ಅಂಶವೆಂದರೆ ಭದ್ರತೆ. ಆ ವಿಭಾಗದಲ್ಲಿ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಡ್ಯುಯಲ್ ಇಂಜಿನ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಪಾಯದ ಸಮಯದಲ್ಲಿ ಸುಲಭವಾಗಿ ಇಳಿಯಲು ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ವಿಮಾನ ನಿಲ್ದಾಣದ ಅಗತ್ಯವೂ ಇಲ್ಲ. ಮನೆಯ ಟೆರೇಸ್‌ನಲ್ಲಿರುವ ಜಾಗ ಸಾಕು. ಇದಕ್ಕಾಗಿ ಹೆಲಿಪ್ಯಾಡ್‌ಗಳಾಗಿ ಬಳಸಬಹುದು. ಭದ್ರತಾ ಕ್ರಮಗಳೊಂದಿಗೆ ಸರ್ಕಾರವು ಅನುಮೋದನೆಯನ್ನು ನೀಡುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ತಪ್ಪಿಸಲು ಹಾರುವ ಕಾರನ್ನು ಬಯೋಗ್ಯಾಸ್ ನಿಂದ ಚಲಾಯುಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಯೋಗೇಶ್ ತಿಳಿಸಿದರು.

ಹಾರುವ ಕಾರಿನ ಗ್ರಾಫಿಕ್​ ವಿನ್ಯಾಸ


ಗಂಟೆಗೆ 120 ಕಿ.ಮೀ ವೇಗ

ನೀವು ಚೆನ್ನೈನಿಂದ ಪಾಂಡಿಚೇರಿಗೆ ಪ್ರಯಾಣಿಸಲು ಬಯಸಿದರೆ ಬಸ್ ಅಥವಾ ರೈಲಿನಲ್ಲಿ ಹೋಗಬಹುದು. ಇದು ಸುಮಾರು ಎರಡೂವರೆ ಗಂಟೆಯಿಂದ ನಾಲ್ಕು ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಹಾರುವ ಕಾರಿನಲ್ಲಿ ಅರ್ಧ ಗಂಟೆಯಲ್ಲಿ ತಲುಪಬಹುದು. ಕಾರು 120 ಕಿಮೀ ವೇಗದಲ್ಲಿ ಆಕಾಶದಲ್ಲಿ ಹಾರುತ್ತದೆ ಮತ್ತು ನೇರ ಸಾಲಿನಲ್ಲಿ ಇಳಿಯುತ್ತದೆ. ತಮ್ಮ ಸಂಪೂರ್ಣ ಸಂಶೋಧನಾ ಕೇಂದ್ರವು ಪುಣೆಯಲ್ಲಿ ಇದೆ ಮತ್ತು ತಂತ್ರಜ್ಞಾನವನ್ನು ಶೀಘ್ರದಲ್ಲೇ ತಮಿಳುನಾಡಿನಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.
Published by:Kavya V
First published: