• Home
  • »
  • News
  • »
  • tech
  • »
  • Smartphone: ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗಿದೆ?

Smartphone: ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Smartphone Makers: ಇಷ್ಟೆಲ್ಲಾ ವ್ಯಾಪಾರ ಅಡೆತಡೆಗಳಿದ್ದರೂ ಕೂಡ ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾದ ಭಾರತದಲ್ಲಿ ಚೀನಾದ ಕಂಪನಿಗಳು ಪ್ರಾಬಲ್ಯವನ್ನು ಮುಂದುವರೆಸಿವೆ.

  • Share this:

ಭಾರತದಲ್ಲಿ (India) ಶೀಯೋಮಿ ಸ್ಮಾರ್ಟ್‌ಫೋನ್‌ನ (Xiaomi Smartphone) ಕಾನೂನು ಸಮಸ್ಯೆ ಸೇರಿ ಹಲವಾರು ಕಷ್ಟಕರವಾದ ವ್ಯಾಪಾರ ಮಾರುಕಟ್ಟೆಯಲ್ಲಿ ಚೀನಾ ಕಾರ್ಯನಿರ್ವಹಿಸುತ್ತಿದೆ. ಏಪ್ರಿಲ್‌ನಲ್ಲಿ, ಭಾರತದ ಫೆಡರಲ್ ಹಣಕಾಸು ಅಪರಾಧ ಏಜೆನ್ಸಿಯಾದ ಜಾರಿ ನಿರ್ದೇಶನಾಲಯವು ಶಿಯೋಮಿಯ ಭಾರತದ ಬ್ಯಾಂಕ್ ಖಾತೆಗಳಲ್ಲಿ $676 ಮಿಲಿಯನ್ (€690 ಮಿಲಿಯನ್)  ವಶಪಡಿಸಿಕೊಂಡಿತು ಮತ್ತು ಕಂಪನಿಯು ́ʼರಾಯಧನದʼ ಸೋಗಿನಲ್ಲಿ ವಿದೇಶಕ್ಕೆ ಅಕ್ರಮ ಹಣ ರವಾನೆ ಮಾಡುತ್ತಿದೆ ಎಂದು ಆರೋಪ ಮಾಡಿತ್ತು. ಇಷ್ಟಕ್ಕೆ ಮುಗಿಯದ ಈ ಸಂಘರ್ಷ, ಈ ತಿಂಗಳ ಆರಂಭದಲ್ಲಿ, ಸ್ವತ್ತುಗಳನ್ನು ವಶಪಡಿಸಿಕೊಂಡಿರುವುದರಿಂದ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿರುವುದಾಗಿ ಚೀನಾದ (China) ಕಂಪನಿಗಳು ಹೇಳಿಕೊಂಡರೂ ಸಹ ಭಾರತೀಯ ನ್ಯಾಯಾಲಯ (Indian Court) ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು.


ವಿವೋ, ಒಪ್ಪೋ ಕಂಪನಿಗೂ ಸಂಕಷ್ಟ
ಭಾರತದಲ್ಲಿ ಶಿಯೋಮಿ ಮಾತ್ರವಲ್ಲದೇ ಚೀನಾದ ವಿವೋ, ಒಪ್ಪೋ ಕಂಪನಿಗಳು ಕೂಡ ಸಾಕಷ್ಟು ಒತ್ತಡಕ್ಕೆ ಸಿಲುಕಿವೆ. ಜುಲೈನಲ್ಲಿ, ಭಾರತೀಯ ಅಧಿಕಾರಿಗಳು ಒಪ್ಪೋ ಕಂಪನಿ $ 551 ಮಿಲಿಯನ್ ಮೌಲ್ಯದ ಕಸ್ಟಮ್ಸ್ ಸುಂಕವನ್ನು ನೀಡದೇ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿ, ತನಿಖಾಧಿಕಾರಿಗಳು ವಿದೇಶಕ್ಕೆ ಹಣ ವರ್ಗಾವಣೆಯ ಅನುಮಾನದ ಮೇಲೆ ಹಲವಾರು ವಿವೋ ಕಚೇರಿಗಳ ಮೇಲೆ ದಾಳಿ ನಡೆಸಿದರು.


"ಶಿಯೋಮಿ ಪ್ರಕರಣವು ಭಾರತ ಸರ್ಕಾರದ ಈ ಒಟ್ಟಾರೆ ಪರಿಶೀಲನೆಯ ಭಾಗವಾಗಿದೆ" ಎಂದು ಗಡಿಯಾಚೆಗಿನ ಹೂಡಿಕೆ ಮತ್ತು ನಿಯಂತ್ರಕ ವಿಷಯಗಳಲ್ಲಿ ಅನುಭವ ಹೊಂದಿರುವ ಖೈತಾನ್ & ಕೋ ಪಾಲುದಾರ, ವಕೀಲ ಅತುಲ್ ಪಾಂಡೆ ಹೇಳಿದರು,


ಚೀನೀ ಸ್ಮಾರ್ಟ್‌ಫೋನ್ ತಯಾರಕರಿಗೆ ಭಾರತವೇ ಪ್ರಮುಖ ಮಾರುಕಟ್ಟೆ
ಚೀನಾ ಸ್ಮಾರ್ಟ್‌ಫೋನ್ ತಯಾರಕರಿಗೆ ಭಾರತವೇ ಮುಖ್ಯ ಮಾರುಕಟ್ಟೆ. ಚೀನಾ ಕಂಪನಿಗಳ ಮೇಲಿನ ಕಾನೂನು ವಿವಾದ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಕೂಡ ಚೀನಾ ಕಂಪನಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಹಲವು ಚೀನಾ ಮೂಲದ ಅಪ್ಲಿಕೇಷನ್‌ಗಳನ್ನು ಕೇಂದ್ರ ನಿಷೇಧ ಮಾಡಿದೆ. "ಭಾರತದ ಹೊರಗೆ ಗುಟ್ಟಾಗಿ ವೈಯಕ್ತಿಕ ಡೇಟಾವನ್ನು ವರ್ಗಾಯಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲಾದ ಹಲವಾರು ಚೀನೀ ಅಪ್ಲಿಕೇಶನ್‌ಗಳಿಗೆ (ವೀಚಾಟ್ ಮತ್ತು ಟಿಕ್‌ಟಾಕ್ ಸೇರಿದಂತೆ) ಪ್ರವೇಶವನ್ನು ಭಾರತ ಸರ್ಕಾರ ನಿಷೇಧಿಸಿದೆ" ಎಂದು ಪಾಂಡೆ ತಿಳಿಸಿದರು. ಭಾರತ ಸರ್ಕಾರವು ಸಾಗರೋತ್ತರ ಷೇರುದಾರರಿಗೆ ರಾಯಧನ ಮತ್ತು ಪರವಾನಗಿ ಪಾವತಿಗಳನ್ನು ನಿಕಟವಾಗಿ ಪರಿಶೀಲಿಸುತ್ತಿದೆ" ಎಂದು ಅವರು ಹೇಳಿದರು.


ಇದನ್ನೂ ಓದಿ: ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾದ ತ್ರೈಮಾಸಿಕ ಆದಾಯದಲ್ಲಿ ಕುಸಿತ, 5%ಕ್ಕಿಂತ ಹೆಚ್ಚು ನಷ್ಟಕ್ಕೊಳಗಾದ ಷೇರುಗಳು


ಭಾರತದ ಮಾರುಕಟ್ಟೆಯಲ್ಲಿ ಚೀನಾ ಫೋನ್‌ಗಳ ಪ್ರಾಬಲ್ಯ
ಇಷ್ಟೆಲ್ಲಾ ವ್ಯಾಪಾರ ಅಡೆತಡೆಗಳಿದ್ದರೂ ಕೂಡ ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾದ ಭಾರತದಲ್ಲಿ ಚೀನಾದ ಕಂಪನಿಗಳು ಪ್ರಾಬಲ್ಯವನ್ನು ಮುಂದುವರೆಸಿವೆ. ಟೆಕ್ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ಪ್ರಕಾರ, ದಕ್ಷಿಣ ಏಷ್ಯಾದ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2021 ರಲ್ಲಿ ವರ್ಷದಿಂದ ವರ್ಷಕ್ಕೆ 27% ರಷ್ಟು ಬೆಳೆದಿದೆ, ವಾರ್ಷಿಕ ಮಾರಾಟವು 169 ಮಿಲಿಯನ್ ಯುನಿಟ್‌ಗಳನ್ನು ಮೀರಿದೆ. ಆದಾಯವು 27% ಏರಿಕೆಯಾಗಿ $38 ಶತಕೋಟಿಗೆ ತಲುಪಿದೆ. ಜಾಗತಿಕ ಚೈನೀಸ್ ಸ್ಮಾರ್ಟ್‌ಫೋನ್ ಸಾಗಣೆಗಳಲ್ಲಿ ಸುಮಾರು 17% 2021 ರಲ್ಲಿ ಭಾರತಕ್ಕೆ ಬಂದಿದೆ.


ಚೈನೀಸ್ ಬ್ರಾಂಡ್‌ಗಳು ಅಗ್ರ ಐದು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಲ್ಲಿ ನಾಲ್ಕು ಪಾಲನ್ನು ಹೊಂದಿದ್ದು, ಮಾರುಕಟ್ಟೆಯ 76% ನಷ್ಟು ಭಾಗವನ್ನು ಹೊಂದಿದೆ. ಇವುಗಳಲ್ಲಿ ಶಿಯೋಮಿ 24%, ನಂತರ ವಿವೋ ಮತ್ತು ರೀಲ್‌ಮಿ ಪ್ರತಿ 15% ಮತ್ತು ಒಪ್ಪೋ 10% ಮಾರುಕಟ್ಟೆ ಪಾಲನ್ನು ಹೊಂದಿದೆ. 18% ಮಾರುಕಟ್ಟೆ ಪಾಲನ್ನು ಹೊಂದಿರುವ ಸ್ಯಾಮ್‌ಸಂಗ್ ಮೊದಲ ಐದು ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಚೈನೀಸ್ ಅಲ್ಲದ ಬ್ರ್ಯಾಂಡ್ ಆಗಿದೆ.


"ಚೀನೀ ತಯಾರಕರು ಬೆಲೆ, ಗುಣಮಟ್ಟದಲ್ಲಿ ಪೈಪೋಟಿ ನೀಡುತ್ತಾರೆ"
ಭಾರತದ ಮಾರುಕಟ್ಟೆಯಲ್ಲಿ ಚೈನೀಸ್ ಬ್ರಾಂಡ್‌ಗಳ ಪ್ರಭಾವದ ಬಗ್ಗೆ ಮಾತನಾಡಿದ ಹ್ಯಾಂಗ್ ಸೆಂಗ್ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಡಾನ್ ವಾಂಗ್, "ಚೀನೀ ತಯಾರಕರು ಬೆಲೆ ಮತ್ತು ಗುಣಮಟ್ಟದಲ್ಲಿ ಸ್ಪರ್ಧಾತ್ಮಕವಾಗಿದ್ದು, ಭಾರತದ ಸ್ಥಳೀಯ ಬ್ರ್ಯಾಂಡ್‌ಗಳ ಮಾರುಕಟ್ಟೆ ಪಾಲನ್ನು ಮೀರಿಸುತ್ತದೆ" ಎಂದು ತಿಳಿಸಿದ್ದಾರೆ.


ಈ ಎಲ್ಲಾ ತೊಂದರೆಗಳನ್ನು ಎದುರಿಸುತ್ತಿರುವ ಶಿಯೋಮಿ ಮತ್ತು ಕೆಲ ಬ್ರ್ಯಾಂಡ್‌ಗಳು ಭಾರತ ತೊರೆದು ಪಾಕಿಸ್ತಾನ, ಇಂಡೋನಿಷಿಯಾ, ಬಾಂಗ್ಲಾದೇಶ, ನೈಜಿರಿಯಾ ದೇಶಕ್ಕೆ ತೆರಳಲು ಮುಂದಾಗಿದೆ ಎಂಬ ವಂದಂತಿ ಕೇಳಿ ಬಂದಿತ್ತು. ಆದರೆ ಈ ಎಲ್ಲಾ ಊಹಾಪೋಹಗಳನ್ನು ಕಂಪನಿ ನಿರಾಕರಿಸಿದೆ. ಕಾರಣ ಇಷ್ಟೇ ಭಾರತದಲ್ಲಿ ಅವರ ಮಾರುಕಟ್ಟೆ ಈಗಾಗ್ಲೇ ಗಟ್ಟಿಯಾಗಿದ್ದು, ಬೇರೆಡೆ ಸ್ಥಳಾಂತರಿಸುವ ಗೋಜಿಗೆ ಅವರು ಹೋಗುತ್ತಿಲ್ಲ.


ಚೀನೀ ಉತ್ಪನ್ನಗಳಿಗೆ ಭಾರತದಲ್ಲಿ ಡಿಮ್ಯಾಂಡ್
ಭಾರತವು ಚೀನಾದ ಈ ಕಂಪನಿಗಳಿಗೆ ಬೃಹತ್ ಮಾರುಕಟ್ಟೆಯನ್ನು ಒದಗಿಸುತ್ತಿದೆ ಮತ್ತು ರಾಜಕೀಯ ಉದ್ವಿಗ್ನತೆಯನ್ನು ಲೆಕ್ಕಿಸದೇ, ಭಾರತೀಯ ಗ್ರಾಹಕರು ಚೀನಾದ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಹೈಟೆಕ್ ಉತ್ಪನ್ನಗಳನ್ನು ಸ್ವೀಕರಿಸಿದ್ದಾರೆ ಎಂದು ಪಾಂಡೆ ಹೇಳಿದರು.


ಇದನ್ನೂ ಓದಿ: ಐಫೋನ್ ಹರಾಜಿನ ಕಥೆ ಕೇಳಿದ್ರೆ ಗಾಬರಿ ಆಗ್ತಿರಾ!


ದುರ್ಬಲ ಬಳಕೆ ಮತ್ತು ಕೋವಿಡ್ ನಿರ್ಬಂಧಗಳಿಂದ ಪ್ರಚೋದಿಸಲ್ಪಟ್ಟ ಕಡಿಮೆ-ಆದಾಯದ ಬೆಳವಣಿಗೆಯಿಂದಾಗಿ ಚೀನಾದಲ್ಲಿ ಸ್ಮಾರ್ಟ್‌ಫೋನ್ ಮಾರಾಟವು ನಿಧಾನವಾಗಿರುವುದರಿಂದ ಭಾರತೀಯ ಮಾರುಕಟ್ಟೆಯು ಈಗ ವಿಶೇಷವಾಗಿ ಮುಖ್ಯವಾಗಿದೆ ಎಂದು ವಾಂಗ್ ಹೇಳಿದರು. ಭಾರತದ ಜನಸಂಖ್ಯೆ ಮತ್ತು ವೇಗದ ಬೆಳವಣಿಗೆಯೊಂದಿಗೆ ಇದು ಆದರ್ಶ ಪರ್ಯಾಯ ಮಾರುಕಟ್ಟೆಯಾಗಿದೆ ಎಂದರು.

Published by:Sandhya M
First published: