• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Ola Electric Scooter: ಭಾರತದಲ್ಲಿ 7.3 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸೇಲ್, ಮಾರುಕಟ್ಟೆಯಲ್ಲಿ ಓಲಾ ಸ್ಕೂಟರ್​ ಮೇಲುಗೈ!

Ola Electric Scooter: ಭಾರತದಲ್ಲಿ 7.3 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸೇಲ್, ಮಾರುಕಟ್ಟೆಯಲ್ಲಿ ಓಲಾ ಸ್ಕೂಟರ್​ ಮೇಲುಗೈ!

ಎಲೆಕ್ಟ್ರಿಕ್​ ಸ್ಕೂಟರ್​

ಎಲೆಕ್ಟ್ರಿಕ್​ ಸ್ಕೂಟರ್​

ರೆಡ್‌ಸೀರ್‌ನ ಇತ್ತೀಚಿನ ಎಲೆಕ್ಟ್ರಿಕ್ ಮೊಬಿಲಿಟಿ ವರದಿಯ ಪ್ರಕಾರ, ಹಣಕಾಸು ವರ್ಷ 2022-2023 ರಲ್ಲಿ ಸುಮಾರು 7.3 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೇಶದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ. ಈ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

ಮುಂದೆ ಓದಿ ...
  • Share this:

ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಮೇಲುಗೈಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ದರ ಗಗನಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯ ಎಲೆಕ್ಟ್ರಿಕ್‌ ವಾಹನ (ಇವಿ)ಗಳು ರಸ್ತೆಗಿಳಿಯುತ್ತಿವೆ. ಪರಿಸರ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದಲೂ ಈ ಇವಿ ವಾಹಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್‌ ಇದೆ.ಭಾರತದ ಮಾರುಕಟ್ಟೆಯಲ್ಲೂ ಇಂಧನ ಆಧಾರಿತ ಬೈಕ್‌, ಸ್ಕೂಟರ್‌ಗಿಂತ (Scooter) ವಿದ್ಯುತ್‌ ಚಾಲಿತ ವಾಹನಗಳ ಮಾರುಕಟ್ಟೆ ಹೆಚ್ಚು ಬೆಳವಣಿಗೆ ಕಾಣುತ್ತಿದೆ. ಹೆಚ್ಚುತ್ತಿರುವ ವಾಹನ ಜಾಗೃತಿ, ಬೆಲೆ ಈ ಎಲ್ಲಾ ಅಂಶಗಳನ್ನು ಆಧರಿಸಿ ಇವಿಗಳು ಭಾರತದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ರೆಡ್‌ಸೀರ್‌ನ ಇತ್ತೀಚಿನ ಎಲೆಕ್ಟ್ರಿಕ್ ಮೊಬಿಲಿಟಿ ವರದಿಯ ಪ್ರಕಾರ, ಹಣಕಾಸು ವರ್ಷ 2022-2023 ರಲ್ಲಿ ಸುಮಾರು 7.3 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (E2Ws) ದೇಶದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ. ಈ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.


ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಮೇಲುಗೈ


ಎಲೆಕ್ಟ್ರಾನಿಕ್‌ ವಾಹನ ಮಾರುಕಟ್ಟೆಯಲ್ಲಿ ಸುಮಾರು ವೈವಿಧ್ಯಮ ಪ್ರಕಾರಗಳಿವೆ. ಅದರಲ್ಲೂ ವಿಶೇಷವಾಗಿ ಓಲಾ ಎಲೆಕ್ಟ್ರಿಕ್, ಈ ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಓಲಾ ಎಲೆಕ್ಟ್ರಿಕ್ 2022-2023ರಲ್ಲಿ ಸುಮಾರು 22 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನ ಪಡೆದಕೊಂಡಿದೆ. ಮಾರ್ಚ್‌ನಲ್ಲಿ ಸುಮಾರು 27,000 ಯುನಿಟ್‌ಗಳನ್ನು ಮಾರಾಟ ಮಾಡಿದೆ.


ಕೈಗೆಟಕುವ ದರ, ಎಂಡ್-ಟು-ಎಂಡ್ ಡಿಜಿಟಲ್ ಅನುಭವವನ್ನು ಒದಗಿಸುವ ಬೈಕಿನ ವಿಶೇಷತೆ ಹೀಗೆ ಹಲವು ಓಲಾ ಎಲೆಕ್ಟ್ರಿಕ್ ವೈಶಿಷ್ಟ್ಯತೆಗಳು ಮಾರುಕಟ್ಟೆಯ ದೊಡ್ಡ ಪಾಲನ್ನು ಪಡೆದುಕೊಳ್ಳುವಲ್ಲಿ ಪ್ರಮುಖ ಕಾರಣವಾಗಿದೆ ಎಂದು ರೆಡ್‌ಸೀರ್ ತನ್ನ ವರದಿಯಲ್ಲಿ ವಿವರಿಸಿದೆ.


ಇತ್ತೀಚಿನ ಸಂದರ್ಶನದಲ್ಲಿ, ಓಲಾ ಎಲೆಕ್ಟ್ರಿಕ್ ಮುಖ್ಯಸ್ಥ ಭವಿಶ್ ಅಗರ್ವಾಲ್ ಮಾತನಾಡಿ, “ "FY23 ಭಾರತದಲ್ಲಿ ಇವಿ ಉದ್ಯಮಕ್ಕೆ ನಿಜವಾಗಿಯೂ ನಿರ್ಣಾಯಕ ವರ್ಷವಾಗಿದೆ. ಇವಿಯ ಭವಿಷ್ಯವು ತಂತ್ರಜ್ಞಾನದ ನೇತೃತ್ವ ವಹಿಸಲಿದೆ ಮತ್ತು ಅದನ್ನು ವ್ಯಾಖ್ಯಾನಿಸುವ ಎರಡು ಅಥವಾ ಮೂರು ಪ್ರಮುಖ ತಂತ್ರಜ್ಞಾನಗಳಿವೆ.


ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಗೂಗಲ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​!


ಒಂದು ಸಾಫ್ಟ್‌ವೇರ್ ಮತ್ತು ಇನ್ನೊಂದು ಶಕ್ತಿ ಮತ್ತು ಕೋಶ. ಎರಡರಲ್ಲೂ ನಮಗೆ ಪರಿಣಿತಿ ಇದೆ. ಆದ್ದರಿಂದ, ಒಮ್ಮೆ ನಾವು ಈ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಂಡರೆ ಮತ್ತು ವೇದಿಕೆಯನ್ನು ನಿರ್ಮಿಸಿದರೆ, ನಾವು ಅದರ ಮೇಲೆ ವಿವಿಧ ಉತ್ಪನ್ನ ವಿಭಾಗಗಳನ್ನು ಸುಲಭವಾಗಿ ನಿರ್ಮಿಸಬಹುದು.


ಮತ್ತು ಒಮ್ಮೆ ನಮ್ಮ ಪೂರೈಕೆ ಸರಪಳಿಗಳನ್ನು ಈ ಕೋರ್ ತಂತ್ರಜ್ಞಾನಗಳ ಮೇಲೆ ನಿರ್ಮಿಸಿದರೆ, ಬೇರೆ ಕಂಪನಿಗಳು ಸ್ಪರ್ಧಿಸಲು ಸವಾಲಾಗುತ್ತದೆ" ಎಂದು ತಿಳಿಸಿದರು.


ಭಾರತೀಯ E2W ಗ್ರಾಹಕರು ಕಳೆದ ಆರ್ಥಿಕ ವರ್ಷದಲ್ಲಿ ತಿಂಗಳಿಗೆ ಸರಾಸರಿ 60,000 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದ್ದಾರೆ. "ಬೇಡಿಕೆ ಬದಿಯಲ್ಲಿ, ಏರುತ್ತಿರುವ ಇಂಧನ ಬೆಲೆಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅರಿವು ಮತ್ತು ಸೌಕರ್ಯವನ್ನು ಹೆಚ್ಚಿಸುತ್ತಿದೆ.


ಇದನ್ನೂ ಓದಿ: ಈ ರೀಚಾರ್ಜ್​ ಮಾಡಿದ್ರೆ 6 ತಿಂಗಳು ಅನಿಯಮಿತ ಕರೆ ಫ್ರೀ!


ಆದರೆ ಪೂರೈಕೆಯ ಬದಿಯಲ್ಲಿ, OEM ಗಳು ವಾಹನದ ಗುಣಮಟ್ಟವನ್ನು ಕೇಂದ್ರೀಕರಿಸುತ್ತಿವೆ ಮತ್ತು ವಾಹನವನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಲು ಪ್ರಯತ್ನಿಸುತ್ತಿವೆ" ಎಂದು ರೆಡ್‌ಸೀರ್ ವರದಿ ಹೇಳಿದೆ.


ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ


E2W ಅಳವಡಿಕೆಯು ಭವಿಷ್ಯದಲ್ಲಿ ಮತ್ತಷ್ಟು ಬೆಳೆಯುವ ನಿರೀಕ್ಷೆಯಿದ್ದು, 2030 ರ ವೇಳೆಗೆ 75 ಪ್ರತಿಶತ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಭಾರತವು ಹಣಕಾಸು ವರ್ಷ 23 ರಲ್ಲಿ 16 ಮಿಲಿಯನ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ.




ಇದರಲ್ಲಿ ಎಲೆಕ್ಟ್ರಿಕ್‌ ವಾಹನಗಳು ಬಹುದೊಡ್ಡ ಪ್ರಮಾಣವನ್ನು ಹೊಂದಿವೆ ಎಂದು ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್‌ನ ಸಹಾಯಕ ಪಾಲುದಾರ ಮುಖೇಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

First published: