• Home
 • »
 • News
 • »
 • tech
 • »
 • Lenovo Tab P11 5G: ಭಾರತದ ಮೊದಲ 5ಜಿ ಟ್ಯಾಬ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​?

Lenovo Tab P11 5G: ಭಾರತದ ಮೊದಲ 5ಜಿ ಟ್ಯಾಬ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​?

ಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್​

ಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್​

ಭಾರತದ ಮೊದಲ 5ಜಿ ಟ್ಯಾಪ್​ ಅನ್ನು ಲೆನೋವೋ ಕಂಪೆನಿ ಇದೀಗ ಪರಿಚಯಿಸಿದ್ದು, ಕೆಲವೇ ದಿನಗಳಲ್ಲಿ ಇದು ಮಾರುಕಟ್ಟೆಗೆ ಲಗ್ಗೆಯಿಡುತ್ತದೆ. 5ಜಿ ಟ್ಯಾಬ್ಲೆಟ್​ ಖರೀದಿಸುವ ಪ್ಲ್ಯಾನ್​ನಲ್ಲಿರುವವರಿಗೆ ಇದು ಬಹಳಷ್ಟು ಸಹಾಕಾರಿಯಾಗಲಿದೆ.

 • Share this:

  ಇತ್ತೀಚೆಗೆ 5ಜಿ ಸ್ಮಾರ್ಟ್​ಫೋನ್​ಗಳು ಭಾರೀ ಬೇಡಿಕೆಯಲ್ಲಿವೆ. ಅದ್ರಲ್ಲೂ ಭಾರತದಲ್ಲಿ ರಿಲಯನ್ಸ್ ಜಿಯೋ (Reliance Jio), ಏರ್‌ಟೆಲ್ (Airtel) 5ಜಿ ನೆಟ್‌ವರ್ಕ್‌ನ ಪ್ರಾರಂಭದೊಂದಿಗೆ ಈ 5ಜಿ ಸ್ಮಾರ್ಟ್​​ಫೋನ್​ಗಳನ್ನು ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿಯವರೆಗೆ ಭಾರತದಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ, ಆದರೆ ಈಗ ಅಮೆರಿಕಾದ ಎಲೆಕ್ಟ್ರಾನಿಕ್ಸ್ ಕಂಪೆನಿಯಾಗಿರುವ ಲೆನೋವೋ (Lenovo) ಭಾರತದಲ್ಲಿ ಮೊದಲ 5ಜಿ ಆಂಡ್ರಾಯ್ಡ್ ಟ್ಯಾಬ್ಲೆಟ್ (First Android Tablet) ಅನ್ನು ಬಿಡುಗಡೆ ಮಾಡಿದೆ. ಲೆನೋವೋ ಟ್ಯಾಬ್ ಪಿ11 5ಜಿ (Lenovo Tab P11 5G) ಟ್ಯಾಬ್ಲೆಟ್ ಅನ್ನು ಲೆನೋವೋ ಕಂಪೆನಿ ಪರಿಚಯಿಸಿದೆ. ಇದು ಕ್ವಾಲ್ಕಮ್​ ಸ್ನಾಪ್​ಡ್ರಾಗನ್​ 750 5ಜಿ ಪ್ರೊಸೆಸರ್ ಮತ್ತು 11 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ.


  ಭಾರತದ ಮೊದಲ 5ಜಿ ಟ್ಯಾಪ್​ ಅನ್ನು ಲೆನೋವೋ ಕಂಪೆನಿ ಇದೀಗ ಪರಿಚಯಿಸಿದ್ದು, ಕೆಲವೇ ದಿನಗಳಲ್ಲಿ ಇದು ಮಾರುಕಟ್ಟೆಗೆ ಲಗ್ಗೆಯಿಡುತ್ತದೆ. 5ಜಿ ಟ್ಯಾಬ್ಲೆಟ್​ ಖರೀದಿಸುವ ಪ್ಲ್ಯಾನ್​ನಲ್ಲಿರುವವರಿಗೆ ಇದು ಬಹಳಷ್ಟು ಸಹಾಕಾರಿಯಾಗಲಿದೆ.


  ಲೆನೋವೋ ಟ್ಯಾಬ್​ ಪಿ11 5ಜಿ ಫೀಚರ್ಸ್​


  ಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್​ನ ಫೀಚರ್ಸ್​ ಬಗ್ಗೆ ಹೇಳುವುದಾದರೆ, ಇದು 11-ಇಂಚಿನ 2ಕೆ ಡಿಸ್ಪ್ಲೇ ಜೊತೆಗೆ 2000x1200 ಪಿಕ್ಸೆಲ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್​ ಅನ್ನು ಒಳಗೊಂಡಿರುತ್ತದೆ. ಇನ್ನು ಈ ಟ್ಯಾಬ್ಲಟ್  ಡಾಲ್ಬಿ ವಿಷನ್ ಬೆಂಬಲ ಲಭ್ಯವಿದೆ. ಕ್ವಾಲ್ಕಮ್ ಸ್ನಾಪ್​ಡ್ರಾಗನ್​ 750 5ಜಿ ಪ್ರೊಸೆಸರ್‌ನಿಂದ ರನ್ ಆಗುತ್ತದೆ. ಇದು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಟ್ಯಾಬ್​ಫೋಲ್ಡ್​ ಮಾಡಬಹುದಾದ ಫೀಚರ್​ ಅನ್ನು ಹೊಂದಿದ್ದು, ಗೂಗಲ್​ ಅಭಿವೃದ್ಧಿಪಡಿಸಲಾಗುತ್ತಿರುವ ಕಸ್ಟಮ್ ಆಪರೇಟಿಂಗ್ ಸಿಸ್ಟಮ್‌ಗೆ ಆಂಡ್ರಾಯ್ಡ್ 12L ಅಪ್‌ಡೇಟ್ ಲಭ್ಯವಿರಬಹುದು ಎಂಬ ವದಂತಿಗಳಿವೆ.


  ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆಯೇ ವಾಟ್ಸಾಪ್ ಅನ್ನು ಬಳಸಬಹುದಂತೆ! ಏನಿದು ಪ್ರಾಕ್ಸಿ ಫೀಚರ್ ನೋಡಿ


  ಕ್ಯಾಮೆರಾ ಫೀಚರ್ಸ್​


  ಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್ ಆಟೋಫೋಕಸ್ ವೈಶಿಷ್ಟ್ಯದೊಂದಿಗೆ 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇನ್ನು ಸೆಲ್ಫಿಗಳು ಮತ್ತು ವಿಡಿಯೋ ಕಾಲ್​ಗಳಿಗಾಗಿ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ದೂರದ ವಸ್ತುಗಳ ನಡುವಿನ ಅಂತರವನ್ನು ಅಳೆಯಲುಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್ ಅನ್ನು ಬಳಸಬಹುದು. ಇನ್ನು ಇದು 3ಡಿ ಇಮೇಜಿಂಗ್ ಮತ್ತು ಗೆಸ್ಚರ್ ರೆಕಗ್ನಿಷನ್‌ನಂತಹ ಫೀಚರ್ಸ್​ ಅನ್ನು ಇದರ ಕ್ಯಾಮೆರಾದಲ್ಲಿ ಅಳವಡಿಸಿದ್ದಾರೆ.


  ಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್​


  ಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್​ನ ಬೆಲೆ ಮತ್ತು ಲಭ್ಯತೆ


  ಲೆನೋವೋ ಟ್ಯಾಬ್​ ಪಿ11 5ಜಿ ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದು 6jಇಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ 29,999 ಆಗಿದೆ. ಅದೇ ರಿತಿ 8 ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 34,999 ರೂಪಾಯಿ ಆಗಿದೆ. ಇನ್ನು ಈ ಟ್ಯಾಬ್ಲೆಟ್ ಅನ್ನು ಅಮೆಜಾನ್ ಮತ್ತು ಲೆನೋವೋ ಸ್ಟೋರ್‌ನಲ್ಲಿ ಖರೀದಿಸಬಹುದು.
  ಇನ್ನು ಹೊಸದಾಗಿ ಬಿಡುಗಡೆಯಾಗುತ್ತಿರುವ ಈ ಲೆನೋವೋ ಟ್ಯಾಬ್​ ಪಿ11 5ಜಿ ಟ್ಯಾಬ್ಲೆಟ್​ ಶಿಯೋಮಿ ಪ್ಯಾಡ್​ 5, ರಿಯಲ್​ಮಿ ಪ್ಯಾಡ್​ ಎಕ್ಸ್​ ಟ್ಯಾಬ್ಲೆಟ್​ಗಳಿಗೆ ಸ್ಪರ್ಧೆಯನ್ನು ನೀಡಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ. ಹಾಗೇ ಸ್ಟಾರ್ಮ್ ಗ್ರೇ, ಮೂನ್ ವೈಟ್​, ಮಾಡರ್ನಿಸ್ಟ್​ ಟೇಲ್​ ಬಣ್ಣಗಳಲ್ಲಿ ಇದನ್ನು ಖರೀದಿಸಬಹುದಾಗಿದೆ.


  ಲೆನೋವೋ ಇದೇ ರೀತಿ ಹಲವಾರು ಹೊಸ ಹೊಸ ಡಿವೈಸ್​ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಾ ಇರುತ್ತದೆ. ಇದರಿಂದಲೇ ಲೆನೋವೋ ಕಂಪೆನಿ ಟೆಕ್ ಮಾರುಕಟ್ಟೆಯಲ್ಲಿ ಯಶಸ್ಸನ್ನ ಸಾಧಿಸಲು ಸಾಧ್ಯ ಅಂತಾನೇ ಹೇಳ್ಬಹುದು.

  Published by:Prajwal B
  First published: