Ban Chinese Phones: ಚೀನಾ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಬ್ಯಾನ್​ ಆಗುವ ಸಾಧ್ಯತೆ! ನಿಮ್ಮ ಫೋನ್​ ಬ್ರ್ಯಾಂಡ್​ ಯಾವುದು?

ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಮಾತು ಕೇಳಿಬರುತ್ತಿದ್ದು, ಈ ಬಾರಿ ಸ್ಮಾರ್ಟ್‌ಫೋನ್‌ಗಳನ್ನು ಬ್ಯಾನ್​ ಮಾಡಲಿದೆ ಎಂದು ಕೇಳಿಬರುತ್ತಿದೆ.ಈ ಮೊದಲು ಚೀನಾದ ಆ್ಯಪ್​​ಗಳನ್ನು ಭಾರತದ ಸರ್ಕಾರ ಬ್ಯಾನ್​ ಮಾಡಿತ್ತು. ಇದೀಗ ಫೋನ್​ನತ್ತ  ಭಾರತದಲ್ಲಿ ನಿಷೇಧವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ಸ್ಮಾರ್ಟ್‌ಫೋನ್ ಬಳಸುತ್ತಾರೆ. ಒಂದಿಷ್ಟು ಬೆರಳೆಣಿಕೆಯ ಮಂದಿ ಮಾತ್ರ ಸ್ಮಾರ್ಟ್​ಫೋನ್​ನಿಂದ ದೂರ ಉಳಿದವರು ಇರಬಹುದು. ಆದರೆ ಬಹುಪಾಲು ಜನರು ಸ್ಮಾರ್ಟ್​ಫೋನ್​ (Smart Phone) ಇಲ್ಲದೆಯೇ ಇರಲಾರರು. ಇಂದು ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ (Company) ಸ್ಮಾರ್ಟ್​ಫೋನ್​ ಬರುತ್ತಿವೆ. ಒಂದಲ್ಲಾ ಒಂದು ವಿಶೇಷತೆಯಿಂದ ಕೂಡಿವೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಥಿಂಗ್​ ಸ್ಮಾರ್ಟ್​ಫೋನ್​ ಬಿಡುಗಡೆಯಾಗಿದ್ದನ್ನು ಗಮನಿಸಬಹುದು. ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಚೀನಾ (China) ಸ್ಮಾರ್ಟ್​ಫೋನ್​ಗಳ ರಾಜ್ಯಭಾರ ಜೋರಾಗಿಯೇ ಇದೆ. ಒಪ್ಪೊ (Oppo), ಒನ್​ಪ್ಲಸ್​ (Oneplus), ವಿವೋ (Vivo) ಹೀಗೆ ಅನೇಕ ಸ್ಮಾರ್ಟ್​ಫೋನ್​ಗಳು ಗ್ರಾಹಕರ ಗಮನ ಸೆಳೆದಿರುವುದು ಅಲ್ಲದೆ, ಬೇಡಿಕೆಯೂ ಜೋರಾಗಿದೆ. ಆದರೀಗ ಸ್ಮಾರ್ಟ್​ಫೋನ್​ ಕುರಿತಾಗಿ ಒಂದು ಶಾಕಿಂಗ್​ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಚೀನಾ ಮೂಲದ ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ನಿಷೇಧ (Ban) ಮಾಡುವ ಕುರಿತಾಗಿದೆ. ಆದರೆ ಚೀನಾ ಸ್ಮಾರ್ಟ್​ಫೋನ್​ ಬ್ರ್ಯಾಂಡ್​​ಗಳು ನಿಜವಾಗಿಯೂ ಬ್ಯಾನ್​ ಆಗುತ್ತಾ? ಈ ಸುದ್ದಿ ಓದಿ.

  ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಮಾತು ಕೇಳಿಬರುತ್ತಿದ್ದು, ಈ ಬಾರಿ ಸ್ಮಾರ್ಟ್‌ಫೋನ್‌ಗಳನ್ನು ಬ್ಯಾನ್​ ಮಾಡಲಿದೆ ಎಂದು ಕೇಳಿಬರುತ್ತಿದೆ.ಈ ಮೊದಲು ಚೀನಾದ ಆ್ಯಪ್​​ಗಳನ್ನು ಭಾರತದ ಸರ್ಕಾರ ಬ್ಯಾನ್​ ಮಾಡಿತ್ತು. ಇದೀಗ ಫೋನ್​ನತ್ತ  ಭಾರತದಲ್ಲಿ ನಿಷೇಧವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ನಿಷೇಧ!

  ಭಾರತದ ಮಾರುಕಟ್ಟೆಯನ್ನು ಚೀನಾ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಅನೇಕ ಚೀನಾ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಜನಪ್ರಿಯತೆ ಗಳಿಸಿದೆ ಮತ್ತು ಮಾರುಕಟ್ಟೆ ವಿಸ್ತರಣೆಗೊಳಿಸಿದೆ. ಆದರೀಗ ಭಾರತದಲ್ಲಿ ಚೀನಾದ ಅಗ್ಗದ ಸ್ಮಾರ್ಟ್​ಫೋನ್​ಗಳ ಮಾರಾಟವನ್ನು ತಡೆಲು ಭಾರತ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. 12 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್​ ಅನ್ನು ಸ್ಥಗಿತ ಮಾಡಲಿದೆ. ಅದು Xiaomi ನಂತಹ ಬ್ರಾಂಡ್‌ಗಳ ಮೇಲೆ ಸಾಕಷ್ಟು ಪರಿಣಾಮ ಬೀರಳಿದೆ.

  ಏಕೆ ನಿಷೇಧಿಸಲಾಗುತ್ತಿದೆ?

  ಭಾರತದಲ್ಲಿ ಚೀನಾ ಸ್ಮಾರ್ಟ್​ಫೋನ್​ಗಳ ಬೇರು ಬಿಟ್ಟಂತಿದೆ. ಬಹುತೇಕರು ಕಡಿಮೆ ಬೆಲೆಗೆ ದೊರಕುವ ಚೀನಾ ಸ್ಮಾರ್ಟ್​ಫೋನ್​ನತ್ತ ಮರಳುತ್ತಿದ್ದಾರೆ. ಹಾಗಾಗಿ ಚೈನೀಸ್ ಬ್ರ್ಯಾಂಡ್ ಗಳ ಮುಂದೆ ನಮ್ಮ ದೇಶದ ಸ್ಮಾರ್ಟ್ ಫೋನ್ ಉದ್ಯಮ ತತ್ತರಿಸುತ್ತಿದ್ದು, ಅವುಗಳನ್ನು ಸಶಕ್ತಗೊಳಿಸಲು ಈ ಹೆಜ್ಜೆ ಇಡಲಾಗುತ್ತಿದೆ. ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತವು ತನ್ನ ಕೆಳಗಿನ ವಿಭಾಗದಿಂದ ಚೀನಾದ ಬ್ರ್ಯಾಂಡ್‌ಗಳನ್ನು ಹೊರಹಾಕಲು ನೋಡುತ್ತಿದೆ.

  ಇದನ್ನೂ ಓದಿ: Mosquito ಓಡಿಸಲು ಸೊಳ್ಳೆ ಬತ್ತಿ ಬೇಡ, ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ಈ ಆ್ಯಪ್​ ಇದ್ರೆ ಸಾಕು!

  ಯಾವ ಬ್ರ್ಯಾಂಡ್​ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಸ್ಥಗಿತವಾಗಲಿದೆ?

  ಭಾರತದ ಈ ನಿರ್ಧಾರ ಕೈಗೊಂಡರೆ ಕೆಲವು ಚೀನಾ ಸ್ಮಾರ್ಟ್​ಫೋನ್​ ಬ್ರ್ಯಾಂಡ್​ಗಳು ಸ್ಥಗಿತಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅವುಗಳಲ್ಲಿ Xiaomi, Vivo, Oppo  ಮತ್ತು Realme  ಬ್ರಾಂಡ್‌ಗಳ ಈ ಬಿಸಿ ಮುಟ್ಟಲಿದೆ.

  ಮತ್ತೊಂದೆಡೆ ಈ ಚೀನಾ ಬ್ರ್ಯಾಂಡ್​ಗಳನನ್ನು ಹೊಂದಿರುವ ಜನರ ಮೇಲೆ ಪರಿಣಾಮ ಬೀರಬಹುದು. ಆದರೆ ಸ್ಯಾಮ್​​ಸಂಗ್​ ಅಥವಾ ಆ್ಯಪಲ್​ ಐಫೋನ್​ ಬಳಕೆದಾರರಾಗಿದ್ದರೆ ಈ ಸಮಸ್ಯೆ ಬರಲಾರದು ಎಂದು ಹೇಳಬಹುದಾಗಿದೆ.

  ಇದನ್ನೂ ಓದಿ: Google Search down: ಗೂಗಲ್ ಸರ್ಚ್​ನಲ್ಲಿ ಸಮಸ್ಯೆ; ಕೆಲ ಹೊತ್ತು ಪರದಾಡಿದ ಬಳಕೆದಾರರು

  ಮೊದಲೇ ಹೇಳಿದಂತೆ ಭಾರತದಲ್ಲಿ ಸ್ಮಾರ್ಟ್​ಫೋನ್​ ಬಳಕೆದಾರರ ಸಂಖ್ಯೆ ಹೆಚ್ಚು ಇದೆ. ಆದರಲ್ಲೂ ಕಡಿಮೆ ಬೆಲೆಗೆ ಸಿಗುವ ಚೀನಾ ಸ್ಮಾರ್ಟ್​ಫೋನ್​ಗಳನ್ನು ಖರೀದಿಸಿವರ ಸಂಖ್ಯೆ ಕೂಡ ಜಾಸ್ತಿ ಇದೆ. ಹೀಗಿರುವಾಗ 12 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿದವರಿಗೆ ಈ ಬಿಸಿ ಮುಟ್ಟಲಿದೆ. ಒಂದು ವೇಳೆ ಈ ನಿಷೇಧ ಜಾರಿಗೆ ಬಂದರೆ ಬಹುತೇಕರು ಬೇರೆ ಸ್ಮಾರ್ಟ್​ಫೋನ್​ ಕಂಪನಿಗಳತ್ತ ಮರಳು ಸಾಧ್ಯತೆ ಹೆಚ್ಚಿದೆ.

  ಆದರೆ ಭಾರತ ಚೀನಾದ ಸ್ಮಾರ್ಟ್​ಫೋನ್​ಗಳನ್ನು ನಿಷೇಧ ಮಾಡುತ್ತಿದೆಯೇ? ಎಂದು ಕಾದು ನೋಡ ಬೇಕಿದೆ.
  Published by:Harshith AS
  First published: