ಗೂಗಲ್​ ಮ್ಯಾಪ್: ಏಷ್ಯಾ ಖಂಡಕ್ಕೆ two wheeler ಮೋಡ್ ಪರಿಚಯ


Updated:July 20, 2018, 5:46 PM IST
ಗೂಗಲ್​ ಮ್ಯಾಪ್: ಏಷ್ಯಾ ಖಂಡಕ್ಕೆ two wheeler ಮೋಡ್ ಪರಿಚಯ

Updated: July 20, 2018, 5:46 PM IST
ಕಳೆದ ವರ್ಷ ಗೂಗಲ್​ ಮ್ಯಾಪ್​ನಲ್ಲಿ ಬೈಕ್​ ಚಾಲಕರಿಗೆಂದೇ ಪೂರಕವಾಗುವಂತೆ two wheeler ಮೋಡ್​ ಎಂಬ ಹೊಸ ಅಪ್​ಡೇಟ್​ ನೀಡಿದ್ದ ಸಂಸ್ಥೆ ಈ ಸೇವೆಯನ್ನು ಸಂಪೂರ್ಣ ಏಷಿಯಾ ಖಂಡಕ್ಕೆ ವಿಸ್ತರಿಸುವ ಚಿಂತನೆ ನಡೆಸಿದೆ.

ಹಾಂಕಾಂಗ್, ಇಂಡೋನೇಷಿಯಾ, ಮಲೆಷ್ಯಾ, ಮ್ಯಾನ್ಮಾರ್, ಫಿಲಿಫೈನ್ಸ್, ಸಿಂಗಪೂರ್, ಥೈವಾನ್, ಥೈಲ್ಯಾಂಡ್ ಮತ್ತು ವಿಯೆಟ್ನಾಮ್ ಈ ರಾಷ್ಟ್ರಗಳಲ್ಲಿtwo wheeler ಮೋಡ್​ನ್ನು ಪ್ರಾರಂಭಿಸಲು ಚಿಂತಿಸಿರುವುದಾಗಿ ಗೂಗಲ್​ ಮ್ಯಾಪ್​ ಉತ್ಪನ್ನಗಳ ಮುಖ್ಯಸ್ಥೆ ಕ್ರಿಷ್​ ವಿಟಲ್​ ದೇವರ ಹೇಳಿರುವುದನ್ನ್ನು ದಿ ವರ್ಜ್​ ವರದಿ ಮಾಡಿದೆ.

ಆ್ಯಂಡ್ರಾಯ್ಡ್​ ಬಳಕೇದಾರರಿಗೆ ಈ ಆಯ್ಕೆಯನ್ನು ಮೊದಲು ಆರಂಭಿಸುತ್ತಿದ್ದು, ಬೈಕ್​ ಚಾಲಕರಿಗೆ ಸೂಕ್ತವಾಗುವ ರಸ್ತೆಗಳ ಆಯ್ಕೆಗೆಂದು ಇದನ್ನು ಅಭಿವೃದ್ಧಿ ಪಡಿಸಲಾಗಿದೆ.

ಡಿಸೆಂಬರ್​ನಲ್ಲಿ ಭಾರತದಲ್ಲಿ ಆರಂಭವಾದ ಈ ಸೇವೆ ಅತ್ಯಂತ ಹೆಚ್ಚು ಯಶಸ್ಸು ಕಂಡಿತ್ತು, ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಹಿನ್ನಲೆಯಲ್ಲಿ ಅಡ್ಡದಾರಿಗಳು ಮತ್ತು ಒಳದಾರಿಗಳು ಕೆಲವೇ ಕೆಲವು ಬೈಕ್ ಸವಾರರಿಗೆ ತಿಳಿರುತ್ತದೆ. ಇದನ್ನೇ ಬಳಿಸಿಕೊಳ್ಳಯವ ಗೂಗಲ್​ ಇತರೇ ಬೈಕ್ ಸವಾರರಿಗೆ ಹತ್ತಿರದ ದಾರಿಯನ್ನು ತೋರಿಸಿಕೊಡಲು ಈ ನೂತನ ಟೆಕ್ನಾಲಜಿ ಬಳಕೆ ಮಾಡಲಾಗಿತ್ತು.

ವಿಶ್ವದಲ್ಲೇ ಅತ್ಯಂತ ಹೆಚ್ಚು ದ್ವಿಚಕ್ರ ವಾಹನವನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ, ಹೀಗಾಗಿ ಪ್ರತಿನಿತ್ಯ ಎಲ್ಲಾ ವಾಹನಗಳಿಂದ ದ್ವಿಚಕ್ರ ಚಾಲಕರೇ ಅತ್ಯಂತ ಹೆಚ್ಚು ಕಷ್ಟಕ್ಕೆ ಗುರಿಯಾಗುತ್ತಿದ್ದರು. ಈ ಹಿನ್ನಲೆಯಲ್ಲಿ ಮಾರುಕಟ್ಟೆ ಕಾರು, ಬಸ್​ , ಟ್ರೈನ್​ ಮೋಡ್​ಗಳ ಜತೆಗೆ ದ್ವಿಚಕ್ರ ಮೋಡ್​ನ್ನು ಗೂಗಲ್​ ಪರಿಚಯಿಸಿತ್ತು.
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ