ಕ್ರಿಕೆಟ್​ ಪಂದ್ಯದ ವೇಳೆ ಜೇನು ನೊಣಗಳ ದಾಳಿ: ಮೈದಾನದಿಂದ ಕಾಲ್ಕಿತ್ತ ಆಟಗಾರರು

ಕೆಲ ಹೊತ್ತಿನವರೆಗೆ ಕ್ರೀಡಾಂಗಣದಲ್ಲೇ ಜೇಣು ನೊಣಗಳಿದ್ದರಿಂದ ಪಂದ್ಯವನ್ನು ಸ್ವಲ್ಪ ಕಾಲ ಮುಂದೂಡಲಾಯಿತು.

zahir | news18
Updated:January 30, 2019, 9:40 PM IST
ಕ್ರಿಕೆಟ್​ ಪಂದ್ಯದ ವೇಳೆ ಜೇನು ನೊಣಗಳ ದಾಳಿ: ಮೈದಾನದಿಂದ ಕಾಲ್ಕಿತ್ತ ಆಟಗಾರರು
ಸಾಂದರ್ಭಿಕ ಚಿತ್ರ
zahir | news18
Updated: January 30, 2019, 9:40 PM IST
ತಿರುವನಂತಪುರಂ: ಕ್ರಿಕೆಟ್​ ಮ್ಯಾಚ್​ ನಡೆಯುತ್ತಿದ್ದ ವೇಳೆ ಜೇನು ನೊಣಗಳ ದಾಳಿಯಿಂದ 15 ನಿಮಿಷಗಳ ಕಾಲ ಪಂದ್ಯಾಟವನ್ನು ಸ್ಥಗಿತಗೊಳಿಸಿದ ಘಟನೆ  ಗ್ರೀನ್​ ಫೀಲ್ಡ್​ ಸ್ಟೇಡಿಯಂನಲ್ಲಿ ನಡೆದಿದೆ. ಭಾರತ ಎ ಹಾಗೂ ಇಂಗ್ಲೆಂಡ್​ ಲಯನ್ಸ್​ ನಡುವಣ ಪಂದ್ಯದಲ್ಲಿ ಈ ಘಟನೆ ಜರುಗಿದೆ.

ನಾಲ್ಕನೇ ಏಕದಿನ ಪಂದ್ಯದ ವೇಳೆ ಲಯನ್ಸ್​ ತಂಡ ಬ್ಯಾಟಿಂಗ್ ಮಾಡುತ್ತಿದ್ದರು. 28ನೇ ಓವರ್​ ನಡೆಯುತ್ತಿದ್ದ ವೇಳೆ ಜೇನೊಣಗಳ ಗುಂಪು ಏಕಾಏಕಿ ಮೈದಾನಕ್ಕೆ ನುಗ್ಗಿದೆ. ಇದರಿಂದ ಬೆದರಿದ ಕೆಲ ಆಟಗಾರರು ಪೆವಿಲಿಯನ್​​ನತ್ತ ಮುಖ ಮಾಡಿದರು.

ವೆಸ್ಟ್​ ಸ್ಟ್ಯಾಂಡ್​ನಲ್ಲಿದ್ದ ಕೆಲ ಅಭಿಮಾನಿಗಳು ಜೇನು ಗೂಡಿಗೆ ಕಲ್ಲೆಸೆದಿದ್ದರಿಂದ ನೊಣಗಳು ದಾಳಿ ಮಾಡಿದೆ ಎನ್ನಲಾಗಿದೆ. ಇದರಿಂದ ಸ್ಟೇಡಿಯಂನಲ್ಲಿದ್ದ ಐವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಿಂದ ಪಂದ್ಯವನ್ನು ನೋಡುತ್ತಿದ್ದ ಕ್ರಿಕೆಟ್​ ಪ್ರೇಮಿಗಳು ಕೂಡ ಹೆದರಿ ಕಾಲ್ಕಿತ್ತರು.


ಕೆಲ ಹೊತ್ತಿನವರೆಗೆ ಕ್ರೀಡಾಂಗಣದಲ್ಲೇ ಜೇಣು ನೊಣಗಳಿದ್ದರಿಂದ ಪಂದ್ಯವನ್ನು ಸ್ವಲ್ಪ ಕಾಲ ಮುಂದೂಡಲಾಯಿತು. ಇಂಗ್ಲೆಂಡ್​ನ ಲಯನ್ಸ್ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿದ್ದು, ಈಗಾಗಲೇ 5 ಏಕದಿನ ಪಂದ್ಯಗಳ ಸರಣಿಯಲ್ಲಿ 3 ಪಂದ್ಯಗಳನ್ನು ಆಡಿದೆ. ಉತ್ತಮ ಫಾರ್ಮ್​ನಲ್ಲಿರುವ ಭಾರತ ಎ ತಂಡವು ಸದ್ಯ ಈ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.
First published:January 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ