• Home
 • »
 • News
 • »
 • tech
 • »
 • Airtel Recharge Plan: ದೇಶದ 7 ರಾಜ್ಯಗಳಲ್ಲಿ ರೀಚಾರ್ಜ್​ ಬೆಲೆಯನ್ನು ಹೆಚ್ಚಿಸಿದ ಕಂಪೆನಿ! ಏರ್​ಟೆಲ್ ಗ್ರಾಹಕರಿಗೆ ಬಿಗ್ ಶಾಕ್

Airtel Recharge Plan: ದೇಶದ 7 ರಾಜ್ಯಗಳಲ್ಲಿ ರೀಚಾರ್ಜ್​ ಬೆಲೆಯನ್ನು ಹೆಚ್ಚಿಸಿದ ಕಂಪೆನಿ! ಏರ್​ಟೆಲ್ ಗ್ರಾಹಕರಿಗೆ ಬಿಗ್ ಶಾಕ್

ಏರ್​​ಟೆಲ್​ ಟೆಲಿಕಾಂ ಕಂಪೆನಿ

ಏರ್​​ಟೆಲ್​ ಟೆಲಿಕಾಂ ಕಂಪೆನಿ

ಏರ್​​ಟೆಲ್​ ಕಂಪೆನಿ ಸದ್ಯ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ತನ್ನ ರೀಚಾರ್ಜ್​ ದರದಲ್ಲಿ ಏರಿಕೆ ಮಾಡಿದೆ. ಈ ದರವು ಈ ಹಿಂದೆ ಇದ್ದ ಬೆಲೆಗಿಂತ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ ಎಂದು ಹೇಳಿದೆ. ಹಾಗಿದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಏರ್​​ಟೆಲ್​ ರೀಚಾರ್ಜ್​ ಬೆಲೆ ಏರಿಕೆಯಾಗಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
 • Share this:

  ದೇಶದ ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ (Jio), ಏರ್​​ಟೆಲ್​, ವೊಡಫೋನ್ ಐಡಿಯಾ, ಬಿಎಸ್​ಎನ್​​ಎಲ್​ ಕಂಪೆನಿಗಳು ಭಾರೀ ಮುಂಚೂಣಿಯಲ್ಲಿದೆ. ಈ ಕಂಪೆನಿಗಳು ತನ್ನ ಗ್ರಾಹಕರಿಗಾಗಿ ಅಗ್ಗದ ರೀಚಾರ್ಜ್​ ಪ್ಲ್ಯಾನ್​​ಗಳನ್ನು (Recharge Plans) ಬಿಡುಗಡೆ ಮಾಡುವ ಮೂಲಕ ಈ ರೀತಿಯ ಮುನ್ನಡೆಯನ್ನು ಕಾಯ್ದುಕೊಂಡಿದೆ ಎಂದು ಹೇಳ್ಬಹುದು. ಜಿಯೋ ಮಾತ್ರ ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ್ದು ನಂಬರ್​ ಒನ್​ ಸ್ಥಾನವನ್ನು ಪಡೆದಿದೆ. ಆದರೆ ಇದೀಗ ಎರಡನೇ ಸ್ಥಾನದಲ್ಲಿದ್ದ, ಏರ್​​​ಟೆಲ್ (Airtel)​ ತನ್ನ ಗ್ರಾಹಕರಿಗೆ ದೊಡ್ಡ ಮಟ್ಟಿನ ಶಾಕಿಂಗ್​ ಸುದ್ದಿಯನ್ನು ನೀಡಿದೆ. ಏರ್​​ಟೆಲ್​ ಕಂಪೆನಿ ಈ ಹಿಂದೆ ತಿಳಿಸಿದಂತೆ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ತನ್ನ ರೀಚಾರ್ಜ್​ ದರದಲ್ಲಿ ಏರಿಕೆ ಮಾಡಿದೆ. 


  ಏರ್​​ಟೆಲ್​ ಕಂಪೆನಿ ಸದ್ಯ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ತನ್ನ ರೀಚಾರ್ಜ್​ ದರದಲ್ಲಿ ಏರಿಕೆ ಮಾಡಿದೆ. ಈ ದರವು ಈ ಹಿಂದೆ ಇದ್ದ ಬೆಲೆಗಿಂತ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ ಎಂದು ಹೇಳಿದೆ. ಹಾಗಿದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಏರ್​​ಟೆಲ್​ ರೀಚಾರ್ಜ್​ ಬೆಲೆ ಏರಿಕೆಯಾಗಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ.


  ಹೊಸ ರೀಚಾರ್ಜ್​ ಬೆಲೆ ಹೇಗಿದೆ?


  ಇನ್ನು ಏರ್​​ಟೆಲ್​​ ಗ್ರಾಹಕರು ಮಾಸಿಕ ರೀಚಾರ್ಜ್​ ಬೆಲೆಗೆ 155 ರೂಪಾಯಿ ಪಾವತಿಸಬೇಕಿದೆ. ಆದರೆ ಈ ಪ್ಲ್ಯಾನ್​ನಲ್ಲಿ ಅನ್ಲಿಮಿಟೆಡ್​ ವಾಯ್ಸ್​ ಕಾಲ್​​ ಹಾಗೂ 1ಜಿಬಿ ಡೇಟಾ ಸೌಲಭ್ಯ ಸಿಗುತ್ತದೆ. ಇದರ ಜೊತೆಗೆ 300 ಎಸ್​ಎಮ್​ಎಸ್​ ಮಾತ್ರ ಉಚಿತವಾಗಿ ಮಾಡುವ ಅವಕಾಶ ಸಿಗಲಿದೆ ಎಂದು ಕಂಪೆನಿ ಹೇಳಿದೆ.
  57% ರಷ್ಟು ಬೆಲೆಯಲ್ಲಿ ಏರಿಕೆ


  ಕಳೆದ ವರ್ಷದಲ್ಲಿ ಟೆಲಿಕಾಂ ಕಂಪೆನಿಗಳು ತನ್ನ ರೀಚಾರ್ಜ್​ ಬೆಲೆಯಲ್ಲಿ ಏರಿಕೆ ಮಾಡಿತ್ತು. ಆದರೆ ಪ್ರತೀ ಬಾರಿಗೆ ಏರಿಕೆ ಮಾಡುವಾಗ ಸ್ವಲ್ಪ ಮಟ್ಟಿಗೆ ಮಾಡುತ್ತಿತ್ತು. ಆದರೆ ಈ ಬಾರಿ ಏರ್​ಟೆಲ್​ ಕಂಪೆನಿ ಬರೋಬ್ಬರಿ 57% ರಷ್ಟು ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿದೆ.


  ಈ ಯೋಜನೆ ಇನ್ಮುಂದೆ ಲಭ್ಯವಿಲ್ಲ


  ಏರ್​​ಟೆಲ್​ ಕೆಲ ತಿಂಗಳುಗಳ ಹಿಂದೆ 99 ರೂಪಾಯಿಯ ಪ್ರೀಪೇಯ್ಡ್​ ಯೋಜನೆಯನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿತ್ತು. ಈ ಯೋಜನೆಯಲ್ಲಿ ಗ್ರಾಹಕರು 200ಎಮ್​ಬಿ ಡೇಟಾ ಸೌಲಭ್ಯ ಹಾಗೂ ಟಾಕ್​ ಟೈಮ್​ ಸೇವೆಯನ್ನು ಪಡೆಯುತ್ತಿದ್ದರು. ಜೊತೆಗೆ ಈ ಪ್ಲ್ಯಾನ್​ ಒಟ್ಟು 28 ದಿನಗಳ ವ್ಯಾಲಿಡಿqಇ ಅವಧಿಯನ್ನೂ ಹೊಂದಿದೆ. ಆದರೆ ಇನ್ಮು ಮುಂದಿನ ದಿನಗಳಲ್ಲಿ ಈ ಯೋಜನೆ ಲಭ್ಯವಿರುವುದಿಲ್ಲ. ಏರ್​ಟೆಲ್​ ಈ ಪ್ಲ್ಯಾನ್​ ಅನ್ನು ಹಿಂತೆಗೆದುಕೊಂಡಿದೆ ಎಂದು ಹೇಳಿದೆ.


  ಏರ್​​ಟೆಲ್​ ಟೆಲಿಕಾಂ ಕಂಪೆನಿ


  ಈ ನಿಯಮ ಯಾವೆಲ್ಲಾ ರಾಜ್ಯಗಳಲ್ಲಿ ಜಾರಿ?


  ಪ್ರಮುಖವಾಗಿ ಏರ್​​ಟೆಲ್​ನ ಬೆಲೆ ಏರಿಕೆ ಕ್ರಮವು ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಈಶಾನ್ಯ ಭಾಗ, ರಾಜಸ್ಥಾನ, ಮತ್ತು ಯುಪಿ-ಪಶ್ಚಿಮದಲ್ಲಿ ತನ್ನ ಕಡಿಮೆ ರೀಚಾರ್ಜ್ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಇನ್ಮುಂದೆ ಏರ್‌ಟೆಲ್‌ನ ಗ್ರಾಹಕರು 57% ಹೆಚ್ಚಿನ ಬೆಲೆಯಲ್ಲಿ ರೀಚಾರ್ಜ್‌ ಮಾಡಿಸಿಕೊಳ್ಳಬೇಕಾಗಿದೆ.


  ಇನ್ನು ಈ ದರ ಏರಿಕೆ ಕ್ರಮವನ್ನು ಮೊದಲು ಅಂದರೆ ಕಳೆದ ವರ್ಷದ ನವೆಂಬರ್‌ನಲ್ಲಿ ಒಡಿಶಾ ಹಾಗೂ ಹರಿಯಾಣದಲ್ಲಿ ಪರೀಕ್ಷೆ ಮಾಡಲಾಗಿತ್ತು. ಅಂದರೆ, ಮೊದಲು ಅಲ್ಲಿನ ಗ್ರಾಹಕರಿಗೆ ಈ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಪರಿಚಯಿಸಲಾಗಿತ್ತು. ಈಗ ಹೆಚ್ಚಿನ ರಾಜ್ಯಗಳ ಜನರು ಸಹ ಹೆಚ್ಚಿನ ದರದ ರೀಚಾರ್ಜ್‌ ಅನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.


  ಇದನ್ನೂ ಓದಿ: ಸ್ಮಾರ್ಟ್​​​ಫೋನ್​ ಖರೀದಿಸುವ ಪ್ಲ್ಯಾನ್​ನಲ್ಲಿದ್ದೀರಾ? ಇಲ್ಲಿದೆ ನೋಡಿ ಒಂದೇ ಕಂಪೆನಿಯ ಟಾಪ್ 4 ಮೊಬೈಲ್​ಗಳು


  ಈ ಬಗ್ಗೆ ಏರ್​​ಟೆಲ್​ನ ಅಭಿಪ್ರಾಯ


  ನಮ್ಮ ಗ್ರಾಹಕರಿಗೆ ಇನ್ನೂ ಉತ್ತಮ ರೀತಿ ಅನುಭವವನ್ನು ನೀಡುವ ನಿಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿದ್ದ ರೀಚಾರ್ಜ್​ ದರಗಳನ್ನು ಸ್ಥಗಿತಗೊಳಿಸಿದ್ದೇವೆ. ಇನ್ಮುಂದೆ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಏರ್​ಟೆಲ್​ನ ರೀಚಾರ್ಜ್​ನ ಆರಂಭಿಕ ಬೆಲೆಯೇ 155 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಅನ್ಲಿಮಿಟೆಡ್​ ವಾಯ್ಸ್​ ಕಾಲ್​, 1 ಜಿ ಡೇಟಾ, 300 ಎಸ್​ಎಮ್​ಎಸ್​​ ಸೌಲಭ್ಯಗಳನ್ನು ಪಡೆಯುತ್ತಾರೆ. ಈ ಯೋಜನೆಗಳ ಮೂಲಕ ಗ್ರಾಹಕರಿಗೆ ಬೆಲೆಗೆ ತಕ್ಕಂತರ ಉತ್ತಮ ಮೌಲ್ಯವನ್ನು ನೀಡುತ್ತದೆ ಎಂದು ಏರ್​ಟೆಲ್ ಹೇಳಿದೆ.

  Published by:Prajwal B
  First published: