ಇನ್ಮುಂದೆ ಇನ್​ಕಮಿಂಗ್​​ ಕರೆಯ ರಿಂಗಣಿಸುವ ಅವಧಿ 30 ಸೆಕೆಂಡು ಮಾತ್ರ!

ರಿಲಾಯನ್ಸ್​ ಜಿಯೋ ಕಂಪೆನಿ ತನ್ನ ಒಳ ಬರುವ ಕರೆಯ ಅವಧಿಯನ್ನು 25 ಸೆಂಕೆಡುಗಳಿಗೆ ಸೀಮಿತಗೊಳಿಸಿತ್ತು. ಏರ್​ಟೆಲ್​ ಕಂಪೆನಿ ಕರೆಯ ಅವಧಿಯನ್ನು 45 ಸೆಕೆಂಡುಗಳಿಗೆ ಸೀಮಿತಗೊಳಿಸಿತ್ತು.

news18-kannada
Updated:November 2, 2019, 4:38 PM IST
ಇನ್ಮುಂದೆ ಇನ್​ಕಮಿಂಗ್​​ ಕರೆಯ ರಿಂಗಣಿಸುವ ಅವಧಿ 30 ಸೆಕೆಂಡು ಮಾತ್ರ!
.
news18-kannada
Updated: November 2, 2019, 4:38 PM IST
ಮೊಬೈಲ್​ ಮತ್ತು ಲ್ಯಾಂಡ್​ಲೈನ್​ ರಿಂಗಣಿಸುವ ಅವಧಿಯ ಕುರಿತು ಭಾರತೀಯ ದೂರ ಸಂಪರ್ಕ ಇಲಾಖೆ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಫೋನ್​ಗಳಿಗೆ ಬರುವ ಕರೆಯ ರಿಂಗಣಿಸುವ ಅವಧಿಯನ್ನು 30 ಸೆಕೆಂಡುಗಳಿಗೆ, ಲ್ಯಾಂಡ್​ಲೈನ್​ಗಳಿಗೆ ಬರುವ ಕರೆಯ ರಿಂಗಣಿಸುವ ಅವಧಿಯನ್ನು 60 ಸೆಕೆಂಡುಗಳಿಗೆ ಸೀಮಿತಗೊಳಿಸಬೇಕು ಎಂದು ಹೇಳಿದೆ.

ರಿಲಾಯನ್ಸ್​ ಜಿಯೋ ಕಂಪೆನಿ ತನ್ನ ಒಳ ಬರುವ ಕರೆಯ ಅವಧಿಯನ್ನು 25 ಸೆಂಕೆಡುಗಳಿಗೆ ಸೀಮಿತಗೊಳಿಸಿತ್ತು. ಏರ್​ಟೆಲ್​ ಕಂಪೆನಿ ಕರೆಯ ಅವಧಿಯನ್ನು 45 ಸೆಕೆಂಡುಗಳಿಗೆ ಸೀಮಿತಗೊಳಿಸಿತ್ತು. ಆನಂತರ ಏರ್​ಟೆಲ್​ ಕೂಡ 25 ಸೆಕೆಂಡ್​ಗಳಿಗೆ ಕರೆಯ ಅವಧಿಯನ್ನು ಇಳಿಸಿತ್ತು.

ಈ ಹಿಂದೆ ಕರೆಯ ರಿಂಗಣಿಸುವ ಅವಧಿಯ ಬಗೆಗೆ ದೂರ ಸಂಪರ್ಕ ಇಲಾಖೆ ಎಲ್ಲಾ ಟೆಲಿಕಾಂ ಸಂಸ್ಥೆಗಳ ಬಳಿ ಅಭಿಪ್ರಾಯ ಕೇಳಿತ್ತು. ರಿಲಾಯನ್ಸ್​ ಜಿಯೋ ಸಂಸ್ಥೆ ಕರೆಯ ರಿಂಗಣಿಸುವ ಅವಧಿಯನ್ನು 20 ರಿಂದ 25 ಸೆಕೆಂಡುಗಳು ಸಾಕು ಎಂದು ಹೇಳಿದರೆ. ಏರ್​​ಟೆಲ್​ 45 ಸೆಕೆಂಡುಗಳಿರಬೇಕು ಎಂದು ಹೇಳಿತ್ತು. ಅಂತೆಯೇ ವೊಡಾಫೋನ್​ ಸಂಸ್ಥೆ 30 ಸೆಕೆಂಡುಗಳವರೆಗೆ ಇರಬೇಕು ಎಂದು ಹೇಳಿದೆ. ಇವೆಲ್ಲವನ್ನು ಪರಿಶೀಲನೆ ತೆಗೆದುಕೊಂಡ ದೂರ ಸಂಪರ್ಕ ಇಲಾಖೆ ಕರೆಯ ರಿಂಗಣಿಸುವ ಅವಧಿಯನ್ನು 30 ಸೆಕೆಂಡುಗಳಿಗೆ ಸಿಮೀತಗೊಳಿಸಿದೆ. ಅಂತೆಯೇ, ಲ್ಯಾಂಡ್​ಲೈನ್​ ರಿಂಗಣ ಅವಧಿಯನ್ನು 60 ಸೆಕೆಂಡುಗಳಿಗೆ ಸೀಮಿತಗೊಳಿಸಿದೆ.‘

ಇದನ್ನೂ ಓದಿ: ‘ಯಾವುದೇ ಕಾರಣಕ್ಕೂ ಪೈಲ್ವಾನ್-2 ಆಗೋಕೆ ಬಿಡೋಲ್ಲ’: ನಿರ್ಮಾಪಕರ ವಿರುದ್ಧ ಕಿಚ್ಚನ ಅಭಿಮಾನಿಗಳ ಆಕ್ರೋಶ

ರಿಂಗ್​ ಸಮಯ ಕಡಿತಕ್ಕೆ ಕಾರಣ?

ಒಂದು ಟೆಲಿಕಾಂ ಸಂಸ್ಥೆ ಬೇರೆ ನೆಟ್​ವರ್ಕ್​ ಸಂಸ್ಥೆಗೆ ಕರೆ ಮಾಡುವಾಗ ರಿಂಗ್​ ಅವಧಿ ಕಡಿಮೆ ಇದ್ದರೆ, ವ್ಯಕ್ತಿ ಕರೆ ಸ್ವೀಕರಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಪರಿಣಾಮ ಮರಳಿ ಕರೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದಾಗಿ ಮೊದಲನೇ ಕಂಪೆನಿ ಮೊಬೈಲ್​ಗೆ ಒಳಬರುವ ಕರೆಗಳ ಸಂಖ್ಯೆ ಹೆಚ್ಚಾಗುತ್ತದೆ.

First published:November 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...