ಸ್ಮಾರ್ಟ್‌ಫೋನ್‌ಗಳು (Smartphones) ಇಂದಿನ ದಿನದಲ್ಲಿ ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಒಂದು ಹೊತ್ತು ಊಟ ಇಲ್ಲದಿದ್ದರೂ ಒಮ್ಮೆ ಕುಳಿತುಕೊಳ್ಳುತ್ತಾರೆ. ಆದ್ರೆ ಸ್ಮಾರ್ಟ್ಫೋನ್ ಇಲ್ಲದೆ ಒಂದು ಕ್ಷಣವೂ ಇರಲಾರರು. ಈ ಮೊಬೈಲ್ ಎಂಬ ಸಿಕ್ಕ ಡಿವೈಸ್ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಸಹ ಇದೆ. ಆದ್ರೆ ಹೆಚ್ಚಿನ ಜನರು ತಮ್ಮ ಅನುಕೂಲದ ದೃಷ್ಟಿಯಿಂದ ಈ ಮೊಬೈಲ್ಗಳನ್ನು ಖರೀದಿಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾರ ಕೈ ನೋಡಿದ್ರು ಒಂದು ಮೊಬೈಲ್ ಇದ್ದೇ ಇದೆ. ಅದ್ರಲ್ಲೂ ಕೊರೊನಾ (Corona) ಬಂದಾಗಿನಿಂದ ಬಳಕೆದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಆನ್ಲೈನ್ ಕ್ಲಾಸ್ಗಾಗಿ (Online Class) ಖರೀದಿಸಿದ ಮೊಬೈಲ್ ಇಂದು ಗೇಮ್ ಆಡಲು ಬಳಕೆಯಾಗುತ್ತಿದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಸೋಮಾರಿಗಳಾಗಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತಿದೆ.
ಹೌದು, ಮೊಬೈಲ್ ಬಳಕೆಯು ಇತ್ತೀಚೆಗೆ ಹೆಚ್ಚಾಗಿದೆ. ಆದರೆ ಇಲ್ಲೊಂದು ಹಳ್ಳಿ ಈ ಡಿಜಿಟಲ್ ಸಾಧನಗಳ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ವಿಶೇಷವಾದ ನಿಯಮವೊಂದನ್ನು ಜಾರಿಗೆ ತಂದಿದೆ. ಈ ಗ್ರಾಮದಲ್ಲಿ ಒಮ್ಮೆ ಸೈರನ್ ಮೊಳಗಿದರೆ ಸಾಕು ಎಲ್ಲಾ ಟಿವಿಗಳು, ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸ್ವಿಚ್ ಆಫ್. ಇದರ ಹಿಂದಿದೆ ಒಂದು ಬಲವಾದ ಕಾರಣ.
ಸ್ಮಾರ್ಟ್‌ಫೋನ್‌ಗಳು ಒಂದು ವ್ಯಸನಿಯಾಗಿಬಿಟ್ಟಿದೆ
ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್‌ಗಳು ಒಂದು ರೀತಿಯಲ್ಲಿ ವ್ಯಸನಿಯಾಗಿಬಿಟ್ಟಿದೆ. ಕಾರಣ ಎಲ್ಲಿ ಹೋದರು ಇಂದು ಸ್ಮಾರ್ಟ್‌ಫೋನ್‌ಗಳು ಬೇಕೆ ಬೇಕು. ಸ್ಮಾರ್ಟ್ಫೋನ್ ಇಲ್ಲದೆ ಜೀವನ ನಡೆಸಲು ಆಗೋದೇ ಇಲ್ಲ ಎನ್ನುವವರು ಎಷ್ಟೋ ಜನರಿದ್ದಾರೆ. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಜನರು ತಮ್ಮ ಸಂಬಂಧಿಕರನ್ನು ಸಹ ಮರೆಯುತ್ತಿದ್ದಾರೆ. ಮೊಬೈಲ್ ಬಿಟ್ಟರೆ ಬೇರೆ ಯಾವುದೂ ಈಗ ಜನರ ಮನಸಿನಲ್ಲಿಲ್ಲ. ಇದೂ ಕೂಡ ಒಂದು ರೀತಿಯ ವ್ಯಸನವಾಗಿದ್ದು, ಇದನ್ನು ಹೋಗಲಾಡಿಸಲು ಪ್ರಪಂಚದಾದ್ಯಂತ ಅನೇಕ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಪ್ರಾರಂಭವಾಗಿದೆ. ಭಾರತದಲ್ಲಿಯೂ ಸಹ, ಈ ಮೊಬೈಲ್, ಲ್ಯಾಪ್ಟಾಪ್ನ ಚಟಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಯಲ್ಲಿರುವ 3 ಸಾವಿರದೊಳಗಿನ ಬೆಸ್ಟ್ ಸ್ಮಾರ್ಟ್ವಾಚ್ಗಳಿವು! ಹೀಗಿದೆ ನೋಡಿ ಫೀಚರ್ಸ್
ಡಿಜಿಟಲ್ ಸಾಧನಗಳ ಬಳಕೆ ದೂರ ಮಾಡಲು ಹೊಸ ಮಾರ್ಗ
ಡಿಜಿಟಲ್ ಸಾಧನಗಳ ಬಳಕೆ ಹೆಚ್ಚಾದಂತೆ, ಇದರಿಂದ ಸಮಸ್ಯೆಗಳಾಗುವುದನ್ನು ತಪ್ಪಿಸಲು ಕೆಲವೆಡೆ ಉತ್ತಮ ಕೆಲಸವೂ ಆಗುತ್ತಿದೆ. ಇಂತಹ ಕೆಲಸ ಮಾಡುವಂತಹ ಒಂದು ವಿಶೇಷ ಗ್ರಾಮವಿದೆ. ಅದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿದೆ. ಈ ಗ್ರಾಮದ ಹೆಸರು ಮೋಹಿತ್ಯಾಂಚೆ ವಡ್ಡಗಾಂವ್.
ಈ ಹಳ್ಳಿಯ ಜನರು ಒಟ್ಟಾಗಿ ಸೇರಿಕೊಂಡು ಡಿಜಿಟಲ್ ಚಟದಿಂದ ಹೊರಬರಲು ಒಂದು ಅದ್ಭುತ ನಿಯಮವನ್ನು ಪ್ರಾರಂಭಿಸಿದ್ದಾರೆ. ಅದು ಹೇಗೆಂದರೆ ಈ ಗ್ರಾಮದ ಜನರು ಪ್ರತಿದಿನ ಸಂಜೆ 1 ಗಂಟೆಗೂ ಹೆಚ್ಚು ಕಾಲ ದಿಜಿಟಲ್ ಸಾಧನಗಳನ್ನು ಬಳಕೆಯೇ ಮಾಡುವುದಿಲ್ಲ. ಬದಲಿಗೆ ಕುಟುಂಬದವರ ಜೊತೆ, ಅಕ್ಕಪಕ್ಕದವರ ಜೊತೆ ಮಾತನಾಡುತ್ತಾರೆ. ಇದನ್ನು ‘ಡಿಜಿಟಲ್ ಡಿಟಾಕ್ಸ್‘ ಎಂದು ಕರೆಯುತ್ತಾರೆ.
ಡಿಜಿಟಲ್ ಡಿಟಾಕ್ಸ್ ಎಂದರೇನು?
ಡಿಜಿಟಲ್ ಡಿಟಾಕ್ಸ್ ಎಂದರೆ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಗದಿತ ಅವಧಿಯವರೆಗೆ ಬಳಸದೇ ಇರುವುದು. ಸರಳವಾಗಿ ಹೇಳುವುದಾದರೆ, ಡಿಜಿಟಲ್ ಡಿಟಾಕ್ಸ್ ಎನ್ನುವುದು ವ್ಯಕ್ತಿಯು ಡಿಜಿಟಲ್ ಸಾಧನಗಳಾದ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಸ್ವತಃ ಬಳಸುವುದನ್ನು ತಡೆಯುವ ಅವಧಿಯಾಗಿದೆ.
ಡಿಜಿಟಲ್ ಸಾಧನವು 1.5 ಗಂಟೆಗಳ ಕಾಲ ಸ್ವಿಚ್ ಆಫ್ ಆಗಿರುತ್ತದೆ
ಮೋಹಿತಂಚೆ ವಡ್ಡಗಾಂವ್ ಗ್ರಾಮದ ಜನರು ಪ್ರತಿದಿನ ಸಂಜೆ 7 ಗಂಟೆಗೆ ಸೈರನ್ ರಿಂಗ್ ಆಗಲು ಕಾಯುತ್ತಿರುತ್ತಾರೆ. ನಂತರ ಸೈರನ್ ಮೊಳಗಿದ ತಕ್ಷಣ ಇಡೀ ಗ್ರಾಮದ ಜನರು ಮೊಬೈಲ್, ಟ್ಯಾಬ್ಲೆಟ್, ಟಿವಿ, ಲ್ಯಾಪ್‌ಟಾಪ್‌ನಂತಹ ಡಿಜಿಟಲ್ ಗ್ಯಾಜೆಟ್‌ಗಳನ್ನು ಒಂದೂವರೆ ಗಂಟೆಗಳ ಕಾಲ ಸ್ವಿಚ್ ಆಫ್ ಮಾಡುತ್ತಾರೆ. ಇದಾದ ನಂತರ ಗ್ರಾಮದ ಕೆಲವರು ಮನೆ ಮನೆಗೆ ತೆರಳಿ ಫೋನ್, ಟಿವಿ ಅಥವಾ ಡಿಜಿಟಲ್ ಸಾಧನ ಇಟ್ಟುಕೊಂಡಿದ್ದಾರೆಯೇ ಎಂದು ಪರಿಶೀಲಿಸುತ್ತಾರೆ.
ಉದ್ದೇಶ
ಮೋಹಿತಾಂಚೆ ವಡ್ಡಗಾಂವ್ ಅವರ ಈ ಅಭಿಯಾನದ ಉದ್ದೇಶ ಡಿಜಿಟಲ್ ಪ್ರಪಂಚದಿಂದ ವಿರಾಮ ತೆಗೆದುಕೊಂಡು ಪರಸ್ಪರ ಸಂಬಂಧಗಳಿಗೆ ಹೆಚ್ಚಿನ ಸಮಯವನ್ನು ನೀಡುವ ಮೂಲಕ ಮಾನವ ಸಂಬಂಧಗಳನ್ನು ಬಲಪಡಿಸುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ