ಸ್ಮಾರ್ಟ್ಫೋನ್ಗಳು (Smartphones) ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಸ್ಮಾರ್ಟ್ಫೋನ್ಗಳ ಬಳಕೆ ಹೆಚ್ಚಾದಂತೆ ಇಂಟರ್ನೆಟ್ (Internet) ಸಹ ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಆದರೆ ಇತ್ತೀಚೆಗಂತೂ ಇಂಟರ್ನೆಟ್ ಇಲ್ಲದೇ ಯಾವುದೇ ಕೆಲಸವನ್ನೂ ಮಾಡಲುಸಾಧ್ಯವಿಲ್ಲವೆಂಬಂತಾಗಿದೆ. ಇನ್ನು ಈ ಇಂಟರ್ನೆಟ್ ಮೂಲಕ ಯಾವುದೇ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಿಮುಗಿಸಬಹುದಾಗಿದೆ. ಇನ್ನು ಟೆಕ್ನಾಲಜಿ (Technology) ಅಪ್ಡೇಟ್ ಆದಂತೆ ಬೆಲೆಗಳು ಸಹ ಜಾಸ್ತಿಯಾಗೋದು ಸಾಮಾನ್ಯ. ಆದರೆ ಕೆಲದಿನಗಳ ಹಿಂದೆ ಕೆಲವೊಂದು ಟೆಲಿಕಾಂ ಕಂಪೆನಿಗಳು ತನ್ನ ಇಂಟರ್ನೆಟ್ ಬೆಲೆಯನ್ನು ಹೆಚ್ಚಿಸಿತ್ತು. ಈ ಮೂಲಕ ಗ್ರಾಹಕರಲ್ಲಿಯೂ ಗಾಬರಿ ಮೂಡಿಸಿತ್ತು. ಆದರೆ ಇಷ್ಟೆಲ್ಲಾ ಬೆಲೆ ಏರಿಕೆ ಮಾಡಿದ್ರು ಇನ್ನೂ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆ ನೀಡುವ ದೇಶಗಳಿವೆ. ಈ ಸಾಲಿನಲ್ಲಿ ಭಾರತ (India) ಮೂರನೇ ಸ್ಥಾನದಲ್ಲಿದೆ.
ಇತ್ತೀಚೆಗಷ್ಟೇ ರಿಸರ್ಚ್ ಕಂಪೆನಿಯೊಂದು ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆಯನ್ನು ನೀಡುವ ದೇಶಗಳ ಪಟ್ಟಿಯನ್ನು ವರದಿ ಮಾಡಿತ್ತು. ಈ ಪಟ್ಟಿಯಲ್ಲಿ ಇತರೆ ದೇಶಗಳನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನದಲ್ಲಿದೆ. ಹಾಗಿದ್ರೆ ಅಗ್ರಸ್ಥಾನದಲ್ಲಿರುವ ದೇಶ ಯಾವುದು? ಬೆಲೆ ಎಷ್ಟು ಎಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಭಾರತ ಮೂರನೇ ಸ್ಥಾನ
ವಿಶ್ವದಾದ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುವ ಹಲವಾರು ದೇಶಗಳಿವೆ. ಇವುಗಳನ್ನೆಲ್ಲಾ ಹಿಂದಿಕ್ಕಿ ಈ ಸಾಲಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎನ್ನುವುದೇ ಹೆಮ್ಮೆಯ ವಿಷಯ. ಇತ್ತೀಚೆಗಷ್ಟೆ Cable.co.uk ಸಂಸ್ಥೆ ಇದರ ಬಗ್ಗೆ ಸಮೀಕ್ಷೆ ನಡೆಸಿದ್ದು 233 ದೇಶಗಳಲ್ಲಿ 5,292 ಮೊಬೈಲ್ ಡೇಟಾ ಯೋಜನೆಗಳಿಂದ ಡೇಟಾವನ್ನು ವಿಶ್ಲೇಷಿಸಿದೆ. ಇದಲ್ಲದೆ ಇದರಲ್ಲಿ 1ಜಿಬಿ ಮೊಬೈಲ್ ಡೇಟಾದ ಬೆಲೆಯನ್ನು ಆಧರಿಸಿ ಈ ಮಾಹಿತಿಯನ್ನು ಸಂಗ್ರಹಿಸಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಎಂಟ್ರಿ ನೀಡಿದೆ ಹೊಸ ಎಲೆಕ್ಟ್ರಿಕ್ ಬೈಕ್! 50 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ
ಇನ್ನು ಈ ಸಮೀಕ್ಷೆಯ ಪ್ರಕಾರ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದವರು ಇಂಟರ್ನೆಟ್ ಪಡೆಯಲು ಭಾರೀ ಕಡಿಮೆ ವೆಚ್ಚವನ್ನು ಮಾಡುತ್ತಾರೆ ಎಂದು ಹೇಳಿದೆ. ಅಂದರೆ ಇಲ್ಲಿ 1ಜಿಬಿ ಡೇಟಾದ ಬೆಲೆ $0.17 (ಅಂದಾಜು 13.88 ರೂಪಾಯಿ). ಇನ್ನು ಟೆಲಿಕಾಂ ಕಂಪೆನಿಗಳಲ್ಲಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆಯನ್ನು ನೀಡುವ ಮೂಲಕ ನಂಬರ್ ಒನ್ ಎಂದು ಗುರುತಿಸಿಕೊಂಡಿದೆ.
ನಂಬರ್ ಒನ್ ಸ್ಥಾನದಲ್ಲಿ ಯಾವ ದೇಶವಿದೆ?
ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಇಂಟರ್ನೆಟ್ ಸೇವೆ ನೀಡುತ್ತಿರುವ ದೇಶವೆಂದು ಇಸ್ರೇಲ್ ಗುರುತಿಸಿಕೊಂಡಿದೆ. ಇದೊಂದು ಚಿಕ್ಕ ದೇಶವಾಗಿದ್ದು ಟೆಕ್ನಾಲಜಿಯನ್ನು ಅಭವೃದ್ಧಿ ಪಡಿಸುವಲ್ಲಿ ಭಾರೀ ಮುಂಚೂಣಿಯಲ್ಲಿದೆ. ಇನ್ನು ವರದಿಗಳ ಪ್ರಕಾರ ಇಸ್ರೇಲ್ನಲ್ಲಿ 1ಜಿಬಿ ಡೇಟಾದ ಬೆಲೆ ಕೇವಲ $0.04 ಅಂದರೆ ಭಾರತದಲ್ಲಿ ಇದರ ಮೊತ್ತ 3.27 ರೂಪಾಯಿ. ಇನ್ನು ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುವಲ್ಲಿ ಎರಡನೇ ಸ್ಥಾನದಲ್ಲಿರುವುದು ಇಟಲಿ ದೇಶ. ಇಟಲಿಯಲ್ಲಿ, ಬಳಕೆದಾರರು 1ಜಿಬಿ ಡೇಟಾಕ್ಕೆ $0.12 ಪಾವತಿ ಮಾಡುತ್ತಾರೆ. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 9.80 ರೂಪಾಯಿಗಳನ್ನು ಪಾವತಿಸಬೇಕು.
ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ
able.co.uk ವರದಿಯ ಪ್ರಕಾರ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಐದನೇ ಸ್ಥಾನದಲ್ಲಿದೆ. ಇನ್ನು ಈ ದೇಶದಲ್ಲಿ 1ಜಿಬಿ ಮೊಬೈಲ್ ಡೇಟಾದ ಬೆಲೆ $0.36 ಅಂದರೆ ಇದರ ಬೆಲೆ ಭಾರತದಲ್ಲಿ ಸುಮಾರು 29.40 ರೂಪಾಯಿ. ಇತರೆ ಎಲ್ಲ ದೇಶಗಳಿಗೆ ಹೋಲಿಸಿದರೆ ಸೇಂಟ್ ಹೆಲೆನಾ ಅತ್ಯಂತ ದುಬಾರಿ ಇಂಟರ್ನೆಟ್ ಬೆಲೆ ಹೊಂದಿರುವ ದೇಶವಾಗಿದೆ. ಇಲ್ಲಿ 1GB ಮೊಬೈಲ್ ಡೇಟಾ ಬೆಲೆ $ 41.06, ಅಂದರೆ ಭಾರತದಲ್ಲಿ ಸುಮಾರು 3,350 ರೂಪಾಯಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ