Driving Rules: ಈ ದೇಶದಲ್ಲಿ ವಾಹನದ ಇಂಧನ ಖಾಲಿ ಆಗಿ ರಸ್ತೆಯಲ್ಲೇ ನಿಂತರೆ ದಂಡ ಕಟ್ಟಬೇಕಾಗುತ್ತದೆ!

Empty Fuel Tank: ವಾಹನವನ್ನು ರಸ್ತೆಗಿಳಿಸುವ ಮೊದಲು ಅದರಲ್ಲಿ ಸಾಕಷ್ಟು ಇಂಧನ ಇದೆಯೇ ಎಂದು ಪರಿಶೀಲನೆ ಮಾಡಿಕೊಳ್ಳುವುದು, ಇಲ್ಲವಾದಲ್ಲಿ ಹತ್ತಿರದ ಪಂಪ್‍ನಲ್ಲಿ ಅಗತ್ಯ ಇರುವಷ್ಟು ಇಂಧನ ತುಂಬಿಸಿಕೊಳ್ಳುವು ಸಾಮಾನ್ಯ ಸಂಗತಿ. ಏಕೆಂದರೆ ವಾಹನ ಇಂಧನದ ಕೊರತೆಯಿಂದಾಗಿ ಮಧ್ಯ ದಾರಿಯಲ್ಲಿ ಕೈಕೊಟ್ಟರೆ ಫಜೀತಿ ಆಗುವುದು ಖಂಡಿತಾ, ಜೊತೆಗೆ ರಸ್ತೆಯಲ್ಲಿ ಸಾಗುವ ಇತರ ವಾಹನ ಸವಾರರಿಗೂ ನಮ್ಮಿಂದ ತೊಂದರೆ ಆಗಬಹುದು.

ಪ್ರಾತಿನಿಧಿಕ ಚಿತ್ರ (Photo: Google)

ಪ್ರಾತಿನಿಧಿಕ ಚಿತ್ರ (Photo: Google)

 • Share this:
  England Driving Law: ಇಂಗ್ಲೆಂಡ್‌ನಲ್ಲಿ ಕಡಿಮೆ ಇಂಧನ ಇಟ್ಟುಕೊಂಡು ವಾಹನ ಚಾಲನೆ ಮಾಡುವುದರ ವಿರುದ್ಧ ಕಾನೂನನ್ನು ಜಾರಿಗೆ ತರುವ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಕಾನೂನು ಜಾರಿಗೆ ಬಂದರೆ, ಕಡಿಮೆ ಇಂಧನ ಇಟ್ಟುಕೊಂಡು ವಾಹನ ಚಾಲನೆ ಮಾಡುವುವವರು ಭಾರೀ ದಂಡವನ್ನು ತೆರಬೇಕಾಗಬಹುದು.

  ವಾಹನವನ್ನು ರಸ್ತೆಗಿಳಿಸುವ ಮೊದಲು ಅದರಲ್ಲಿ ಸಾಕಷ್ಟು ಇಂಧನ ಇದೆಯೇ ಎಂದು ಪರಿಶೀಲನೆ ಮಾಡಿಕೊಳ್ಳುವುದು, ಇಲ್ಲವಾದಲ್ಲಿ ಹತ್ತಿರದ ಪಂಪ್‍ನಲ್ಲಿ ಅಗತ್ಯ ಇರುವಷ್ಟು ಇಂಧನ ತುಂಬಿಸಿಕೊಳ್ಳುವು ಸಾಮಾನ್ಯ ಸಂಗತಿ. ಏಕೆಂದರೆ ವಾಹನ ಇಂಧನದ ಕೊರತೆಯಿಂದಾಗಿ ಮಧ್ಯ ದಾರಿಯಲ್ಲಿ ಕೈಕೊಟ್ಟರೆ ಫಜೀತಿ ಆಗುವುದು ಖಂಡಿತಾ, ಜೊತೆಗೆ ರಸ್ತೆಯಲ್ಲಿ ಸಾಗುವ ಇತರ ವಾಹನ ಸವಾರರಿಗೂ ನಮ್ಮಿಂದ ತೊಂದರೆ ಆಗಬಹುದು. ವಾಹನದಲ್ಲಿ ಇಂಧನ ಕಡಿಮೆ ಆಗುತ್ತಿದ್ದಂತೆ, ಇನ್ನೂ ಒಂದಿಷ್ಟು ಕಿಲೋ ಮೀಟರ್ ಚಲಿಸಲು ಸಾಧ್ಯವಿದ್ದರೂ ಸಹ ಎಚ್ಚರಿಕೆಯ ಸಂಕೇತ ಆನ್ ಆಗುವುದನ್ನು ನಾವು ಕಾಣುತ್ತೇವೆ.

  ಸಾಮಾನ್ಯವಾಗಿ ಎಚ್ಚರಿಕೆಯ ಸಂಕೇತ ಬಂದ ನಂತರವೂ ವಾರನ ಇನ್ನೂ 30 ಕಿಲೋ ಮೀಟರ್‍ನಷ್ಟು ದೂರ ಚಲಿಸಬಲ್ಲದು, ಆ ದೂರ ಕಾರಿನ ಮಾದರಿಯನ್ನು ಅವಂಬಿಸಿರುತ್ತದೆ. ಆದರೆ ನಮ್ಮ ಲೆಕ್ಕಾಚಾರ ತಪ್ಪಾಗಿ, ಕಾರು ಇಂಧನ ಖಾಲಿ ಮಾಡಿಕೊಂಡು ಒಣಗಿ ನಿಂತರೆ? ಯೂಕೆಯಲ್ಲಿ ಈ ಸಂಗತಿಯನ್ನು ನಿಖರವಾಗಿ ಪರಿಗಣಿಸಲಾಗುತ್ತಿದ್ದು, ಶೀಘ್ರದಲ್ಲೇ ಇದರ ಕುರಿತ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.

  ಯಾವುದಾದರೂ ವಾಹನದಲ್ಲಿ ಇಂಧನ ಖಾಲಿ ಆದರೆ, ಅದು ವಾಹನ ದಟ್ಟಣೆ ಇರುವ ರಸ್ತೆಯ ಮಧ್ಯೆ ನಿಂತು ಬಿಡಬಹುದು. ಅದರಿಂದ ಇತರ ವಾಹನ ಚಾಲಕರಿಗೆ ಕಿರಿಕಿರಿ ಆಗಬಹುದು ಅಥವಾ ಇತರ ವಾಹನಗಳು ಮುಕ್ತವಾಗಿ ಚಲಿಸಲು ತೊಂದರೆ ಆಗಬಹುದು. ಹಾಗಾಗಿ ಕಡಿಮೆ ಇಂಧನ ಇಟ್ಟುಕೊಂಡು ವಾಹನ ಚಾಲನೆ ಮಾಡುವುದರ ವಿರುದ್ಧ ಕಾನೂನನ್ನು ಜಾರಿಗೆ ತರುವುದನ್ನು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಕಾನೂನು ಜಾರಿಗೆ ಬಂದರೆ, ಕಡಿಮೆ ಇಂಧನ ಇಟ್ಟುಕೊಂಡು ವಾಹನ ಚಾಲನೆ ಮಾಡುವುವವರು ಭಾರೀ ದಂಡವನ್ನು ತೆರಬೇಕಾಗಬಹುದು ಎಂದು ಯುಕೆ ಮಿರರ್ ಅಭಿಪ್ರಾಯಪಟ್ಟಿದೆ.

  ಈ ಕಾನೂನನ್ನು ಜಾರಿಗೆ ತರುವ ಪ್ರಸ್ತಾಪದಲ್ಲಿ, ಕಡಿಮೆ ಇಂಧನದ ಸಂಕೇತವನ್ನು ನೀಡುತ್ತಾ ಚಲಿಸುತ್ತಿರುವ ಕಾರಿನ ಮಾಲೀಕರಿಗೆ ದಂಡ ಹಾಕುವ ಉದ್ದೇಶ ಇಲ್ಲ, ಆದರೆ ಕಡಿಮೆ ಇಂಧನದ ಕಾರಣ ಕಾರು ನಿಂತು ಹೋದರೆ ಚಾಲಕನ ಮೇಲೆ ಭಾರೀ ದಂಡ ಖಚಿತ. ಅದು ಸುಮಾರು 100 ಪೌಂಡ್‍ಗಳ ದಂಡವಾಗಿರಬಹುದು ಮತ್ತು ಚಾಲಕನ ವಾಹನ ಚಾಲನಾ ಪರವಾನಗಿಯ ಅರ್ಹತೆಯನ್ನು ಪ್ರಶ್ನಿಸುವುದಕ್ಕೂ ಕಾರಣ ಆಗಬಹುದು.

  ಇಂಧನ ಖಾಲಿಯಾಗಿ ಸ್ಥಗಿತಗೊಂಡ ವಾಹನವು ಘರ್ಷಣೆಗೆ ಕಾರಣವಾದರೆ ದಂಡದ ಪ್ರಮಾಣವು ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕಡಿಮೆ ಇಂಧನ ಹೊಂದಿರುವ ವಾಹನವನ್ನು ಚಾಲನೆ ಮಾಡುವುದು ಅಪಾಯಕಾರಿ ಲಕ್ಷಣ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ ಮತ್ತು ಅದು ವಾಹನಕ್ಕೂ ಕೂಡ ಹಾನಿಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಪ್ರಸ್ತುತ ಯುಕೆ ಯಲ್ಲಿ ಇಂಧನ ಪೂರೈಕೆಯಲ್ಲಿ ಭಾರೀ ಕೊರತೆ ಉಂಟಾಗಿರುವ ಕಾರಣದಿಂದ , ಅನೇಕ ವಾಹನ ಚಾಲಕರು ವಾಹನಕ್ಕೆ ಇಂಧನ ಮರುಪೂರೈಕೆ ಮಾಡುವುದನ್ನು ವಿಳಂಬ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

  Read Also: No Shave: ಗಡ್ಡ ತೆಗೆಯುವಂತಿಲ್ಲ, ಟ್ರಿಮ್​ ಮಾಡುವಂತಿಲ್ಲ…ಕ್ಷೌರ ಮಾಡಿಸಲೂ ನಿಯಮ ಹೇರಿದ ತಾಲಿಬಾನ್​ಗಳು

  ಸಾಮಾನ್ಯವಾಗಿ , ಇಂಧನ ಪಂಪ್‍ಗಳಿಗೆ ಇಂಧನ ಪೂರೈಕೆ ಮಾಡುವ ಭಾರೀ ಗಾತ್ರದ ವಾಹನಗಳ ಚಾಲಕರ ಕೊರತೆ ಇರುವುದರಿಂದ, ಇಂಧನ ಪೂರೈಕೆ ಸ್ಟೇಷನ್‍ಗಳಲ್ಲಿ ಇಂಧನದ ಕೊರತೆ ಉಂಟಾಗಿದ್ದು, ಯೂಕೆಯ ಮೋಟಾರು ಸವಾರರು ಅವುಗಳ ಮುಂದೆ ಉದ್ದನೆಯ ಸರತಿಯ ಸಾಲಿನಲ್ಲಿ ನಿಂತು ಇಂಧನ ಖರೀದಿಸಬೇಕಾದ ಸ್ಥಿತಿಯಲ್ಲಿದ್ದಾರೆ.
  First published: