• Home
 • »
 • News
 • »
 • tech
 • »
 • Tech Tips: ವಿಮಾನದಲ್ಲಿ ಮೊಬೈಲ್ ಅನ್ನು ಏರ್​ಪ್ಲೇನ್​ ಮೋಡ್​ನಲ್ಲಿಟ್ಟು ಸಂಚರಿಸಬೇಕು! ಕಾರಣವೇನು ಗೊತ್ತಾ?

Tech Tips: ವಿಮಾನದಲ್ಲಿ ಮೊಬೈಲ್ ಅನ್ನು ಏರ್​ಪ್ಲೇನ್​ ಮೋಡ್​ನಲ್ಲಿಟ್ಟು ಸಂಚರಿಸಬೇಕು! ಕಾರಣವೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏರ್​​ಪ್ಲೇನ್​ ಮೋಡ್​ ಅನ್ನು ಮುಖ್ಯವಾಗಿ ವಿಮಾನಯಾನ ಮಾಡುವಾಗ ಬಳಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಇದರ ಕಾರಣವೇನು ಎಂಬುವುದು ಗೊತ್ತಿಲ್ಲ.

 • Share this:

  ಸ್ಮಾರ್ಟ್​​ಫೋನ್ (Smartphones)​ ಬಳಕೆದಾರರಿಗೆ ತಮ್ಮ ಕಂಪೆನಿಗಳು ಸಾಧನಗಳಲ್ಲಿ ಬಹಳಷ್ಟು ಸೌಲಭ್ಯವನ್ನು ನೀಡುತ್ತದೆ. ಅದೇ ರೀತಿ ಬಳಕೆದಾರರು ಕೂಡ ಅವರ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್​ಫೋನ್​ಗಳನ್ನು ಬಳಸುತ್ತಾರೆ. ಇತ್ತೀಚೆಗೆ ಸ್ಮಾರ್ಟ್​​ಫೋನ್​ಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ ಅಂತಾನೇ ಹೇಳ್ಬಹುದು. ಸ್ಮಾರ್ಟ್​ಫೋನ್​ ಕಂಪೆನಿಗಳು ಸಹ ಬಳಕೆದಾರರಿಗೆ ಅನುಕೂಲವಾಗುವಂತೆ ತಮ್ಮ ಸಾಧನಗಳನ್ನು ವಿಶೇಷ ಫೀಚರ್ಸ್​ಗಳೊಂದಿಗೆ ಬಿಡುಗಡೆ ಮಾಡುತ್ತದೆ. ಸ್ಮಾರ್ಟ್​​ಫೋನ್​ನಲ್ಲಿರುವಂತ ಪ್ರಮುಖ ಸೌಲಭ್ಯಗಳಲ್ಲಿ ಏರ್​ಪ್ಲೇನ್ (Airplane Mode)​ ಕೂಡ ಒಂದು. ಈ ಫೀಚರ್​ ಸಾಕಷ್ಟು ರೀತಿಯಲ್ಲಿ ಬಳಕೆದಾರರಿಗೆ ಸಹಾಯಕವಾಗುತ್ತದೆ. ವೇಗವಾಗಿ ಚಾರ್ಜ್ (Speed Charge)​ ಆಗಬೇಕಾದರೆ, ಕಾಲ್​ ಅಥವಾ ಇನ್ನಿತರ ಚಟುವಟಿಕೆಗಳನ್ನು ಬಳಸದೇ ಇರುವಂತೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಹೇಳಬಹುದು.


  ಏರ್​​ಪ್ಲೇನ್​ ಮೋಡ್​ ಅನ್ನು ಮೂಖ್ಯವಾಗಿ ವಿಮಾನಯಾನ ಮಾಡುವಾಗಲೂ ಬಳಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಇದರ ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.


  ವಿಮಾನದಲ್ಲಿ ಏರ್​​ಪ್ಲೇನ್​ ಮೋಡ್​ ಯಾಕೆ ಸೆಲೆಕ್ಟ್ ಮಾಡ್ಬೇಕು?


  ವಿಮಾನದಲ್ಲಿ ಸಂಚರಿಸುವಾಗ ನಿಮ್ಮ ಎಲೆಕ್ಟ್ರಾನಿಕ್ಸ್​ ಡಿವೈಸ್​ಗಳನ್ನು ಬಳಕೆ ಮಾಡಿದರೆ ನಿಮ್ಮ ಸಾಧನಗಳಿಂದ ಬರುವಂತಹ ಸಿಗ್ನಲ್​ಗಳು ವಿಮಾನದ ಸಂವಹನ ವ್ಯವಸ್ಥೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಸೆಲ್ಯುಲಾರ್​​ ಕನೆಕ್ಟಿಂಗ್ ಫೀಚರ್​ ಅನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್​ ಡಿವೈಸ್​ಗಳು ರೇಡಿಯೋ ವೇವ್ಸ್​ಗಳನ್ನು ಮತ್ತು ಇತರ ಕನೆಕ್ಟಿಂಗ್ ಫೀಚರ್​ಗಳನ್ನು ಸಂಚಾರದಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ಇದರಿಂದ ವಿಮಾನದ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತದೆ.
  ಇದಲ್ಲದೆ ಪೈಲಟ್​ಗಳು ತಮ್ಮ ನಿಯಂತ್ರಣವನ್ನು ಕಳೆದುಕೊಂಡು ಲ್ಯಾಂಡಿಂಗ್ ಮಾಡುವಾಗ ಅಥವಾ ಟೇಕ್​ ಆಫ್​ ಆಗುವ ಸಂದರ್ಭದಲ್ಲಿ ದೊಡ್ಡ ಮಟ್ಟಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಈ ಇತರ ಡಿವೈಸ್​ಗಳು ಚಾಲ್ತಿಯಲ್ಲಿದ್ದರೆ ವಿಮಾನದಲ್ಲಿರುವ ಪೈಲಟ್​ಗಳ ಏರ್​ ಟ್ರಾಫಿಕ್​ ಕಂಟ್ರೋಲ್​ ಸಂಪರ್ಕ ಕೂಡ ಕಡಿತವಾಗುತ್ತದೆ.


  ಒಂದು ದಿನದಲ್ಲಿ ಲಕ್ಷಾಂತರ ಜನರು ವಿಮಾನದಲ್ಲಿ ಸಂಚರಿಸುತ್ತಾರೆ. ಇ ಸಂದರ್ಭದಲ್ಲಿ ನೆಟ್​ವರ್ಕ್​ಗಳ ಮೇಲೆ ಭಾರೀ ಅಡಚಣೆಗಳು ಬರುತ್ತದೆ. ಇದರಿಂದ ವಿಮಾನಯಾನಕ್ಕೂ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿಯೇ ವಿಮಾನದಲ್ಲಿ ಸಂಚರಿಸುವಾಗ ಮೊಬೈಲ್​ ಅನ್ನು ಏರ್​​ಪ್ಲೇನ್​ ಮೋಡ್​ ಅಲ್ಲಿ ಇರಿಸಲು ಹೇಳುತ್ತಾರೆ.


  ಸಾಂಕೇತಿಕ ಚಿತ್ರ


  ಏರ್​ಪ್ಲೇನ್​ ಮೋಡ್ ಎಂದರೇನು?


  ಪ್ರತಿಯೊಬ್ಬರ ಫೋನ್​ನಲ್ಲಿ, ಲ್ಯಾಪ್​​ಟಾಪ್​, ಟ್ಯಾಬ್​​ಗಳಲ್ಲಿ ಈ ಏರ್​​ಪ್ಲೇನ್​ ಮೋಡ್​ ಆಯ್ಕೆಯಿರುತ್ತದೆ. ಇದು ಏರ್​​ಪ್ಲೇನ್​ ಐಕಾನ್​ ಅನ್ನೇ ಹೊಂದಿರುತ್ತದೆ. ಇದನ್ನು ಸೆಟ್ಟಿಂಗ್ಸ್​ಗೆ ಹೋಗಿ ಆನ್​ ಮಾಡಿದ್ರೆ ನಿಮ್ಮ ಫೋನ್​ಗೆ ಬರುವಂತಹ ಕಾಲ್​, ಮೆಸೇಜ್​, ನೆಟ್​ವರ್ಕ್​ ಇವುಗಳನ್ನೆಲ್ಲಾ ನಿಷ್ಕ್ರಿಯಗೊಳಿಸುತ್ತದೆ. ನಂತರ ಮತ್ತೆ ಸಕ್ರಿಯ ಮಾಡಬೇಕೆಂದರೆ ಅದೇ ಐಕಾನ್​ ಮೇಲೆ ಟ್ಯಾಪ್​ ಮಾಡಬೇಕು.


  ಏರ್​​ಪ್ಲೇನ್​ ಮೋಡ್​ನಿಂದೇನಾಗುತ್ತದೆ?


  ನೀವು ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿದಾಗ, ನಿಮ್ಮ ಡಿವೈಸ್‌ ಸೆಲ್ಯುಲಾರ್ ನೆಟ್​​ವರ್ಕ್​ಗಳನ್ನು ನಿಷ್ಕ್ರಿಯವಾಗುವಂತೆ ಮಾಡುತ್ತದೆ. ಪರಿಣಾಮ ನಿಮ್ಮ ಸೆಲ್ಯುಲಾರ್ ನೆಟ್‌ವರ್ಕ್‌ನಿಂದ ನೀವು ಕಾಲ್​ಗಳನ್ನು ಅಥವಾ ಮೆಸೇಜ್​ಗಳನ್ನು ಸ್ವೀಕರಿಸಲು, ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಿಮಗೆ ವೈಫೈ ಆಯ್ಕೆಯನ್ನು ತೋರಿಸುತ್ತದೆ. ಈ ಮೂಲಕ ನಿಮ್ಮ ಬಳಿ ವೈಫೈ ಸೌಲಭ್ಯ ಇದ್ದರೆ ನೀವು ವೈಫೈ ಮೂಲಕ ಮೆಸೇಜ್​ಗಳನ್ನು ಮಾಡಬಹುದಾಗಿದೆ.


  ಏರ್​ಪ್ಲೇನ್​ ಮೋಡ್​ನಿಂದ ಏನು ಲಾಭ?


  ಇದರೊಂದಿಗೆ ಸಾಮಾನ್ಯವಾಗಿ ದಿನನಿತ್ಯವೂ ಹಲವಾರು ಜನರು ಮನೆಯಲ್ಲಿರುವಾಗಲೂ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ನಿಖರ ಕಾರಣ ಎಂದರೆ ವೇಗದ ಚಾರ್ಜ್‌ಗಾಗಿ. ನಿಮ್ಮ ಸ್ಮಾರ್ಟ್‌ ಡಿವೈಸ್‌ ಅನ್ನು ಏರ್‌ಪ್ಲೇನ್ ಮೋಡ್‌ ನಲ್ಲಿ ಇರಿಸಿ ಚಾರ್ಜ್‌ಗೆ ಇಡುವುದರಿಂದ ಬೇಗ ಚಾರ್ಜ್ ಆಗುವುದರೊಂದಿಗೆ ದೀರ್ಘವಾದ ಬ್ಯಾಟರಿ ಬ್ಯಾಕಪ್‌ ನೀಡುವುದರಲ್ಲಿ ಸಂಶಯವಿಲ್ಲ.


  ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್! ಒಂದೇ ಸಲ 5 ಸಾವಿರ ಸ್ಮಾರ್ಟ್​ಫೋನ್​ ಜಾರ್ಜ್​ ಮಾಡ್ಬಹುದು!


  ಇನ್ನು ಯಾರಿಂದಾದರೂ ಕಾಲ್​, ಮೆಸೇಜ್ ಮೂಲಕ ಕಿರಿಕಿರಿಯಾದಾಗಲೂ ಇದು ಬಹಳಷ್ಟು ಸಹಕಾರಿಯಾಗುತ್ತದೆ. ಏರ್​​ಪ್ಲೇನ್​ ಮೋಡ್ ಅನ್ನು ಓಪನ್ ಮಅಡುವ ಮೂಲಕ ನಿಮ್ಮ ಮೊಬೈಲ್​ಗೆ ಬರುವಂತಹ ಮೆಸೇಜ್, ಕಾಲ್ ಅನ್ನು ಬಂದ್​ ಮಾಡಬಹುದು. ಈ ರೀತಿ ಆನ್​ ಮಾಡಿದರೆ ಕಾಲ್​ ಮಾಡಿದಾಗ ನಿಮ್ಮ ಮೊಬೈಲ್ ಸ್ವಿಚ್​​ ಆಫ್​ ಆಗಿದೆ ಎಂದು ತಿಳಿಸುತ್ತದೆ.

  Published by:Prajwal B
  First published: