ವಿವೋ ಮೊಬೈಲ್​​ ಖರೀದಿಸಿ, 2 ಸಾವಿರ ರೂಪಾಯಿ ಉಳಿಸಿ!

ಚೀನಾ ಮೂಲದ ಈ ಸಂಸ್ಥೆ ಕಳೆದ ವರ್ಷದ ಮಾಡೆಲ್​ಗಳ ಮೇಲಿನ ದರವನ್ನು ಇಳಿಕೆ ಮಾಡಿತ್ತು. ಅಂತೇಯೇ ಭಾರತದಲ್ಲಿ ಎರಡು ಪ್ರಮುಖ ಸ್ಮಾರ್ಟ್​​ಫೋನ್​ ಬೆಲೆಗಳನ್ನು ಇಳಿಕೆ ಮಾಡಿದೆ. ವಿವೋ ವಿ ಪ್ರೋ11 ಹಾಗೂ ವಿವೋ ವಿ11 ಸ್ಮಾರ್ಟ್​ಫೋನ್​ಗಳ ಬೆಲೆಯನ್ನು ಕಡಿಮೆ ಮಾಡಿದೆ.

news18
Updated:February 1, 2019, 3:34 PM IST
ವಿವೋ ಮೊಬೈಲ್​​ ಖರೀದಿಸಿ, 2 ಸಾವಿರ ರೂಪಾಯಿ ಉಳಿಸಿ!
ವಿವೋ ಮೊಬೈಲ್​
news18
Updated: February 1, 2019, 3:34 PM IST
ಸದ್ಯ ಸ್ಮಾರ್ಟ್​ಫೋನ್​ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇದೆ. ಪ್ರತೀ ಸಂಸ್ಥೆಗಳು ಕೂಡ ಹೊಸ ಹೊಸ ಆಫರ್​ಗಳನ್ನು ನೀಡುತ್ತಿವೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಂತೂ ಸ್ಮಾರ್ಟ್​​ಫೋನ್​ಗಳ ದರದ ಮೇಲೆ ಭಾರೀ ಕಡಿತ ನೀಡಲಾಗುತ್ತದೆ. ಈಗ, ವಿವೋ ಸಂಸ್ಥೆ ತನ್ನ ಕಂಪನಿಯ ಕೆಲ ಮಾಡೆಲ್​ಗಳ ಮೇಲೆ ಗರಿಷ್ಠ 2,000 ರೂ. ದರ ಕಡಿತ ಮಾಡಿದೆ.

ಚೀನಾ ಮೂಲದ ಈ ಸಂಸ್ಥೆ ಕಳೆದ ವರ್ಷದ ಮಾಡೆಲ್​ಗಳ ಮೇಲಿನ ದರವನ್ನು ಇಳಿಕೆ ಮಾಡಿತ್ತು. ಅಂತೇಯೇ ಭಾರತದಲ್ಲಿ ಎರಡು ಪ್ರಮುಖ ಸ್ಮಾರ್ಟ್​​ಫೋನ್​ ಬೆಲೆಗಳನ್ನು ಕಡಿತ ಮಾಡಿದೆ. ವಿವೋ ವಿ ಪ್ರೋ 11 ಹಾಗೂ ವಿವೋ ವಿ11 ಸ್ಮಾರ್ಟ್​ಫೋನ್​ಗಳ ಬೆಲೆಯನ್ನು ಕಡಿಮೆ ಮಾಡಿದೆ.

ವಿ ಪ್ರೋ 11ಗೆ ಮಾರುಕಟ್ಟೆಯಲ್ಲಿ 25,990 ರೂ. ಇದೆ. ಈ ಮೊಬೈಲ್​ ಈಗ 23,990 ರೂ.ಗೆ ಲಭ್ಯವಿದೆ. ಈ ಮೂಲಕ, 2 ಸಾವಿರ ರೂ. ವಿನಾಯಿತಿ ನೀಡಿದೆ. ಅಂತೆಯೇ ವಿವೋ ವಿ11 ಮಾಡೆಲ್​ಗೆ ಮಾರುಕಟ್ಟೆಯಲ್ಲಿ 20,990 ರೂ. ಇದೆ. ಇದರ ಬೆಲೆ 19,990ರೂ.ಗೆ ಇಳಿಕೆಯಾಗಿದೆ.

ಇದನ್ನೂ ಓದಿ: ನಿಮ್ಮ ಮೊಬೈಲ್​ ಮೂರನೇ ಮಹಡಿಯಿಂದ ಬಿದ್ದರು ಏನು ಆಗಲ್ಲ..!

ವಿವೋ ವಿ 11 ​, 22,990 ರೂ.ಗೆ ಭಾರತೀಯ ಮಾರುಕಟ್ಟೆಗೆ ಪರಿಚಯಗೊಂಡಿತ್ತು. ಇದಾದ ನಂತರ ಅಕ್ಟೋಬರ್​ನಲ್ಲಿ 2 ಸಾವಿರ ರೂ. ಕಡಿತ ಗೊಳಿಸಲಾಗಿತ್ತು. ಹಾಗಾಗಿ, ಈ ಮೊಬೈಲ್​ ಬೆಲೆ 20,990 ರೂ. ಆಗಿತ್ತು. ಈಗ ಮತ್ತೆ ಸಾವಿರ ರೂ. ಇಳಿಕೆ ಆಗಿರುವುದು ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸಿದೆ.

ವಿವೋ 11 ವಿಶೇಷತೆಗಳು

ವಿವೋ 11 ಡ್ಯುಯೆಲ್​ ಸಿಮ್ ​(ನ್ಯಾನೋ) ಸಿಮ್​, 6.3 ಇಂಚು ಉದ್ದದ ಎಚ್​ಡಿ ಡಿಸ್​ಪ್ಲೇ, 6 ಜಿಬಿ ರ್ಯಾಮ್​ 64 ಜಿಬಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 16ಎಂಪಿ ಪ್ರಾಥಮಿಕ ಕ್ಯಾಮೆರಾ, 25ಎಂಪಿ ಸೆಲ್ಫೀ ಕ್ಯಾಮೆರಾ ಇದೆ. ಇನ್ನೂ ಹಲವು ವಿಶೇಷತೆಗಳನ್ನು ಇದು ಹೊಂದಿದೆ.
Loading...

ವಿವೋ 11 ಪ್ರೋ ವಿಶೇಷತೆಗಳು

ವಿವೋ 11 ಪ್ರೋ ಡ್ಯುಯೆಲ್​ ಸಿಮ್ ​(ನ್ಯಾನೋ) ಸಿಮ್, 6.41 ಇಂಚು ಉದ್ದದ ಫುಲ್​ ಎಚ್​ಡಿ ಡಿಸ್​​ಪ್ಲೇ ಸೇರಿ ಸಾಕಷ್ಟು ವಿಶೇಷತೆ ಇದೆ.

ಇದನ್ನೂ ಓದಿ: ಸ್ಯಾಮ್​ಸಂಗ್​ ಗ್ಯಾಲಕ್ಸಿ S10: ವಿಶ್ವದ ಮೊದಲ ಸಾವಿರ GB ಮೊಬೈಲ್

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ