ಗೂಗಲ್​ ತೇಜ್ ಆ್ಯಪ್​​ನಲ್ಲೇ ಸಾಲ ಪಡೆಯಿರಿ


Updated:August 29, 2018, 1:37 PM IST
ಗೂಗಲ್​ ತೇಜ್ ಆ್ಯಪ್​​ನಲ್ಲೇ ಸಾಲ ಪಡೆಯಿರಿ

Updated: August 29, 2018, 1:37 PM IST
ನ್ಯೂಸ್​ 18 ಕನ್ನಡ

ನವದೆಹಲಿ: ಆಲ್ಫಬೆಟ್​ ಐಎನ್​ಸಿ ಒಡೆತನದ ಗೂಗಲ್​ ಸಂಸ್ಥೆ ಆನ್​ಲೈನ್​ ವ್ಯವಹಾರ ನಡೆಸುವ ಸಂಸ್ಥಗಳಾದ ಪೇಟಿಎಂ, ಫೋನ್​ಪೇ ಇತ್ಯಾದಿ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ತೀರ್ಮಾನಿಸಿದ್ದು, ಇದೀಗ ತನ್ನ ಡಿಜಿಟಲ್​ ಯೋಜನೆಗಳಲ್ಲಿ ಒಂದಾಗಿರುವ ತೇಜ್​ಆ್ಯಪ್​ನಲ್ಲಿ ಗ್ರಾಹಕರಿಗೆ ಸಾಲ ನೀಡುವ ಕುರಿತು ಚಿಂತನೆ ನಡೆಸಿದೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಗೂಗಲ್​ನ ಕ್ಸ್ಟ್​ ಬಿಲಿಯನ್​ ಯೂಸರ್ಸ್​ ಯೋಜನೆಯ ಉಪಾಧ್ಯಕ್ಷ ಸೀಸರ್ ಸೇನ್​ಗುಪ್ತಾ, ತೇಜ್ ಆ್ಯಪ್​ ಮೂಲಕವೇ ಬಿಲಿಯನ್​ ಭಾರತೀಯರಿಗೆ ಬ್ಯಾಂಕ್​ ಸೇವೆಯನ್ನು ಒದಗಿಸುತ್ತಿದ್ದೇವೆ. ಇದರ ಮುಂದಿನ ಹಂತವಾಗಿ ತೇಜ್​ನ್ನೇ 'ಗೂಗಲ್​ ಪೇ'ಯಾಗಿ ಪರಿವರ್ತಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಫೆಡರಲ್ ಬ್ಯಾಂಕ್, ಹೆಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಾಕ್ ಮಹೀಂದ್ರಾ ಬ್ಯಾಂಕ್​ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ತೇಜ್​ ಸಂಸ್ಥೆ, ಈ ಬ್ಯಾಂಕ್​ ಜತೆಗೂಡಿ ತೇಜ್​ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿದೆ. 'ಈ ಕುರಿತಂತೆ ನಾವು ಸಾಕಷ್ಟು ಬ್ಯಾಂಕ್​ಗಳೊಂದಿಗೆ ಮಾತುಕತೆ ನಡಿಸಿದ್ದು, ಅತ್ಯಂತ ಕಠಿಣ ಕೆಲಸವನ್ನು ಸುಲಲಿತವಾಗಿ ನಿರ್ವಹಿಸುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ' ಎಂದು ಸೇನ್​ಗುಪ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಾಂತ್ರಿಕ ತಜ್ಞರ ಪ್ರಕಾರ ತೇಜ್​ನ ಈ ಯೋಜನೆ ಜಪಾನ್​ನ ಸಾಫ್ಟ್​​ಬ್ಯಾಂಕ್, ಚೀನಾದ ಅಲಿಬಾಬಾ ಮತ್ತು ಅಮೆರಿಕದ ಬೆರ್ಕ್​ಶೈರ್​ ಹಾಥ್​ವೇ ಸಹಭಾಗಿತ್ವದ ದೇಶೀ ವ್ಯಾವಹಾರಿಕ ಸಂಸ್ಥೆ ಪೇಟಿಎಂಗೆ ಸೇರಿದಂತೆ ಫೋನ್​ ಪೇಯಂತಹ ಸಂಸ್ಥೆಳಿಗೆ ಸಾಕಷ್ಟು ಹೊಡೆತ ಬೀಳುವ ಸಾಧ್ಯತೆಗಳಿವೆ. ಏಕೆಂದರೆ ಈ ಎಲ್ಲಾ ಆ್ಯಪ್​ಗಳು ಕೇವಲ ಪಾವತಿ ತಂತ್ರಜ್ಞಾನವನ್ನು ಅನುಸರಿಸುತ್ತಿವೆ. ಆದರೆ ತೇಜ್​ ಈ ಎಲ್ಲಾ ಸೇವೆಗಿಂತ ಒಂದು ಹೆಜ್ಜೆ ಮುಂದಿಟ್ಟು ಸಾಲ ಸೌಲಭ್ಯ ನೀಡುತ್ತಿದೆ. ಹೀಗಾಗಿ ಪೇಟಿಎಂ ತನ್ನ ಗ್ರಾಹಕರನ್ನು ಕಳೆದುಕೊಳ್ಳಬಹುದು.

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...