Digital Equipment: ಉದ್ಯೋಗಿಗಳ ಕಾರ್ಯವೈಖರಿಯನ್ನು ಉತ್ತೇಜಿಸಲು ಹೊಸ ಡಿಜಿಟಲ್​ ಸಾಧನಗಳ ಅಳವಡಿಕೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉದ್ಯೋಗಿ ವಜಾಗೊಳಿಸುವಿಕೆ ಹೆಚ್ಚಿನ ಕೆಲಸದ ಒತ್ತಡ ಹಾಗೂ ಭವಿಷ್ಯದ ಬಗೆಗೆ ಪ್ರಸ್ತುತ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಾಗಿವೆ.ಈ ಸಂದರ್ಭದಲ್ಲಿ ಹಿಂದಿನಂತೆ ಅವರಿಗೆ ಕೆಲಸದಲ್ಲಿ ಮನಸ್ಸಿಟ್ಟು ಕಾರ್ಯನಿರ್ವಹಿಸಲಾಗುತ್ತಿಲ್ಲ ಮತ್ತು ಉತ್ಪಾದಕತೆಯ ಪ್ರಮಾಣ ಕಡಿಮೆಯಾಗಿದೆ ಎಂದು ಹಲವಾರು ಸಮೀಕ್ಷೆಗಳು ವರದಿ ನೀಡಿವೆ. ಇದಕ್ಕಾಗಿ ಉದ್ಯೋಗದಲ್ಲಿ ಹೊಸ ಟೆಕ್ನಾಲಜಿಯನ್ನು ಅಳವಡಿಸಲು ತಂತ್ರಜ್ಞರು ನಿರ್ಧರಿಸಿದ್ದಾರೆ.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Share this:

    ಉದ್ಯೋಗಿ ವಜಾಗೊಳಿಸುವಿಕೆ (Employee Layoff), ಹೆಚ್ಚಿನ ಕೆಲಸದ ಒತ್ತಡ ಹಾಗೂ ಭವಿಷ್ಯದ ಬಗೆಗೆ ಪ್ರಸ್ತುತ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಾಗಿವೆ.ಈ ಸಂದರ್ಭದಲ್ಲಿ ಹಿಂದಿನಂತೆ ಅವರಿಗೆ ಕೆಲಸದಲ್ಲಿ ಮನಸ್ಸಿಟ್ಟು ಕಾರ್ಯನಿರ್ವಹಿಸಲಾಗುತ್ತಿಲ್ಲ ಮತ್ತು ಉತ್ಪಾದಕತೆಯ ಪ್ರಮಾಣ ಕಡಿಮೆಯಾಗಿದೆ ಎಂದು ಹಲವಾರು ಸಮೀಕ್ಷೆಗಳು ವರದಿ ನೀಡಿವೆ. ಇದಕ್ಕಾಗಿ ಉದ್ಯೋಗದಲ್ಲಿ ಹೊಸ ಟೆಕ್ನಾಲಜಿಯನ್ನು ಅಳವಡಿಸಲು ತಂತ್ರಜ್ಞರು ನಿರ್ಧರಿಸಿದ್ದಾರೆ. ಉದ್ಯೋಗಿಗಳನ್ನು (Employees) ಉತ್ತೇಜಿಸುವಂತಹ ತಂತ್ರಜ್ಞಾನವನ್ನು ಅಳವಡಿಸಲು ಈ ಡಿಜಿಟಲ್ ಉಪಕರಣಗಳನ್ನು (Digital Equipment) ಸಹಕಾರಿಯಾಗುತ್ತದೆ.


    ಡಿಜಿಟಲ್ ಉಪಕರಣಗಳ ಪರಿಚಯ


    ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಹಾಗೂ ಅವರಲ್ಲಿರುವ ಚೈತನ್ಯವನ್ನು ಮತ್ತೆ ರೂಪುಗೊಳ್ಳುವಂತೆ ಮಾಡಲು ಮಾನವ ಸಂಪನ್ಮೂಲದ ವ್ಯವಸ್ಥೆ ಹಾಗೂ ವೃತ್ತಿಜೀವನದ ಅಭಿವೃದ್ಧಿಗೆ ಪೂರಕವಾಗಿರುವ ಕೆಲವೊಂದು ಅಂಶಗಳು ಸಹಕಾರಿಯಾಗಿರುತ್ತದೆ ಎಂಬುದು ತಜ್ಞರ ಸಲಹೆಯಾಗಿದೆ.


    ಇದರೊಂದಿಗೆ ಡಿಜಿಟಲ್ ಪರಿಕರಗಳನ್ನು ಉದ್ಯೋಗಿಗಳಿಗೆ ಪ್ರಸ್ತುತಪಡಿಸುವುದು, ಅವರ ವೃತ್ತಿಜೀವನದ ಅಭಿವೃದ್ಧಿಗೆ ನೆರವು ನೀಡುವುದು ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ಕೆಲಸದ ವಾತಾವರಣದಲ್ಲಿ ಉತ್ಸಾಹದಿಂದ ಇರುವಂತೆ ಮಾಡುವಲ್ಲಿ ಸಹಕಾರಿಯಾಗಿರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.


    ಇದನ್ನೂ ಓದಿ: ಭಾರತಕ್ಕೆ ಲಗ್ಗೆಯಿಟ್ಟಿದೆ ಟೆಕ್ನೋ ಪಾಪ್​ 7 ಪ್ರೋ! ಕೇವಲ 6 ಸಾವಿರ ರೂಪಾಯಿ


    ವೃತ್ತಿಜೀವನದ ಅಭಿವೃದ್ಧಿ ಮತ್ತು ಉನ್ನತೀಕರಣವು ಉದ್ಯೋಗಿಗಳನ್ನು ಶಕ್ತಿಯುತಗೊಳಿಸಲು ಸಹಕಾರಿಯಾಗಿದೆ. ಹಾಗಿದ್ದರೆ ಉದ್ಯೋಗಿಗಳನ್ನು ಪುನಃ ಚೈತನ್ಯಶೀಲರಾಗಿಸುವುದು ಹೇಗೆ ಮತ್ತು ಇದರಲ್ಲಿ ಡಿಜಿಟಲ್ ಎಚ್‌ಆರ್‌ ಪರಿಕರಗಳ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳೋಣ.


    ಮಾನವ ಸಂಪನ್ಮೂಲ ವ್ಯವಸ್ಥೆ ಉದ್ಯೋಗಿಗಳಿಗೆ ಸುಲಭವಾಗಿ ಸಿಗುವಂತಿರಬೇಕು


    ಮಾನವ ಸಂಪನ್ಮೂಲ ವಿಭಾಗವು ಉದ್ಯೋಗಿಯ ವೃತ್ತಿಜೀವನದ ಬೆಳವಣಿಗೆಗೆ ಬೆಂಬಲವನ್ನು ನೀಡುವಂತಿರಬೇಕು ಹಾಗೂ ಅವರಿಗೆ ಏನು ಅಗತ್ಯವೋ ಆ ಸಹಕಾರವನ್ನು ನೀಡಬೇಕು ಎಂದು ವರ್ಕ್‌ಫೋರ್ಸ್ ಸಾಫ್ಟ್‌ವೇರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕ್ ಮೊರಿನಿ ತಿಳಿಸಿದ್ದಾರೆ.


    ಸಾಂಕೇತಿಕ ಚಿತ್ರ


    ಉದ್ಯೋಗಿಗಳನ್ನು ಕೆಲಸದಲ್ಲಿ ತತ್ಪರರಾಗಿಸುವುದು, ಹೇಗೆ ಅವರನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುವುದು ಹೇಗೆ ಎಂಬುದು ಸಂಸ್ಥೆಯಲ್ಲಿರುವವರಿಗೆ ತಿಳಿದಿರಬೇಕು ಎಂದು ಮೊರಿನಿ ತಿಳಿಸುತ್ತಾರೆ.


    ಉದ್ಯೋಗಿಗಳಿಗೆ ಪ್ರತಿಯೊಂದು ಸೇವೆಗಳನ್ನು ಸುಲಭಗೊಳಿಸುವುದು


    ಮಾನವ ಸಂಪನ್ಮೂಲ ವಿಭಾಗದಲ್ಲಿ ತಂತ್ರಜ್ಞಾನಗಳ ಬಳಕೆ ಕೂಡ ಈ ನಿಟ್ಟಿನಲ್ಲಿ ಪರಿಣಾಮಕಾರಿ ಎಂದು ಮೊರಿನಿ ಸಲಹೆ ನೀಡುತ್ತಾರೆ. ವೇತನದ ಮಾಹಿತಿ, ವೇಳಾಪಟ್ಟಿ, ರಜೆಗಳ ಬಗ್ಗೆ ವಿವರ, ಹೀಗೆ ಪ್ರತಿಯೊಂದು ಸೇವೆಗಳ ಲಭ್ಯತೆಯನ್ನು ಫೋನ್‌ನಲ್ಲಿ ಪ್ರವೇಶಿಸುವಂತಿರಬೇಕು ಎಂದು ಉದ್ಯೋಗಿಗಳು ಬಯಸುತ್ತಾರೆ.


    ಮಾನವ ಸಂಪನ್ಮೂಲ ಅಧಿಕಾರಿಗಳು ಆಧುನೀಕರಣಗೊಳ್ಳಬೇಕು ಹಾಗೂ ಡಿಜಿಟಲ್ ಉಪಕರಣಗಳನ್ನು ಬಳಸಬೇಕು, ಇಲ್ಲದಿದ್ದರೆ ಉದ್ಯೋಗಿಗಳು ಎಚ್‌ಆರ್‌ಗಳ ಸೌಲಭ್ಯವನ್ನು ಮಹತ್ತರವಾಗಿ ಕಾಣುವುದಿಲ್ಲ. ಕಂಪನಿಗಳು ತಂತ್ರಜ್ಞಾನದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಇದರಿಂದ ಫೋನ್‌ನಲ್ಲಿಯೇ ಉದ್ಯೋಗಿಗಳೊಂದಿಗೆ ಸಂವಹನ ನಡೆಸಬಹುದು ಹಾಗೂ ಅವರಿಗೆ ಬೇಕಾದ ನೆರವನ್ನು ನೀಡಬಹುದು ಎಂದು ಮೊರಿನಿ ಸಲಹೆ ನೀಡುತ್ತಾರೆ.


    ವೃತ್ತಿಜೀವನದ ಬೆಳವಣಿಗೆಗೆ ಉದ್ಯೋಗಿಗಳು ಆದ್ಯತೆ ನೀಡುತ್ತಾರೆ


    ಬಹುಪಾಲು ಉದ್ಯೋಗಿಗಳು ವೃತ್ತಿಜೀವನದಲ್ಲಿ ಅಭಿವೃದ್ಧಿ ಹೊಂದಲು ಬಯಸುತ್ತಾರೆ ಹಾಗೂ ಈ ದಿಸೆಯಲ್ಲಿ ತಮ್ಮ ಸಂಸ್ಥೆ ಯಾವ ಸೌಲಭ್ಯಗಳನ್ನು ನೀಡುತ್ತದೆ ಎಂಬುದನ್ನು ಎದುರು ನೋಡುತ್ತಾರೆ.


    ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಆರೋಗ್ಯಕರ ಸಂಬಂಧದ ಮೂಲಾಧಾರದಲ್ಲಿ ಕಲಿಕೆಯು ಒಂದು ಪ್ರಮುಖ ಅಂಶವಾಗಿದೆ ನೌಕರರು ವೇತನಕ್ಕಿಂತ ಇನ್ನೂ ಹೆಚ್ಚಾಗಿ ಮತ್ತಷ್ಟು ಸೌಲಭ್ಯಗಳನ್ನು ಕಂಪನಿಯಿಂದ ಬಯಸುತ್ತಾರೆ. ಹೀಗಾಗಿ ಸಂಸ್ಥೆಗಳು ಉದ್ಯೋಗಿಯ ವೈಯಕ್ತಿಕ ಅಭಿವೃದ್ಧಿಗೆ ಕೂಡ ಹೂಡಿಕೆ ಮಾಡಬೇಕಾಗುತ್ತದೆ ಎಂಬುದು ಉದ್ಯೋಗ ತಜ್ಞರ ಸಲಹೆಯಾಗಿದೆ.


    ಕೋರ್ಸ್‌ಗಳನ್ನು ಮಾಡಲು ಉದ್ಯೋಗಿಗಳ ಮನವೊಲಿಸುವುದು


    ಯಾವುದಾದರೂ ಕೆಲಸದಲ್ಲಿ ಹೆಚ್ಚಿನ ಪರಿಣಿತಿ ಪ್ರಾವಿಣ್ಯತೆ ಬೇಕು ಎಂಬುದನ್ನು ಉದ್ಯೋಗಿಗಳಿಗೆ ಮನದಟ್ಟು ಮಾಡುವುದು ಹಾಗೂ ಈ ಕೆಲಸಕ್ಕೆ ಅರ್ಹತೆ ಗಳಿಸಲು ಇಂತಹ ಕೋರ್ಸ್‌ಗಳನ್ನು ಮಾಡಬೇಕು ಎಂಬ ಸಲಹೆ ನೀಡುವುದನ್ನು ಸಂಸ್ಥೆಗಳು ಮಾಡಬಹುದು ಎಂದು ಮೊರಿನಿ ತಿಳಿಸುತ್ತಾರೆ.


    ಇದರಿಂದ ಉದ್ಯೋಗಿಗಳು ಸಂಸ್ಥೆಯತ್ತ ಹೆಚ್ಚು ಪ್ರಭಾವಿತಗೊಳ್ಳುತ್ತಾರೆ ಹಾಗೂ ತಮ್ಮ ಬಗ್ಗೆ ಸಂಸ್ಥೆಗೆ ಕಾಳಜಿ ಇದೆ ಎಂಬುದನ್ನು ಮನಗಾಣುತ್ತಾರೆ. ಈ ವಿಧಾನ ಉದ್ಯೋಗಿಗಳಿಗೆ ಕಲಿಕೆಯನ್ನು ಮುಂದುವರಿಸಲು ಸಾಧನಗಳನ್ನು ಒದಗಿಸುತ್ತದೆ ಎಂಬುದು ಮೊರಿನಿ ಹೇಳಿಕೆಯಾಗಿದೆ.


    ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸಮತೋಲಗೊಳಿಸುವ ಸಾಮರ್ಥ್ಯವನ್ನು ಉದ್ಯೋಗಿ ಪಡೆದುಕೊಂಡಲ್ಲಿ ಅವರು ಉತ್ಪಾದಕತೆಯ ಮಟ್ಟದಲ್ಲೂ ಪರಿಣಾಮಕಾರಿಯಾಗಿರುತ್ತಾರೆ. ಉದ್ಯೋಗಿಗೆ ನೆರವು ನೀಡಿದಂತೆ ಕಂಪನಿಗೂ ಅವರು ನಂಬಿಕಸ್ಥರಾಗಿ ಕೆಲಸ ನಿರ್ವಹಿಸುತ್ತಾರೆ.

    Published by:Prajwal B
    First published: