ಎಚ್ಚರ! ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ಈ ಆ್ಯಪ್​ ಇದೆಯಾ? ಕೂಡಲೇ ಡಿಲೀಟ್​ ಮಾಡಿ

‘ಎಐ.ಟೈಪ್‘​ ಆ್ಯಪ್​ ನಕಲಿ ಕೀಬೋಡ್​ ಅಪ್ಲಿಕೇಷನ್​ ಆಗಿದ್ದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುತ್ತಿತ್ತು.

news18-kannada
Updated:November 5, 2019, 2:41 PM IST
ಎಚ್ಚರ! ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ಈ ಆ್ಯಪ್​ ಇದೆಯಾ? ಕೂಡಲೇ ಡಿಲೀಟ್​ ಮಾಡಿ
ಪ್ರಾತಿನಿಧಿಕ ಚಿತ್ರ
  • Share this:
ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಆ್ಯಪ್ ಒದಗಿಸುವ ಪ್ಲೇಸ್ಟೋರ್​ನಲ್ಲಿ ನಕಲಿ ಆ್ಯಪ್​​ಗಳು ಪತ್ತೆಯಾಗುತ್ತಲೇ ಇವೆ. ಇದೀಗ ಗೂಗಲ್​ ಸಂಸ್ಥೆ ‘ಎಐ.ಟೈಪ್‘  (ai.type)​ ಹೆಸರಿನ ಮತ್ತೊಂದು ನಕಲಿ ಆ್ಯಪ್​ ಅನ್ನು ಕಂಡು ಹಿಡಿದಿದೆ.

‘ಎಐ.ಟೈಪ್‘​ ಆ್ಯಪ್​ ನಕಲಿ ಕೀಬೋಡ್​ ಅಪ್ಲಿಕೇಶನ್​ ಆಗಿದ್ದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುತ್ತಿತ್ತು. ಗೂಗಲ್​ ಈ ನಕಲಿ ಆ್ಯಪ್​ ಅನ್ನು ಪತ್ತೆಹಚ್ಚಿದೆ. 2019ರ ಜೂನ್​ ನಂತರ ಈ ಆ್ಯಪ್​ ಅನ್ನು ಪ್ಲೇ ಸ್ಟೋರ್​​ನಿಂದ ಕಿತ್ತೆಸೆದಿದೆ.

ಗೂಗಲ್​ ಪತ್ತೆಹಚ್ಚಿರುವ ‘ಎಐ.ಟೈಪ್‘​ ನಕಲಿ ಆ್ಯಪ್​ ಅನ್ನು 40 ಮಿಲಿಯನ್ ಜನರು ಬಳಕೆ ಮಾಡಿದ್ದಾರೆ. ಬಳಕೆದಾರರಿಗೆ ತಿಳಿಯದೇ ಈ ಆ್ಯಪ್​​ ಕೆಲ ವಹಿವಾಟುಗಳನ್ನು ​ನಡೆಸುತ್ತಿದೆ ಎಂದು ಗೂಗಲ್​ ವರದಿ ಮಾಡಿದೆ. ಇನ್ನು ಆ್ಯಂಟಿ ಫ್ರಾಡ್​ ಸೊಲ್ಯುಷನ್​, ಸೆಕ್ಯೂರಿ-ಡಿ-ಕಂಪೆನಿ ಕೂಡ ಈ ಆ್ಯಪ್​ ಅನ್ನು ಬ್ಲಾಕ್​ ಮಾಡಿದೆ. ಮಾತ್ರವಲ್ಲದೆ,  ಬಳಕೆದಾರರಿಗೆ ತಿಳಿಯದೆ1 ಲಕ್ಷಕ್ಕಿಂತಲು ಅಧಿಕ ಡಿವೈಸ್​​​ಗಳಲ್ಲಿ ಈ ಆ್ಯಪ್​ ಕೆಲ ವಹಿವಾಟನ್ನು ನಡೆಸಿದೆ.

ಈಗಾಗಲೇ 13 ದೇಶದ ಜನರು ಈ ಆ್ಯಪ್​ ಅನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ, ಜಾಹೀರಾತನ್ನು ನೀಡುವುದರ ಮೂಲಕ ಸುಲಭವಾಗಿ ಬಳಕೆದಾರರ ಮಾಹಿತಿಯನ್ನು ಎಗರಿಸುತ್ತಿತ್ತು ಎನ್ನಲಾಗಿದೆ.

ಸ್ಮಾರ್ಟ್​ಫೋನ್​ಗಳಿಗೆ ಆ್ಯಪ್​ ಒದಗಿಸುವ ಪ್ಲೇಸ್ಟೋರ್​ನಲ್ಲಿ ನಕಲಿ ಆ್ಯಪ್​ಗಳು ಪತ್ತೆಯಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಾಕಷ್ಟು ನಕಲಿ ಆ್ಯಪ್​​ಗಳನ್ನು ಗೂಗಲ್​ ಪತ್ತೆಹಚ್ಚಿ ಕಿತ್ತೆಸೆದಿದೆ. ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಆ್ಯಪ್​​ಗಳನ್ನು ಗೂಗಲ್​ ಗುರುತಿಸಿ ಎಚ್ಚರಿಕೆ ಮಾಹಿತಿಯನ್ನು ತಿಳಿಸುತ್ತಿದೆ.

ಇದನ್ನು ಓದಿ: ಮಕ್ಕಳಾಗಿಲ್ಲ ಎಂದು ಹೆಂಡತಿಯನ್ನೇ ಕೊಂದ ಗಂಡ; ಹೆಣದ ಜೊತೆಗೆ ಮೂರು ದಿನ ಕಳೆದು ಸಿಕ್ಕಿಬಿದ್ದ
First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading