HOME » NEWS » Tech » IIT DELHI INCUBATED STARTUP GELIOSE MOBILITY DEVELOPS HOPE ELECTRIC SCOOTER WITH 20 PAISE PER KILOMETER RUNNING COST HG

ಪ್ರತಿ ಕಿಲೋ ಮೀಟರ್​ಗೆ ಕೇವಲ 20 ಪೈಸೆ; ಗ್ರಾಹಕರ ‘ಹೋಪ್’​ ಹೆಚ್ಚು ಮಾಡಿದೆ ನೂತನ ಎಲೆಕ್ಟ್ರಿಕ್​ ಸ್ಕೂಟರ್​!

HOPE Electric Scooter: ಹೋಪ್​ ಸ್ಕೂಟರ್​ ಅನ್ನು ಸ್ಥಳೀಯ ಮತ್ತು ಡೆಲಿವರಿ ಮಾಡಲು ಉಪಯೋಗವಾಗಲೆಮದು ಅಭಿವೃದ್ಧಿ ಪಡಿಸಲಾಗಿದೆ. ಈ ಸ್ಕೂಟರ್​ನ ಟಾಪ್​ ಸ್ಪೀಡ್​ 25 ಕಿ.ಮೀ. ಇದನ್ನು ಆಫರ್​ ಜೊತೆಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ.

news18-kannada
Updated:March 24, 2021, 5:13 PM IST
ಪ್ರತಿ ಕಿಲೋ ಮೀಟರ್​ಗೆ ಕೇವಲ 20 ಪೈಸೆ; ಗ್ರಾಹಕರ ‘ಹೋಪ್’​ ಹೆಚ್ಚು ಮಾಡಿದೆ ನೂತನ ಎಲೆಕ್ಟ್ರಿಕ್​ ಸ್ಕೂಟರ್​!
ಹೋಪ್
  • Share this:
ವಿಶೇಷ ಫೀಚರ್ಸ್​, ಸಾಮರ್ಥ್ಯದ ಆಧಾರದ ಮೇಲೆ ಕಂಪೆನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಉತ್ಪಾದಿಸುತ್ತಿದೆ. ಈಗಾಗಲೇ ಕೆಲವು ಕಂಪನಿಗಳು ಇಲೆಕ್ಟ್ರಿಕ್​ ಸ್ಕೂಟರ್​ ಮತ್ತು ಕಾರನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಕೆಲವು ಕಂಪನಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಅದರಂತೆ ದೆಹಲಿಯ ಇಂಡಿಯನ್​ ಇನ್ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ (ಐಐಟಿ) ಇನ್ಕ್ಯುಬೇಟೆಡ್​ ಸ್ಟಾರ್ಟ್​ಅಪ್​ ಗೆಲಿಲಿಯೋ ಮೊಬಿಲಿಟಿ ‘ಹೋಪ್​’ ಹೆಸರಿನ ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಉತ್ಪಾದಿಸಿದೆ. ನೂತನ ಸ್ಕೂಟರಿನ ಚಾಲನಾ ವೆಚ್ಚ ಪ್ರತಿ ಕಿಲೋ ಮೀಟರ್​ಗೆ ಕೇವಲ 20 ಪೈಸೆ ಆಗಿದೆ ಎಂದು ಐಐಟಿ ತಿಳಿಸಿದೆ.

ಹೋಪ್​ ಸ್ಕೂಟರ್​ ಅನ್ನು ಸ್ಥಳೀಯ ಮತ್ತು ಡೆಲಿವರಿ ಮಾಡಲು ಉಪಯೋಗವಾಗಲೆಮದು ಅಭಿವೃದ್ಧಿ ಪಡಿಸಲಾಗಿದೆ. ಈ ಸ್ಕೂಟರ್​ನ ಟಾಪ್​ ಸ್ಪೀಡ್​ 25 ಕಿ.ಮೀ. ಇದನ್ನು ಆಫರ್​ ಜೊತೆಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಜೊತೆಗೆ ವಾಹನ ಪರವಾನಗಿ ಅಥವಾ ಚಾಲನೆಗೆ ನೋಂದಣೆ ಅಗತ್ಯವಿಲ್ಲ ಎಂದು ಐಐಟಿ ತಿಳಿಸಿದೆ.

ಹೋಪ್​ ಸ್ಕೂಟರ್​ನಲ್ಲಿ ಪೋರ್ಟಬಲ್​ ಚಾರ್ಜರ್​ ಮತ್ತು ಪೋರ್ಟಬಲ್​ ಲಿಥಿಯಂ-ಐಯಾನ್​ ಬ್ಯಾಟರಿಯನ್ನು ನೀಡಲಾಗಿದೆ. ಮನೆಯಲ್ಲಿ ಬಳಸುವ ಸಾಮಾನ್ಯ ಸಾಕೆಟ್​ನಲ್ಲಿ ಈ ಬ್ಯಾಟರಿ ಚಾರ್ಜ್​ ಮಾಡಬಹುದಾಗಿದೆ. 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್​ ಆಗಲಿದೆ. 50 ಕಿ.ಮೀ ಮತ್ತು 75 ಕಿ.ಮೀ ಬ್ಯಾಟರಿ ಸಾಮರ್ಥ್ಯದಲ್ಲಿ ‘ಹೋಪ್​’ ಸ್ಕೂಟರ್​ ಅನ್ನು ಉತ್ಪಾದಿಸಲಾಗಿದೆ.

ಐಐಟಿ ದೆಹಲಿ ಈ ಸ್ಕೂಟರ್​ನ ವಿಶೇಷತೆ ಬಗ್ಗೆ ಹೇಳಿದ್ದಾರೆ. ಇದರಲ್ಲಿ ಬ್ಯಾಟರಿ ನಿರ್ವಹಣೆ ವ್ಯವಸ್ಥೆ, ದತ್ತಾಂಶ ಮೇಲ್ವಿಚಾರಣೆ, ಫೆಡಲ್​ ಅಸಿಸ್ಟ್​ ತಂತ್ರಜ್ನಾನವನ್ನು ನೀಡಲಾಗಿದೆ ಎಂದಿದ್ದಾರೆ.

ಇದು ತುಂಬಾ ಹಗುರವಾದ ಸ್ಕೂಟರ್​ ಆಗಿದೆ. ಪ್ರಯಾಣದ ಸಮಯದಲ್ಲಿ ಗ್ರಾಹಕರು ತಮ್ಮ ಅನುಕೂಲಕ್ಕಾಗಿ ಪೆಡಲ್​ ಅಥವಾ ಥ್ರೋಟಲ್​​ ಆಯ್ಕೆಯನ್ನು ಬಳಸಬಹುದಾಗಿದೆ. ಅನುಕೂಲಕರ ಪಾರ್ಕಿಂಗ್ ವ್ಯವಸ್ಥೆಗಾಗಿ ರಿವರ್ಸ್​ ಮೋಡ್​ ನೀಡಲಾಗಿದೆ. ಅಗತ್ಯದ ಸಮಯದಲ್ಲಿ ಹೊರೆ ಹೊತ್ತೊಯ್ಯಲು ಅಥವಾ ಪರಿಕರ ಸಾಗಿಸಲು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

ಆಹಾರ, ಇ-ಕಾಮರ್ಸ್​, ದಿನಸಿ ವಸ್ತುಗಳನ್ನು ಸಾಗಿಸಲು, ಸ್ಥಳಿಯ ವಿತರಣಾ ಅವಶ್ಯಕತೆ ಪೂರೈಸಲು ಕೆಲವು ಕಂಪೆನಿಗಳು ಹೋಪ್​ ಸ್ಕೂಟರ್​ನೊಂದಿಗೆ ಕೈ ಜೋಡಿಸಿದೆ. ಇನ್ನು ಸ್ಕೂಟರ್​ ರಸ್ತೆ ಬದಿಯಲ್ಲಿ ಕೆಟ್ಟಾಗ ಅದಕ್ಕಾಗಿ ತಕ್ಷಣ ಸೇವೆಯನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದೆ.
ಗೆಲಿಯೋಸ್​ ಮೊಬಿಲಿಟಿ ಸ್ಥಾಪಕ ಆದಿತ್ಯ ತಿವಾರಿ ಮಾತನಾಡಿ, ‘ಪ್ರತಿನಿತ್ಯ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಯುಗದಲ್ಲಿ ಸಾಗುತ್ತಿದ್ದೇವೆ. ಮೂರು ವರ್ಷಗಳ ಹಿಂದೆ ಜೆಲಿಯೋಸ್​ ಮೊಬಿಲಿಟಿ ಪ್ರಾರಂಭಿಸಿದ್ದೇವೆ. ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ‘ಹೋಪ್​’ ಪ್ರಮುಖ ಹೆಜ್ಜೆ ಇಡುತ್ತಿದೆ. ಇನ್ನು ಈ ಎಲೆಕ್ಟ್ರಿಕ್​ ಸ್ಕೂಟರ್​ ಬೆಲೆ 46,999 ರೂ ಆಗಿದೆ ಎಂದು ಹೇಳಿದರು.
Published by: Harshith AS
First published: March 24, 2021, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories