• Home
  • »
  • News
  • »
  • tech
  • »
  • Winter Heater Jacket: ಈ ಜ್ಯಾಕೆಟ್‌ ಧರಿಸಿದರೆ ಚಳಿಯೇ ಆಗಲ್ವಂತೆ! ಫೀಚರ್ಸ್‌, ಬೆಲೆ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Winter Heater Jacket: ಈ ಜ್ಯಾಕೆಟ್‌ ಧರಿಸಿದರೆ ಚಳಿಯೇ ಆಗಲ್ವಂತೆ! ಫೀಚರ್ಸ್‌, ಬೆಲೆ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಹೀಟರ್‌ ಜಾಕೆಟ್

ಹೀಟರ್‌ ಜಾಕೆಟ್

ಕೆಲವೊಬ್ಬರು ಈ ಚಳಿಯನ್ನು ತಡೆಯುವ ಕಾರಣಕ್ಕಾಗಿ ಹಲವಾರು ತಂತ್ರಗಳನ್ನು ಹುಡುಕುತ್ತಾರೆ. ಇಲ್ಲೊಂದು ಕಂಪೆನಿ ಹೀಟ್‌ ಜ್ಯಾಕೆಟ್‌ ಅನ್ನು ಸ್ಥಾಪಿಸಿದ್ದು. ಇದು ಚಳಿಯನ್ನು ನಿಯಂತ್ರಿಸುವ ಫೀಚರ್‌ ಅನ್ನು ಹೊಂದಿದೆ.

  • Share this:

    ವರ್ಷದಲ್ಲಿ ಮೂರು ಕಾಲಗಳು ಬರುತ್ತದೆ ಅದರಲ್ಲಿ ಚಳಿಗಾಲವೂ (Winter) ಒಂದು. ಈ ಚಳಿಗಾಲವನ್ನು ಎದುರಿಸುವುದೇ ಒಂದು ದೊಡ್ಡ ಸವಾಲಾಗಿದೆ. ಈ ಸಮಯದಲ್ಲಿ (Time) ಎಲ್ಲರೂ ಮನೆಯಿಂದ ಹೊರಗೆ ಬರಲೇ ಹಿಂಜರಿಯುತ್ತಾರೆ. ಯಾಕೆಂದರೆ ಯಾವುದನ್ನೂ ತಡೆಯಬಹುದು ಆದರೆ ಈ ಚಳಿಯನ್ನು ಒಂದು ತಡೆದುಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕಾಗಿ ಜನರು ಏನಾದರೊಂದು ಪರಿಹಾರವನ್ನು ಹುಡುಕುತ್ತಲೇ ಇರುತ್ತಾರೆ. ಕೆಲವರು ಮನೆ ಮುಂದೆ ಬೆಂಕಿ ಹಾಕಿ ಮೈ ಬಿಸಿ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ಹಲವಾರು ರೀತಿಯ ಜಾಕೆಟ್ (Jacket) ಅನ್ನು ಧರಿಸುವ ಮೂಲಕ ಚಳಿಯನ್ನು ತಡೆಯಲು ಪ್ರಯತ್ನಿಸುತ್ತಿರುತ್ತಾರೆ. ಕೆಲವೊಂದು ಪ್ರದೇಶಗಳಲ್ಲಿ ತಡೆಯಲಾಗದಷ್ಟು ಚಳಿಯಿರುತ್ತದೆ.


    ಕೆಲವೊಬ್ಬರು ಈ ಚಳಿಯನ್ನು ತಡೆಯುವ ಕಾರಣಕ್ಕಾಗಿ ಹಲವಾರು ತಂತ್ರಗಳನ್ನು ಹುಡುಕುತ್ತಾರೆ. ಇಲ್ಲೊಂದು ಕಂಪೆನಿ ಹೀಟ್‌ ಜ್ಯಾಕೆಟ್‌ ಅನ್ನು ಸ್ಥಾಪಿಸಿದ್ದು. ಇದು ಚಳಿಯನ್ನು ನಿಯಂತ್ರಿಸುವ ಫೀಚರ್‌ ಅನ್ನು ಹೊಂದಿದೆ. ಇದರ ಹೆಸರು "YHG ಹೀಟೆಡ್‌ ವೆಸ್ಟ್"‌ . ಇದು ಈ ಬಾರಿಯ ಹೊಸ ಮಾದರಿಯ ವಿಂಟರ್‌ ಜಾಕೆಟ್‌ ಆಗಿದೆ.


    ಏನಿದರ ವಿಶೇಷ?


    ಇದರ ಹೆಸರು ಐಹೆಚ್‌ಜಿ ಹೀಟೆಡ್‌ ವೆಸ್ಟ್‌ ಎಂಬುದಾಗಿದೆ. ನೀವು ಇದರ ಹೆಸರಿನಿಂದಲೇ ವಿಶೇಷತೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಇದು ಸಾಮಾನ್ಯ ಜಾಕೆಟ್‌ಗಿಂತ ಹೆಚ್ಚು ಬಿಸಿಯಾಗಿರುತ್ತದೆ.  ಸಾಮಾನ್ಯ ಜಾಕೆಟ್‌ಗೆ ಹೋಲಿಸಿದರೆ ಈ ಹೀಟೆಡ್‌ ಜಾಕೆಟ್ ವಿಶೇಷವಾದ ಉತ್ತಮ ವೈಶಿಷ್ಟ್ಯವನ್ನು ಹೊಂದಿದೆ.‌


    If you wear this jacket it will be cold Here is complete information about features price
    ಹೀಟರ್‌ ಜಾಕೆಟ್


    ಇದನ್ನೂ ಓದಿ: Redmi Note 12 Pro+ ಫೋನಿನಲ್ಲಿ 200-MP ಸ್ಯಾಮ್‌ಸಂಗ್ HPX ಕ್ಯಾಮೆರಾ! ನೀವು ನೋಡಲೇಬೇಕು


    ಐಹೆಚ್‌ಜಿ ಜಾಕೆಟ್‌ನ ಫೀಚರ್ಸ್:‌


    •  ಇದು ವಾಸ್ತವವಾಗಿ ಹೀಟರ್‌ ಜಾಕೆಟ್ ಆಗಿದ್ದು ನೀವು ಬಟನ್ ಒತ್ತಿದ ತಕ್ಷಣ ಬಿಸಿಯಾಗುತ್ತದೆ.

    • ಈ ಜಾಕೆಟ್‌ನ ಹಿಂಭಾಗದಲ್ಲಿ ಹೀಟಿಂಗ್ ಎಲಿಮೆಂಟ್‌ಗಳನ್ನು ಅಳವಡಿಸಲಾಗಿದೆ.

    •  ಈ ಎಲಿಮೆಂಟ್ಸ್‌ಗಳು ಕಾಣಿಸುವುದಿಲ್ಲ. ಆದರೆ ಕೆಲಸ ಮಾಡುತ್ತಿರುತ್ತದೆ.

    • ಈ ಜಾಕೆಟ್‌ನಲ್ಲಿ, ನೀವು ಸಾರ್ವತ್ರಿಕ USB ಪ್ಲಗ್ ಅನ್ನು ಅಳವಡಿಕೆ ಮಾಡಲಾಗಿದೆ.

    • ಜೊತೆಗೆ LED ಪವರ್ ಬಟನ್ ಅನ್ನು ಕೂಡ ಅಳವಡಿಸಿದ್ದಾರೆ.

    • ಇದರ ಬಟ್ಟೆಯು ಸಾಮಾನ್ಯ ಜಾಕೆಟ್‌ನಂತೆಯೇ ಇದೆ ಆದರೆ ನೀವು ಬಟನ್ ಒತ್ತಿದ ತಕ್ಷಣ ಅದು ಬಿಸಿಯಾಗಲು ಪ್ರಾರಂಭಿಸುತ್ತದೆ.‌


    ಹೀಟರ್‌ ಜಾಕೆಟ್


    • ನೀವು ಈ ಜಾಕೆಟ್ ಅನ್ನು ಹೆಚ್ಚಿನ ಮೀಡಿಯಮ್‌ ಮತ್ತು ಕಡಿಮೆ ಮೋಡ್‌ನಲ್ಲಿ ಇಡುವ ಅವಕಾಶವೂ ಇದೆ.

    • ಈ ಜಾಕೆಟ್ ನ ಜೇಬಿನಲ್ಲಿ ಪವರ್ ಬ್ಯಾಂಕ್ ಅನ್ನು ಕೂಡ ಇಟ್ಟು ಚಾರ್ಜ್‌ ಮಾಡಬಹುದು.

    • ಚಳಿಗಾಲವು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ  ಜಾಕೆಟ್ ಅನ್ನು ಧರಿಸಬಹುದು, ಇದರಿಂದಾಗಿ ನೀವು ನಿಮ್ಮ ದೇಹವನ್ನು ಬಿಸಿಯಾಗಿ ಇಟ್ಟುಕೊಳ್ಳಬಹುದು. ಹೆಚ್ಚಾಗಿ ಹೊರಗೆ ಪ್ರಯಾಣ ಮಾಡುವ ಜನರಿಗೆ ಈ ಜಾಕೆಟ್ ಉತ್ತಮವಾಗಿದೆ ಎಂದು ಪರಿಗಣಿಸಲಾಗಿದೆ.


    ಬೆಲೆ ಮತ್ತು ಲಭ್ಯತೆ:


    ಈ ಜಾಕೆಟ್‌ ಬೇರೆ ಬೇರೆ ಇ - ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಈ ಜಾಕೆಟ್‌ ಅನ್ನು ಉತ್ಪಾದಿಸಿ ಮಾರಾಟಮಾಡುತ್ತಿದ್ದಾರೆ. ಇದಲ್ಲದೆ ಇದು ಅಮೆಜಾನ್‌ನಿಂದ ಕೇವಲ ₹ 3709 ಕ್ಕೆ ಖರೀದಿಸಬಹುದು. ಈ ಜಾಕೆಟ್‌ ಈಗಿನ ತಂತ್ರಜ್ಞಾನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹೊಸ ಉತ್ಪನ್ನವಾಗಿದ್ದು. ಜನರನ್ನು ಬೇಗನೆ ಆಕರ್ಷಿಸಬಹುದು.


    ಇದನ್ನೂ ಓದಿ: ಭಾರತಕ್ಕೆ ಲಗ್ಗೆಯಿಡಲಿದೆ ನೋಕಿಯಾದ ಹೊಸ 5ಜಿ ಫೋನ್‌, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ


    ಈ ಜಾಕೆಟ್‌ ಹಲವಾರು ಫೀಚರ್ಸ್‌ ಅನ್ನು ಹೊಂದಿದೆ. ಅಲ್ಲದೇ ಜನರಿಗೆ ಇದು ತುಂಬಾನೇ ಉಪಯೋಗವಾಗಬಹುದು. ಇದು ಜನರನ್ನು ಚಳಿಗಾಲದಲ್ಲಿ ಬೆಚ್ಚಗೆ ಇಡುವಂತೆ ಮಾಡಲು ಪ್ರಯತ್ನಿಸುತ್ತದೆ.

    Published by:Harshith AS
    First published: