ಏನಪ್ಪಾ ಇದು ಸ್ಮಾರ್ಟ್ಫೋನ್ನ (Smartphone) ಹೊಸ ಫೀಚರ್ ಅನ್ಕೊಂಡ್ರಾ, ಹೌದು ಈಗಿನ ಸ್ಮಾರ್ಟ್ಫೊನ್ನಲ್ಲಿ ಇನ್ನೇನೆಲ್ಲಾ ಫೀಚರ್ಸ್ ಬರಬಹುದು ಎಮದು ಊಹೆ ಮಾಡ್ಲಿಕ್ಕೂ ಸಾಧ್ಯವಿಲ್ಲ. ಈ ಸ್ಮಾರ್ಟ್ಫೋನ್ ಕಂಪನಿಗಳು (Smartphone Company) ದಿನದಿಂದ ದಿನಕ್ಕೆ ಏನಾದರೂ ಫೀಚರ್ಸ್ (Features) ಅನ್ನು ಒಳಗೊಂಡ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಆದರೆ ಇತ್ತೀಚಿಗಂತೂ ಸ್ಮಾರ್ಟ್ಫೋನ್ಗಳ ಬಗ್ಗೆ ಹೇಳಬೇಕೆಂದಿಲ್ಲ. ಇದನ್ನು ಒಮ್ಮೆಗೆ ಮಿನಿ ಲ್ಯಾಪ್ಟಾಪ್ ಎಂದರೂ ತಪ್ಪಾಗಲಾರದು. ಯಾಕೆಂದರೆ ಈಗಿನ ಸ್ಮಾರ್ಟ್ಫೋನ್ಗಳು ಲ್ಯಾಪ್ಟಾಪ್ನಂತೆಯೇ (Laptop) ಕೆಲವೊಂದು ಫೀಚರ್ಸ್ ಅನ್ನು ಒಳಗೊಂಡಿದೆ. ಜೊತೆಗೆ ಅದರಂತೆಯೇ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ಆ್ಯಪಲ್ನ ಐಫೋನ್ನಲ್ಲಿ (Apple Iphone) ನಾವು ಕ್ಯಾಮೆರಾ (Camera) ಮೂಲಕ ಹೈಟ್ (Height) ಅನ್ನು ನೋಡಬಹುದಾಗಿದೆ.
ಹೌದು, ಐಫೋನ್ಗಳು ಉತ್ತಮ ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಮುಂದಿರುವ ಕಂಪನಿಯಾಗಿದೆ. ಇದು ಏನಾದರು ವಿಭಿನ ಫೀಚರ್ಸ್ನ ಮೊಬೈಲ್ ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನ ಆಕರ್ಷಿಸಿಕೊಮಡಿದೆ. ಆದರೆ ಐಫೋನ್ನಲ್ಲಿ ಸಾಕಷ್ಟು ಯಾರಿಗೂ ಗೊತ್ತಿರದ ಫೀಚರ್ಸ್ಗಳಿವೆ ಅದ್ರಲ್ಲಿ ಹೈಟ್ ಕಂಡುಹಿಡಿಯುವ ಫೀಚರ್ಸ್ ಕೂಡ ಒಂದು. ಹಾಗಿದ್ರೆ ಯಾವ ರೀತಿ ನೋಡುವುದು? ಎಲ್ಲಿದೆ? ಎಂಬುದನ್ನೆಲ್ಲಾ ಈ ಕೆಳಗೆ ನೀಡಲಾಗಿದೆ.
ಮೊಬೈಲ್ ಕ್ಯಾಮೆರಾ ಮೂಲಕವೇ ಹೈಟ್ ಎಷ್ಟೆಂಬುದನ್ನು ತಿಳಿಯಬಹುದು
ಕ್ಯಾಮೆರಾ ಮೂಲಕ ಹೇಗೆ ಹೈಟ್ ನೋಡುತ್ತಾರೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುತ್ತದೆ. ಆದರೆ ಐಫೋನ್ನಲ್ಲಿ ಕೇವಲ ಕ್ಯಾಮೆರಾದ ಮೂಲಕ ನಿಮ್ಮ ಹೈಟ್ ಎಷ್ಟು ಎಂಬುದನ್ನು ನೋಡಬಹುದಾಗಿದೆ. ಇನ್ನುಮುಂದೆ ಸರಳವಾಗಿ ಹೈಟ್ ನೋಡುವಂತಹ ಸಾಧನ ಇದ್ದರೆ ಅದು ಐಫೋನ್ ಎಂದು ಹೇಳ್ಬಹುದು.
ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಬರಲಿದೆ ಸೋನಿ ಪಾರ್ಟಿ ಸ್ಪೀಕರ್!
ಸಾಮಾನ್ಯವಾಗಿ ಯಾವುದಾದರೂ ಅಗತ್ಯಕ್ಕೆಂದು ಹೈಟ್ ನೋಡಬೇಕೆಂದುಕೊಂಡಾಗ ಮೆಷರ್ ಟೇಪ್ ಮೂಲಕ ಅಳತೆ ಮಾಡಿ ನೋಡುತ್ತಿದ್ದೆವು. ಆದರೆ ಇನ್ಮುಂದೆ ಆಶ ರಗಳೆ ಇಲ್ಲ. ಕೇವಲ ಐಫೋನ್ನ ಕ್ಯಾಮೆರಾ ಇಟ್ಟರೆ ಸಾಕು ಅದುವೇ ನಿಮ್ಮ ಹೈಟ್ ಅನ್ನು ಹೇಳುತ್ತದೆ.
ಹೇಗೆ ನೋಡುವುದು?
ನಿಮ್ಮ ಬಳಿ ಕೂಡ ಐಫೋನ್ ಇದೆ ಎಂದಾದರೆ ನೀವೂ ಕೂಡ ಒಮ್ಮೆ ಈ ಫೀಚರ್ ಅನ್ನು ಟ್ರೈ ಮಾಡ್ಬಹುದು. ಮುಖ್ಯವಾಗಿ ಐಫೋನ್ನಲ್ಲಿ ಇನ್ಬಿಲ್ಟ್ ಎಂಬ ಅಳತೆ ಮಅಡುವ ಅಪ್ಲಿಕೇಶನ್ ಇದೆ. ಆ ಮೂಲಕ ಅದನ್ನು ಡೌನ್ಲೋಡ್ ಮಾಡಿಕೊಂಡು ಯಾವುದಾದರು ವಸ್ತು ಅಥವಾ ಯಾರದ್ದಾದರು ಉದ್ದವನ್ನು ಇದರಲ್ಲಿ ಅಲತೆ ಮಅಡಬಹುದಾಗಿದೆ.
LiDAR ಸ್ಕ್ಯಾನರ್ ಮೂಲಕ ಅಳತೆ ಮಾಡಿ
ಎಲ್ಲಾ ಐಫೋನ್ಗಳ ವರ್ಷನ್ನಲ್ಲಿನ ರಿಯರ್ ಕ್ಯಾಮೆರಾ ಪಕ್ಕದಲ್ಲಿ LiDAR ಸ್ಕ್ಯಾನರ್ ಎಂಬ ಆಯ್ಕೆ ನೀಡಲಾಗಿದೆ. ಈ ಸ್ಕ್ಯಾನರ್ ಮೂಲಕ ನೀವು ನಿಮ್ಮ ಹೈಟ್ ನೋಡುವುದಲ್ಲದೇ ಯಾವುದೇ ವಸ್ತುವನ್ನು ಬೇಕಾದರೂ ಅದರ ಉದ್ದವನ್ನು ಅಳತೆ ಮಾಡಬಹುದು. ಅದರಲ್ಲೂ ಇದು ಬಹಳ ಸ್ಪಷ್ಟವಾಗಿ ಮಾಹಿತಿಯನ್ನು ನೀಡುತ್ತದೆ. ಹಾಗಿದ್ರೆ, ನಿಮ್ಮ ಐಫೋನ್ನಲ್ಲಿ ನಿಮ್ಮ ಎತ್ತರವನ್ನು ಅಥವಾ ನಿಮ್ಮ ಸ್ನೇಹಿತರು ಕುಟುಂಬದವರ ಹೈಟ್ ಅನ್ನು ಸ್ಮಾರ್ಟ್ಫೋನ್ನಲ್ಲಿ ಹೇಗೆ ನೋಡುವುದು ಎಂಬುದನ್ನು ಈ ಕೆಳಗೆ ಓದಿ ತಿಳಿಯೋಣ.
ಹಂತ 1
ಮೊದಲು ನಿಮ್ಮ ನೆಚ್ಚಿನ ಐಫೋನ್ನಲ್ಲಿ ಮೆಷರ್ ಆ್ಯಪ್ ಅನ್ನು ಓಪನ್ ಮಾಡಿ. ನಂತರ ಯಾರ ಹೈಟ್ ಅನ್ನು ನೀವು ಅಳತೆ ಮಾಡಬೇಕೆಂದಿದ್ದೀರೋ ಅವರನ್ನು ಮೊಬೈಲ್ನ ಮುಂದೆ ನಿಲ್ಲಿಸಿ.
ಹಂತ 2
ನಿಲ್ಲಿಸಿದ ನಂತರ ನಿಮ್ಮ ಕ್ಯಾಮೆರಾ ಓಪನ್ ಮಾಡಿದಾಗ ಮೊಬೈಲ್ನ ಡಿಸ್ಪ್ಲೇ ನಲ್ಲಿ ತಲೆಯಿಂದ ಕಾಲಿನವರೆಗೂ ಅವರ ಚಿತ್ರ ಕಾಣಿಸಿಕೊಳ್ಳುತ್ತಿದೆಯೇ ಎಂಬುದನ್ನು ಗಮನಿಸಿ. ಇದನ್ನು ನೀವು ಅಳತೆ ಮಾಡುವಾಗ ಮುಖ್ಯವಾಗಿ ನೋಡಿಕೊಳ್ಳಬೇಕು.
ಹಂತ 3
ನಂತರ ವ್ಯಕ್ತಿಯ ತಲೆಯ ಮೇಲ್ಭಾಗದಲ್ಲಿ ಆತ ಎಷ್ಟು ಎತ್ತರ ಇದ್ದಾನೆ ಎಂಬುದನ್ನು ಇದರ ಡಿಸ್ಪ್ಲೇಯಲ್ಲಿ ನೋಡಬಹುದಾಗಿದೆ. ಈ ಆಯ್ಕೆಯಲ್ಲಿ ನೀವು ಅಡಿಗಳ ಲೆಕ್ಕದಲ್ಲಿ, ಇಂಚುಗಳ ಲೆಕ್ಕದಲ್ಲಿ ಅಥವಾ ಸೆಂಟಿಮೀಟರ್ ಲೆಕ್ಕದಲ್ಲಿ ಮಾಹಿತಿಯನ್ನು ಪಡೆದುಕೊಳ್ಬಹುದು. ಅದು ಹೇಗೆಂದರೆ ನೀವು ಅಲ್ಲೇ ಕಾಣಿಸಿಕೊಳ್ಳುವ ಸೆಟ್ಟಿಂಗ್ ಆಪ್ನಲ್ಲಿ ಮೆಷರ್, ಆಯ್ಕೆ ಮಾಡಿ ನಂತರ ಆ ವಿಭಾಗದಲ್ಲಿ ಕಾಣಿಸಿಕೊಳ್ಳುವ 'ಮೆಷರ್ ಯೂನಿಟ್' ಮೇಲೆ ಟ್ಯಾಪ್ ಮಾಡ್ಬೇಕು.
ಯಾವೆಲ್ಲಾ ಸ್ಮಾರ್ಟ್ಫೋನ್ಗಳಲ್ಲಿ ಈ ಫೀಚರ್ ಲಭ್ಯವಿದೆ?
ಆಪಲ್ನಿಂದ ಬಿಡುಗಡೆಯಾದ ಸ್ಮಾರ್ಟ್ಫೋನ್ಗಳಲ್ಲಿ ಐಫೋನ್ 12 ಪ್ರೋ, ಐಫೋನ್ 12 ಪ್ರೋ ಮ್ಯಾಕ್ಸ್, ಐಫೋನ್ 13 ಪ್ರೋ, ಐಫೋನ್ 13 ಪ್ರೋ ಮ್ಯಾಕ್ಸ್, ಐಫೋನ್ 14 ಪ್ರೋ ಹಾಗೂ ಐಫೋನ್ 14 ಪ್ರೋ ಮ್ಯಾಕ್ಸ್ ಫೋನ್ಗಳಲ್ಲಿ ಈ ಫೀಚರ್ಸ್ ಬಳಕೆಗೆ ಲಭ್ಯ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ