ದೇಶದಲ್ಲಿ ಹಲವಾರು ಪ್ರಸಿದ್ಧ ಟೆಲಿಕಾಂ ಕಂಪನಿಗಳಿವೆ (Telecom Company). ಇತ್ತೀಚೆಗೆ ಈ ಟೆಲಿಕಾಂ ಕಂಪನಿಗಳು ಒಂದಕ್ಕೊಂದು ಪೈಪೋಟಿ ನೀಡುವ ಉದ್ದೇಶದಿಂದ ತನ್ನ ಗ್ರಾಹಕರಿಗೆ ವಿಶೇಷ ಆಫರ್ಸ್ಗಳನ್ನು (Offers) ಬಿಡುಗಡೆ ಮಾಡುತ್ತಲೇ ಇದೆ. ಅದರಲ್ಲೂ ಸರ್ಕಾರಿ ಸ್ವಾಮ್ಯದಲ್ಲಿರುವ ಕಂಪನಿಗಳಲ್ಲಿ ಪ್ರಸಿದ್ಧ ಕಂಪನಿಯೆಂದರೆ ಬಿಎಸ್ಎನ್ಎಲ್ (BSNL). ಈ ಕಂಪನಿ ತನ್ನ ಗ್ರಾಹಕರಿಗೆ ಭಾರೀ ಅಗ್ಗದ ರೀಚಾರ್ಜ್ ಪ್ಲ್ಯಾನ್ಗಳನ್ನು ನೀಡುವ ಮೂಲಕ ಬಹಳಷ್ಟು ಗ್ರಾಹಕರನ್ನು ಹೊಂದಿದೆ. ಅದೇ ರೀತಿ ಬಿಎಸ್ಎನ್ಎಲ್ ಇದೀಗ ಹೊಸವರ್ಷದಲ್ಲಿ 1 ಸಾವಿರ ರೂಪಾಯಿ ಒಳಗಿನ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು (Prepaid Recharge Plan) ಬಿಡುಗಡೆ ಮಾಡಿದೆ. ಇದು ಕಡಿಮೆ ಬೆಲೆಯದ್ದಾಗಿದ್ದು, ಗ್ರಾಹಕರಿಗೆ ಇದರಿಂದ ಬಹಳಷ್ಟು ಪ್ರಯೋಜನಗಳು ಸಿಗಲಿವೆ..
ಹೌದು, ಬಿಎಸ್ಎನ್ಎಲ್ ಇದೀಗ ತನ್ನ ಗ್ರಾಹಕರಿಗಾಗಿ ಭಾರೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಯಾವೆಲ್ಲಾ ಪ್ಲ್ಯಾನ್ಗಳಲ್ಲಿ ಯಾವ ರೀತಿ ಆಫರ್ಸ್ಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಬಿಎಸ್ಎನ್ಎಲ್ನ 997 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ ಟೆಲಿಕಾಂ 997 ರೂಪಾಯಿ ಯೋಜನೆಯು ಒಟ್ಟು 160 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಈ ಸಮಯದಲ್ಲಿ ಪ್ರತಿದಿನ 2 ಜಿಬಿ ಡೇಟಾ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದು. ಇದರೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಮಾಡುವ ಸೌಲಭ್ಯ ದೊರೆಯುತ್ತದೆ.
ಇದನ್ನೂ ಓದಿ: ಜಿಪಿಎಸ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ; ಎಷ್ಟೆಲ್ಲಾ ಕೆಲಸಗಳನ್ನು ಮಾಡುತ್ತೆ ಗೊತ್ತಾ ಜಿಪಿಎಸ್?
ಅಲ್ಲದೇ ಹೆಚ್ಚುವರಿ ಎರಡು ತಿಂಗಳವರೆಗೆ ಉಚಿತ ಪಿಆರ್ಬಿಟಿ ಸೇವೆ ಮತ್ತು ಉಚಿತ ಲೋಕಧುನ್ ಸೇವೆ ಸಹ ಲಭ್ಯವಾಗಲಿದೆ. ಈ ಯೋಜನೆಯ ವ್ಯಾಲಿಡಿಟಿ ಸಮಯದಲ್ಲಿ ಒಟ್ಟು 320 ಜಿಬಿ ಡೇಟಾ ಪ್ರಯೋಜನ ಸಿಗಲಿದೆ. ಒಮ್ಮೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿದರೆ ವರ್ಷದಲ್ಲಿ 160 ದಿನ ಚಿಂತೆ ಮಾಡಬೇಕಾಗಿಲ್ಲ.
ಬಿಎಸ್ಎನ್ಎಲ್ನ 1198 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ ಟೆಲಿಕಾಂನ 1198 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ ಪ್ರತಿ ತಿಂಗಳು 3 ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಇದರೊಂದಿಗೆ ಪ್ರತಿ ತಿಂಗಳು 300 ನಿಮಿಷಗಳ ಉಚಿತ ವಾಯಿಸ್ ಕಾಲ್ ಮಾಡುವ ಪ್ರಯೋಜನ ಲಭ್ಯವಿದೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 36 ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಪ್ಲ್ಯಾನ್ ಹೆಚ್ಚು ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿರಲಿದೆ.
ಬಿಎಸ್ಎನ್ಎಲ್ನ 599 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ ಟೆಲಿಕಾಂನ 599 ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 5 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450 GB ಡೇಟಾ ಪ್ರಯೋಜನ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಂಗ್ ಸೇವೆ ಲಭ್ಯವಾಗಲಿದೆ.
ಬಿಎಸ್ಎನ್ಎಲ್ನ 769 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ ಟೆಲಿಕಾಂನ 769 ರೂಪಾಯಿ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾವನ್ನು ಬಳಸಬಹುದು. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಹಾಗೂ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಕೂಡ ಲಭ್ಯವಾಗುತ್ತದೆ. ಹೆಚ್ಚುವರಿಯಾಗಿ ಎರೋಸ್ ನೌ ಎಂಟರ್ಟೈನ್ಮೆಂಟ್ನ ಚಂದಾದಾರಿಕೆ ಸೌಲಭ್ಯ ದೊರೆಯುತ್ತದೆ.
ಬಿಎಸ್ಎನ್ಎಲ್ನ 269 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ ಟೆಲಿಕಾಂನ 269 ರೂಪಾಯಿ ಪ್ಲ್ಯಾನ್ ಕಡಿಮೆ ಅವಧಿಯ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಅಂದರೆ ಇದು ಒಟ್ಟು 30 ದಿನಗಳ ವ್ಯಾಲಿಡಿಟಿ ಯನ್ನು ಒಳಗೊಂಡಿದೆ. ಪ್ರತಿದಿನ 2 ಜಿಬಿ ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಹಾಗೂ ಅನ್ಲಿಮಿಟೆಡ್ ಕಾಲ್ ಮಾಡುವ ಸೌಲಭ್ಯ ಲಭ್ಯವಾಗುತ್ತವೆ. ಹೆಚ್ಚುವರಿಯಾಗಿ ಎರೋಸ್ ನೌ ಎಂಟರ್ಟೈನ್ಮೆಂಟ್ನ ಚಂದಾದಾರಿಕೆಯು ಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ