ಮೆಟಾ (Meta) ಒಡೆತನದಲ್ಲಿರುವ ಅಪ್ಲಿಕೇಶನ್ಗಳು (Applications) ಇತ್ತೀಚೆಗೆ ಬಹಳಷ್ಟು ಫೀಚರ್ಸ್ಗಳನ್ನು ತಮ್ಮ ಬಳಕೆದಾರರಿಗೆ ಉಪಯೋಗವಾಗುವಂತೆ ಬಿಡುಗಡೆ ಮಾಡಿದೆ. ಈ ಮೆಟಾದಲ್ಲಿರುವಂತಹ ಆ್ಯಪ್ಗಳಲ್ಲಿ ಇನ್ಸ್ಟಾಗ್ರಾಂ ಕೂಹಡ ಒಂದು ಆದರೆ ಈ ವರ್ಷ ಇನ್ಸ್ಟಾಗ್ರಾಂನಲ್ಲಿ (Instagram) ಬಹಳಷ್ಟು ಅಪ್ಡೇಟ್ಸ್ಗಳಾಗಿದ್ದು ಇದರಿಂದ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ ಎನ್ನಬಹುದು. ಜನಪ್ರಿಯ ಸೋಶಿಯಲ್ ಮೀಡಿಯಾಗಳಲ್ಲಿ (Social Media0 ಇನ್ಸ್ಟಾಗ್ರಾಂ ಕೂಡ ಒಂದು. ಈ ಅಪ್ಲಿಕೇಶನ್ ತನ್ನದೇ ಆದಂತಹ ಶೈಲಿಯಲ್ಲಿ ತನ್ನ ಬಳಕೆದಾರರನ್ನು ಹೊಂದಿದ್ದು ಅತೀಹೆಚ್ಚು ಬಳಕೆದಾರರನ್ನು ಇದು ಹೊಂದಿದೆ. ಇನ್ನು ಇದರಲ್ಲಿ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸೆಲಬ್ರಿಟಿ ಕೂಡ ಆಗಬಹುದು. ಈ ಬಾರಿ ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಫೀಚರ್ ಬಿಡುಗಡೆಯಾಗಿದ್ದು ಇದು ಬಳಕೆದಾರರಿಗೆ ಇಷ್ಟವಾಗುವುದಂತು ನಿಜ.
ಹೌದು ಇನ್ಸ್ಟಾಗ್ರಾಂ ಇದುವರೆಗೆ ಬಹಳಷ್ಟು ಅಪ್ಡೇಟ್ಗಳನ್ನು ಮಾಡಿದೆ. ಈ ಬಾರಿ ಇನ್ಸ್ಟಾಗ್ರಾಂ ನಲ್ಲಿ ನೋಟ್ ಎಂಬ ಫೀಚರ್ ಅನ್ನು ಬಿಡುಗಡೆ ಮಾಡಿದ್ದು ಈ ಮೂಲಕ ಒಂದೇ ವಾಕ್ಯದಲ್ಲಿ ಏನನ್ನಾದರು ಬರೆಯಬಹುದಾಗಿದೆ. ಇದು 24 ಗಂಟೆಗಳವರೆಗೆ ಹಾಗೇ ಇರುತ್ತದೆ.
Share Your Thoughts ಫೀಚರ್ಸ್
ಇನ್ಸ್ಟಾಗ್ರಾಂನ ಈ ಫೀಚರ್ ಒಂದು ನೋಟ್ ತರಹದ್ದಾಗಿದೆ. ಇದರಲ್ಲಿ ಬಳಕೆದಾರರು ತಮ್ಮ ಮನಸ್ಸಿಗೆ ಬಂದಂತಹ ಮಾತುಗಳನ್ನು ಇದರಲ್ಲಿ ಟೈಪ್ ಮಾಡುವ ಶೇರ್ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ಹಾಕಿದ ನೋಟ್ ದಿನದಲ್ಲಿ 24 ಗಂಟೆಯೂ ಇರುತ್ತದೆ. ಇದು ಇನ್ಸ್ಟಾಗ್ರಾಂ ಪರಿಚಯಿಸಿದಂತಹ ಹೊಸ ಫೀಚರ್ಸ್ ಆಗಿದೆ.
ಇದನ್ನೂ ಓದಿ: ಗೂಗಲ್ ಮೂಲಕವೂ ಫೈಲ್ ಮ್ಯಾನೇಜರ್ ಓಪನ್ ಮಾಡಿ; ಇದರಿಂದ ನಿಮ್ಮ ಡಾಕ್ಯುಮೆಂಟ್ಸ್ ಹ್ಯಾಕ್ ಆಗುವುದಿಲ್ಲ
ಸ್ಟೇಟಸ್ನಂತೆಯೇ ಕಾರ್ಯನಿರ್ವಹಿಸುತ್ತದೆ
ಇನ್ಸ್ಟಾಗ್ರಾಂನಲ್ಲಿ ಬಿಡುಗಡೆಯಾದಂತಹ ಈ ನೋಟ್ ಫೀಚರ್ ವಾಟ್ಸಪ್ ಸ್ಟೇಟಸ್ನಂತೆಯೇ ಇದೆ. ಆದರೆ ಇದರಲ್ಲಿ ಫೋಟೋ ಅಥವಾ ವಿಡಿಯೋ ಹಾಕಲಾಗುವುದಿಲ್ಲ ಬರವಣಿಗೆ ಮೂಲಕ ಮಾತ್ರ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡಬಹುದು. ಇದನ್ನು ಆಗಾಗ ಬದಲಾಯಿಸುತ್ತಲೂ ಇರಬಹುದಾಗಿದೆ. ಹಾಗು ಇದನ್ನು 24 ಗಂಟೆಗಳ ಕಾಲ ಇರಿಸಬಹುದಾಗಿದೆ
ಇನ್ನುಮುಂದೆ ಮೆಸೇಜ್ ಮಾಡಬೇಕಾಗಿಲ್ಲ
ಈ ಹಿಂದೆ ಬೆಳಗ್ಗೆ ಎದ್ದಾಗ, ರಾತ್ರಿ ಮಲಗುವಾಗ ಗುಡ್ ಮಾರ್ನಿಂಗ್, ಗುಡ್ ನೈಟ್ ಹೇಳುವಂತಹ ಅಭ್ಯಾಸ ಇತ್ತು. ಆದರೆ ಇದನ್ನು ಇನ್ಸ್ಟಾಗ್ರಾಂನಲ್ಲಿ ಪ್ರತಿಯೊಬ್ಬರಿಗೂ ಪರ್ಸನಲ್ ಆಗಿ ಹೋಗಿ ಚಾಟ್ ಮಾಡಬೇಕಿತ್ತು ಆದರೆ ಇನ್ಮುಂದೆ ಎಲ್ಲರಿಗೂ ಈ ಹೊಸ ನೋಟ್ ಫೀಚರ್ ಮೂಲಕ ಒಮ್ಮೆಲೆ ತಿಳಿಸಬಹುದಾಗಿದೆ.
ಇನ್ಸ್ಟಾಗ್ರಾಂನ ಇತರ ಅಪ್ಡೇಟ್ಸ್
ಇನ್ಸ್ಟಾಗ್ರಾಂನಲ್ಲಿ ಈ ಬಾರಿ ಅವತಾರ್ ಫೀಚರ್ ಕೂಡ ಲಭ್ಯವಾಗಿದೆ. ಈ ಅವತಾರ್ ಫೀಚರ್ ಈ ಹಿಂದೆ ಸ್ನ್ಯಾಪ್ಚಾಟ್ನಲ್ಲಿ ಮಾತ್ರ ಇತ್ತು. ಆದರೆ ನಂತರದಲ್ಲಿ ಇದನ್ನು ಇನ್ಸ್ಟಾಗ್ರಾಂಗೂ ಪರಿಚಯಿಸಲಾಯಿತು. ಇನ್ಸ್ಟಾಗ್ರಾಂನಲ್ಲಿ ಮೊದಲಿಗೆ ಯಾವುದೇ ಮೆಸೇಜ್ಗೆ ಅಥವಾ ಸ್ಟೋರಿಗಳಿಗೆ ರಿಪ್ಲೈ ಮಾಡಬೇಕಾದರೆ ಎಮೋಜಿ ಗಳ ಮೂಲಕ ಮಾಡುತ್ತಿದ್ದರು.
ಈಗ ಸ್ವತಃ ಬಳಕೆದಾರರೇ ತಮಗೆ ಬೇಕಾದ ಹಾಗೆ ಅವತಾರ್ ಸ್ಟಿಕ್ಕರ್ಸ್ಗಳನ್ನು ರಚಿಸಬಹುದಾಗಿದೆ. ಇದನ್ನು ನಾವು ಸೆಟ್ಟಿಂಗ್ಸ್ನಲ್ಲಿ ಅವತಾರ್ ಎಂಬ ಆಯ್ಕೆ ಸಿಗುತ್ತದೆ. ಅದಕ್ಕೆ ಟ್ಯಾಪ್ ಮಾಡುವ ಮೂಲಕ ಅವತಾರ್ ಸ್ಟಿಕ್ಕರ್ಸ್ ಅನ್ನು ರಚಿಸಬಹುದು.
ರೀಲ್ಸ್ನ ಅವಧಿ ಏರಿಕೆ
ರೀಲ್ಸ್ಗಳನ್ನು ಫೋಸ್ಟ್ ಮಾಡುವಾಗ ಕೇವಲ 30 ಸೆಕೆಂಡು ಮತ್ತು 60 ಸೆಕೆಂಡುಗಳ ರೀಲ್ಸ್ಗಳನ್ನು ಮಾತ್ರ ಪೋಸ್ಟ್ ಮಾಡಬಹುದಿತ್ತು. ಆದರೆ ಆದರೆ ಈ ಬಾರಿ ಈ ಅವಧಿಯನ್ನು 90 ಸೆಕೆಂಡುಗಳ ಅವಧಿಯನದನು ಏರಿಕೆ ಮಾಡಿದ್ದಾರೆ. ಇದು ರೀಲ್ಸ್ ಮಾಡುವವರಿಗೆ ಇನ್ನಷ್ಟು ಸಹಕಾರಿಯಾಗಿದೆ. ಕೆಲವೊಬ್ಬರು ಮಾಹಿತಿಗಳನ್ನು ನೀಡುವಂತಹ ವಿಡಿಯೋಗಳನ್ನು ಮಾಡಿ ರೀಲ್ಸ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಆದರೆ ಇದು ಕೆಲವೊಮ್ಮೆ ಕಟ್ ಆಗುತ್ತದೆ. ಅದರೆ ಈ ಫೀಚರ್ ಮೂಲಕ ಯಾವುದೇ ಸಮಸ್ಯೆಗಳಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ