ಆ್ಯಪಲ್ ಕಂಪೆನಿ (Apple Company) ತನ್ನ ಬ್ರಾಂಡ್ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ಫೋನ್ಗಳನ್ನು ಇದುವರೆಗೆ ಬಿಡುಗಡೆ ಮಾಡಿದೆ. ಆದರೆ ಇವುಗಳೆಲ್ಲಾ ಭಿನ್ನ ರೀತಿಯ ಫೀಚರ್ಸ್ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಐಫೋನ್ಗಳು (IPhones) ಜನಪ್ರಿಯತೆಯನ್ನು ಪಡೆದದ್ದು ಇದರ ಫೀಚರ್ಸ್ ಮೂಲಕವೇ ಅಂತಾನೇ ಹೇಳ್ಬಹುದು. ಆದರೆ ಐಫೋನ್ನಲ್ಲಿ ಬಳಕೆದಾರರಿಗೆ ಗೊತ್ತಿರದ ಎಷ್ಟೋ ಹಿಡನ್ ಫೀಚರ್ಸ್ಗಳಿವೆ (Hidden Features). ಆದರೆ ಅದು ಸೆಟ್ಟಿಂಗ್ಸ್ ಮೂಲಕ ಆನ್ ಮಾಡಬೇಕಾಗಿದೆ. ಈ ಫೀಚರ್ಗಳೆಲ್ಲಾ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ರಚನೆಯಾಗಿದ್ದು, ಆದರೆ ಹೆಚ್ಚಿನ ಬಳಕೆದಾರರಿಗ ಈ ಫೀಚರ್ಸ್ಗಳ ಬಗ್ಗೆ ತಿಳಿದಿಲ್ಲ.
ಆ್ಯಪಲ್ ಕಂಪೆನಿಯ ಐಫೋನ್ಗಳಲ್ಲಿ ಹಲವಾರು ಹಿಡನ್ ಫೀಚರ್ಸ್ಗಳಿವೆ. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿಯಿಲ್ಲ. ಆದರೆ ಈ ಫೀಚರ್ಗಳನ್ನು ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬಹುದಾಗಿದೆ. ಇದೀಗ ಐಫೋನ್ನಲ್ಲಿ ಮಳೆ ಇಲ್ಲದಿದ್ದರೂ ಸೆಟ್ಟಿಂಗ್ಸ್ ಮೂಲಕ ಮಳೆಯ ಸೌಂಡ್ ಅನ್ನು ಕೇಳಬಹುದಾಗಿದೆ. ಹಾಗಿದ್ರೆ ಈ ಫೀಚರ್ಸ್ ಅನ್ನು ಹೇಗೆ ಸೆಟ್ ಮಾಡುವುದು ಎಂದು ಈ ಕೆಳಗಿನ ಲೇಖನದ ಮೂಲಕ ತಿಳಿಯಿರಿ.
ವೈಟ್ ನಾಯ್ಸ್ ಫೀಚರ್
ವಿಶೇಷವಾಗಿ ಐಫೋನ್ ವೈಟ್ ನಾಯ್ಸ್ ಜನರೇಟ್ ಮಾಡುವಂತಹ ಇನ್ಬಿಲ್ಟ್ ಫೀಚರ್ ಒಂದನ್ನು ಹೊಂದಿದೆ. ಆದರೆ ಈ ಟೂಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಹಲವು ಜನರಿಗೆ ತಿಳಿದಿಲ್ಲ. ಈ ಫೀಚರ್ಸ್ ಅನ್ನು ನೀವು ಐಫೋನ್ನಲ್ಲಿ ಮಾತ್ರ ಕಾಣಬಹುದು. ಈ ಫೀಚರ್ಸ್ ಮಳೆಹನಿಗಳ, ಸಾಗರದ ಅಲೆಗಳ ಹೀಗೆ ಹಲವಾರು ಸೌಂಡ್ಗಳನ್ನು ಪ್ಲೇ ಮಾಡುವಂತಹ ಫೀಚರ್ ಅನ್ನು ಹೊಂದಿದೆ.
ಆದರೆ ಈ ಫೀಚರ್ಸ್ಗಳು ಐಓಎಸ್ 15 ಸಿಸ್ಟಮ್ನಲ್ಲಿ ರನ್ ಆಗುವ ಐಫೋನ್ಗಳಲ್ಲಿ ಮಾತ್ರ ಕಾಣಬಹುದಾಗಿದೆ. ಮಳೆ ಶಬ್ದವನ್ನು ಹೊರಡಿಸುವ ಫೀಚರ್ಸ್ ಆನ್ ಮಾಡುವ ಮೂಲಕ ಮಳೆ ಶಬ್ದವನ್ನು ಆಲಿಸುತ್ತಾ ನಿದ್ರೆ ಮಾಡಬಹುದಾಗಿದೆ.
ಪಾಡ್ಕಾಸ್ಟ್ಗಳಿಗೂ ಬಳಸಬಹುದು
ಹೌದು, ಈ ಫೀಚರ್ನಲ್ಲಿ ಬರುವಂತಹ ಮಳೆ ಅಥವಾ ಸಾಗರದ ಅಲೆಯ ಸೌಂಡ್ ಅನ್ನು ವಿಡಿಯೋಗಳಲ್ಲಿ, ಪಾಡ್ಕಾಸ್ಟ್ಗಳಲ್ಲೂ ಬ್ಯಾಕ್ಗ್ರೌಂಡ್ ಸೌಂಡ್ ಆಗಿ ಬಳಸಬಹುದಾಗಿದೆ. ಆದರೆ ಈ ಫೀಚರ್ಗಳು ಕೆಲವು ಸಾಧನಗಳಲ್ಲಿ ಮಾತ್ರ ಲಭ್ಯವಿದೆ. ಇನ್ನು ಈ ಹಿಡನ್ ಫೀಚರ್ಸ್ಗಳನ್ನು ನಿಮ್ಮ ಐಫೋನ್ನಲ್ಲಿ ಆ್ಯಕ್ಟಿವ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.
ಬ್ಯಾಕ್ಗ್ರೌಂಡ್ ಸೌಂಡ್ ಅನ್ನು ಆ್ಯಕ್ಟಿವ್ ಮಾಡುವುದು ಹೇಗೆ?
ಬ್ಯಾಕ್ಗ್ರೌಂಡ್ ಸೌಂಡ್ ಅನ್ನು ಚೇಂಜ್ ಸಹ ಮಾಡಬಹುದು
ಒಂದು ವೇಳೆ ನೀವು ಬ್ಯಾಕ್ಗ್ರೌಂಡ್ ಸೌಂಡ್ ಅನ್ನು ಬದಲಾಯಿಸಲು ಬಯಸಿದರೆ ಸೌಂಡ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇತರೆ ಸೌಂಡ್ ಫೀಚರ್ಸ್ಗಳು ಕಾಣಸಿಗುತ್ತವೆ. ಅವುಗಳನ್ನು ಆಯ್ಕೆ ಮಾಡುವ ಮೂಲಕ ಬ್ಯಾಕ್ಗ್ರೌಂಡ್ ಸೌಂಡ್ ಅನ್ನು ಸೆಟ್ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ