• Home
  • »
  • News
  • »
  • tech
  • »
  • IPhone: ಐಫೋನ್ ಹರಾಜಿನ ಕಥೆ ಕೇಳಿದ್ರೆ ಗಾಬರಿ ಆಗ್ತಿರಾ!

IPhone: ಐಫೋನ್ ಹರಾಜಿನ ಕಥೆ ಕೇಳಿದ್ರೆ ಗಾಬರಿ ಆಗ್ತಿರಾ!

ಸಾ.ದಂರ್ಭಿಕ ಚಿತ್ರ

ಸಾ.ದಂರ್ಭಿಕ ಚಿತ್ರ

15 ವರ್ಷದ ಹಿಂದಿನ ಮೊಬೈಲ್ ಸಡನ್ ಆಗಿ 32 ಲಕ್ಷಕ್ಕೆ ಹಾರಜಾಗಿರುವ ವಿಚಾರ ಅಚ್ಚರಿಯನ್ನು ಮುಡಿಸಿದೆ. ಮೊಬೈಲ್ ಮೇಲಿರುವ ಪ್ರೀತಿಯೇ ಇದಕ್ಕೆ ಕಾರಣ ಎಂದರು ತಪ್ಪಗಲ್ಲಾ. 2007 ರಲ್ಲಿ ಬಿಡುಗಡೆ ಆದ ಈ ಐಫೋನ್ ಈ ಸಂದರ್ಭದಲ್ಲಿ 32 ಲಕ್ಷಕ್ಕೆ ಹಾರಜಾಗಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಐಫೋನ್ ಬಳಕೆದಾರರು ಮತ್ತು ಸ್ಮಾರ್ಟ್ ಪೋನ್ ಬಳಕೆದಾರರಿಗೆ ಇಂತಹ ಸುದ್ದಿಯನ್ನು ಕೇಳಿ ಎನಪ್ಪಾ ಇದು ಅನ್ನುವಂತೆ ಮಾಡಿಬಿಟ್ಟಿದೆ. 

ಮುಂದೆ ಓದಿ ...
  • Share this:

    15 ವರ್ಷದ ಹಿಂದಿನ ಮೊಬೈಲ್ (Old Phone) ಸಡನ್ ಆಗಿ 32 ಲಕ್ಷಕ್ಕೆ ಹಾರಜಾಗಿರುವ ವಿಚಾರ ಅಚ್ಚರಿಯನ್ನು ಮೂಡಿಸಿದೆ. ಮೊಬೈಲ್ ಮೇಲಿರುವ ಪ್ರೀತಿಯೇ (Mobile Love) ಇದಕ್ಕೆ ಕಾರಣ ಎಂದರೂ ತಪ್ಪಗಲ್ಲಾ. 2007 ರಲ್ಲಿ ಬಿಡುಗಡೆ ಆದ ಈ ಐಫೋನ್ ಈ ಸಂದರ್ಭದಲ್ಲಿ 32 ಲಕ್ಷಕ್ಕೆ ಹಾರಜಾಗಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಐಫೋನ್ ಬಳಕೆದಾರರು (I Phone Users) ಮತ್ತು ಸ್ಮಾರ್ಟ್ ಪೋನ್ ಬಳಕೆದಾರರಿಗೆ ಇಂತಹ ಸುದ್ದಿಯನ್ನು ಕೇಳಿ ಎನಪ್ಪಾ ಇದು ಅನ್ನುವಂತೆ ಮಾಡಿಬಿಟ್ಟಿದೆ.  ವಿದೇಶದಲ್ಲಿ (Foreign) ನಡೆದ ಈ ಕಥೆಯನ್ನು ನೀವು ಕೇಳಿದರು ನಿಮಗೂ ಅಚ್ಚರಿ ಉಂಟಾಗುವುದು ಗ್ಯಾರಂಟಿ. ಅಷ್ಟಕ್ಕೂ ಈ ಮೊಬೈಲ್ ನ ಫೀಚರ್​ಗಳನ್ನು (Feature)  ಸಹಾ ನೀವು ತಿಳಿದುಕೊಳ್ಳಿ.


     ಹಾರಜಿನ ಕಥೆ ಕೇಳಿ


    2007 ರಲ್ಲಿ ಬಿಡುಗಡೆಯಾದ ಮೊದಲ ತಲೆಮಾರಿನ, ಫ್ಯಾಕ್ಟರಿ ಚಿಹ್ನೆ ಇರುವ ಐಪೋನ್ ಇದು.  ಅಂದು 49,305 ರೂಪಾಯಿ ಪ್ರೈಸ್ ಟ್ಯಾಗ್ ಇದ್ದಂತಹ ಫೋನ್, ಬಾಕ್ಸ್‌ ತೆರೆದಿರದ ಐಫೋನ್ ಒಂದು ಬರೋಬ್ಬರಿ 15 ವರ್ಷಗಳ ಬಳಿಕ ಸುಮಾರು 32 ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ. ಹರಾಜಿನಲ್ಲಿ ಕೊನೆಯದಾಗಿ ಈ ಫೋನ್‌ ಅನ್ನು 39.339.60 ಡಾಲರ್‌ಗೆ ಹಾರಜು ಕೂಗಲಾಗಿದ್ದು.


    ಹಳೇ ಐಫೋನ್


    ಮೂಲ ಬೆಲೆಗಿಂತ 65 ಪಟ್ಟು ಹೆಚ್ಚುನೀಡಿ ಈ ಮೊಬೈಲ್ ಖರೀದಿಸಿದರು


    ಈ ಬೆಲೆಯೂ ಈ ಐಫೋನ್‌ನ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚುಎನ್ನಲಾಗುತ್ತದೆ. 8ಜಿಬಿ ಸ್ಟೋರೇಜ್ ಜೊತೆ 2 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಈ ಫೋನ್ ಹೊಂದಿದೆ. ಈ ಫೋನ್‌ ಅನ್ನು ಮೊದಲ ಬಾರಿಗೆ ಅಮೆರಿಕಾದಲ್ಲಿ 2007ರಲ್ಲಿ 599 ಡಾಲರ್ ಅಂದರೆ  49,305 ರೂಪಾಯಿ ಬೆಲೆಗೆ ಮೊದಲ ಬಾರಿಗೆ ಮಾರುಕಟ್ಟೆಗೆ ಮಾರಟ ಮಾಡಲಾಗಿತ್ತು. 


    ಇದನ್ನೂ ಓದಿ: Apple Watch: ಈಗಿನ ಆ್ಯಪಲ್ ವಾಚ್ ಹೆಲ್ತ್ಕೇರ್ ಅನ್ನೂ ಮಾಡ್ತಿದ್ಯಾ? ಏನಿದು ವಿಚಿತ್ರ ಸಂಗತಿ


    ಆದರೆ ಈ ಫೋನ್ ಇತ್ತೀಚೆಗೆ ನಡೆದ ಹರಾಜಿನಲ್ಲಿ ತನ್ನ ಮೂಲ ಬೆಲೆಗಿಂತ 65 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಮೊದಲಿಗೆ ಈ ಐಫೋನ್ ಹರಾಜಿನಲ್ಲಿ ಭಾಗಿಯಾದವರು 2,500 ಡಾಲರ್‌ಗೆ ಹರಾಜು ಕೂಗಿದರು ನಂತರ ಅದು 10 ಸಾವಿರ ಡಾಲರ್‌ಗೆ ಏರಿಕೆ ಆಯ್ತು.


    ಎರಡು ದಿನ ಇದೇ ಬೆಲೆಯಲ್ಲಿ ನಿಂತಿತ್ತು. ಎರಡು ದಿನ ಕಳೆದಂತೆ 28 ಬಾರಿ ಬೇರೆ ಬೇರೆ ಮೊತ್ತದೊಂದಿಗೆ ಹರಾಜು ಕೂಗುತ್ತಾ ಹೋಗಿದ್ದರಿಂದ ಇದರ ದರ ಏರಿಕೆ ಆಗುತ್ತಾ ಹೋಗಿದ್ದು, ಶೀಘ್ರವಾಗಿ ಇದರ ಬೆಲೆ ಒಮ್ಮೆಲೆ ಡಾಲರ್‌ನಲ್ಲಿಯೇ ಐದು ಅಂಕಿಯನ್ನು ದಾಟಿತ್ತು.  ನಿಜಕ್ಕೂ ಇದು ಅಚ್ಚರಿಯ ಸಂಗತಿಯೇ


    ಈ ಐಫೋನ್ ಅನ್ನು ಪ್ಯಾಕ್ ಮಾಡಿದ ನಂತರ ತೆರೆದೇ ಇಲ್ಲ ಎಂಬುದನ್ನು ಖಚಿತಪಡಿಸಲು ಈ ಹರಾಜು ವೆಬ್‌ಸೈಟ್ ಖಾತ್ರಿಪಡಿಸಿತು.  ಇದರಲ್ಲಿ ಯಾವುದೇ ತೊಂದರೆ ಇಲ್ಲ ಎನ್ನುವುದು ಸಹಾ ಖಚಿತವಾಗಿದೆ . ಇದರ ಪ್ಯಾಕ್ ಮೇಲಿರುವ ಫ್ಯಾಕ್ಟರಿ ಸೀಲ್, ಸರಿಯಾದ ಸೀಮಾ ವಿವರಗಳು ಬಾಕ್ಸ್‌ನ ಬಿಗಿತ ಎಲ್ಲವೂ ಸುಸ್ಥಿತಿಯಲ್ಲಿದೆ. ಅಲ್ಲದೇ ಬಾಕ್ಸ್ ಮೇಲಿರುವ ಲೇಬಲ್‌ಗಳು ಮೂಲದಲ್ಲಿರುವಂತೆಯೇ ಇದ್ದು, ಮಾರುಕಟ್ಟೆಗೆ ಹೋದ ನಂತರದ ಯುಪಿಸಿ ಸ್ಟಿಕ್ಕರ್‌ಗಳಾಗಲಿ ಸೀಲ್‌ಗಳಾಗಲಿ ಇದರ ಮೇಲಿಲ್ಲ. ಬ್ರಾಂಡ್ ಹೊಸದರಂತೆ ಇದ್ದು ಎಂದು ಕೂಡ ಇದನ್ನು ಸಕ್ರಿಯಗೊಳಿಸಿಲ್ಲ ಎಂದು ಈ ಹರಾಜು ವೆಬ್‌ಸೈಟ್ ಹೇಳಿಕೊಂಡಿದೆ.


    ಇದನ್ನೂ ಓದಿ: Airtel Plan: ಏರ್ಟೆಲ್​ನ ಈ ಹೊಸ ಪ್ಲಾನ್ ಹಾಕಿಸಿಕೊಂಡರೆ ಸಿಗಲಿದೆ ಬಂಪರ್ ಆಫರ್


    ಸ್ಮಾರ್ಟ್‌ಫೋನ್ ಉದ್ಯಮ  ಜಗತ್ತಿನಲ್ಲಿ ಗೇಮ್ ಚೇಂಜರ್ ಎಂದೇ ಪರಿಗಣಿಸಲಾಗಿದೆ


    ಮೊದಲ ಐಫೋನ್ ಅನ್ನು ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಜನವರಿ 9, 2007 ರಂದು ಬಿಡುಗಡೆಗೊಳಿಸಿದ್ದರು. ಇದು ಬಿಡುಗಡೆಯಾದ ಐದು ತಿಂಗಳ ನಂತರ ಮಾರಾಟಕ್ಕೆ ಲಭ್ಯವಾಯಿತು. ಈ ಐಫೋನ್‌ ಬಿಡುಗಡೆಯನ್ನು ಸ್ಮಾರ್ಟ್‌ಫೋನ್ ಉದ್ಯಮ  ಜಗತ್ತಿನಲ್ಲಿ ಗೇಮ್ ಚೇಂಜರ್ ಎಂದೇ ಪರಿಗಣಿಸಲಾಗಿದೆ.

    Published by:Harshith AS
    First published: