• Home
 • »
 • News
 • »
 • tech
 • »
 • Wi-Fi Router: ಈ ಸಾಧನ ನಿಮ್ಮಲ್ಲಿದ್ರೆ ಸಾಕು, ಕರೆಂಟ್ ಇಲ್ಲದಿದ್ರೂ ವೈ-ಫೈ ವರ್ಕ್ ಆಗುತ್ತೆ!

Wi-Fi Router: ಈ ಸಾಧನ ನಿಮ್ಮಲ್ಲಿದ್ರೆ ಸಾಕು, ಕರೆಂಟ್ ಇಲ್ಲದಿದ್ರೂ ವೈ-ಫೈ ವರ್ಕ್ ಆಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದು ಹೊಸ ತಂತ್ರಜ್ಞಾನವಾಗಿದ್ದು ಇಲ್ಲಿ ಯಾವುದೇ ವಿದ್ಯುತ್‌ನ ಸಹಾಯವಿಲ್ಲದೆಯೇ ವೈ-ಫೈ ಸೌಲಭ್ಯ ಪಡೆಯಬಹುದಾಗಿದೆ. ಇದೊಂದು ವಿಶಿಷ್ಟ ರೀತಿಯ ತಂತ್ರಜ್ಞಾನವಾಗಿದೆ. ಇದರ ವಿಶೇಷ ಫೀಚರ್ಸ್‌ಗಳೇನು? ಇಲ್ಲಿದೆ ಮಾಹಿತಿ...

 • Share this:

  ಕರೋನಾದಿಂದಾಗಿ (Corona) ಎಲ್ಲೆಡೆ ವರ್ಕ್ ಫ್ರಮ್ ಹೋಂ (Work From Home) ಸಂಸ್ಕೃತಿ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಕೆಲಸಗಳನ್ನು, ವ್ಯವಹಾರ (Business) ನಡೆಸಲು ಎಲ್ಲವನ್ನು ಮನೆಯಲ್ಲಿ ಮಾಡುತ್ತಾರೆ. ಅದೇ ರೀತಿ ಈಗ ಪ್ರತಿಯೊಂದು ಆನ್‌ಲೈನ್‌ನಲ್ಲೇ (Online) ಖರೀದಿ (Buy) ಮಾಡಬಹುದಾಗಿದೆ ಮತ್ತು ಮಾರಾಟವೂ (Sale) ಮಾಡಬಹುದು. ಆದರೆ ಈ ಎಲ್ಲಾ ಕಾರ್ಯಗಳು ನಡೆಯಬೇಕಾದರೆ ಇಂಟರ್ನೆಟ್‌ ಸೌಲಭ್ಯ ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಬ್ಬರು ವೈ-ಫೈ (WiFi) ಸೌಲಭ್ಯವನ್ನು ಹೊಂದಿರುತ್ತಾರೆ. ಆದರೆ ಪ್ರತೀ ದಿನವೂ ಈ ವೈ-ಫೈ ಸೌಲಭ್ಯ ಕಾರ್ಯನಿರ್ವಹಿಸುವುದಿಲ್ಲ. ಏಕೆಂದರೆ ಕೆಲವೊಮ್ಮೆ ವಿದ್ಯುತ್ ಕಡಿತವಾದಾಗ ವೈ-ಫೈ ಕೂಡ ಆಫ್ ಆಗುತ್ತದೆ.  


  ಈ ವೈ-ಫೈಗಳು ಕೇವಲ ವಿದ್ಯುತ್‌ನ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ವಿದ್ಯುತ್‌ ಕಟ್‌ ಆದಾಗ ವೈ-ಫೈ ಕೂಡಾ ಆಫ್‌ ಅಗುತ್ತದೆ. ನಂತರ ಮತ್ತೆ ಪವರ್ ಆನ್ ಆದ ಕೆಲವೇ ನಿಮಿಷಗಳಲ್ಲಿ ವೈ-ಫೈ ಮತ್ತೆ ಆನ್ ಆಗುತ್ತದೆ.  ಇದರಿಂದಾಗಿ ಕೆಲಸ ಮಾಡಲು ತೊಂದರೆ ಆಗುತ್ತದೆ. ನೀವೂ ಸಹ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ಒಂದು ಸಣ್ಣ ಕೆಲಸ ಮಾಡುವುದರಿಂದ ನೀವು ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.


  ಏನಿದು ಹೊಸ ತಂತ್ರಜ್ಞಾನ:


  ಪವರ್ ಕಟ್ ಆದ ಸಂದರ್ಭದಲ್ಲಿ ವೈ-ಫೈ ಅಡಚಣೆಯನ್ನು ತಪ್ಪಿಸಲು ಅನೇಕ ಜನರು ಬೇರೆ ಬೇರೆ ರೀತಿಯಲ್ಲಿ ಹರಸಾಹಸ ಪಡುತ್ತಾರೆ. ಅದರಲ್ಲೂ ಇನ್ನು ಕೆಲವರು ಇನ್ವರ್ಟರ್ ಅನ್ನು ಬಳಸುತ್ತಾರೆ. ಆದರೆ ಎಲ್ಲರಿಗೂ ಅಷ್ಟು ಸೌಕರ್ಯವಿರುವುದಿಲ್ಲ. ನಿಮ್ಮ ಈ ಸಮಸ್ಯೆಯಿಂದ ಪಾರಾಗಲು ಒಂದು ಡಿವೈಸ್ ನಿಮಗೆ ಸಹಾಯಕವಾಗಬಹುದು. ಇದು ವೈ-ಫೈ ರೂಟರ್‌ನೊಂದಿಗೆ ಕಾರ್ಯನಿರ್ವಹಿಸುವ ಮಿನಿ ಯುಪಿಎಸ್ ಆಗಿದೆ.


  If you have this device WiFi will work even if you dont have enough current
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ: ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾದ ತ್ರೈಮಾಸಿಕ ಆದಾಯದಲ್ಲಿ ಕುಸಿತ, 5%ಕ್ಕಿಂತ ಹೆಚ್ಚು ನಷ್ಟಕ್ಕೊಳಗಾದ ಷೇರುಗಳು


  ರೂಟರ್‌ಗಾಗಿ ಜಿಂಕ್ ಯುಪಿಎಸ್:


  ಈ ಸಾಧನದ ಹೆಸರು ಜಿಂಕ್‌ ಯುಪಿಎಸ್‌ ರೂಟರ್‌ ಎಂದು. ಇದರ ಬೆಲೆ 2,999 ರೂ. ಆಗಿದ್ದರೂ, ಇದನ್ನು ಅಮೆಜಾನ್ ನಿಂದ ಅಗ್ಗವಾಗಿ ಖರೀದಿಸಬಹುದು. ಅಮೆಜಾನ್‌ನಲ್ಲಿ ಇದನ್ನು 53% ರಿಯಾಯಿತಿಯೊಂದಿಗೆ 1,399 ರೂ.ಗಳಿಗೆ ಖರೀದಿಸಬಹುದು. ಇದು Wi-Fi ರೂಟರ್ ಬ್ರಾಡ್‌ಬ್ಯಾಂಡ್ ಮೋಡೆಮ್ ಆಗಿದೆ. ಇದು ಹೆಚ್ಚು ಗುಣಮಟ್ಟದ್ದಾಗಿದ್ದು ಇದರ ತೂಕವೂ ಕಡಿಮೆ.


  ಜಿಂಕ್‌ ಯುಪಿಎಸ್‌ ರೂಟರ್‌ ಹೇಗೆ ಕಾರ್ಯನಿರ್ವಹಿಸುತ್ತದೆ?


  • ಇದು ಮಿನಿ ಯುಪಿಎಸ್ ಆಗಿದೆ, ಇದು 12V ವೈಫೈ ರೂಟರ್ ಬ್ರಾಡ್‌ಬ್ಯಾಂಡ್ ಮೋಡೆಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

  • ಇದು ವಿದ್ಯುತ್ ಸ್ಥಗಿತಗೊಂಡ ನಂತರ ಸುಮಾರು 4 ಗಂಟೆಗಳ ಪವರ್ ಬ್ಯಾಕಪ್ ನೀಡುತ್ತದೆ.


  If you have this device WiFi will work even if you dont have enough current
  ಸಾಂದರ್ಭಿಕ ಚಿತ್ರ


  • ಇದು ನಿಮ್ಮ ಅಸ್ತಿತ್ವದಲ್ಲಿರುವ ಅಡಾಪ್ಟರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

  • ಸ್ಮಾರ್ಟ್ ಚಾರ್ಜಿಂಗ್ ತನ್ನ UPS ಬ್ಯಾಟರಿಯನ್ನು ಬ್ಯಾಟರಿ ನಿರ್ವಹಣೆಯೊಂದಿಗೆ ಸ್ವಯಂಚಾಲಿತವಾಗಿ ಚಾರ್ಜ್ ಮಾಡುತ್ತದೆ. ಇದರ ಅನುಸ್ಥಾಪನೆಯು ಸಾಕಷ್ಟು ಸುಲಭವಾಗಿದೆ. ಅಲ್ಲದೆ ಇದು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ.‌


  ಯಾವ ರೀತಿ ಉಪಯೋಗವಾಗುತ್ತದೆ?


  ವೈ-ಫೈ ಎಂಬುದು ಈಗ ಪ್ರತಿಯೊಬ್ಬರು ಬಳಕೆ ಮಾಡುವ ಅಂತರ್ಜಾಲದ ಒಂದು ವಿಧವಾಗಿದೆ. ಇದು ಮುಖ್ಯವಾಗಿ ನೆಟ್‌ವರ್ಕ್‌ ಸಮಸ್ಯೆ ಇದ್ದವರಿಗೆ, ವರ್ಕ್ ಫ್ರಮ್‌ ಹೋಮ್‌ ಮಾಡುವವರಿಗೆ ಬಹಳಷ್ಟು ಉಪಯೋಗವಾಗುತ್ತದೆ. ಇದೀಗ ವೈ-ಫೈ ಸೌಲಭ್ಯದಲ್ಲಿ ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಇದುವರೆಗೆ ಕರೆಂಟ್‌ ಇದ್ರೆ ಮಾತ್ರ ವೈ-ಫೈ ಸೌಲಭ್ಯವನ್ನು ಪಡೀಬಹುದಿತ್ತು ಅದರೆ ಇನ್ನು ಮುಂದೆ ಕರೆಂಟ್‌ ಇಲ್ಲದೆಯೂ ವೈ-ಫಯ ಸೌಲಭ್ಯ ಪಡೀಬಹುದಾಗಿದೆ.


  ಇದನ್ನೂ ಓದಿ: ಒಂದೇ ಒಂದು ಸೆಕೆಂಡ್​ನಲ್ಲಿ ಇಡೀ ಪ್ರಪಂಚದ ಇಂಟರ್ನೆಟ್ ಟ್ರಾಫಿಕ್ ರವಾನಿಸುವ ಚಿಪ್ ಸಂಶೋಧನೆ


  ಈ ತಂತ್ರಜ್ಞಾನಕ್ಕೆ ಯಾವುದೇ ರೀತಿಯ ವಿದ್ಯುತ್‌ನ ಅವಶ್ಯಕತೆ ಇಲ್ಲ. ಮೊದಲು ಚಾರ್ಜ್‌ ಮಾಡಿಕೊಂಡರೆ ಸಾಕು ಆಮೇಲೆ ನಮಗೆ ಬೇಕಾದ ಸಮಯದಲ್ಲಿ ಈ ಸಾಧನವನ್ನು ಬಳಸಬಹುದಾಗಿದೆ.

  Published by:Harshith AS
  First published: