• Home
  • »
  • News
  • »
  • tech
  • »
  • Bluetooth App: ನಿಮ್ಮ ಮೊಬೈಲ್​ನಲ್ಲಿ ಈ ರೀತಿಯ ಆ್ಯಪ್​ಗಳು ಇದ್ರೆ ಈಗಲೇ ಡಿಲೀಟ್ ಮಾಡಿ

Bluetooth App: ನಿಮ್ಮ ಮೊಬೈಲ್​ನಲ್ಲಿ ಈ ರೀತಿಯ ಆ್ಯಪ್​ಗಳು ಇದ್ರೆ ಈಗಲೇ ಡಿಲೀಟ್ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ ನೀವು ಬ್ಲೂಟೂತ್​ ಆ್ಯಪ್​ಗಳನ್ನು ಬಳಸುತ್ತಿದ್ದರೆ ತಕ್ಷಣ ಡಿಲೀಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಖಾಸಗಿ ವಿಷಯಗಳನ್ನು ಕಳೆದುಕೊಳ್ಳಬೇಕಾಗಬಹುದು. ಇದು ಕೊರಿಕೆಯಲ್ಲ ಎಚ್ಚರಿಕೆ.

  • Share this:

    ಗೂಗಲ್ ಪ್ಲೇ ಸ್ಟೋರ್​ನಲ್ಲಿರುವ (Google Play Store) ನೀವು ಬ್ಲೂಟೂತ್​ ಆ್ಯಪ್​ (Bluetooth App)ಗಳನ್ನು ಬಳಸುತ್ತಿದ್ದರೆ ತಕ್ಷಣ ಡಿಲೀಟ್ (Delete) ಮಾಡಿ. ಇಲ್ಲದಿದ್ದರೆ ನಿಮ್ಮ ಖಾಸಗಿ ವಿಷಯಗಳನ್ನು ಕಳೆದುಕೊಳ್ಳಬೇಕಾಗಬಹುದು. ಇಂತಹ ಆ್ಯಪ್ ಗಳಿಂದ ಎಷ್ಟೋ ಜನ ಮೋಸ ಹೋಗಿರುವ ಉದಾಹರಣೆ (Example) ಇದೆ. ಅದಗ್ಯೂ ಗೂಗಲ್ ಪ್ರಕಾರ ಇಂದಿಗೂ ಸುಮಾರು ಜನ ಬ್ಲೂಟೂತ್​ ಆ್ಯಪ್​ಗಳನ್ನು ಬಳಸುತ್ತಿದ್ದರೆ ಎನ್ನಲಾಗುತ್ತದೆ. ಅದೇರೀತಿ ಗೂಗಲ್ ಸಂಸ್ಥೆ ಎಚ್ಚರಿಕೆಯನ್ನು ಸಹಾ ನೀಡಿದೆ. 


    ಖಾಸಗಿ ಮಾಹಿತಿಗಳು ದುರ್ಬಳಕೆಯಾಗುತ್ತಿದೆ


    ಮೊಬೈಲ್​ನ ಗೂಗಲ್ ಪ್ಲೇ ಸ್ಟೋರ್​​ನಲ್ಲಿರುವ ಹಲವು ಆ್ಯಪ್​ಗಳು ನಿಮ್ಮ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ತೊಂದರೆ ಇದೆ. ಹೀಗಾಗಿ,  ಗೂಗಲ್ ಪ್ಲೇಸ್ಟೋರ್ ನಲ್ಲಿರುವ ಈ ಬ್ಲೂಟೂತ್​ ಆ್ಯಪ್​ಗಳನ್ನು ನೀವೇನಾದರೂ ಬಳಸುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಂಡು, ಆ ಆ್ಯಪ್​ಗಳನ್ನು ಅನ್​ಇನ್​ಸ್ಟಾಲ್ ಮಾಡುವುದು ಒಳ್ಳೆಯದು. ಬಳಕೆದಾರರ ಮಾಹಿತಿಯನ್ನು ಕದಿಯಬಹುದಾದ ಕೆಲವು ಮಾಲ್‌ವೇರ್ ಅನ್ನು ಒಳಗೊಂಡಿರುವ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇಸ್ಟೋರ್​ನಲ್ಲಿದೆ.


    ಈ ಬ್ಲೂಟೂತ್ ಆ್ಯಪ್‌ಗಳ ಬಗ್ಗೆ ನಿಯಮಿತವಾಗಿ ಸ್ಕ್ಯಾನಿಂಗ್ ಅನ್ನು ನಡೆಸುತ್ತಿದ್ದರೂ ಮತ್ತು ಈ ಅಪ್ಲಿಕೇಶನ್ ಡೆವಲಪರ್‌ಗಳ ಕುರಿತು ಸೂಚನೆ ನೀಡಲಾಗಿದ್ದರೂ ಅದನ್ನು ಕಂಡುಹಿಡಿಯಲು ಮತ್ತು ಡಿಲೀಟ್ ಮಾಡಲು ಗೂಗಲ್ ವಿಫಲವಾಗಿದೆ. ಕೆಲವು ಅಪ್ಲಿಕೇಶನ್ ಡೆವಲಪರ್‌ಗಳು ದುರುದ್ದೇಶಪೂರಿತ ಕೋಡ್ ಹೊಂದಿರುವ ಬ್ಲೂಟೂತ್ ಕೇಂದ್ರಿತ ಅಪ್ಲಿಕೇಶನ್‌ಗಳನ್ನು ಡಿಸೈನ್ ಮಾಡಿದ್ದಾರೆ. ಇದರಿಂದ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆಯಾಗುವ, ಹ್ಯಾಕ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.


    ಕೆಲವು ಆ್ಯಪ್​ಗಳ ಬಗ್ಗೆ ತಿಳಿದುಕೊಳ್ಳಿ


    ಇದೀಗ ಪಟ್ಟಿ ಮಾಡಲಾಗಿರುವ ಬ್ಲೂಟೂತ್  ಅಪ್ಲಿಕೇಶನ್‌ಗಳ ನಮ್ಮ ಪ್ಲೇಸ್ಟೋರ್ ನಲ್ಲಿ ಕಾಣಸಿಗುತ್ತದೆ. ಒಟ್ಟಾರೆ 4 ಆ್ಯಪ್ ಗಳನ್ನು ಪತ್ತೆಮಾಡಲಾಗಿದೆ. ಮತ್ತು ಈ ಆ್ಯಪ್ ಗಳನ್ನು ಉದಾಹರಣೆ ಮಾದರಿಯಲ್ಲಿ ತೊರಿಸಲಾಗುತ್ತಿದೆ. ಇದನ್ನು ನೋಡಿಯಾದರೂ ಜನರು ಎಚ್ಚೆತ್ತುಕೊಳ್ಳಲಿ ಎಂಬ ಕಾರಣಕ್ಕೆ ಈ ನಾಲ್ಕು ಆ್ಯಪ್​ಗಳ ಬಗ್ಗೆ ತಿಳಿಸಲಾಗಿದೆ.


     If you have these types of apps in your mobile, then your story is over
    ಸಾಂಕೇತಿಕ ಚಿತ್ರ


    ಆ 4 ಆ್ಯಪ್ ಯಾವುದು ಗೊತ್ತಾ?


    •  ಬ್ಲೂಟೂತ್ ಆಟೋ ಕನೆಕ್ಟ್​ (Bluetooth Auto Connect)

    • ಡ್ರೈವರ್: ಬ್ಲೂಟೂತ್ ವೈ-ಫೈ, ಯುಎಸ್​ಬಿ (Driver: Bluetooth Wi-Fi, USB)

    • ಬ್ಲೂಟೂತ್ ಅಪ್ಲಿಕೇಶನ್ ಸೆಂಡರ್ (Bluetooth App Sender)

    • ಮೊಬೈಲ್ ಟ್ರಾನ್ಸ್​ಫರ್: ಸ್ಮಾರ್ಟ್ ಸ್ವಿಚ್ (Mobile transfer: smart switch)


    ಈ ಆ್ಯಪ್ ಗಳೇ ನಿಮ್ಮ ಖಾಸಗಿ ವಿಷಯಗಳನ್ನು ಕದಿಯುತ್ತಿರುವುದು. ನಿಮ್ಮ ಬಳಿ ಇಂತಹ ಆ್ಯಪ್ ಇದ್ದರೆ ಡಿಲೀಟ್ ಮಾಡಿ.


    ಇದನ್ನೂ ಓದಿ: Twitter: ಎಲೋನ್‌ ಮಸ್ಕ್‌ ಜೊತೆ ಕೈಜೋಡಿಸುತ್ತಿರುವ ಶ್ರೀರಾಮ್‌ ಕೃಷ್ಣನ್!


    ಭಾರತದ ಬ್ಯಾಂಕ್​ಗಳನ್ನು ಲೂಟಿ ಮಾಡಲಿದೆ ಈ ಡೇಂಜರ್ ಆ್ಯಪ್


    ಕಳೆದ ವಾರವಷ್ಟೆ ಕಂಡುಬಂದತಹ ಡ್ರಿನಿಕ್ ವೈರಸ್ ಎಂಬ ವೈರಲ್ ಆದಾಯ ತೆರಿಗೆ ಮರುಪಾವತಿಯ ಹೆಸರಿನಲ್ಲಿ ಬಳಕೆದಾರರ ನಿಗೂಡ ಡೇಟಾವನ್ನು ಕದಿಯುತ್ತದೆ. ಅಲ್ಲದೆ ಭಾರತೀಯ ಬಳಕೆದಾರರ 18 ಬ್ಯಾಂಕ್‌ಗಳನ್ನು ಇದು ಟಾರ್ಗೆಟ್ ಮಾಡಿದೆಯಂತೆ ಎನ್ನುವ ಸುದ್ದಿ ಕೇಳಿಬಂದಿದೆ. ಪ್ರಸ್ತುತ, ಈ ಬ್ಯಾಂಕ್‌ಗಳ ಸಾಲಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಇದೆ ಎಂದು ಹೇಳಲಾಗಿದೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಹೊಂದಿದ್ದರೆ ಎಚ್ಚರ ವಹಿಸಿ.


    ಇದನ್ನೂಓದಿ: Fake App: ಪ್ಲೇ ಸ್ಟೋರ್​ನಲ್ಲಿ ನಿಮ್ಮನ್ನು ಕದಿಯುವ ಕಳ್ಳರಿದ್ದಾರೆ ಎಚ್ಚರ!


    ಕೇವಲ ಒಂದು ಬ್ಯಾಂಕ್ ಮಾತ್ರವಲ್ಲದೆ ಭಾರತದಲ್ಲಿರುವ ಒಟ್ಟು 27 ಬ್ಯಾಂಕಿಂಗ್ ಸಂಸ್ಥೆಗಳನ್ನು ಈ ವೈರಸ್ ಟಾರ್ಗೆಟ್ ಮಾಡಿಕೊಂಡಿದೆ. ಡ್ರಿನಿಕ್ ವೈರಸ್‌ನ ಹೊಸ ಆವೃತ್ತಿಯು ಬಳಕೆದಾರರನ್ನು ಫಿಶಿಂಗ್‌ ಪೇಜ್‌ಗೆ ಕರೆದೊಯ್ಯುತ್ತದೆ ಮತ್ತು ಬಳಕೆದಾರರ ಎಲ್ಲ ಮಾಹಿತಿಯನ್ನು ಕದಿಯುತ್ತದೆ. ಈ ಮಾಲ್ವೇರ್ ಅಭಿವೃದ್ಧಿಪಡಿಸಿದವರು ಪೂರ್ತಿಯಾಗಿ ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿ ರೂಪಿಸಿದ್ದಾರೆ ಎಂದು ಹೇಳಲಾಗಿದೆ.

    First published: