ಕೇವಲ ಸ್ಮಾರ್ಟ್ಫೋನ್ (Smartphone) ಇದ್ದರೆ ಏನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಮೊಬೈಲ್ ಅಪ್ಲಿಕೇಶನ್ಗಳು (Mobile Application) ಸಹ ಮುಖ್ಯವಾಗಿರುತ್ತದೆ. ಸ್ಮಾರ್ಟ್ಫೋನ್ಗಳಲ್ಲಿ ಮೆಸೇಜ್, ಬ್ಯಾಂಕ್ ವಹಿವಾಟು, ಡೀಟೇಲ್ಸ್ಗಳನ್ನು ಪಡೆಯಬೇಕಾದರೆ ಅದರದೇ ಆದಂತಹ ಕೆಲವೊಂದು ಅಪ್ಲಿಕೇಶನ್ಗಳಿರುತ್ತದೆ. ಆದರೆ ಇದನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ (Google Play Store) ಮೂಲಕ ಮತ್ತು ಆ್ಯಪಲ್ ಬಳಕೆದಾರರು ಆ್ಯಪಲ್ ಸ್ಟೋರ್ (Apple Store) ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ಇತ್ತೀಚೆಗೆ ಕೆಲವೊಂದು ಅಪ್ಲಿಕೇಶನ್ಗಳಿಂದ ಮೊಬೈಲ್ ಬಳಕೆದಾರರು ಮೋಸ ಹೋಗುತ್ತಿದ್ದಾರೆ. ಬಳಕೆದಾರರ ಡೇಟಾವನ್ನು ಹ್ಯಾಕ್ ಮಾಡುವ ಉದ್ದೇಶದಿಂದ ಈ ಆ್ಯಪ್ಗಳು ರಚನೆಯಾಗಿದೆ. ಆದರೆ ಇದಕ್ಕೀಗ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ.
ನಮ್ಮ ಮೊಬೈಲ್ಗಳಲ್ಲಿ ಕೆಲವೊಂದು ಬಾರಿ ತನ್ನಷ್ಟಕ್ಕೇ ಕೆಲವೊಂದು ಆ್ಯಪ್ಗಳು ಸೇರಿರುತ್ತದೆ. ಇನ್ನೂ ಕೆಲವರು ಟೈಮ್ ಪಾಸ್ ಮಾಡುವ ಉದ್ದೇಶದಿಂದ ಗೇಮಿಂಗ್ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಕೆಲವೊಂದು ಆ್ಯಪ್ಗಳು ಬಳಕೆದಾರರ ಡೇಟಾವನ್ನು ಬಳಸಿ ವಂಚನೆ ಮಾಡುತ್ತಿದೆ. ಹಾಗಿದ್ರೆ ಅಪ್ಲಿಕೇಶನ್ಗಳು ಯಾವುದೆಂದು ನೋಡ್ಬೇಕಾದ್ರೆ ಈ ಲೇಖನವನ್ನು ಓದಿ.
ಮಾಲ್‌ವೇರ್ ಅಟ್ಯಾಕ್ಗಳಾಗುತ್ತಿದೆ
ಸಾಮಾನ್ಯವಾಗಿ ಕೆಲವು ಗೇಮಿಂಗ್ ಹಾಗೂ ಫೋಟೋ ಎಡಿಟಿಂಗ್ ಅಪ್ಲಿಕೇಶನ್ಗಳು ಮಾಲ್‌ವೇರ್ ಮೂಲಕ ಬಳಕೆದಾರರ ಮೊಬೈಲ್ ಮೇಲೆ ದಾಳಿ ಮಾಡಿ, ಅವರ ಖಾಸಗಿ ವಿವರ ಹಾಗೂ ಹಣಕಾಸಿಗೆ ಸಂಬಂಧಿತ ವಿವರವನ್ನು ಕದ್ದು ಹ್ಯಾಕರ್ಸ್ಗಳಿಗೆ ನೀಡುತ್ತದೆ. ಇದರಿಂದ ಮೊಬೈಲ್ ಬಳಕೆದಾರರು ವಂಚಕರಿಗೆ ಸುಲಭದಲ್ಲಿ ಸಿಗುತ್ತಿದ್ದಾರೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಿರಂತರವಾಗಿ ಕ್ರಮ ಕೈಗೊಳ್ಳುತ್ತಲೇ ಇದೆ.
ಇದನ್ನೂ ಓದಿ: ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಿ, ಡಿಸ್ಪ್ಲೇ ಬಗ್ಗೆ ಟೆನ್ಷನ್ನೇ ಇರಲ್ಲ
ವಂಚನೆಯ ಆ್ಯಪ್ಗಳನ್ನು ಪತ್ತೆ ಮಾಡಿದವರು ಯಾರು?
ಥಾಯ್ಲೆಂಡ್‌ನ ಡಿಜಿಟಲ್ ಎಕಾನಮಿ ಮತ್ತು ಸೊಸೈಟಿ ಸಚಿವಾಲಯ ಹಾಗೂ ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ ಈ 203 ಆಪ್‌ಗಳನ್ನು ಪತ್ತೆ ಮಾಡಿದ್ದು, ಗೂಗಲ್‌ಗೆ ಮಾಹಿತಿ ನೀಡಿದೆ.
ಈ ಆ್ಯಪ್ಗಳಿಂದಾದ ತೊಂದರೆಗಳೇನು?
ಯಾವುದೇ ಆ್ಯಪ್ಗಳಾದರು ಸಹ ಯಾವ ಉದ್ದೇಶಕ್ಕೆ ರಚನೆ ಆಗಿವೆಯೋ ಆ ಕೆಲಸ ಮಾಡಿದರೆ ಯಾರಿಗೂ ಸಮಸ್ಯೆ ಇರುವುದಿಲ್ಲ. ಆದರೆ, ಒಂದು ಉದ್ದೇಶದಿಂದ ಗೂಗಲ್ ಪ್ಲೇ ಸ್ಟೋರ್‌ಗೆ ಬಂದು ಸೇರುವ ಆ್ಯಪ್ಗಳು ತದನಂತರದಲ್ಲಿ ಬಳಕೆದಾರರ ಡೇಟಾ ಕದಿಯಲು ಹಾಗೂ ಅವರ ಹಣಕಾಸಿನ ವಿಚಾರಕ್ಕೆ ಕೈ ಹಾಕಲು ಮುಂದಾಗುತ್ತದೆ. ಅದೇ ಕೆಲಸವನ್ನು ಈ 203 ಆ್ಯಪ್ಗಳು ಮಾಡಿದ್ದು, ಇದರಿಂದಾಗಿ ಪ್ಲೇ ಸ್ಟೋರ್‌ನಿಂದ ಹೊರಬಿದ್ದಿವೆ.
ಯಾವೆಲ್ಲಾ ಆ್ಯಪ್ಗಳ ವಿರುದ್ಧ ಕ್ರಮ?
ಇನ್ನು ಒಟ್ಟಾರೆ 203 ಆ್ಯಪ್ಗಳ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಇದರಲ್ಲಿ ಪ್ರಮುಖ ಆ್ಯಪ್ಗಳ ಲೀಸ್ಟ್ ಮಾತ್ರ ನೀಡಲಾಗಿದೆ. ಅದರಲ್ಲಿ ಅಡ್ವಾನ್ಸಡ್ ಎಸ್‌ಎಮ್‌ಎಸ್, ಮ್ಯಾಜಿಕ್ ಫೋಟೋ ಎಡಿಟರ್, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಆಲ್ ಗುಡ್ ಲಾಂಗ್ವೇಜ್ ಟ್ರಾನ್ಸ್ಲೇಟರ್, ಆರ್ಟ್ ಫಿಲ್ಟರ್, ಆಟೋ ಸ್ಟಿಕ್ಕರ್ ಮೇಕರ್ ಸ್ಟುಡಿಯೋ, ಬೇಸ್ ಬೂಸ್ಟರ್ ವಾಲ್ಯೂಮ್ ಪವರ್, ಬ್ಯಾಟರಿ ಚಾರ್ಜಿಂಗ್ ಆನಿಮೇಶನ್ ಬಬ್ಬಲ್, ಬೀಟ್ ಮೇಕರ್ ಪ್ರೊ, ಬ್ಯೂಟಿ ಫಿಲ್ಟರ್, ಬ್ಲಡ್ ಪ್ರೆಸರ್ ಡೈರಿ, ಕಾಲರ್ ಥೀಮ್, ಕ್ಯಾಮೆರಾ ಟ್ರಾನ್ಸ್‌ಲೇಟ್, ಕ್ಯಾಶ್ ಕ್ಲೀನರ್, ಚಾಟ್ ಟೆಕ್ಸ್ಟ್ ಮೆಸೇಜ್ ಸೇರಿವೆ.
ಅನ್‌ಇನ್‌ಸ್ಟಾಲ್ ಮಾಡಬೇಕಾದ ಅಪ್ಲಿಕೇಶನ್ಗಳು
ಹಾಗೆಯೇ, ಕಾಂಟ್ಯಾಕ್ಟ್ ಬ್ಯಾಗ್ರೌಂಡ್, ಡಝಲ್ ಇನ್‌ಸ್ಟಾ ಸ್ಟೋರಿಸ್ ಎಡಿಟರ್, ಡಿಸೈನ್ ಮೇಕರ್, ಈಸಿ ಪಿಡಿಎಫ್ ಸ್ಕ್ಯಾನರ್, ಎಡ್ಜಿಂಗ್ ಪ್ರೊ, ಫೇಸ್‌ಲ್ಯಾಬ್, ಫೇಸ್‌ಮಿ, ಫನ್ನಿ ಕಾಲರ್, ಫನ್ನಿ ಕ್ಯಾಮೆರಾ, ಗಿಟಾರ್ ಪ್ಲೇ, ಹೈಪರ್ ಕ್ಲೀನರ್ ಕ್ಲೀನ್ ಫೋನ್, ಐಮೆಸೆಜ್, ಕರೋಕೆ ಸಾಂಗ್,ನೌ ಕ್ಯೂ ಆರ್ ಕೋಡ್ ಸ್ಕ್ಯಾನ್, ಫೋಟೋ ಕೊಲೇಜ್, ಫೋಟೋ ಫಿಲ್ಟರ್ ಆಂಡ್ ಎಡಿಟ್, ಪ್ರೈವೇಟ್ ಮೆಸೆಜ್, ಡಿಂಗ್‌ಟೂನ್ ಹೆಚ್‌ಡಿ, ಸ್ಮಾರ್ಟ್‌ಟಿವಿ ರಿಮೋಟ್, ಸ್ಟಿಕ್ಕರ್ ಮೇಕರ್, ಸೂಪರ್ ಹೀರೋ ಎಫೆಕ್ಟ್ ಸೇರಿದಂತೆ ಇನ್ನೂ ಹಲವು ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದ್ದು, ಈ ಆಪ್‌ಗಳು ನಿಮ್ಮ ಮೊಬೈಲ್‌ನಲ್ಲಿ ಏನಾದರೂ ಇದ್ದರೆ ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ